Asianet Suvarna News Asianet Suvarna News

ಚುನಾವಣೆಯಲ್ಲಿ ಸೋತ ತಂದೆ.. ಅಪ್ಪನ ಬೆಂಬಲಕ್ಕೆ ನಿಂತ ನಟಿ

ಬಾಲಿವುಡ್ ನಟಿ ನೇಹಾ ಶರ್ಮಾ ತಂದೆ ಅಜಿತ್ ಶರ್ಮಾ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ತಂದೆ ಪರ ಪ್ರಚಾರ ಮಾಡಿದ್ದ ನೇಹಾ, ಈಗ ತಂದೆ ಹಾಗೂ ಬೆಂಬಲಿಗರ ಪರ ನಿಂತಿದ್ದಾರೆ. ಅವರಿಗೆ ಧನ್ಯವಾದ ಹೇಳಿದ ಪೋಸ್ಟ್ ಸದ್ದು ಮಾಡಿದೆ. 
 

Neha Sharma Tweet Supporter For Father Ajeet Sharma Backing Lok Sabha Election roo
Author
First Published Jun 5, 2024, 3:52 PM IST

2024ರ ಲೋಕಸಭಾ ಚುನಾವಣೆಯ ಫಲಿತಾಂಶ (India General Elections 2024 Results) ಹೊರಬಿದ್ದಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ಭಾಗಲ್ಪುರ್ ಲೋಕಸಭಾ ಕ್ಷೇತ್ರದಿಂದ (Bhagalpur Loksabha Constituency) ಸ್ಪರ್ಧಿಸಿದ್ದ ಅಜಿತ್ ಶರ್ಮಾ ಸೋತಿದ್ದಾರೆ. ಅವರು ಜೆಡಿಯು ಅಭ್ಯರ್ಥಿ ಅಜಯ್ ಮಂಡಲ್ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ. ಅಜಿತ್ ಶರ್ಮಾ, ಬಾಲಿವುಡ್‌ನ ಖ್ಯಾತ ನಟಿ ನೇಹಾ ಶರ್ಮಾ ಅವರ ತಂದೆ. ತಂದೆಯ ಸೋಲು ನಟಿಯನ್ನು ಆಘಾತಗೊಳಿಸಿದೆ. ಸೋಶಿಯಲ್ ಮೀಡಿಯಾದಲ್ಲಿ (Social Media) ನೇಹಾ ಶರ್ಮಾ, ತಮ್ಮ ತಂದೆಯ ಬೆಂಬಲಕ್ಕೆ ನಿಂತಿದ್ದಾರೆ. ಅಷ್ಟೇ ಅಲ್ಲ ಚುನಾವಣೆಯಲ್ಲಿ ತಂದೆಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.

ನೇಹಾ ಶರ್ಮಾ (Neha Sharma ) ತಮ್ಮ ಇನ್ಸ್ಟಾಗ್ರಾಮ್ (Instagram) ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಂದೆ ಅಜಿತ್ ಶರ್ಮಾ (Ajit Sharma)  ಸೋಲನ್ನು ಒಪ್ಪಿಕೊಂಡ ನೇಹಾ ಶರ್ಮಾ, ತಮ್ಮ ತಂದೆಯನ್ನು ಬೆಂಬಲಿಸಲು ಬಂದ ಜನರ ಪ್ರಯತ್ನವನ್ನು ಶ್ಲಾಘಿಸಿದ್ದಾರೆ. ತಂದೆ ಬೆಂಬಲಿಗರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಫಲಿತಾಂಶ ದಿನ ನಮಗೆ ತುಂಬಾ ಕಷ್ಟವಾಗಿತ್ತು. ಹೀಗಿದ್ದರೂ ನನ್ನ ತಂದೆಯನ್ನು ಬೆಂಬಲಿಸಿ ಮತ ಹಾಕಿದ ಎಲ್ಲರಿಗೂ ನನ್ನ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಅವರು ಮಾಡಿದ ಪ್ರಯತ್ನಗಳನ್ನು ನಾನು ಪ್ರಶಂಸಿಸುತ್ತೇನೆ ಮತ್ತು ಅವರಿಗೆ ಧನ್ಯವಾದಗಳನ್ನು ಹೇಳುತ್ತೇನೆ ಎಂದು ನೇಹಾ ಶರ್ಮಾ, ಇನ್ಸ್ಟಾಗ್ರಾಮ್ ಪೋಸ್ಟ್ ನಲ್ಲಿ ಬರೆದಿದ್ದಾರೆ. 

ಲೋಕಸಭಾ ಚುನಾವಣೆಗೆ ಬಾಲಿವುಡ್ ಹಾಟ್ ಬೆಡಗಿ ನೇಹಾ ಶರ್ಮಾ, ಸ್ಪರ್ಧೆ ಸೂಚನೆ ನೀಡಿದ ತಂದೆ!

ಮುಂದಿನ ಅಧ್ಯಾಯಕ್ಕಾಗಿ ನಾವು ಪುಸ್ತಕದ ಪುಟವನ್ನು ತಿರುಗಿಸಿದಾಗ, ನಮ್ಮ ದೊಡ್ಡ ಸಾಧನೆ ಎಂದಿಗೂ ಸೋಲುವುದರಲ್ಲಿ ಅಡಗಿಲ್ಲ ಎಂಬುದನ್ನು ನಾವು ನೆನಪಿನಲ್ಲಿಟ್ಟುಕೊಳ್ಳಬೇಕು. ಹಲವು ಬಾರಿ ಸೋತ ಬಳಿಕ ಮತ್ತೆ ನಿಲ್ಲಬೇಕು  ಎಂದು ನೇಹಾ ಪೋಸ್ಟ್ ನಲ್ಲಿ ಬರೆದಿದ್ದಾರೆ. ಇದಲ್ಲದೆ ನಿಮ್ಮ ಮುಂದೆ ಪರ್ವತಗಳಿವೆ, ಸಿಂಹದ ಘರ್ಜನೆ ಇದೆ, ನಿರ್ಭೀತರು, ಭಯಪಡಬೇಡಿ, ನಿರ್ಭಯವಾಗಿ ನಿಲ್ಲಿ, ಧೈರ್ಯಶಾಲಿಯಾಗಿ ನೀವು ಮುನ್ನಡೆಯಿರಿ ಎಂದು ಬರೆದಿದ್ದಾರೆ. 

