ಹೆಣ್ಣುಮಕ್ಕಳನ್ನು ಬಟ್ಟೆಯಿಂದ ಜಡ್ಜ್ ಮಾಡಬೇಡಿ; ಟ್ರೋಲಿಗರಿಗೆ ನೀನಾ ಗುಪ್ತಾ ಎಚ್ಚರಿಕೆ
ಮಹಿಳೆಯರ ಉಡುಪಿನ ಬಗ್ಗೆ ಟ್ರೋಲ್ ಮಾಡುವ ಮತ್ತು ಬಟ್ಟೆಯಿಂದ ವ್ಯಕ್ತಿಯನ್ನು ಅಳೆಯುವವರ ಬಗ್ಗೆ ನೀನಾ ಗುಪ್ತಾ ಮಾತನಾಡಿದ್ದಾರೆ. ತಮ್ಮ ಬಟ್ಟೆಗಳ ಆಯ್ಕೆಗಾಗಿ ಮಹಿಳೆಯರನ್ನು ಕೀಳಾಗಿ ಕಾಣುವವರ ಬಗ್ಗೆ ನೀನಾ ಗುಪ್ತಾ ಎಚ್ಚರಿಕೆ ನೀಡಿದ್ದಾರೆ.
ಬಾಲಿವುಡ್ ಹಿರಿಯ ನಟಿ ನೀನಾ ಗುಪ್ತಾ(Neena Gupta) ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರೀಯರಾಗಿದ್ದಾರೆ. ಕೆಲವೊಮ್ಮೆ ಆಸಕ್ತಿದಾಯಕ ಪೋಸ್ಟ್ ಗಳನ್ನು ನೀನಾ ಗುಪ್ತಾ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ನೀನಾ ಮಹಿಳೆಯರ ಉಡುಪಿನ ಬಗ್ಗೆ ಟ್ರೋಲ್ ಮಾಡುವ ಮತ್ತು ಬಟ್ಟೆಯಿಂದ ವ್ಯಕ್ತಿಯನ್ನು ಅಳೆಯುವವರ ಬಗ್ಗೆ ಮಾತನಾಡಿದ್ದಾರೆ. ತಮ್ಮ ಬಟ್ಟೆಗಳ ಆಯ್ಕೆಗಾಗಿ ಮಹಿಳೆಯರನ್ನು ಕೀಳಾಗಿ ಕಾಣುವವರ ಬಗ್ಗೆ ನೀನಾ ಗುಪ್ತಾ ಹೊಸ ವಿಡಿಯೋದಲ್ಲಿ ವಿವರಿಸಿದ್ದಾರೆ.
ಬಟ್ಟೆಯಿಂದ ಮಹಿಳೆಯರನ್ನು ಜಡ್ಜ್ ಮಾಡುವವರ ವಿರುದ್ಧ ಮತ್ತು ಟ್ರೋಲ್ ಮಾಡುವವರಿಗೆ ನೀನಾ ಎಚ್ಚರಿಕೆ ನೀಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ವಿಡಿಯೋ ಶೇರ್ ಮಾಡಿರುವ ನೀನಾ ಈ ವಿಡಿಯೋಗೆ 'ಸಚ್ ಕಹೂನ್ ತೋ(Sach Kahun Toh) (ನಾನು ಸತ್ಯವನ್ನು ಮಾತನಾಡಿದರೆ)' ಎನ್ನುವ ಕ್ಯಪ್ಷನ್ ನೀಡಿದ್ದಾರೆ. ಅಂದಹಾಗೆ ಇದು ನೀನಾ ಗುಪ್ತಾ ಅವರ ಬಯೋಗ್ರಫಿಯ ಶೀರ್ಷಿಕೆ ಕೂಡ ಆಗಿದೆ. ಈ ವಿಡಿಯೋದಲ್ಲಿ ನೀನಾ, ಬಟ್ಟೆಯ ಮೂಲಕ ವ್ಯಕ್ತಿಗಳನ್ನು ಜಡ್ಜ್ ಮಾಡಬಾರದು ಎಂದು ಹೇಳುವ ಮೂಲಕ ತನ್ನ ಶೈಕ್ಷಣಿಕ ಅರ್ಹತೆಯ ಬಗ್ಗೆಯೂ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ವಿಡಿಯೋದಲ್ಲಿ ನೀನಾ ನೆಕ್ ಲೈನ್ ಬಟ್ಟೆ ಧರಿಸಿದ್ದಾರೆ. 