ನವಾಜುದ್ದೀನ್ ಸಿದ್ದಿಕಿ ವಿರುದ್ಧ ಮಾಡಿದ ಆರೋಪಗಳೆಲ್ಲ ಸುಳ್ಳು; ಮನೆ ಕೆಲಸದವಳ ಬಹಿರಂಗ ಕ್ಷಮೆ

ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ದಾಂಪತ್ಯ ಕಲಹ ಇನ್ನೂ ಬಗೆಹರಿಯುವ ಸೂಚನೆ ಕಾಣುತ್ತಿಲ್ಲ. ಮನಕೆಲಸದಾಕೆ ಸಪ್ನಾ ಕ್ಷಮೆ ಕೇಳಿ ವಿಡಿಯೋ ರಿಲೀಸ್ ಮಾಡಿದ್ದಾರೆ. 

Nawazuddin Siddiqui's househelp Sapna Robin apologises to him sgk

ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ದಾಂಪತ್ಯ ಕಲಹ ಇನ್ನೂ ಬಗೆಹರಿಯುವ ಸೂಚನೆ ಕಾಣುತ್ತಿಲ್ಲ. ಪತಿ ಮತ್ತುಅವರ ಕುಟುಂಬ ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ನವಾಜುದ್ದೀನ್  ಪತ್ನಿಅಲಿಯಾ ಸಾಲು ಸಾಲು ಆರೋಪ ಮಾಡಿದ್ದರು. ಅಲ್ಲದೇ ಮನೆ ಕೆಲಸದಾಕೆ ಸಪ್ನಾ ಕೂಡ ನವಾಜುದ್ದೀನ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಆದರೀಗ ಸಪ್ನಾ ತನ್ನ ಹೇಳಿಕೆ ಬದಲಾಯಿಸಿದ್ದಾರೆ. ಸಪ್ನಾ ಕ್ಷಮೆ ಕೇಳಿ ವಿಡಿಯೋ ರಿಲೀಸ್ ಮಾಡಿದ್ದಾರೆ. ತಾನು ಈ ಹಿಂದೆ ಮಾಡಿದ್ದ ಆರೋಪಗಳೆಲ್ಲ ಸುಳ್ಳು ಎಂದಿರುವ ಸಪ್ನಾ ಅಲಿಯಾ ಮಾಡಿರುವ ಆರೋಪಗಳು ಸಹ ಸುಳ್ಳು ಎಂದು ಹೇಳಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿ ರಿಲೀಸ್ ಮಾಡಿರುವ ಸಪ್ನಾ ರಾಬಿನ್ ಮಸಿಹ್, 'ನಾನು ನಿಮಗೆ ಕೆಟ್ಟದಾಗುವುದನ್ನು ಬಯಸುವುದಿಲ್ಲ. ಯಾಕೆಂದರೆ ನೀವು ಒಳ್ಳೆಯ ಮನುಷ್ಯ. ಈ ಕಾರಣಕ್ಕಾಗಿಯೇ ನಾನು ನಿಮ್ಮ ಬಳಿ ತುಂಬಾ ತುಂಬಾ ಕ್ಷಮೆ ಕೇಳುತ್ತೇನೆ. ನೀವು ಏನು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ನೋಡುದ್ದೀರಾ ಅದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ಮೇಡಮ್ ಕೊಟ್ಟ ದೂರು ಎಲ್ಲವೂ ಸುಳ್ಳು ಆಗಿದೆ. ನಿಮ್ಮ ವಿರುದ್ಧ ಕ್ರಮ ಯಾವುದೇ ಕ್ರಮ ಆಗದೇ ಇರಲಿ ಎಂದು ನಾನು ಕೇಳಿಕೊಳ್ಳುತ್ತೇನೆ. ನೀವು ದಯವಿಟ್ಟು ಮನೆಗೆ ಬನ್ನಿ. ಕೈ ಮುಗಿದು ಕೇಳಿ ಕೊಳ್ಳುತ್ತೇನೆ ಮನೆಗೆ ಬನ್ನಿ' ಎಂದು ಹೇಳಿದರು. 

ಸಪ್ನಾ ರಾಬಿನ್ ಮಸಿಹ್ ಸೇಲ್ಸ್ ವ್ಯವಸ್ಥಾಪಕರಾಗಿ ತೊಡಗಿಸಿಕೊಂಡಿದ್ದಾರೆ ಎಂದು ವಕೀಲರು ತಿಳಿಸಿದ್ದಾರೆ. ಆದರೆ ಅವರು ದುಬೈನಲ್ಲಿ ನವಾಜುದ್ದೀನ್ ಅವರ ಚಿಕ್ಕ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು, ಅಲ್ಲೇ ಅವರು ಶಾಲೆಗೆ ಹೋಗುತ್ತಿದ್ದರು. 

