ರೂಮರ್ ಗರ್ಲ್‌ಫ್ರೆಂಡ್ ಶೋಭಿತಾ ಬಗ್ಗೆ ಕೇಳಿದ್ದಕ್ಕೆ ಹೀಗ್ ಹೇಳೋದಾ ನಾಗಚೈತನ್ಯ

ಶೋಭಿತಾ ಜೊತೆ ಡೇಟಿಂಗ್ ವದಂತಿ ಬಗ್ಗೆ ನಾಗಚೈತನ್ಯ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾಗ್ ಉತ್ತರ ಅಭಿಮಾನಿಗಳಲ್ಲಿ ಮತ್ತಷ್ಟು ಗೊಂದಲ ಉಂಟುಮಾಡಿದೆ. ನಾಗಚೈತನ್ಯ ಸದ್ಯ ಹಿಂದಿಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಾಗಚೈತನ್ಯ ಅವರಿಗೆ ಶೋಭಿತಾ ಬಗ್ಗೆ ಪ್ರಶ್ನೆ ಎದುರಾಗಿದೆ.

naga chaitanya just smiles When Asked About rumor girlfriend Sobhita sgk

ಟಾಲಿವುಡ್ ಸ್ಟಾರ್ ನಟಿ ಸಮಂತಾ ಮತ್ತು ನಟ ನಾಗಚೈತನ್ಯ  ಬೇರೆ ಬೇರೆಯಾಗಿ ವರ್ಷ ಆಗುತ್ತಾ ಬಂದಿದೆ. ಆದರೂ ಈ ಜೋಡಿ ಆಗಾಗ ಸದ್ದುಮಾಡುತ್ತಲೆ ಇದೆ. ಸ್ಯಾಮ್ ಮತ್ತು ಚೈ ಇಬ್ಬರು ಸದಾ ಸುದ್ದಿಯಲ್ಲಿರುತ್ತಾರೆ. ಅಂದಹಾಗೆ ಬ್ರೇಕಪ್ ಬಳಿಕ ನಾಗಚೈತನ್ಯ ಡೇಟಿಂಗ್ ವಿಚಾರವಾಗಿ ಅಚ್ಚರಿ ಮೂಡಿಸಿದ್ದರು. ನಾಗಚೈತನ್ಯ ಸಮಂತಾಗೆ ವಿಚ್ಛೇದನ ನೀಡಿದ ಬಳಿಕ ಮತ್ತೋರ್ವ ನಟಿಯ ಜೊತೆ ಪ್ರೀತಿಯಲ್ಲಿ ಬಿದ್ದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಮೇಡ್ ಇನ್ ಹೆವನ್ ಖ್ಯಾತಿಯ ನಟಿ ಶೋಭಿತಾ ದುಲಿಪಾಲಾ ಜೊತೆ ನಾಗಚೈತನ್ಯ ಪ್ರೀತಿಯಲ್ಲಿದ್ದಾರೆ ಎನ್ನಲಾಗುತ್ತಿದೆ. ನಾಗ್ ಮತ್ತು ಶೋಭಿತಾ ಒಬ್ಬರಿಗೊಬ್ಬರು ಪ್ರೀತಿ ಮಾಡುತ್ತಿದ್ದು ಇಬ್ಬರು ಕದ್ದು ಮುಚ್ಚಿ ಓಡಾಡುತ್ತಿದ್ದಾರೆ ಎನ್ನುವ ಸುದ್ದಿ ಕಳೆದ ಕೆಲವು ದಿನಗಳಿಂದ ಹರಿದಾಡುತ್ತಿದೆ. ಶೋಭಿತಾ, ನಾಗಚೈತನ್ಯ ಅವರ ಜುಬ್ಲಿಹಿಲ್ಸ್‌ನಲ್ಲಿರುವ ನಿವಾಸದಲ್ಲಿ ಒಟ್ಟಿಗೆ ಕಾಣಿಸಿಕೊಂಡ ಬಳಿಕ ಈ ಸುದ್ದಿಗೆ ಮತ್ತಷ್ಟು ಪುಷ್ಟಿ ಸಿಕ್ಕಿದೆ. 

ಇಬ್ಬರೂ ಕದ್ದುಮುಚ್ಚಿ ಓಡಾಡುತ್ತಿದ್ದಾರೆ, ಪ್ರವಾಸಕ್ಕೂ ಹೋಗುತ್ತಿದ್ದಾರೆ ಎನ್ನಲಾಗಿದೆ. ಸಮಂತಾರಿಂದ ದೂರ ಆದ ಬಳಿಕ ನಾಗ ಚೈತನ್ಯ ಮತ್ತು ಶೋಭಿತಾ ಇಬ್ಬರೂ ಹೆಚ್ಚಾಗಿ ಒಟ್ಟೊಟ್ಟಿಗೆ ಕಾಣಿಸಿಕೊಳ್ಳುತ್ತಿರುವುದು ಅನುಮಾನ ದಟ್ಟವಾಗಲು ಕಾರಣವಾಗಿದೆ. ಆದರೆ ಈ ಬಗ್ಗೆ ನಾಗ ಚೈತನ್ಯ ಅಥವಾ ಶೋಭಿತಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೀಗ ನಾಗಚೈತನ್ಯ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾಗ್ ಉತ್ತರ ಅಭಿಮಾನಿಗಳಲ್ಲಿ ಮತ್ತಷ್ಟು ಗೊಂದಲ ಉಂಟುಮಾಡಿದೆ. ನಾಗಚೈತನ್ಯ ಸದ್ಯ ಹಿಂದಿಯ ಲಾಲ್ ಸಿಂಗ್ ಚಡ್ಡಾ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ನಾಗಚೈತನ್ಯ ಅವರಿಗೆ ಶೋಭಿತಾ ಬಗ್ಗೆ ಪ್ರಶ್ನೆ ಎದುರಾಗಿದೆ. ನಿರೂಪಕರು ಸೌತ್ ಸ್ಟಾರ್‌ಗಳ ಬಗ್ಗೆ ಒಂದು ವಾಕ್ಯದಲ್ಲಿ ಹೇಳುವಂತೆ ಪ್ರಶ್ನೆ ಕೇಳಿದರು. 

