'ಗೀತಾ ಗೋವಿಂದಂ' ಖ್ಯಾತಿಯ ನಿರ್ದೇಶಕ ಪರಶುರಾಮ್ ಜೊತೆ ಸಿನಿಮಾ ಮಾಡಲು ನಟ ನಾಗಚೈತನ್ಯ ಒಪ್ಪಿಕೊಂಡಿದ್ದಾರೆ. ಪತ್ನಿ ಸಮಂತಾನೇ ಇದಕ್ಕೆ ಹೀರೋಯಿನ್ ಎನ್ನಲಾಗುತ್ತಿದ್ದು ನಾಗಚೈತನ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ನಾಗಚೈತನ್ಯ- ಸಮಂತಾ ಒಟ್ಟಾಗಿ ನಟಿಸಿದ್ದ 'ಮಜಿಲಿ' ಸಿನಿಮಾ ಸೂಪರ್ ಹಿಟ್ ಆಗಿತ್ತು. ಇವರಿಬ್ಬರ ಕೆಮಿಸ್ಟ್ರಿ ವರ್ಕೌಟ್ ಆಗುತ್ತೆ ಎಂದು ಮತ್ತೆ ಇದೇ ಜೋಡಿಯನ್ನು ಚಿತ್ರತಂಡ ಆಯ್ಕೆ ಮಾಡಿದೆ. ಇದಕ್ಕೆ ನಾಗಚೈತನ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

'ಕಿಸ್' ಕೊಟ್ಟ ಅಂತ 'ಲೆಟ್ಸ್‌ ಬ್ರೇಕ್‌ಅಪ್‌' ಅಂದ ನಟಿ ಶ್ರೀಲೀಲಾ ?

'ನನ್ನ ಸಿನಿಮಾಗಳಿಗೆ ಸಮಂತಾಳನ್ನೇ ನಾಯಕಿಯನ್ನಾಗಿ ಮಾಡಿದರೆ ಪ್ರೇಕ್ಷಕರು ಒಪ್ಪಿಕೊಳ್ಳುವುದಾದರು ಹೇಗೆ? ಬೇರೆ ನಟಿಯರನ್ನು ಆಯ್ಕೆ ಮಾಡಿ' ಎಂದು ನಿರ್ದೇಶಕ ಪರಶುರಾಮ್‌ಗೆ ಸಲಹೆ ನೀಡಿದ್ದಾರೆ. 

ನಾಗಚೈತನ್ಯ ಅವರ 20 ನೇ ಸಿನಿಮಾ ಇದಾಗಿದೆ. ಮಾತುಕಥೆ ನಡೆದಿದೆ ಎನ್ನಲಾಗಿದ್ದು ಚಿತ್ರಕ್ಕೆ ಇನ್ನೂ ಹೆಸರಿಟ್ಟಿಲ್ಲ. ಮುಂದಿನ ವರ್ಷ ಮೇ ಆರಂಭದಲ್ಲಿ ಶೂಟಿಂಗ್ ಶುರುವಾಗಲಿದೆ ಎನ್ನಲಾಗಿದೆ.  ಚಿತ್ರದಲ್ಲಿ ಯಾರ್ಯಾರು ನಟಿಸಲಿದ್ದಾರೆ? ಎಂದು ಇನ್ನೂ ತಿಳಿದುಬಂದಿಲ್ಲ. 

ಸೌತ್ ಆಫ್ರಿಕಾದಲ್ಲಿ ಆಶಿಕಾ ಮೇಲೆ ಕಣ್ಣು ಹಾಕಿದವನಿಗೆ ಬಿತ್ತು ಗೂಸಾ!

ಸದ್ಯ ನಾಗಚೈತನ್ಯ ಸಾಯಿ ಪಲ್ಲವಿ ಜೊತೆ 'ಲವ್‌ಸ್ಟೋರಿ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 2020 ಏಪ್ರಿಲ್ ವೇಳೆಗೆ ರಿಲೀಸ್ ಆಗುವ ಸಾಧ್ಯತೆ ಇದೆ.