ನವಾಜುದ್ದೀನ್ ಪತ್ನಿ ಆಲಿಯಾ 2021 ರಲ್ಲಿ ತಮ್ಮ ಇಬ್ಬರು ಮಕ್ಕಳಾದ ಶೋರಾ ಮತ್ತು ಯಾನಿಯೊಂದಿಗೆ ದುಬೈಗೆ ಸ್ಥಳಾಂತರಗೊಂಡರು. ಆಲಿಯಾ ಮತ್ತು ಅವರ ಮಕ್ಕಳು ಕಳೆದ ವರ್ಷ ಭಾರತಕ್ಕೆ ಮರಳಿದರು ಮತ್ತು ಮುಂಬೈನ ಯಾರಿ ರಸ್ತೆಯಲ್ಲಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದರು.

ಅವರು ಚಿತ್ರ ಹಿಂಸೆ ನೀಡ್ತಿದ್ದಾರೆ; ನವಾಜುದ್ದೀನ್ ಸಿದ್ದಿಕಿ ವಿರುದ್ಧ ಮತ್ತೆ ಸಿಡಿದೆದ್ದ ಪತ್ನಿ ಆಲಿಯಾ

ಅಲಿಯಾ ಆರೋಪ 

ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬ ಸದಸ್ಯರು ಯಾವುದೇ ಆಹಾರ, ಹಾಸಿಗೆ ಮತ್ತು ಸ್ನಾನ ಮಾಡಲು ಸ್ನಾನಗೃಹವನ್ನು ನೀಡಿಲ್ಲ. ತನ್ನ ಸುತ್ತಾ ಪುರುಷ ಅಂಗರಕ್ಷಕರನ್ನು ನಿಯೋಜಿಸಿದ್ದಾರೆ ಮತ್ತು ಹಾಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದಾರೆ, ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

ಜಾತಿ ನೋಡಿ ಮದುವೆಯಾಗಬೇಡ; ವಿಡಿಯೋದಿಂದ ನವಾಜುದ್ದೀನ್ ಸಿದ್ಧಿಕಿ ಬಣ್ಣ ಬಯಲು ಮಾಡಿದ ಪತ್ನಿ

ಅಲಿಯಾ ಆರೋಪ 

ನವಾಜುದ್ದೀನ್ ಸಿದ್ದಿಕಿ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್ ದಾಖಲಾಗಿದ್ದು ಈ ಪ್ರಕರಣ ಸದ್ಯ ಕೋರ್ಟ್​​‌ನಲ್ಲಿದೆ.  ಸಿದ್ಧಿಕಿ ಪತ್ನಿ ಆಲಿಯಾ ನವಾಜುದ್ದೀನ್ ವಿರುದ್ಧ ನಿರಂತರ ಆರೋಪ ಮಾಡುತ್ತಿದ್ದಾರೆ. ಆಲಿಯಾ ಪರ ವಕೀಲರು ನವಾಜುದ್ದೀನ್ ಹಾಗೂ ಅವರ ಕುಟುಂಬ ಏನೆಲ್ಲ ಹಿಂಸೆ ಮಾಡಿದೆ ಎಂದು ಇತ್ತೀಚೆಗಷ್ಟೆ ವಿವರಿಸಿದ್ದರು. ಅಲಿಯಾ ಆರೋಪದಲ್ಲಿ, ನವಾಜುದ್ದೀನ್ ಸಿದ್ದಿಕಿ ಮತ್ತು ಅವರ ಕುಟುಂಬ ಸದಸ್ಯರು ಯಾವುದೇ ಆಹಾರ, ಹಾಸಿಗೆ ಮತ್ತು ಸ್ನಾನ ಮಾಡಲು ಸ್ನಾನಗೃಹವನ್ನು ನೀಡಿಲ್ಲ. ತನ್ನ ಸುತ್ತಾ ಪುರುಷ ಅಂಗರಕ್ಷಕರನ್ನು ನಿಯೋಜಿಸಿದ್ದಾರೆ ಮತ್ತು ಹಾಲ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದಾರೆ, ಚಿತ್ರ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದರು.

Latest Videos
Follow Us:
Download App:
  • android
  • ios