Asianet Suvarna News Asianet Suvarna News

ಜೂಜಾಟ: ನಟ ನಾಗ ಶೌರ್ಯ ಫಾರ್ಮ್‌ಹೌಸ್‌ ಮೇಲೆ ದಾಳಿ, ಮೊಬೈಲ್ ಮತ್ತು ಪೋಕರ್ ವಸ್ತು ವಶ

ನಾಗ ಶೌರ್ಯ ಹೈದರಾಬಾದ್‌ನ ಫಾರ್ಮ್‌ಹೌಸ್‌ ಮೇಲೆ ದಾಳಿ. 30 ಮಂದಿ ದೊಡ್ಡ ವ್ಯಕ್ತಿಗಳಿದ್ದರು ಎನ್ನಲಾಗಿದೆ...

Telugu actor Naga Shaurya farm house raid by police 30 people arrested vcs
Author
Bangalore, First Published Nov 2, 2021, 1:21 PM IST
  • Facebook
  • Twitter
  • Whatsapp

ಸಿನಿಮಾ ಕ್ಷೇತ್ರದಲ್ಲಿ ಹೆಸರು ಗಳಿಸುತ್ತಿದ್ದಂತೆ, ನಟ-ನಟಿಯರು ಮಾಡುವ ಮೊದಲ ಕೆಲಸವೇ ಮನೆ (Home) ಅಥವಾ ಫಾರ್ಮ್‌ಹೌಸ್ (Farm house) ಖರೀದಿಸುವುದು. ಆರಂಭದಲ್ಲಿ ಸುತ್ತು ಮುತ್ತ ಮರ ಗಿಡ ಹಾಕಿ, ಪ್ರಾಣಿ-ಪಕ್ಷಿಗಳನ್ನು ಸಾಕುತ್ತಾರೆ. ಕೆಲವು ವರ್ಷಗಳ ನಂತರ ಅದೇ ತಾಣವನ್ನು ಮೋಜು ಮಸ್ತಿಗೆ ಬಳಸುತ್ತಾರೆ. ಇಂಥದ್ದೇ ಆರೋಪ ಕನ್ನಡದ ಕೆಲವು ಸ್ಟಾರ್ ನಟರ ಮೇಲೂ ಇದೆ. ಇದೇ ಮೋಜು ಹೆಚ್ಚಾದರೆ ಈ ರೀತಿ ಪೊಲೀಸರ (Police) ಬಲೆಗೆ ಸಿಲುಕಿಕೊಳ್ಳುತ್ತಾರೆ. 

ತಾಪ್ಸಿ ಪ್ರೊಡಕ್ಷನ್ ಮೂಲಕ ಸಮಂತಾ ಬಾಲಿವುಡ್ ಎಂಟ್ರಿ

2011ರಲ್ಲಿ ನಾಗ ಶೌರ್ಯ (Naga Shourya) ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಚಂದಮಾಮ ಕಥಲು, ರಶ್ಮಿಕಾ ಮಂದಣ್ಣ (Rashmika Mandanna) ಜೊತೆ ಛಲೋ, ಸಮಂತಾ (Samantha Prabhu) ಜೊತೆ ಓಹ್ ಬೇಬಿ ಸಿನಿಮಾ ಸೇರಿ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಒಂದು ವಾರ ಹಿಂದೆಯಷ್ಟೇ ಇವರ ನಟನೆಯ 'ವರಡು ಕಾವಲೇನು' ಸಿನಿಮಾ ಬಿಡುಗಡೆ ಆಗಿದೆ. ಇನ್ನೂ ನಾಲ್ಕು ಸಿನಿಮಾಗಳು ಚಿತ್ರೀಕರಣದ ಹಂತದಲ್ಲಿವೆ.  ಫೇಮ್‌ ಸಿಗುತ್ತಿದ್ದ ಸಮಯದಲ್ಲಿಯೇ ನಾಗ ವಿರುದ್ಧ ದೊಡ್ಡ ಆರೋಪ ಕೇಳಿ ಬರುತ್ತಿದೆ. 

Telugu actor Naga Shaurya farm house raid by police 30 people arrested vcs

ಹೌದು! ಹೈದರಾಬಾದ್‌ನಲ್ಲಿ (Hyderabad) ನಾಗ ಶೌರ್ಯ ಒಂದು ಫಾರ್ಮ್‌ಹೌಸ್ ಹೊಂದಿದ್ದಾರೆ. ಈ ಮನೆಯಲ್ಲಿ ಬೇಡದ ಕೆಲಸಗಳು ಹಾಗೂ ಅವ್ಯವಹಾರಗಳು ನಡೆಯುತ್ತಿವೆ, ಎಂದು ಪೊಲೀಸರಿಗೆ ಸಿಕ್ಕ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ಕಾರ್ಯಚರಣೆ ವೇಳೆ ದೊಡ್ಡ ಪೊಲೀಸರ ಗುಂಪನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫಾರ್ಮ್‌ ಹೌಸ್‌ನಲ್ಲಿ ಜೂಜಾಡುತ್ತಿದ್ದರು ಎನ್ನಲಾಗಿದೆ. ಭಾರಿ ಮೊತ್ತದ ನಗದು ಹಣ (Money), ಮೊಬೈಲ್ (Mobile), ಪೋಕರ್ (Poker) ಆಡಲು ಬಳಸುವ ವಸ್ತುಗಳು ಮತ್ತು ಹಣ ಎಣಿಸುವ ಅಂತ್ರವನ್ನು (Money counting machine) ಪೊಲೀಸರು ವಶ ಪಡೆಸಿಕೊಂಡಿದ್ದಾರೆ.

