ಶೋಭಿತಾಗೆ ಪ್ರೀತಿಯ ಮಳೆಗೆರೆಯೋ 2ನೇ ಮದ್ವೆಯಾದ ನಾಗಚೈತನ್ಯ ಆಡೋ ಭಾಷೆ ಯಾವುದು?
ನಾಗ ಚೈತನ್ಯ ಹಾಗೂ ಶೋಭಿತಾ ಮನೆಯಲ್ಲಿ ಹೇಗಿರ್ತಾರೆ, ಅವರು ಯಾವ ಭಾಷೆ ಮಾತನಾಡ್ತಾರೆ, ಅವರ ಮೊದಲ ಭೇಟಿ ಎಲ್ಲಾಯ್ತು ಹೀಗೆ ಅಭಿಮಾನಿಗಳ ನಾನಾ ಪ್ರಶ್ನೆಗಳಿಗೆ ನಾಗ ಹಾಗೂ ಶೋಭಿತಾ ಉತ್ತರ ನೀಡಿದ್ದಾರೆ.
ಪ್ರಸಿದ್ಧ ಜೋಡಿ ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಳ (Naga Chaitanya and Shobhita Dhulipal) ದಾಂಪತ್ಯ ಜೀವನದ ನವೋಲ್ಲಾಸದಲ್ಲಿ ಮಿಂದೇಳುತ್ತಿದ್ದಾರೆ. ಸಾಕಷ್ಟು ಸುದ್ದಿ ಮಾಡಿದ್ದ ಇಬ್ಬರ ಮದುವೆಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಈಗ್ಲೂ ಹರಿದಾಡ್ತಾನೆ ಇದೆ. ಈ ಮಧ್ಯೆ ನವ ದಂಪತಿ (couple) ಮನೆಯಲ್ಲಿ ಹೇಗಿರ್ತಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಫ್ಯಾನ್ಸ್ ಗಿರೋದು ಸಾಮಾನ್ಯ. ಅಭಿಮಾನಿಗಳ ಮನಸ್ಸು ತಣಿಸಲು ನಾಗ ಚೈತನ್ಯ ತಮ್ಮ ದಾಂಪತ್ಯ ಜೀವನದ ಬಗ್ಗೆ ಮಾತನಾಡಿದ್ದಾರೆ. ಮನೆಯಲ್ಲಿ ಪತ್ನಿ ಶೋಭಿತಾ ಜೊತೆ ಯಾವ ಭಾಷೆಯಲ್ಲಿ ಮಾತನಾಡ್ತೇನೆ ಎಂಬುದನ್ನು ನಾಗ ಚೈತನ್ಯ ಹೇಳಿದ್ದಾರೆ. ನಾಗ ಚೈತನ್ಯ, ಮನೆಯಲ್ಲಿ ತೆಲುಗು ಭಾಷೆ (Telugu language)ಯಲ್ಲಿ ಮಾತ್ರ ಮಾತನಾಡುವಂತೆ ಶೋಭಿತಾರಿಗೆ ಹೇಳಿದ್ದಾರಂತೆ. ಅದಕ್ಕೆ ಕಾರಣವೇನು ಎಂಬುದನ್ನು ಕೂಡ ನಾಗ ಚೈತನ್ಯ ಬಿಚ್ಚಿಟ್ಟಿದ್ದಾರೆ.
ತೆಲುಗು ಭಾಷೆಯ ಮೇಲೆ ಒಲವು : ನಾಗ ಚೈತನ್ಯ ತನ್ನ ಪತ್ನಿ ಶೋಭಿತಾಗೆ ತೆಲುಗಿನಲ್ಲಿ ಮಾತ್ರ ಮಾತನಾಡಲು ಹೇಳಿದ್ದು ಯಾಕೆ ಎಂಬ ಪ್ರಶ್ನೆಗೆ, ನನಗೆ ಮೊದಲಿನಿಂದಲೂ ತೆಲುಗು ಭಾಷೆಯ ಮೇಲೆ ಪ್ರೀತಿ (love) ಹೆಚ್ಚಿದೆ. ಅದಕ್ಕಾಗಿಯೇ ಹಾಗೆ ಹೇಳಿದ್ದೇನೆ. ನನ್ನ ವೃತ್ತಿಯಲ್ಲಿ ನಾನು ನಾನಾ ಭಾಷೆಗಳನ್ನು ಮಾತನಾಡುವ ಜನರನ್ನು ಭೇಟಿಯಾಗ್ತೇನೆ. ಆದ್ರೆ ತೆಲುಗು ಭಾಷೆ ನನ್ನನ್ನು ಯಾವಾಗಲೂ ಆಕರ್ಷಿಸುತ್ತದೆ. ತೆಲುಗು ಭಾಷೆ ಕೇಳುವುದು ಮತ್ತು ಯಾರೊಂದಿಗಾದರೂ ಆ ಭಾಷೆಯಲ್ಲಿ ಮಾತನಾಡುವಾಗ ಖುಷಿಯಾಗುತ್ತದೆ. ಈ ಬಾಂಧವ್ಯ ನನ್ನನ್ನು ಈ ಭಾಷೆಗೆ ಹತ್ತಿರವಾಗಿಸಿದೆ ಎಂದು ನಾನು ಭಾವಿಸಿದ್ದೇನೆ ಎನ್ನುತ್ತ ನಾಗ ಚೈತನ್ಯ ತೆಲುಗು ಭಾಷೆ ಮೇಲಿರುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಶೋಭಿತಾಗೆ ಮನವಿ ಮಾಡಿದ ನಾಗ ಚೈತನ್ಯ : ಭಾಷೆ ವಿಷ್ಯಕ್ಕೆ ಶೋಭಿತಾರಿಗೆ ಆಗಾಗ ಮನವಿ ಮಾಡುತ್ತೇನೆ ಎಂದು ನಾಗ ಚೈತನ್ಯ ಹೇಳಿದ್ದಾರೆ. ನನ್ನ ತೆಲುಗು ಭಾಷೆಯನ್ನು ಇನ್ನಷ್ಟು ಸುಧಾರಿಸಿಕೊಳ್ಳಲು ನಾನು ಶೋಭಿತಾರಿಗೆ ನನ್ನೊಂದಿಗೆ ತೆಲುಗಿನಲ್ಲಿ ಮಾತನಾಡುವಂತೆ ಹೇಳಿದ್ದೇನೆ ಎಂದು ನಾಗ ಹೇಳಿದ್ದಾರೆ.
