Asianet Suvarna News Asianet Suvarna News

ಗಂಡ್ಸೇ ಆಗಿದ್ರೆ 'ಮಣಿಪುರ್ ಫೈಲ್ಸ್' ಸಿನಿಮಾ ಮಾಡಿ; ನೆಟ್ಟಿಗನ ಮಾತಿಗೆ ವಿವೇಕ್ ಅಗ್ನಿಹೋತ್ರಿ ಖಡಕ್ ರಿಯಾಕ್ಷನ್

'ಗಂಡ್ಸೆ ಆಗಿದ್ದರೆ ಮಣಿಪುರ್ ಫೈಲ್ಸ್ ಸಿನಿಮಾ ಮಾಡಿ' ಎಂದು ನೆಟ್ಟಿಗರೊಬ್ಬರು ವಿವೇಕ್ ಅಗ್ನಿಹೋತ್ರಿಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಕಾಶ್ಮೀರ್ ಫೈಲ್ಸ್ ನಿರ್ದೇಶಕ ಖಡಕ್ ಉತ್ತರ ನೀಡಿವಿವೇಕ್. 

netizen asks Vivek Agnihotri to make Manipur Files if you are man enough and director reacts sgk
Author
First Published Jul 23, 2023, 11:27 AM IST

ಬಾಲಿವುಡ್​ನ ಖ್ಯಾತ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ನೈಜ ಘಟನೆ ಆಧಾರಿತ ಸಿನಿಮಾಗಳನ್ನು ಮಾಡುವುದರಲ್ಲಿ ಎತ್ತಿದ ಕೈ. ಕಾಶ್ಮೀರಿ ಪಂಡಿತರ ಹತ್ಯೆ ಮತ್ತು ವಲಸೆ ಘಟನೆ ಆಧರಿಸಿ ವಿವೇಕ್ ಆಗ್ನಿಹೋತ್ರಿ ‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾ ಮಾಡಿದ್ದರು. ಆ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಗೆಲುವು ಕಂಡಿದೆ. ವಿವೇಕ್ ಆಗ್ನಿಹೋತ್ರಿ ಸದ್ಯ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾ ಮಾಡುತ್ತಿದ್ದಾರೆ. ಈ ನಡುವೆ ನೆಟ್ಟಿಗರಿಂದ ವಿವೇಕ್​ ಅಗ್ನಿಹೋತ್ರಿಗೆ ಒಂದು ಸವಾಲು ಎದುರಾಗಿದೆ. ಇಡೀ ದೇಶವನ್ನೆ ಬೆಚ್ಚಿಬೀಳಿಸಿರುವ ಮಣಿಪುರದ ಅಮಾನವೀಯ ಘಟನೆ ಕುರಿತು ಸಿನಿಮಾ ಮಾಡಿ ಎಂದು ನೆಟ್ಟಿಗನೊಬ್ಬರು ಸವಾಲು ಹಾಕಿದ್ದಾರೆ. ಅದಕ್ಕೆ ವಿವೇಕ್​ ಅಗ್ನಿಹೋತ್ರಿ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.

ಮಣಿಪುರದಲ್ಲಿ ಯುವತಿಯರನ್ನು ಗ್ಯಾಂಗ್ ರೇಪ್ ಮಾಡಿ, ಬೆತ್ತಲೆಯಾಗಿ ಮೆರವಣಿಗೆ ಮಾಡಿಸಿದ ಅಮಾನುಷ ಕೃತ್ಯಕ್ಕೆ ದೇಶಾದ್ಯಂತ ಖಂಡನೆ ವ್ಯಕ್ತವಾಗಿದೆ. ಈ ಸಂದರ್ಭದಲ್ಲಿ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಅವರು ಕಾಶ್ಮೀರಿ ಪಂಡಿತರ ಹತ್ಯೆ ಬಗ್ಗೆ ಟ್ವೀಟ್​ ಮಾಡುತ್ತಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿರುವ ನೆಟ್ಟಿಗರೊಬ್ಬರು ‘ಸಮಯ ವ್ಯರ್ಥ ಮಾಡಬೇಡಿ.  ಗಂಡ್ಸೆ ಆಗಿದ್ದರೆ ಮಣಿಪುರ್​ ಫೈಲ್ಸ್​ ಅಂತ ಸಿನಿಮಾ ಮಾಡಿ’ ಎಂದು ಕಮೆಂಟ್​ ಮಾಡಿದ್ದಾರೆ. ಈ ಟ್ವೀಟ್​ ವೈರಲ್​ ಆಗಿದೆ. ವೈರಲ್ ಟ್ವೀಟ್ಗೆ ವಿವೇಕ್ ಆಗ್ನಿಹೋತ್ರಿ ತಮ್ಮದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ. 

