ವಿಶ್ವಕ್ರಿಕೆಟ್ ಕಂಡ ದಿಗ್ಗಜ ಸ್ಪಿನ್ನರ್ ಮುತ್ತಯ್ಯ ಮುರುಳೀಧರನ್ ಜೀವಾಧಾರಿತ ಚಿತ್ರ ಎಲ್ಲವೂ ಅಂದುಕೊಂಡಂತೆ ಆದರೆ ಇನ್ನೊಂದು ವರ್ಷದಲ್ಲಿ ತೆರೆಗೆ ಅಪ್ಪಳಿಸಲಿದೆ. ಅಂದಹಾಗೆ ಮುರುಳಿ ಪಾತ್ರದಲ್ಲಿ ತಮಿಳು ಚಿತ್ರನಟ ವಿಜಯ್ ಸೇತುಪತಿ ಕಾಣಿಸಿಕೊಳ್ಳಲಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಚೆನ್ನೈ(ಅ.13): ಶ್ರೀಲಂಕಾದ ದಿಗ್ಗಜ ಕ್ರಿಕೆಟಿಗ ಮುತ್ತಯ್ಯ ಮುರಳಿಧರನ್ ಅವರ ಜೀವನಾಧಾರಿತ ಸಿನಿಮಾ ‘800’ ವಿಶೇಷ ಮೋಷನ್ ಪೋಸ್ಟರ್‌ನ್ನು ಮುರಳಿಧರನ್ ಸೋಮವಾರ ಅನಾವರಣ ಗೊಳಿಸಿದರು. 

ತಮಿಳು ನಿರ್ದೇಶಕ ಎಂ.ಎಸ್. ಶ್ರೀಪತಿ, ಮುತ್ತಯ್ಯ ಮುರಳಿಧರನ್ ಅವರ ಬಯೋಪಿಕ್‌ಗೆ ಆ್ಯಕ್ಷನ್ ಕಟ್ ಹೇಳಲು ಸಿದ್ಧತೆ ನಡೆಸಿದ್ದಾರೆ. ಮುರಳಿಧರನ್ ಪಾತ್ರಕ್ಕೆ ನಟ ವಿಜಯ್ ಸೇತುಪತಿ ಜೀವ ತುಂಬಲಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಮುತ್ತಯ್ಯ ಮುರಳಿಧರನ್ ಅತಿ ಹೆಚ್ಚು 800 ವಿಕೆಟ್ ಪಡೆದು ದಾಖಲೆ ನಿರ್ಮಿಸಿದ್ದಾರೆ. ಇದೇ ಹೆಸರನ್ನು ಚಿತ್ರಕ್ಕೆ ಇಡಲಾಗಿದೆ.

ಮುರುಳಿ ಜೀವನಾಧಾರಿತ ಚಿತ್ರವು ಶ್ರೀಲಂಕಾ, ಯುನೈಟೆಡ್ ಕಿಂಗ್‌ಡಮ್, ಆಸ್ಟ್ರೇಲಿಯಾ ಹಾಗೂ ಭಾರತದಲ್ಲಿ ಚಿತ್ರೀಕರಣಗೊಳ್ಳಲಿದೆ. '800' ಚಿತ್ರೀಕರಣವು 2021ರ ಆರಂಭದಲ್ಲಿ ಶುರುವಾಗಲಿದ್ದು, 2021ರ ವರ್ಷಾಂತ್ಯದ ವೇಳೆಗೆ ತೆರೆಕಾಣುವ ನಿರೀಕ್ಷೆಯಿದೆ.

ಸ್ಪಿನ್ ಮಾಂತ್ರಿಕ ಮುರಳೀಧರನ್ ಬಯೋಪಿಕ್‌ನಲ್ಲಿ ತಮಿಳು ನಟ ವಿಜಯ್, ಅಧಿಕೃತ ಘೋಷಣೆ!

Scroll to load tweet…
Scroll to load tweet…

800 ಸಿನಿಮಾವು ಪ್ರಾಥಮಿಕ ಹಂತದಲ್ಲಿ ತಮಿಳಿನಲ್ಲಿ ಮಾಡಲು ಚಿಂತಿಸಲಾಗಿದ್ದು, ಬಳಿಕ ದಕ್ಷಿಣ ಭಾರತದ ಎಲ್ಲಾ ಭಾಷೆಗಳು ಸೇರಿದಂತೆ ಹಿಂದಿ, ಬಂಗಾಳಿ ಹಾಗೂ ಸಿಂಹಳೀಸ್‌ನಲ್ಲೂ ಡಬ್ಬಿಂಗ್ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.