Asianet Suvarna News Asianet Suvarna News

ವಿವಾದಕ್ಕೆ ಬ್ರೇಕ್; ಕೊನೆಗೂ ಒಟಿಟಿಯಲ್ಲಿ ಬರ್ತಿದೆ ನಯನತಾರಾ-ವಿಘ್ನೇಶ್ ಶಿವನ್ ಮದುವೆ

ಲೇಡಿ ಸೂಪರ್ ಸ್ಟಾರ್ ಮತ್ತು ವಿಘ್ನೇಶ್ ಶಿವನ್ ಮದುವೆ ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದೆ. ಈ ಮೂಲಕ ಎಲ್ಲಾ ವಿವಾದಕ್ಕೂ ತೆರೆ ಎಳೆದಿದೆ ನೆಟ್ ಫ್ಲಿಕ್ಸ್. ಹೌದು, ನೆಟ್‌ಫ್ಲಿಕ್ಸ್ ಸದ್ಯ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ಪ್ರೋಮೋ ರಿಲೀಸ್ ಮಾಡಿದೆ. ಈ ಮೂಲಕ ಸದ್ಯದಲ್ಲೇ ಸ್ಟ್ರೀಮಿಂಗ್ ಆಗಲಿದೆ ಎನ್ನುವುದನ್ನು ನೆಟ್‌ಫ್ಲಿಕ್ಸ್ ಬಹಿರಂಗ ಪಡಿಸಿದೆ. 

Netflix shares glimpse into Nayanthara and Vignesh Shivans grand wedding sgk
Author
Bengaluru, First Published Aug 9, 2022, 3:20 PM IST

ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಜೂನ್ 9ರಂದು ಚೆನ್ನೈನ ಮಹಾಬಲಿಪುರಂನಲ್ಲಿ ಅದ್ದೂರಿಯಾಗಿ ಹಸೆಮಣೆ ಏರಿದ್ದರು. ಸ್ಟಾರ್ ಜೋಡಿ ತಮ್ಮ ಮದುವೆಯ ವಿಡಿಯೋ ಹಕ್ಕನ್ನು ಒಟಿಟಿಗಳ ದೈತ್ಯ ನೆಟ್‌ಫ್ಲಿಕ್ಸ್ ಗೆ ಮಾರಾಟ ಮಾಡಿತ್ತು. ಮದುವೆಯ ಇಡೀ ಖರ್ಚನ್ನು ನೆಟ್‌ಫ್ಲಿಕ್ಸ್ ನೋಡಿಕೊಂಡಿತ್ತು ಎನ್ನಲಾಗಿದೆ. ಮೂಲಗಳ ಪ್ರಕಾರ ನೆಟ್‌ಫ್ಲಿಕ್ಸ್ ನಯನತಾರಾ ಮದುವೆ ವಿಡಿಯೋ ಹಕ್ಕನ್ನು ಬರೋಬ್ಬರಿ 25 ಕೋಟಿ ರೂಪಾಯಿಗೆ ಖರೀದಿ ಮಾಡಿದೆಯಂತೆ. ಇದರ ಸಂಪೂರ್ಣ ಜವಾಬ್ದಾರಿ ನಿರ್ದೇಶಕ ಗೌತಮ್ ಮೆನನ್ ವಹಿಸಿಕೊಂಡಿದ್ದರು. ಆದರೆ ಮದುವೆಯಾಗಿ ಕೆಲವೇ ದಿನಗಳಲ್ಲಿ ನೆಟ್‌ಫ್ಸಿಕ್ಸ್ ಲೇಡಿ ಸೂಪರ್ ಸ್ಟಾರ್ ಮದುವೆ  ಸ್ಟ್ರೀಮಿಂಗ್‌ನಿಂದ ಹಿಂದೆ ಸರಿದಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಅಲ್ಲದೇ ನಯನತಾರಾ ದಂಪತಿಗೆ ನೆಟ್‌ಫ್ಲಿಕ್ಸ್ ನೋಟಿಸ್ ನೀಡಿದೆ ಎನ್ನುವ ಸುದ್ದಿ ವೈರಲ್ ಆಗಿತ್ತು. 25 ಕೋಟಿ ರೂಪಾಯಿ ಮದುವೆ ಡೀಲ್ ಬಗ್ಗೆ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರೂ ಸಹ ನಯನತಾರಾ ಮತ್ತು ವಿಘ್ನೇಶ್ ಶಿವನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಒಟಿಟಿಯಲ್ಲಿ ಮದುವೆ ಪ್ರಸಾರವಾಗುವಿದಿಲ್ಲ, ಯೂಟ್ಯೂಬ್ ನಲ್ಲಿ ಪ್ರಸಾರ ಮಾಡಲಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿತ್ತು. ಆದರೀಗ ಈ ಎಲ್ಲಾ ವದಂತಿ ಮತ್ತು ವಿವಾದಗಳಿಗೂ ಬ್ರೇಕ್ ಹಾಕಿದೆ ನೆಟ್‌ಫ್ಲಿಕ್ಸ್.
 
