ಮಾಜಿ ಪತ್ನಿ ಸಮಂತಾ ಜೊತೆ ಮತ್ತೆ ಸಿನಿಮಾ ಮಾಡ್ತೀರಾ? ನಾಗಚೈತನ್ಯ ಉತ್ತರ ಹೀಗಿತ್ತು
ಸಂದರ್ಶನದಲ್ಲಿ ನಟ ನಾಗಚೈತನ್ಯ ಅವರಿಗೆ ಮತ್ತೆ ಸಮಂತಾ ಜೊತೆ ಸಿನಿಮಾ ಮಾಡುತ್ತೀರಾ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರ ನೀಡಿದ ಚೈ,
'ಒಂದು ವೇಳೆ ಹಾಗಾದರೆ ಅದೊಂದು ಕ್ರೇಸಿ ಸಂಗತಿಯಾಗಲಿದೆ. ಆದರೆ ನನಗೆ ಗೊತ್ತಿಲ್ಲ, ಜಗತ್ತಿಗೆ ಮಾತ್ರ ತಿಳಿದಿದೆ. ನೋಡೋಣ' ಎಂದು ಹೇಳಿದರು.
ತೆಲುಗಿನ ಸ್ಟಾರ್ ಕಪಲ್ ಸಮಂತಾ ಮತ್ತು ನಾಗಚೈತನ್ಯಾ ದೂರ ದೂರ ಆಗಿ ಅನೇಕ ತಿಂಗಳುಗಳೇ ಕಳೆದಿವೆ. ಸ್ಯಾಮ್ ಮತ್ತು ಚೈ ವಿಚ್ಛೇದನ ಸುದ್ದಿ ಅಭಿಮಾನಿಗಳಿಗೆ ಶಾಕ್ ನೀಡಿತ್ತು. ಮದುವೆಯಾಗಿ ಮೂರು ವರ್ಷಗಳ ಕಾಲ ಜೊತೆಯಲ್ಲಿದ್ದ ಈ ಜೋಡಿ ದೂರ ದೂರ ಆಗುವ ಮೂಲಕ ಅಚ್ಚರಿಕರ ನಿರ್ಧಾರ ತೆಗೆದುಕೊಂಡರು. ಅಕ್ಟೋಬರ್ 2, 2021ರಲ್ಲಿ ಇಬ್ಬರೂ ವಿಚ್ಛೇದನ ಪಡೆಯುತ್ತಿದ್ದೀವಿ ಎಂದು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದರು. ಸಮಂತಾ ಮತ್ತು ನಾಗಚೈತನ್ಯ ಅವರ ಈ ನಿರ್ಧಾರ ಸಂಚಲನ ಸೃಷ್ಟಿಮಾಡಿತ್ತು. ಇಬ್ಬರು ಬೇರೆ ಬೇರೆಯಾಗುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಶೇರ್ ಮಾಡಿ ಸೈಲೆಂಟ್ ಆದರು. ಬಳಿಕ ಈ ಸ್ಟಾರ್ ಜೋಡಿ ವಿಚ್ಛೇದನದ ಬಗ್ಗೆ ಯಾವ ಪ್ರತಿಕ್ರಿಯೆಯೂ ನೀಡಿರಲಿಲ್ಲ. ಆದರೆ ಇತ್ತೀಚಿಗಷ್ಟೆ ಸಮಂತಾ ಹಿಂದಿಯ ಕಾಫಿ ವಿತ್ ಕರಣ್ ಸೀಸನ್7ನಲ್ಲಿ ಈ ಬಗ್ಗೆ ಮಾತನಾಡಿದ್ದರು. 'ವಿಚ್ಛೇದನದ ಬಳಿಕ ತುಂಬಾ ಕಷ್ಟವಾಗಿತ್ತು. ಆದರೀಗ ಆರಾಮಾಗಿ ಇದ್ದೀನಿ, ಮೊದಲಿಗಿಂತ ಉತ್ತಮವಾಗಿದ್ದೀನಿ. ಮತ್ತಷ್ಟು ಬಲಿಷ್ಟ ಆಗಿದ್ದೀನಿ' ಎಂದು ಹೇಳಿದ್ದರು.
ಬಳಿಕ ನಾಗಚೈತನ್ಯ ಕೂಡ ತನ್ನ ಸಿನಿಮಾ ಪ್ರಮೋಷನ್ ವೇಳೆ ವಿಚ್ಛೇದನದ ಬಗ್ಗೆ ಮಾತನಾಡಿದ್ದರು. ಸಮಂತಾರಿಂದ ದೂರ ಆದ ಬಳಿಕ ಹೊಸ ವ್ಯಕ್ತಿಯಾಗಿದ್ದೀನಿ ಎಂದು ಹೇಳಿದ್ದರು. ಇದೀಗ ಮತ್ತೆ ನಾಗಚೈತನ್ಯ ಈ ಬಗ್ಗೆ ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ನಟ ನಾಗಚೈತನ್ಯ ಅವರಿಗೆ ಮತ್ತೆ ಸಮಂತಾ ಜೊತೆ ಸಿನಿಮಾ ಮಾಡುತ್ತೀರಾ ಎನ್ನುವ ಪ್ರಶ್ನೆ ಎದುರಾಗಿದೆ. ಇದಕ್ಕೆ ಉತ್ತರ ನೀಡಿದ ಚೈ, 'ಒಂದು ವೇಳೆ ಹಾಗಾದರೆ ಅದೊಂದು ಕ್ರೇಸಿ ಸಂಗತಿಯಾಗಲಿದೆ. ಆದರೆ ನನಗೆ ಗೊತ್ತಿಲ್ಲ, ಜಗತ್ತಿಗೆ ಮಾತ್ರ ತಿಳಿದಿದೆ. ನೋಡೋಣ' ಎಂದು ಹೇಳಿದರು.