ಸಂಬಂಧ ಕಡಿದು ಕೊಂಡ್ರೂ, ತಾಂಡವ್ ಇನ್ನೊಂದು ಮದ್ವೆ ಆಗಲು ಬಿಡ್ತಾಳಾ ಭಾಗ್ಯ?
ಶೋಭಿತಾಗೆ ಆಕರ್ಷಿತವಾಗಿದ್ದು ಇದೇ ಕಾರಣಕ್ಕೆ : ಶೋಭಿತಾ ಬಗ್ಗೆ ಮಾತನಾಡಿದ ನಾಗ ಚೈತನ್ಯ, ತಾವು ಶೋಭಿತಾರಿಗೆ ಹೆಚ್ಚು ಆಕರ್ಷಿತವಾಗಿದ್ದು ಇದೇ ಕಾರಣಕ್ಕೆ ಎಂದಿದ್ದಾರೆ, ಶೋಭಿತಾ ಕೂಡ ತಮ್ಮ ಭಾಷೆ ಮತ್ತು ಬೇರುಗಳಿಗೆ ತುಂಬಾ ಹತ್ತಿರವಾಗಿದ್ದಾರೆ ಎನ್ನುತ್ತ ಶೋಭಿತಾಗೆ ಭಾಷೆ ಮೇಲಿರುವ ಪ್ರೀತಿಯನ್ನು ನಾಗ ಚೈತನ್ಯ ಹೇಳಿದ್ದಾರೆ.
ಸಂದರ್ಶನದಲ್ಲಿ ಜೊತೆಗಿದ್ದ ಶೋಭಿತಾ ಕೂಡ ನಾಗ ಚೈತನ್ಯ ಸಂಬಂಧದ ಬಗ್ಗೆ ಹೇಳಿಕೊಂಡಿದ್ದಾರೆ. ಶೋಭಿತಾ ಅವರನ್ನು ಭೇಟಿಯಾಗಲು ನಾಗ ಚೈತನ್ಯ ಮುಂಬೈಗೆ ಬಂದಿದ್ದರಂತೆ. ಕೆಫೆಯಲ್ಲಿ ಇಬ್ಬರು ಭೇಟಿಯಾಗಿದ್ದರು. ಈ ವೇಳೆ ನಾನು ರೆಡ್ ಕಲರ್ ಡ್ರೆಸ್ ಧರಿಸಿದ್ದೆ ಎನ್ನುತ್ತಲೇ ಶೋಭಿತಾ ಸುಂದರ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನಗ್ತಾ ನಗ್ತಾನೇ ಕಿಚ್ಚನ ಕಟಕಟೆ ಶುರು, ರಜತ್- ಧನರಾಜ್‌ಗೆ ಸಖತ್ ಕ್ಲಾಸ್
ಎಲ್ಲಿ ಆಗಿತ್ತು ನಾಗ – ಶೋಭಿತಾ ಮೊದಲ ಭೇಟಿ? : ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಅವರ ಮೊದಲ ಭೇಟಿ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನವನ (Bandipur National Park)ದಲ್ಲಾಗಿತ್ತು. ಸ್ನೇಹಿತರ ಜೊತೆ ಟೀ ಕುಡಿಯಲು ಅವರು ಅಲ್ಲಿಗೆ ಹೋಗಿದ್ರು. ನಾಗ ಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಆಗಸ್ಟ್ 8 ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಡಿಸೆಂಬರ್ 4 ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ.
ಮದುವೆ ಆಗ್ತಿದ್ದಂತೆ ಅವರ ಒಂದೊಂದೇ ವಿಡಿಯೋ ವೈರಲ್ ಆಗ್ತಿದೆ. ಶೋಭಿತಾ, ನಾಗ ಚೈತನ್ಯ ಕಾಲು ಮುಟ್ಟಿ ನಮಸ್ಕಾರ ಮಾಡಿದ್ದು ಒಂದ್ಕಡೆ ಟ್ರೋಲ್ ಆದ್ರೆ ಇನ್ನೊಂದು ಕಡೆ, ಇಬ್ಬರು ಮದುವೆಗೂ ಮುನ್ನ ವಿಚ್ಛೇದನ ಪಡೆಯುವುದಿಲ್ಲ ಎಂಬ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ ಎಂಬ ಸುದ್ದಿಯೂ ಜೋರು ಪಡೆದಿದೆ.