Asianet Suvarna News Asianet Suvarna News

ಅನುಷಾ ಶೆಟ್ಟಿ ಜೊತೆ ತೆಲುಗು ಸ್ಟಾರ್ ನಾಗ ಶೌರ್ಯ ಮದುವೆ; ಬೆಂಗಳೂರಿನಲ್ಲಿ ಅದ್ದೂರಿ ವಿವಾಹ

ತೆಲುಗು ಸ್ಟಾರ್ ನಟ, ಮೋಸ್ಟ್ ಎಲಿಜೆಬೆಲ್ ಬ್ಯಾಚುಲರ್ ಆಗಿದ್ದ ನಾಗ ಶೌರ್ಯ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತೆಲುಗು ಸ್ಟಾರ್ ಕರ್ನಾಟಕದ ಯುವತಿಯನ್ನು ಕೈ ಹಿಡಿಯುತ್ತಿದ್ದಾರೆ. ಕರ್ನಾಟಕ ಮೂಲದ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಅನುಷಾ ಶೆಟ್ಟಿ ಜೊತೆ ನಾಗ ಶೌರ್ಯ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

Naga Shaurya and Anusha Shetty to marry in Bengaluru on november 20th sgk
Author
First Published Nov 10, 2022, 5:45 PM IST

ತೆಲುಗು ಸ್ಟಾರ್ ನಟ, ಮೋಸ್ಟ್ ಎಲಿಜೆಬೆಲ್ ಬ್ಯಾಚುಲರ್ ಆಗಿದ್ದ ನಾಗ ಶೌರ್ಯ ಇದೀಗ ಹಸೆಮಣೆ ಏರಲು ಸಜ್ಜಾಗಿದ್ದಾರೆ. ತೆಲುಗು ಸ್ಟಾರ್ ಕರ್ನಾಟಕದ ಯುವತಿಯನ್ನು ಕೈ ಹಿಡಿಯುತ್ತಿದ್ದಾರೆ. ಕರ್ನಾಟಕ ಮೂಲದ ಇಂಟೀರಿಯರ್ ಡಿಸೈನರ್ ಆಗಿ ಕೆಲಸ ಮಾಡುತ್ತಿರುವ ಅನುಷಾ ಶೆಟ್ಟಿ ಜೊತೆ ನಾಗ ಶೌರ್ಯ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅಂದಹಾಗೆ ಈಗಾಗಲೇ ಮದುವೆ ದಿನಾಂಕ ಕೂಡ ಫಿಕ್ಸ್ ಆಗಿದ್ದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ವಿವಾಹ ನಡೆಯಲಿದೆ. ಇದೇ ತಿಂಗಳು ನವೆಂಬರ್ 20ರಂದು ನಾಗ ಶೌರ್ಯ ಮತ್ತು ಅನುಷಾ ಶೆಟ್ಟಿ ಹಸೆಮಣೆ ಏರುತ್ತಿದ್ದಾರೆ. 

ಅಂದಹಾಗೆ ಬೆಂಗಳೂರಿನಲ್ಲಿ ಎರಡು ದಿನ ಸಮಾರಂಭ ನಡೆಯುತ್ತಿದ್ದು ನಾಗ್ ಕುಟುಂಬ ಬೆಂಗಳೂರಿಗೆ ಶಿಫ್ಟ್ ಆಗುತ್ತಿದ್ದಾರೆ. ಅಂದಹಾಗೆ ಮದುವೆಗೆ ಕುಟುಂಬದವರು, ಆಪ್ತರು  ಮತ್ತು ಸಿನಿಮಾರಂಗದ ಗಣ್ಯರು ಹಾಜರಾಗುತ್ತಿದ್ದಾರೆ. ತೆಲುಗು ಇಂಡಸ್ಟ್ರಿಯಿಂದ ಯಾರೆಲ್ಲ ಭಾಗಿಯಾಗಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.   

ನವೆಂಬರ್ 19, 20 ಮದುವೆ ಸಮಾರಂಭ

ನಾಗ ಶೌರ್ಯ ಮತ್ತು ಅನುಷಾ ಶೆಟ್ಟಿ ಅವರ ವಿವಾಹ ಮಹೋತ್ಸವ ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ನಡೆಯಲಿದೆ. ನವೆಂಬರ್ 19 ಮತ್ತು 20 ರಂದು ಬೆಂಗಳೂರಿನ ವಿಟ್ಟಲ್ ಮಲ್ಯ ರಸ್ತೆಯಲ್ಲಿರುವ ಜೆಡಬ್ಲ್ಯೂ ಮ್ಯಾರಿಯಟ್ ಹೋಟೆಲ್‌ನಲ್ಲಿ ಸಮಾರಂಭಗಳನ್ನು ಆಯೋಜಿಸಲಾಗಿದೆ. ನವೆಂಬರ್ 20 ರಂದು ಬೆಳಿಗ್ಗೆ 11.25ರ ಮುಹೂರ್ತದಲ್ಲಿ ನಾಗ ಶೌರ್ಯ, ಅನುಷಾ ಶೆಟ್ಟಿಗೆ ಮಾಂಗಲ್ಯ ಧಾರಣೆ ಮಾಡಲಿದ್ದಾರೆ. ನಾಗ ಶೌರ್ಯ ಮತ್ತು ಅನುಷಾ ಅವರ ಮದುವೆಯ ಆಹ್ವಾನ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಅಭಿಮಾನಿಗಳು ಕ್ಯೂಟ್ ಜೋಡಿಗೆ ಶುಭ ಹಾರೈಸುತ್ತಿದ್ದಾರೆ.

ಜೂಜಾಟ: ನಟ ನಾಗ ಶೌರ್ಯ ಫಾರ್ಮ್‌ಹೌಸ್‌ ಮೇಲೆ ದಾಳಿ, ಮೊಬೈಲ್ ಮತ್ತು ಪೋಕರ್ ವಸ್ತು ವಶ

ನಾಗ ಶೌರ್ಯ ಮತ್ತು ಅನುಷಾ ಶೆಟ್ಟಿ ಅವರ ಮದುವೆಯ ಆಮಂತ್ರಣ ಪತ್ರದಲ್ಲಿ ಎಲ್ಲಾ ಸಮಾರಂಭ ಮತ್ತು ಡ್ರೆಸ್ ಕೋಡ್ ವಿವರಗಳನ್ನು ನೀಡಲಾಗಿದೆ. ನವೆಂಬರ್ 19 ರಂದು ಮೆಹಂದಿ ಸಮಾರಂಭ ನಡೆಯಲಿದೆ, ಮಧ್ಯಾಹ್ನ 3.30 ಕ್ಕೆ ಪ್ರಾರಂಭವಾಗಲಿದೆ. ಬಳಿಕ ರಾತ್ರಿ 'ಕಾಕ್‌ಟೈಲ್ ಪಾರ್ಟಿ' ಕೂಡ ಆಯೋಜಿಸಲಾಗಿದೆ. ನವೆಂಬರ್ 20ಕ್ಕೆ ಮದುವೆ ನಡೆಯಲಿದೆ. 

Follow Us:
Download App:
  • android
  • ios