ಫಾರ್ಮ್‌ಹೌಸ್‌ ಮೇಲೆ ದಾಳಿ ನಡೆಸಿದಾಗ 30 ಪ್ರತಿಷ್ಠಿತ ವ್ಯಕ್ತಿಗಳು ಸಿಲುಕಿಕೊಂಡಿದ್ದಾರೆ. ಅವರಲ್ಲಿ ಸುಮನ್ ಗುಟ್ಟಾ (Suman Gutta) ಹೆಸರಿನ ಖ್ಯಾತ ಉದ್ಯಮಿ ಮತ್ತು ಕೆಲವು ನಟರಿದ್ದರು, ಎನ್ನಲಾಗುತ್ತಿದೆ. ಎಲ್ಲರೂ ಒಟ್ಟಿಗೆ ಸೇರಿಕೊಂಡು ಪೋಕರ್ ಆಡಿಸುತ್ತಿದ್ದರು, ಎಂಬ ಮಾಹಿತಿ ಹೊರ ಬಂದಿದೆ. ದಾಳಿ ವೇಳೆ 67 ಲಕ್ಷ ನಗದು, 33 ಮೊಬೈಲ್ ಪೋನ್, ಮೂರು ಕಾರು (Car), ಎರಡು ಕ್ಯಾಸಿನೋ ಬಾಕ್ಸ್‌ (Casino Machine) ಹಾಗೂ ಕೆಲವು ಹಣ ಎಣಿಸುವ ಯಂತ್ರಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಆ 30 ಮಂದಿಯನ್ನು ಬಂಧಿಸಿದ್ದಾರೆ. 

ಸರಿತಾ ನನಗೆ ಒಪ್ಪಿಗೆಯಾಗೊಲ್ಲ, ಆಕೆ ಕಪ್ಪು: ಪುನೀತ್ ಸಂದರ್ಶನ ಪತ್ರ ವೈರಲ್

ತೆಲುಗು ನಿರ್ಮಾಪಕ ಸುನಿಲ್ ಚೌಧರಿಯನ್ನು (Sunil Choudary) ಸಹ ಪೊಲೀಸರು ಬಂಧಿಸಿದ್ದಾರೆ. ನಾನು ಜೂಜು ಆಡುತ್ತಿರಲಿಲ್ಲ. ಕೇವಲ ಫ್ರೆಂಡ್ಲಿ ತ್ರೀ ಕಾರ್ಡ್ಸ್ (3-Card) ಆಡುತ್ತಿದ್ದೆ. ತಮ್ಮದು ಗೋವಾದಲ್ಲಿ (Goa) ಕ್ಯಾಸಿನೋಗಳಿವೆ, ದೀಪಾವಳಿ (Deepavali) ಸಮಯದಲ್ಲಿ ಸ್ನೇಹಿತರು ಸೇರಿ ಆಟ ಆಡುತ್ತಿದ್ದವು, ಎಂದು ಅವರು ಪೊಲೀಸರಿಗೆ ಹೇಳಿದ್ದಾರೆ.  ಉದ್ಯಮಿ ಸುಮನ್ ಗುಟ್ಟಾ ಮತ್ತು ನಾಗ ಶೌರ್ಯ ಅದೇ ಫಾರ್ಮ್‌ಹೌಸ್‌ನಲ್ಲಿ ಕೆಲವು ಸೆಟ್‌ಮೆಂಟ್‌ಗಳು, ರಿಯಲ್ ಎಸ್ಟೇಟ್ (Real Estate) ವ್ಯಾಪರಗಳನ್ನು ನಡೆಸುತ್ತಿದ್ದರು ಎನ್ನಲಾಗಿದೆ. ಸುಮನ್ ಬಂಧಿಸಿದ ನಂತರ ಆತನ ವಿರುದ್ಧ ಇರುವ ವಂಚನೆ ಪ್ರಕರಣಗಳು ಇದೀಗ ಬೆಳಕಿಗೆ ಬರುತ್ತಿವೆ. ಕೆಲವು NRIಗಳು ಸಹ ಈತ ವಿರುದ್ಧ ದೂರು ನೀಡಿದ್ದಾರೆ.

Follow Us:
Download App:
  • android
  • ios