ಬಾಲಿವುಡ್ ಸಿಂಗರ್ ನೇಹಾ ಕಕ್ಕರ್ ಹಾಗೂ ರೋಹನ್‌ಪ್ರೀತ್ ಸಿಂಗ್ ಅಕ್ಟೋಬರ್‌ನಲ್ಲಿ ವಿವಾಹಿತರಾಗಿದ್ದರು. ಇದೀಗ ನಟಿ ಒಂದು ಫೋಟೋ ಪೋಸ್ಟ್ ಮಾಡಿ ಫ್ಯಾನ್ಸ್‌ಗೆ ಶಾಕ್ ಕೊಟ್ಟಿದ್ದಾರೆ. ನಟಿ ಪತಿಯ ಜೊತೆ ಶೇರ್ ಮಾಡಿದ ಫೋಟೋ ಬೇಬಿ ಬಂಪ್ ತೋರಿಸುವ ಹಾಗಿದೆ.

ನೇಹಾ ಪೋಸ್ಟ್‌ನಲ್ಲಿ ಏನೂ ತಿಳಿಸದಿದ್ದರೂ, #KhyaalRakhyaKar(ಕಾಳಜಿವಹಿಸು) ಎಂದು ಬರೆದಿದ್ದಾರೆ. ರೋಹನ್ ಪ್ರೀತ್ ಇದಕ್ಕೆ ಕಮೆಂಟ್ ಮಾಡಿದ್ದು, ಇನ್ನು ಮುಂದೆ ನಾನು ನಿನ್ನನ್ನು ಇನ್ನಷ್ಟು ಹೆಚ್ಚು ಕೇರ್ ಮಾಡಬೇಕು ನೇಹೂ ಎಂದಿದ್ದಾರೆ. ಈ ಜೋಡಿ ತಾವು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿಲ್ಲ. ಆದರೆ ಇದು ಹಿಂಟ್ ಕೊಟ್ಟಿದ್ದಾ ಅನ್ನೋ ಡೌಟ್ ಎಲ್ಲರಲ್ಲೂ ಇದೆ.

ದುಬೈನಲ್ಲಿ ಸಿಂಗರ್ ಕಪಲ್ ಹನಿಮೂನ್: ಲಿಪ್‌ಲಾಕ್ ವೈರಲ್

ಬಹಳಷ್ಟು ಜನ ಈ ಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಇನ್ನೊಂದಷ್ಟು ಜನ ನೀವು ಪ್ರೆಗ್ನೆಂಟ್ ಆಗಿದ್ರೆ ಕನ್ಫರ್ಮ್ ಮಾಡಿ ಎಂದಿದ್ದಾರೆ. ನೇಹಾ ಅವರು ಈ ವಿಚಾರವನ್ನು ಇನ್ನಷ್ಟೇ ಅಧಿಕೃತಗವಾಗಿ ಹೇಳಬೇಕಿದೆ. 

ನೇಹಾ ಅಕ್ಟೋಬರ್ 24ರಂದು ವಿವಾಹಿತರಾಗಿದ್ದಾರೆ. ದುಬೈನಲ್ಲಿ ಹನಿಮೂನ್ ಮಾಡಿದ್ದರು ಈ ಜೋಡಿ. ವಿವಾಹದ ನಂತರ ನೇಹಾ ಬಿಗ್‌ಬಾಸ್‌ನಲ್ಲಿಯೂ ಕಾಣಿಸಿಕೊಂಡಿದ್ದರು.

ನೇಹಾ ಕಕ್ಕರ್ ಧರಿಸಿದ ಡ್ರೀಮ್ ವೆಡ್ಡಿಂಗ್ ಲೆಹಂಗಾ ಖರೀದಿಸಿದ್ದಲ್ಲ, ಗಿಫ್ಟ್ ಸಿಕ್ಕಿದ್ದು: ಕೊಟ್ಟೋರ್ಯಾರು ಗೊತ್ತಾ

ನೇಹು ದ ವ್ಯಾ ಸಾಂಗ್ ಸೆಟ್‌ನಲ್ಲಿ ರೋಹನ್‌ಪ್ರೀತ್ ಜೊತೆ ಲವ್ ಆಗಿತ್ತು ಎಂದು ರಿವೀಲ್ ಮಾಡಿದ್ದಾರೆ ನೇಹಾ. ನಾನು ಮೊದಲ ಬಾರಿ ಹಾಡು ಕಂಪೋಸ್ ಮಾಡಿದ್ದೆ, ಆದ್ರೆ ಲೈಫ್, ಫ್ಯೂಚರ್ ಊಹಿಸಿರಲಿಲ್ಲ.