ನೇಹಾ ಶರ್ಮಾ ಅವರ ತಂದೆ ಅಜಿತ್ ಶರ್ಮಾ ಜೆಡಿಯುನ ಅಜಯ್ ಮಂಡಲ್ ಅವರ ಮುಂದೆ 104868 ಮತಗಳಿಂದ ಸೋಲು ಕಂಡಿದ್ದಾರೆ. ಆದರೆ ಅಜಿತ್ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ.  ನಾವು ಸಾರ್ವಜನಿಕರ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇವೆ. ಭಾಗಲಪುರದ ಶಾಸಕನಾಗಿ ಸದಾ ಇಲ್ಲಿನ ಜನರಿಗಾಗಿ ದುಡಿಯುತ್ತೇನೆ ಎಂದು ಅಜಿತ್ ಶರ್ಮಾ ಹೇಳಿದ್ದಾರೆ. ಭಾಗಲಪುರದ ಸಂಸದರು ಕಳೆದ 5 ವರ್ಷಗಳಲ್ಲಿ ಇಲ್ಲಿನ ಜನರಿಗಾಗಿ ಯಾವುದೇ ಕೆಲಸ ಮಾಡಿಲ್ಲ. ಇದರ ಹೊರತಾಗಿಯೂ ಇಲ್ಲಿನ ಜನರು ತಮ್ಮ ತೀರ್ಪು ನೀಡಿದ್ದಾರೆ. ಅವರ ನಿರ್ಧಾರವನ್ನು ಒಪ್ಪಿಕೊಳ್ಳುತ್ತೇನೆ ಎಂದು ವ್ಯಂಗ್ಯವಾಡಿದ ಅವರು, 5 ಕೆಜಿ ಉಚಿತ ಧಾನ್ಯಗಳ ಪರಿಣಾಮ ಇಲ್ಲಿ ಗೊತ್ತಾಗುತ್ತಿದೆ ಎಂದಿದ್ದಾರೆ. 

ನೇಹಾ ಶರ್ಮಾ ಕೂಡ ಅಪ್ಪನ ಪರ ಪ್ರಚಾರ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಪ್ರಚಾರದ ಫೋಟೋಗಳನ್ನು ನೇಹಾ ಹಂಚಿಕೊಂಡಿದ್ದರು. ನೇಹಾ ಪ್ರಚಾರದ ನಂತ್ರವೂ ತಂದೆಗೆ ಮತದಾರರು ಮತಚಲಾಯಿಸಲಿಲ್ಲ. 

ನೇಹಾ ಶರ್ಮಾ, ನೇಹಾ ಶರ್ಮಾ ಚಿರುತಾ ಚಿತ್ರದ ಮೂಲಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. ಅವರು 2009 ರಲ್ಲಿ ಇಮ್ರಾನ್ ಹಶ್ಮಿ ಜೊತೆ  ಕ್ರೂಕ್‌ನಲ್ಲಿ ನಟಿಸುವ ಮೂಲಕ ಬಾಲಿವುಡ್ ಗೆ ಪದಾರ್ಪಣೆ ಮಾಡಿದ್ದರು. ನಂತರ ಅವರು ಕ್ಯಾ ಸೂಪರ್ಕೂಲ್ ಹೇ ಹಮ್, ಜಯಂತಿಭಾಯ್ ಕಿ ಲವ್ ಸ್ಟೋರಿ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದರು. ಇದಲ್ಲದೆ, ಅವರು ಏಕ್ ಸಂಧು ಹುಂಡಾ ಸಿ ಮೂಲಕ ಪಂಜಾಬಿ ಚಲನಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ.

ಸಣ್ಣ ಹೋಟೆಲ್‌ಗೂ ತುಂಡು ಬಟ್ಟೆ ಬೇಕಾ?; ಸಹೋದರಿ ಜೊತೆ ನೇಹಾ ಶರ್ಮಾ ಡಿನ್ನರ್!

ಸಂದರ್ಶನವೊಂದರಲ್ಲಿ ಮಾತನಾಡಿದ ನೇಹಾ, ತಮ್ಮ ನಟನೆ ಮೇಲೆ ತಂದೆಯವರ ರಾಜಕೀಯ ಪ್ರಭಾವ ಬೀರಿಲ್ಲ ಎಂದಿದ್ದರು. ಇಬ್ಬರು ಸರಿಸುಮಾರು ಒಂದೇ ಬಾರಿ ವೃತ್ತಿ ಶುರು ಮಾಡಿದ್ದೆವು. ನನ್ನ ಜೀವನದಲ್ಲಿ ಅವರ ರಾಜಕೀಯ ಯಾವುದೇ ಕೆಟ್ಟ ಪ್ರಭಾವ ಬೀರಿಲ್ಲ. ನನ್ನ ವೃತ್ತಿಗೆ ತಂದೆ ವೃತ್ತಿ ಅಡ್ಡಿ ಮಾಡಿಲ್ಲ ಎಂದಿದ್ದಾರೆ. 

Latest Videos
Follow Us:
Download App:
  • android
  • ios