ಲೇಡಿ ಸೂಪರ್ ಸ್ಟಾರ್ ಮತ್ತು ವಿಘ್ನೇಶ್ ಶಿವನ್ ಮದುವೆ ನೆಟ್‌ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿದೆ. ಈ ಮೂಲಕ ಎಲ್ಲಾ ವಿವಾದಕ್ಕೂ ತೆರೆ ಎಳೆದಿದೆ ನೆಟ್ ಫ್ಲಿಕ್ಸ್. ಹೌದು, ನೆಟ್‌ಫ್ಲಿಕ್ಸ್ ಸದ್ಯ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯ ಪ್ರೋಮೋ ರಿಲೀಸ್ ಮಾಡಿದೆ. ಈ ಮೂಲಕ ಸದ್ಯದಲ್ಲೇ ಸ್ಟ್ರೀಮಿಂಗ್ ಆಗಲಿದೆ ಎನ್ನುವುದನ್ನು ನೆಟ್‌ಫ್ಲಿಕ್ಸ್ ಬಹಿರಂಗ ಪಡಿಸಿದೆ. ಪ್ರೋಮೋದಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಮಾತನಾಡಿರುವ ವಿಡಿಯೋ ರಿಲೀಸ್ ಆಗಿದೆ. ನಯನತಾರಾ ತನ್ನ ಕೆಲಸದ ಬಗ್ಗೆ ಬಹಿರಂಗ ಪಡಿಸಿದರು. ಇನ್ನು ವಿಘ್ನೇಶ್ ಶಿವನ್ ನಯನತಾರಾ ಅವರನ್ನು ಹಾಡಿಹೊಗಳಿದರು. ಇದಕ್ಕೆ ಅಭಿಮಾನಿಗಳು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಅನೇಕರು ನಯನತಾರಾ ಮದುವೆ ನೋಡಲು ಕಾಯುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. 

ನಯನತಾರಾ-ವಿಘ್ನೇಶ್ 25 ಕೋಟಿ ರೂ. ಮದುವೆ ಡೀಲ್; ದಂಪತಿಗೆ ನೆಟ್‌ಫ್ಲಿಕ್ಸ್ ನೋಟಿಸ್

ನಯನತಾರಾ ಮತ್ತು ವಿಘ್ನೇಶ್ ಶಿವನ್ ಮದುವೆಯಾಗಿ ಎರಡು ತಿಂಗಳಾದರೂ ಮದುವೆ ವಿಡಿಯೋ ಪ್ರಸಾರವಾಗದೆ ಇದ್ದಿದ್ದನ್ನು ನೋಡಿ ಇನ್ಮುಂದೆ ಪ್ರಸಾರವಾಗಲ್ಲ ಅಂತನೇ ಅಭಿಮಾನಿಗಳು ತಿಳಿದಿದ್ದರು. ಆದರೀಗ ಕೊನೆಗೂ ನಯನತಾರಾ ಮದುವೆ ನೋಡುವ ಅವಕಾಶ ಸಿಕ್ಕಿದೆ. ಮದುವೆಯ ಕೆಲವು ಫೋಟೋಗಳು ಬಿಟ್ಟರೇ ಮದುವೆ ಶಾಸ್ತ್ರದ ಯಾವುದೇ ಫೋಟೋಗಳು ಬಹಿರಂಗವಾಗಿರಲಿಲ್ಲ. ಕೆಲವು ಫೋಟೋಗಳನ್ನು ಸ್ವತಃ ನಯನತಾರಾ ಮತ್ತು ವಿಘ್ನೇಶ್ ಶಿವನ್ ಅವರೇ ಶೇರ್ ಮಾಡಿದ್ದರು. ಮದುವೆ ದಿನ ಮತ್ತು ಮಜುವೆಯಾಗಿ ಒಂದು ತಿಂಗಳಾದ ಸಂಭ್ರಮದಲ್ಲಿಯೂ ಫೋಟೋ ಶೇರ್ ಮಾಡಿದ್ದರು. ರಜನಿಕಾಂತ್, ಶಾರಿಖ್ ಖಾನ್ ಫೋಟೋಗಳನ್ನು ಹಂಚಿಕೊಂಡಿದ್ದರು.  ಆ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಮದುವೆಯ ಸಂಪೂರ್ಣ ವಿಡಿಯೋ ನೋಡಲು ಅಭಿಮಾನಿಗಳು ಕಾತರರಾಗಿದ್ದಾರೆ.

ಅತೀ ಹೆಚ್ಚು ಸಂಭಾವನೆ ಪಡೆಯುವ ಏಕೈಕ ಸೌತ್ ನಟಿ ನಯನತಾರಾ; ದೀಪಿಕಾ, ಅಲಿಯಾ ಲಿಸ್ಟ್‌‌ಗೆ ಸೇರಿದ ಲೇಡಿ ಸೂಪರ್‌ಸ್ಟಾರ್


ಸದ್ಯ ನೆಟ್‌ಫ್ಲಿಕ್ಸ್ ಪ್ರೋಮೋವನ್ನು ಮಾತ್ರ ರಿಲೀಸ್ ಮಾಡಿದೆ. ಆದರೆ ಯಾವಾಗ ಸ್ಟ್ರೀಮಿಂಗ್ ಆಗಲಿದೆ ಎನ್ನುವುದನ್ನು ರಿವೀಲ್ ಮಾಡಿಲ್ಲ.  ಸದ್ಯದಲ್ಲೆ ನಯನತಾರಾ ಮತ್ತು ವಿಘ್ನೇಶ್ ಮದುವೆ ಸ್ಟ್ರೀಮಿಂಗ್ ಆಗಲಿದೆ. ಮದುವೆ ವಿಡಿಯೋ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ.

Follow Us:
Download App:
  • android
  • ios