ಮಣಿಪುರ ವಿಡಿಯೋ ಕಿತ್ಹಾಕಿ ಎಂದು ಜಾಲತಾಣಕ್ಕೆ ಕೇಂದ್ರ ಸರ್ಕಾರ ಸೂಚನೆ: ಸಿಎಂ ವಜಾ, ರಾಷ್ಟ್ರಪತಿ ಆಳ್ವಿಕೆಗೆ ವಿಪಕ್ಷ ಆಗ್ರಹ

‘ನನ್ನ ಮೇಲೆ ನಂಬಿಕೆ ಇಟ್ಟಿದ್ದಕ್ಕೆ ಧನ್ಯವಾದಗಳು. ಆದರೆ ಇಂಥ ಎಲ್ಲಾ ಸಿನಿಮಾವನ್ನು ನನ್ನಿಂದಲೇ ಮಾಡಿಸುತ್ತೀರಾ? ನಿಮ್ಮ ಟೀಮ್​ ಇಂಡಿಯಾದಲ್ಲಿ ಗಂಡಸ್ತನ ಇರುವ ಫಿಲ್ಮ್​​ ಮೇಕರ್​ ಯಾರೂ ಇಲ್ಲವೇ’ ಎಂದು ವಿವೇಕ್​ ಅಗ್ನಿಹೋತ್ರಿ ಅವರು ಮರುಪ್ರಶ್ನೆ ಹಾಕಿದ್ದಾರೆ. ಇದರಲ್ಲಿ ಅವರು ಬಳಸಿರುವ ಇಂಡಿಯಾ ಎಂಬ ಪದದ ಬಗ್ಗೆ ಚರ್ಚೆ ಆಗುತ್ತಿದೆ. ಇತ್ತೀಚೆಗೆ ಪ್ರತಿಪಕ್ಷಗಳೆಲ್ಲ ಸೇರಿ ‘ಇಂಡಿಯಾ’ ಎಂಬ ಮೈತ್ರಿಕೂಟ ಮಾಡಿಕೊಂಡಿವೆ. ಈ ಹಿನ್ನೆಲೆಯಲ್ಲೇ ವಿವೇಕ್​ ಅಗ್ನಿಹೋತ್ರಿ ಈ ಪದವನ್ನು ಬಳಸಿದ್ದಾರೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಹಿಂಸೆ, ನಾನ್ಸೆನ್ಸ್ ಸಿನಿಮಾ; ಪ್ರಭಾಸ್-ಪ್ರಶಾಂತ್ ನೀಲ್ 'ಸಲಾರ್' ವಿರುದ್ಧ ನಿರ್ದೇಶಕ ಆಗ್ನಿಹೋತ್ರಿ ಕಿಡಿ

‘ದಿ ಕಾಶ್ಮೀರ್​ ಫೈಲ್ಸ್​’ ಸಿನಿಮಾದಲ್ಲಿ ತೋರಿಸಲಾಗದೇ ಉಳಿದಿರುವ ಅನೇಕ ವಿಷಯಗಳನ್ನು ‘ದಿ ಕಾಶ್ಮೀರ್​ ಫೈಲ್ಸ್​ ಅನ್​ರಿಪೋರ್ಟೆಡ್​’ ವೆಬ್​ ಸರಣಿ ಮೂಲಕ ತೋರಿಸಲು ವಿವೇಕ್​ ಅಗ್ನಿಹೋತ್ರಿ ಮುಂದಾಗಿದ್ದಾರೆ. ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ವೆಬ್​ ಸಿರೀಸ್​ನ ಟ್ರೇಲರ್​ ಇತ್ತೀಚೆಗೆ ಬಿಡುಗಡೆಯಾಗಿ ಗಮನ ಸೆಳೆದಿದೆ. ಜೀ5 ಒಟಿಟಿ ಮೂಲಕ ಇದು ಬಿಡುಗಡೆ ಆಗಲಿದೆ. ಅದರ ಜೊತೆಗೆ ‘ದಿ ವ್ಯಾಕ್ಸಿನ್​ ವಾರ್​’ ಸಿನಿಮಾಗಾಗಿಯೂ ವಿವೇಕ್ ಅಗ್ನಿಹೋತ್ರಿಯ ಅಭಿಮಾನಿಗಳು ಕಾದಿದ್ದಾರೆ. ಈ ಸಿನಿಮಾ ಬಳಿಕ ವಿವೇಕ್ ಆಗ್ನಿಹೋತ್ರಿ ಯಾವ ಸಿನಿಮಾ ಮೂಲಕ ಬರ್ತಾರೆ ಎಂದು ಕಾದುನೋಡಬೇಕಿದೆ. 

Follow Us:
Download App:
  • android
  • ios