'ಕಿಸ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ ನಟಿ ಶ್ರೀಲೀಲಾ ತನ್ನ ನಗುವಿನಿಂದ ಹಾಗೂ ಉದ್ದ ಜಡೆಯಿಂದ ಕನ್ನಡ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದಾರೆ. 

'ಭರಾಟೆ' ಹಾಗೂ 'ಕಿಸ್‌' ಎರಡೂ ಚಿತ್ರಗಳು ವೀಕ್ಷಕರಲ್ಲಿ ಕುತೂಹಲ ಮೂಡಿಸಿದಂತ ಸಿನಿಮಾಗಳು. ತೆರೆ ಕಂಡು ಬಾಕ್ಸ್‌ ಆಫೀಸ್ ಕಲೆಕ್ಷನ್‌ ಪಡೆದ ಸಿನಿಮಾಗಳಿವು. ಇಂದಿಗೂ ಚಿತ್ರಮಂದಿಗಳಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. 

ಅಲೆಲೆ ಶ್ರೀಲೀಲಾ.. ಅಂದದ ಹುಡುಗಿಯ ಚಂದದ ಫೋಟೋಗಳಿವು

ಓದುತ್ತಲೇ ಸಿನಿ ಲೋಕಕ್ಕೆ ಕಾಲಿಟ್ಟಿರುವ ಫ್ಯೂಚರ್‌ ಡಾಕ್ಟರ್‌ ಶ್ರೀಲೀಲಾ ತನ್ನ ಮುಂದಿನ ಸಿನಿಮಾ 'ಲೆಟ್ಸ್‌ ಬ್ರೇಕಪ್‌'ಗೆ ಸಹಿ ಹಾಕಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಈ ಚಿತ್ರಕ್ಕೆ 'ಪಂಚತಂತ್ರ' ಚಿತ್ರದ ನಾಯಕ ವಿಹಾನ್‌ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಜಯಣ್ಣ ಭೋಗೆಂದ್ರ ನಿರ್ಮಾಣಕ್ಕೆ ಸ್ವರೂಪ್‌ ಆ್ಯಕ್ಷನ್ ಕಟ್‌ ಹೇಳುತ್ತಿದ್ದಾರೆ. ಕಾಮನ್‌ ಕಮರ್ಷಿಯಲ್ ಸಿನಿಮಾಗಳಲ್ಲಿ ಲವ್ ಆ್ಯಂಡ್ ಬ್ರೇಕ್‌ಅಪ್‌ ಸಾಮಾನ್ಯ ಆದ್ರೆ ಬ್ರೇಕಪ್‌ ಅನ್ನೋ ಒಂದೇ ಕಾನ್ಸೆಪ್ಟ್‌ನಲ್ಲಿ ಸಿನಿಮಾ ಮಾಡೋದು ಚಾಲೆಂಜ್.

ಶ್ರೀಮುರುಳಿ ತಾಳ್ಮೆಗೆ ಮಾರು ಹೋದೆ: ಶ್ರೀಲೀಲಾ