ಸೋನು ಅಲ್ಟಿಮೇಟ್ ನಟ ಅಂತ ಪ್ರೂವ್ ಮಾಡುತ್ತೆ ಈ ವಿಲನ್ ಪಾತ್ರಗಳು
ಬಾಲಿವುಡ್‌ನ ಟಾಪ್ ನಟ ಸೋನು ಸೂದ್ ಹೀರೋ ಅನ್ನೋದಕ್ಕಿಂತ ವಿಲನ್ ಆಗಿಯೇ ತೆರೆ ಮೇಲೆ ಮಿಂಚಿದ್ದು. ಅವರ ವಿಲನ್ ಪಾತ್ರಗಳು ಒಂದಕ್ಕಿಂದ ಒಂದು ಅದ್ಭುತ. ಅಂತಹ ಎವರ್‌ಗ್ರೀನ್ ಪಾತ್ರಗಳಿವು
ಹ್ಯಾಪಿ ನ್ಯೂ ಇಯರ್, ದಬಾಂಗ್, ಶೂಟೌಟ್ ಎಟ್ ವಡಾಲಾ, ಮತ್ತು ರಮಯ್ಯ ವಾಸ್ತವಾಯಾ ಮುಂತಾದ ಸಿನಿಮಾಗಳ ತಮ್ಹೆಮ ಅಭಿನಯಕ್ಕೆ ಹೆಸರುವಾಸಿಯಾದ ಸೋನು ಸೂದ್ ಬಾಲಿವುಡ್‌ನಲ್ಲಿ ಯಶಸ್ವಿ ನಟ.
ಕೇವಲ ಹಿಂದಿ ಚಿತ್ರರಂಗ ಮಾತ್ರವಲ್ಲದೆ ಸೋನು ಟಾಲಿವುಡ್ ಉದ್ಯಮದಲ್ಲಿ ಹೆಚ್ಚು ಹೆಸರು ಮಾಡಿದ್ದಾರೆ. ಅವರ ಅರುಂಧತಿ, ಅಂಜನೇಯುಲು, ನೆನೆ ಮುಖಾ ಮಂತ್ರಿ ನೈಥೆ ಸೇರಿ ಇನ್ನಿತರ ಅನೇಕ ಟಾಪ್ ಸಿನಿಮಾಳ ಭಾಗವಾಗಿದ್ದಾರೆ. ನಾಯಕರಿಂದ ಹಿಡಿದು ಖಳನಾಯಕರವರೆಗೆ ಸೂದ್ ಎಲ್ಲವನ್ನೂ ಮಾಡಿದ್ದಾರೆ. ಆದರೆ, ನೆಗೆಟಿವ್ ಪಾತ್ರಗಳೇ ಸೋನು ಸೂದ್‌ಗೆ ಹೆಚ್ಚು ಖ್ಯಾತಿ .ಕೊಟ್ಟವು. ಬೆಳ್ಳಿ ಪರದೆಯ ಮೇಲೆ ಸೋನು ಸೂಪರ್ ನೆಗೆಟಿವ್ ರೋಲ್‌ಗಳಿವು.
ಅರುಂಧತಿ
ಹಾರರ್ ಸಿನಿಮಾ ಅರುಂಧತಿಯಲ್ಲಿ ರಾಣಿಯು ದುಷ್ಟ ಅತೀಂದ್ರಿಯ ಶಕ್ತಿಯೊಂದಿಗೆ ಹೋರಾಡುತ್ತಿರುತ್ತಾಳೆ. ಮೂರು ತಲೆಮಾರುಗಳ ನಂತರವೂ ಅಮಾನುಷ ಶಕ್ತಿ ರಾಣಿಯ ವಂಶಸ್ಥರನ್ನು ಹಿಂಬಾಲಿಸುತ್ತದೆ. ಕೋಡಿ ರಾಮಕೃಷ್ಣ ನಿರ್ದೇಶನದ ಈ ಚಿತ್ರದಲ್ಲಿ ದಕ್ಷಿಣದ ಜನಪ್ರಿಯ ನಟಿ ಅನುಷ್ಕಾ ಶೆಟ್ಟಿ, ಸೋನು ಸೂದ್ ಮತ್ತು ದಿವ್ಯಾ ನಾಗೇಶ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಸೋನು ವಿಲನ್ ಆಗಿ ಪಶುಪತಿ ಪಾತ್ರದಲ್ಲಿ ಅಭಿನಯಿಸಿದ್ದು, ಇದು ಅವರಿಗೆ ಸಾಕಷ್ಟು ಪ್ರಸಿದ್ಧಿಯನ್ನು ನೀಡಿತು. ಭೀಕರವಾಗಿರುವ ಈ ಪಾತ್ರ, ಅಭಿನಯ, ಸ್ವರ, ಕಾಸ್ಟ್ಯೂಮ್ ಇವೆಲ್ಲದರ ಜೊತೆ ಸೋನು ಸೂದ್ ನಟನೆಯ ಈ ಪಾತ್ರ ಇಂದಿಗೂ ಭಯಹುಟ್ಟಿಸುವಂತಿದೆ.