ವಿಚ್ಛೇದನ ಬಳಿಕ ಜೀವನ ಬದಲಾಗಿದೆ, ಹೊಸ ವ್ಯಕ್ತಿಯಾಗಿದ್ದೀನಿ; ನಾಗಚೈತನ್ಯ
ಈ ಮೊದಲು ನಾಗ್, ಕೊರೊನಾ ಸಮಯ ಮತ್ತು ವಿಚ್ಛೇದನವು ಜೀವನದ ಕಠಿಣ ಹಂತವಾಗಿತ್ತು ಎಂದು ಹೇಳಿದ್ದರು. ವಿಚ್ಥೇದನ ಬಳಿಕ ಒಬ್ಬ ವ್ಯಕ್ತಿಯಾಗಿ ಸಾಕಷ್ಟು ಬದಲಾಗಿದ್ದೇನೆ ಎಂದು ಬಹಿರಂಗಪಡಿಸಿದರು. ಅವರ ಪ್ರಕಾರ, ಮೊದಲು ಅವರು ಹೆಚ್ಚು ತೆರೆದುಕೊಳ್ಳಲು ಸಾಧ್ಯವಾಗಿರಲಿಲ್ಲ ಆದರೆ ಈಗ ಹಾಗಿಲ್ಲ ಎಂದಿದ್ದರು. ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗೆ ಹೆಚ್ಚು ಹತ್ತಿರವಾಗಿದ್ದೀನಿ, ಸಂಪೂರ್ಣ ಹೊಸ ವ್ಯಕ್ತಿಯಾಗಿ ನನ್ನನ್ನು ನೋಡಿಕೊಳ್ಳಲು ಸಂತೋಷವಾಗುತ್ತದೆ ಎಂದು ಅವರು ಹೇಳಿದ್ದರು.
ಸಮಂತಾ ಮತ್ತು ನಾಗಚೈತನ್ಯ 2017ರಲ್ಲಿ ಅದ್ದೂರಿಯಾಗಿ ಮದುವೆಯಾದರು. ಮದುವೆಗೂ ಮೊದಲು ಮೂರು ವರ್ಷಗಳ ಕಾಲ ನಾಗಚೈತನ್ಯ ಮತ್ತು ಸ್ಯಾಮ್ ಇಬ್ಬರು ಡೇಟಿಂಗ್ ಮಾಡುತ್ತಿದ್ದರು. ಡೇಟಿಂಗ್ ಬಳಿಕ ಮದುವೆಯಾಗಲು ನಿರ್ಧರಿಸಿದರು. ಗೋವಾದಲ್ಲಿ ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆಯಾಗಿ ಕೆಲವೇ ವರ್ಷಗಳಲ್ಲಿ ದೂರ ದೂರ ಆಗುವ ಮೂಲಕ ವೈವಾಹಿಕ ಜೀವನಕ್ಕೆ ಎಳ್ಳುನೀರುಬಿಟ್ಟರು.
ಡಿವೋರ್ಸ್ ಬಳಿಕ ತುಂಬಾ ಕಷ್ಟವಾಯ್ತು; ನಾಗಚೈತನ್ಯರಿಂದ ದೂರಾದ ಬಗ್ಗೆ ಸಮಂತಾ ಮಾತು
ಸದ್ಯ ಇಬ್ಬರು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಮಂತಾ ಪ್ಯಾನ್ ಇಂಡಿಯಾ ಸ್ಟಾರ್ ಮೆರೆಯುತ್ತಿದ್ದಾರೆ. ನಾಗಚೈತನ್ಯ ಕೂಡ ಹಿಟ್ ಸಿನಿಮಾಗಳನ್ನು ನೀಡುತ್ತಿದ್ದಾರೆ. ಆದರೆ ಇತ್ತೀಚಿಗಷ್ಟೆ ರಿಲೀಸ್ ಆದ ಥ್ಯಾಂಕ್ ಯು ಸಿನಿಮಾ ಹೇಳಿಕೊಳ್ಳುವಷ್ಟು ಯಶಸ್ಸು ಕಾಣಲಿಲ್ಲ. ಇನ್ನು ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ನಾಗಚೈತನ್ಯ ಮೊದಲ ಬಾರಿಗೆ ಬಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. ಈ ಸಿನಿಮಾ ಆಗಸ್ಟ್ 11ರಂದು ತೆರೆಗೆ ಬರುತ್ತಿದೆ.