ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಬಯೋಪಿಕ್‌ 'ತಲೈವಿ'ಯಾಗಿ ಕಂಗನಾ ಮಾಡುತ್ತಿರುವುದು ಗೊತ್ತೇ ಇದೆ.  ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು ಅದೂ ಕೂಡಾ ಚರ್ಚಾಸ್ಪದವಾಗಿದೆ. 

ಜಯಲಲಿತಾ ಎನ್ನುವ ವ್ಯಕ್ತಿತ್ವ ಕಡೆವರೆಗೂ ವಿವಾದಾತ್ಮಕವಾಗಿಯೇ ಇತ್ತು. ಅವರ ವೈಯಕ್ತಿಯ ಜೀವನ, ರಾಜಕೀಯ ವೃತ್ತಿ ಜೀವನ, ಸಿಎಂ ಆಗಿದ್ದು, ಶಶಿಕಲಾ ಜೊತೆಗಿನ ನಂಟು ಇವೆಲ್ಲದರ ಬಗ್ಗೆಯೂ 'ತಲೈವಿ' ಇಂಚಿಂಚಾಗಿ ಬಿಚ್ಚಿಡಲಿದೆ ಎನ್ನಲಾಗಿದೆ. 

'ಎದೆಯ ಮೇಲೆ ಇರಬೇಕಾದ್ದು ಭುಜದ ಮೇಲೆ, ಟ್ರೋಲ್ ಆದ ಕಂಗನಾ!

'ತಲೈವಿ'ಯಾಗಿ ಕಂಗನಾ ಕಾಣಸಿಕೊಂಡರೆ, ಶೋಭನ್ ಬಾಬುಡಿ ಪಾತ್ರದಲ್ಲಿ ವಿಜಯ್ ದೇವರಕೊಂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

 

ತೆಲುಗು ಸ್ಟಾರ್ ನಟ ಶೋಭನ್ ಬಾಬುಡಿಗೂ ಜಯಲಲಿತಾಗೂ ಸಂಬಂಧವಿದೆ ಎನ್ನಲಾಗಿತ್ತು. ಇವರಿಬ್ಬರಿಗೆ ಮದುವೆಯೂ ಆಗಿತ್ತು ಎನ್ನಲಾಗಿದೆ. ಆದರೆ ಕಾರಣಾಂತರಗಳಿಂದ ಬೇರೆ ಬೇರೆಯಾಗಿದ್ದರು ಎನ್ನಲಾಗಿದೆ. ಇದೀಗ ಶೋಭನ್ ಆಗಿ ದೇವರಕೊಂಡ ನಟಿಸಲಿದ್ದಾರೆ. 

ಜಯಲಲಿತಾ ಪಾತ್ರಕ್ಕೆ ಫೈಟ್; ಕನ್ನಡದ ನಟಿ ಗಿಟ್ಟಿಸಿಕೊಂಡ್ರು ಅವಕಾಶ

'ರೋಜಾ' ಖ್ಯಾತಿಯ ಅರವಿಂದ ಸ್ವಾಮಿ ಎಂಜಿಆರ್ ಆಗಿ ನಟಿಸಿದರೆ, ಕರುಣಾನಿಧಿಯಾಗಿ ಪ್ರಕಾಶ್ ರಾಜ್ ನಟಿಸಲಿದ್ದಾರೆ ಎನ್ನಲಾಗಿದೆ.