ನಾಗ ಚೈತನ್ಯ ಜೊತೆ ಡೇಟಿಂಗ್ ವದಂತಿ ಹಬ್ಬಿಸಿದವರಿಗೆ ಶೋಭಿತಾ ಹೀಗ್ ಹೇಳೋದಾ.!

ವಿಜಯ್ ದೇವರಕೊಂಡ ಅವರಿಗೆ ಕ್ರೇಸಿ ಎಂದು ಹೇಳಿದರು.ರಾಶಿ ಖನ್ನಾ ಬಗ್ಗೆ ಗ್ರೇಟ್ ಫ್ರೆಂಡ್ ಹೇಳಿದರು.ಕೃತಿ ಶೆಟ್ಟಿಗೆ ಬೇಬಿ ಎಂದು ಹೇಳಿದರು. ಬಳಿಕ ನಿರೂಪಕರು ಶೋಭಿತಾ ಎಂದು ಕೇಳಿದರು. ಚೈ ಪ್ರತಿಕ್ರಿಯೆ ಏನಿರುತ್ತೆ ಎನ್ನುವ ಕುತೂಹಲ ಎಲ್ಲರಲ್ಲಿತ್ತು. ಆದರೆ ನಾಗಚೈತನ್ಯ ಜೋರಾಗಿ ನಗಲು ಪ್ರಾರಂಭಿಸಿದರು. ಇದಕ್ಕೆ ನನ್ನ ನಗುವೆ ಉತ್ತರ ಎಂದರು. ನಾಗಚೈತನ್ಯ ನಗುವಿನ ಉತ್ತರ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಗಾಸಿಪ್ ಬಗ್ಗೆ ಏನು ಹೇಳದೆ ಸೈಲೆಂಟ್ ಆಗಿರುವುದನ್ನು ನೋಡಿ ಅಭಿಮಾನಿಗಳು ಇಬ್ಬರು ಡೇಟಿಂಗ್ ನಲ್ಲಿ ಇರುವುದು ಖಚಿತ ಎನ್ನುವ ಕಾಮೆಂಟ್ ಹಾರಿದುಬರುತ್ತಿವೆ. ನಾಗಚೈತನ್ಯ ನಗುವಿನ ಉತ್ತರ ಅನುಮಾನ ಮತ್ತಷ್ಟು ದಟ್ಟವಾಗುವಂತೆ ಮಾಡಿದೆ. 

ಅಂದಹಾಗೆ ನಾಗಚೈತನ್ಯ ಮೊದಲ ಬಾರಿಗೆ ಹಿಂದಿಯಲ್ಲಿ ನಟಿಸಿದ್ದಾರೆ. ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಾಗಚೈತನ್ಯ ಸೈನಿಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಆಮೀರ್ ಖಾನ್ ಸ್ನೇಹಿತನಾಗಿ ನಾಗ್ ಚೈತನ್ಯ ಮಿಂಚಿದ್ದಾರೆ. ಈಗಾಗಲೇ ರಿಲೀಸ್ ಆಗಿರುವ ಟ್ರೈಲರ್ ನಲ್ಲಿ ನಾಗಚೈತನ್ಯ ಲುಕ್ ಅಭಿಮಾನಿಗಳ ಹೃದಯ ಗೆದ್ದಿದೆ. ಇದೀಗ ಸಿನಿಮಾತಂಡದ ಜೊತೆ ನಾಗ್ ಕೂಡ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ದೇಶದಾದ್ಯಂತ ಪ್ರಚಾರಕಾರ್ಯದಲ್ಲಿ ಭಾಗಿಯಾಗಿದ್ದಾರೆ. 

ನಾಗಚೈತನ್ಯ ಜೊತೆ ವಾಸವಿದ್ದ ಮನೆಯನ್ನು ದುಬಾರಿ ಬೆಲೆಗೆ ಮತ್ತೆ ಖರೀದಿಸಿದ ಸಮಂತಾ

ನಾಗಚೈತನ್ಯ ಕೊನೆಯದಾಗಿ ಥ್ಯಾಂಕ್ ಯು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದರು. ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಕೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇದೀಗ ಬಾಲಿವುಡ್ ಸಿನಿಮಾ ಕಡೆ ಹೆಚ್ಚು ಹರಿಸಿದ್ದಾರೆ. ಲಾಲ್ ಸಿಂಗ್ ಚಡ್ಡಾ ಸಿನಿಮಾವನ್ನು ಪ್ರೇಕ್ಷಕರು ಒಪ್ಪಿಕೊಳ್ಳುತ್ತಾರಾ ಎನ್ನುವುದನ್ನು ಕಾದುನೋಡಬೇಕು.

Latest Videos
Follow Us:
Download App:
  • android
  • ios