'ನಾನು ಇದನ್ನು ಯಾಕೆ ಪೋಸ್ಟ್ ಮಾಡಲು ಬಯಸುತ್ತೇನೆ ಎಂದರೆ ನಾನು ಧರಿಸಿರುವ ಈ ರೀತಿಯ ಬಟ್ಟೆ ಧರಿಸಿದವರು ನಿಷ್ಪ್ರಯೋಜಕರು ಎನ್ನಲಾಗುತ್ತೆ. ನಾನು ಸಂಸ್ಕೃತದಲ್ಲಿ ಎಂಫಿಲ್(MPhil in Sanskrit) ಮತ್ತು ಇನ್ನು ಅನೇಕ ವಿದ್ಯಾರ್ಹತೆ ಹೊಂದಿದ್ದೇನೆ ಎಂದು ಹೇಳುತ್ತೇನೆ. ಒಬ್ಬ ವ್ಯಕ್ತಿಯನ್ನು ಕೇವಲ ಬಟ್ಟೆಯಿಂದ ನಿರ್ಣಹಿಸಬೇಡಿ. ಇದು ನಿಮಗೆ ಅರ್ಥವಾಗುತ್ತೆ ಎಂದು ಭಾವಿಸುತ್ತೇನೆ ಟ್ರೋಲಿಗರೇ' ಎಂದು ಹೇಳಿದ್ದಾರೆ.
ನೀನಾ ಗುಪ್ತಾ ಹೇಳಿದ ಒಂಬತ್ತು ಕತೆಗಳು
ನೀನಾ ಗುಪ್ತಾ ಪೋಸ್ಟ್ ಮಾಡಿರುವ ವಿಡಿಯೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡುತ್ತಿದ್ದಾರೆ. 'ಯಾರಾದರೂ ಟ್ರೋಲ್ ಗಳನ್ನು ಇಷ್ಟು ಪ್ರೀತಿಯಿಂದ ನಿಂದಿಸುತ್ತಿದ್ದರೇ' ಎಂದು ಪ್ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೋರ್ವ ವ್ಯಕ್ತಿ ಕಾಮೆಂಟ್ ಮಾಡಿ, 'ನಾವು ತುಂಬಾ ಸುಂದರವಾಗಿ ಕಾಣುತ್ತಿದ್ದೀರಿ. ಈ ವಿಡಿಯೋ ತುಂಬಾ ಮುದ್ದಾಗಿದೆ' ಎಂದರೆ, ಇನ್ನೋರ್ವ ತುಂಬಾ ಕ್ಯೂಟ್ ಆಗಿದ್ದೀರಿ ಎಂದೆಲ್ಲ ಕಾಮೆಂಟ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ನೀನಾ ಗುಪ್ತಗೆ ಪ್ರತಿಷ್ಠಿತ ರಾಮಾನುಜನ್ ಪ್ರಶಸ್ತಿ
ಇತ್ತೀಚಿಗಷ್ಟೆ ನೀನಾ ಗುಪ್ತಾ ಸದ್ಯ ಜೈಪುರದ ಸಾಹಿತ್ಯೋತ್ಸವಕ್ಕೆ ತೆರಳಿದ್ದರು. ವಿಮಾನ ನಿಲ್ದಾಣದಿಂದ ವಿಡಿಯೋ ಹಂಚಿಕೊಂಡಿದ್ದು, ಅದರಲ್ಲಿ ತಮ್ಮ ಬಯೋಗ್ರಫಿ ಸಚ್ ಕಹುನ್ ತೋ ಬಗ್ಗೆ ಮಾತನಾಡಿದ್ದರು. ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ ನೀನಾ ಗುಪ್ತಾ ಕೊನೆಯದಾಗಿ ರಣ್ವೀರ್ ಸಿಂಗ್(Ranveer Singh) ನಟನೆಯ 83 ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಕೆಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನೀನಾ ಗುಪ್ತಾ, ರಶ್ಮಿಕಾ ಮಂದಣ್ಣ(Rashmika Mandanna) ಮತ್ತು ಅಮಿತಾ ಬಚ್ಚನ್ (Amitabh Bachchan) ನಟನೆಯ ಗುಡ್ ಬೈ ಮತ್ತು ಉಂಚೈ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.