ಆರ್ .ರಾಜ್‌ಕುಮಾರ್
2013 ರಲ್ಲಿ ಬಿಡುಗಡೆಯಾದ ಆರ್.ರಾಜ್‌ಕುಮಾರ್ ಪ್ರಭುದೇವ ನಿರ್ದೇಶನದ ಹಿಂದಿ ಚಿತ್ರ. ಈ ಚಿತ್ರದಲ್ಲಿ ಶಾಹಿದ್ ಕಪೂರ್, ಸೋನಾಕ್ಷಿ ಸಿನ್ಹಾ ಮತ್ತು ಸೋನು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ವಿಲನಗ ಡ್ರಗ್ ಬ್ಯಾರನ್‌ನೊಂದಿಗೆ ಕೆಲಸ ಮಾಡಲು ಪ್ರಾರಂಭಿಸುತ್ತಾನೆ. ತನ್ನ ಪ್ರತಿಸ್ಪರ್ಧಿಯನ್ನು ಕೊಲ್ಲುವ ಉದ್ದೇಶದಿಂದ ಸೇರುತ್ತಾನೆ. ಇದರಲ್ಲಿ ಶಿವರಾಜ್ ನೆಗೆಟಿವ್ ಪಾತ್ರವನ್ನು ಸೂದ್ ನಿರ್ವಹಿಸಿದ್ದಾರೆ.
ಸಿಂಗ್ ಈಸ್ ಕಿಂಗ್
ಅನೀಝ್ ಬಾಸ್ಮೀ ನಿರ್ದೇಶನದ ಈ ಚಿತ್ರದಲ್ಲಿ ಅಕ್ಷಯ್ ಕುಮಾರ್, ಕತ್ರಿನಾ ಕೈಫ್ ಮತ್ತು ಸೋನು ಇತರರಿದ್ದಾರೆ. ಇದರಲ್ಲಿ ಒಬ್ಬ ನಟ ಖಳನಾಯಕನ ಪಾತ್ರವನ್ನು ನಿರ್ವಹಿಸುವುದಿಲ್ಲ ಆದರೆ ಜನರಿಂದ ಹಣ ಸುಲಿಗೆ ಮಾಡುವ ಮತ್ತು ಎಲ್ಲರನ್ನು ಹೆದರಿಸೋ ನೆಗೆಟಿವ್ ಪಾತ್ರವನ್ನು ನಿರ್ವಹಿಸುತ್ತಾನೆ. ಸಿಂಗ್ ಈಸ್ ಕಿಂಗ್ ಯಶಸ್ವಿಯಾಯಿತು.
ಸಿಂಬಾ
ಸಿಂಬಾ ರೋಹಿತ್ ಶೆಟ್ಟಿ ನಿರ್ದೇಶನದ ಆಕ್ಷನ್ ಸಿನಿಮಾವಾಗಿದ್ದು ರಣವೀರ್ ಸಿಂಗ್ ಮತ್ತು ಸಾರಾ ಅಲಿ ಖಾನ್ ನಟಿಸಿದ್ದಾರೆ. ಇದರಲ್ಲಿ ನಟ ದುರ್ವಾ ರಾನಡೆ ಪಾತ್ರವನ್ನು ನಿರ್ವಹಿಸಿದರೆ ರಣವೀರ್ ಪೋಲೀಸ್ ಪಾತ್ರದಲ್ಲಿದ್ದಾರೆ.
ದಬಾಂಗ್
ಅಭಿನವ್ ಕಶ್ಯಪ್ ನಿರ್ದೇಶನದ ಈ ಚಿತ್ರದಲ್ಲಿ ಸೋನು ಹೊರತುಪಡಿಸಿ ಸಲ್ಮಾನ್ ಖಾನ್ ಮತ್ತು ಸೋನಾಕ್ಷಿ ಸಿನ್ಹಾ ನಟಿಸಿದ್ದಾರೆ. ಇದು ಸೋನು ಅವರ ಅತ್ಯಂತ ಜನಪ್ರಿಯ ನೆಗೆಟಿವ್ ಪಾತ್ರವಾಗಿದ್ದು, ಅಲ್ಲಿ ಅವರು ಚೇದಿ ಸಿಂಗ್ ಪಾತ್ರವನ್ನು ನಿರ್ವಹಿಸಿದ್ದಾರೆ.