ಖ್ಯಾತ ಗಾಯಕಿ ಸುನಂದ ಶರ್ಮಾ ಕರಾಳ ಕತೆಯೊಂದನ್ನು ಬಿಚ್ಚಿಟ್ಟಿದ್ದಾರೆ. ನಿರ್ಮಾಪಕನ ಯಾವ ರೀತಿ ದುರುಪಯೋಗ ಪಡಿಸಿಕೊಂಡಿದ್ದಾನೆ ಅನ್ನೋ ಮಾಹಿತಿ ಬಿಚ್ಚಿಟ್ಟಿದ್ದಾರೆ. ಇದರ ಬೆನ್ನಲ್ಲೇ ಕೋಲಾಹಲ ನಡೆದಿದೆ. ಇದೀಗ ನಿರ್ಮಾಪಕ ಅರೆಸ್ಟ್ ಆಗಿದ್ದಾರೆ. 

ಪಂಜಾಬ್(ಮಾ.09) ಸಿನಿಮಾದ ಹಿಂದಿನ ಘಟನೆಗಳು ಹಲವು ಬಾರಿ ಕೋಲಾಹಲ ಸೃಷ್ಟಿಸಿದೆ. ಹಲವರು ಧೈರ್ಯ ಮಾಡಿ ತಮಗಾದ ಅನ್ಯಾಯವನ್ನು ಹೇಳಿಕೊಂಡಿದ್ದಾರೆ. ಹಲವು ವರ್ಷಗಳ ಬಳಿಕ ಈ ರೀತಿಯ ಘಟನೆಗಳು ಹೊರಬಂದು ಪ್ರಕರಣ ದಾಖಲಾದ ಘಟನೆಗಳೂ ಇವೆ. ಇದೀಗ ಖ್ಯಾತ ಗಾಯಕಿ ಸುನಂದ ಶರ್ಮಾ ಮಾಡಿದ ಕೆಲ ಆರೋಪ, ಬಿಚ್ಚಿಟ್ಟ ಘಟನೆ ಸಿನಿಮಾ ರಂಗವನ್ನೇ ತಲ್ಲಣಗೊಳಿಸಿದೆ. ಸಂಗೀತ ನಿರ್ಮಾಪಕ ತಮನ್ನು ಕಳೆದ ಕೆಲ ವರ್ಷಗಳಿಂದ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಬಹಿರಂಗವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ನಿರ್ಮಾಪಕನನ್ನು ಪೊಲೀಸರು ಬಂಧಿಸಿದ್ದಾರೆ.

ಏನಿದು ಘಟನೆ?
ಪಂಜಾಬಿ ಗಾಯಕಿ ಸುನಂದ ಶರ್ಮಾ ಈ ಸ್ಫೋಟಕ ಘಟನೆ ಬಿಚ್ಚಿಟ್ಟಿದ್ದಾರೆ. ಸಂಗೀತ ನಿರ್ಮಾಪಕ ಪಿಂಕಿ ಧಲಿವಾಲ್ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಮ್ಯಾಡ್ ಫಾರ್ ಮ್ಯೂಸಿಕ್ ಲೇಬಲ್ ಸಂಸ್ಥೆ ನಡೆಸುತ್ತಿರುವ ಪಿಂಕಿ ಧಲಿವಾಲ್ ವಿರುದ್ಧ ಆರೋಪ ಕೇಳಿಬಂದಿದೆ. ಕಳೆದ ಹಲವು ವರ್ಷಗಳಿಂದ ಮ್ಯಾಡ್ ಫಾರ್ ಮ್ಯೂಸಿಕ್ ಲೇಬಲ್ ಸಂಸ್ಥೆಗೆ ಹಾಡಿದ್ದೇನೆ. ಆದರೆ ಸಂಭಾವನೆ ಕೊಡದೆ ಸತಾಯಿಸಿದ್ದಾರೆ. ಈ ಮೂಲಕ ಮ್ಯಾಡ್ ಫಾರ್ ಮ್ಯೂಸಿಕ್ ಸಂಸ್ಥೆಗೆ ಹಾಡುವಂತೆ ಮಾಡಿದ್ದಾರೆ. ಬಾಕಿ ಉಳಿಸಿಕೊಂಡಿರುವ ಸಂಭಾವನೆ ಮೊತ್ತದ ಕಾರಣಕ್ಕಾಗಿ ಅನಿವಾರ್ಯವಾಗಿ ಮ್ಯಾಡ್ ಫಾರ್ ಮ್ಯೂಸಿಕ್ ಲೇಬಲ್ ಸಂಸ್ಥೆಗೆ ಹಾಡಬೇಕಾಯಿತು ಎಂದಿದ್ದಾರೆ.

ಒಂದು ಹಾಡಿಗೆ 3 ಕೋಟಿ ರೂಪಾಯಿ..ಅತಿ ಹೆಚ್ಚು ಸಂಭಾವನೆ ಪಡೆಯುವ 5 ಗಾಯಕರು!

ಸುನಂದ ಶರ್ಮಾ ಆರೋಪದ ಬೆನ್ನಲ್ಲೇ ಪಂಜಾಬ್ ಮಹಿಳಾ ಆಯೋಗ ಎಚ್ಚೆತ್ತುಕೊಂಡಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ. ಇದರ ಬೆನ್ನಲ್ಲೇ ಪಂದಾಬ್ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಮ್ಯೂಸಿಕ್ ನಿರ್ಮಾಪಕ ಪಿಂಕಿ ಧಲಿವಾಲ್ ಅರೆಸ್ಟ್ ಮಾಡಿದ್ದಾರೆ.

View post on Instagram

ಪಿಂಕಿ ಧಲಿವಾಲ್ ಹಲವು ಕಂಪನಿಗಳು, ಮೂರನೇ ವ್ಯಕ್ತಿಗಳಿಗೆ ಗಾಯಕಿ ಸುನಂದ ಶರ್ಮಾ ತಮ್ಮ ಮ್ಯಾಡ್ ಫಾರ್ ಮ್ಯೂಸಿಕ್ ಲೇಬಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಹೇಳಿ ಹಣ ಪಡೆದುಕೊಂಡಿದ್ದಾರೆ. ಜೊತೆಗೆ ಹಲವು ಮ್ಯೂಸಿಕ್ ಕಂಪೋಸ್ ಒಪ್ಪಿಕೊಂಡಿದ್ದಾರೆ. ಆದರೆ ಅಸಲಿಗೆ ತನಗೆ ಪಾವತಿ ಮಾಡದೆ ಈ ರೀತಿ ಮಾಡುತ್ತಿದ್ದರು. ತಮ್ಮ ಜೊತೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ. ಒಪ್ಪಂದ ಮಾಡಿ ಹಾಡಿದ ಹಾಡುಗಳಿಗೆ ಸಂಭಾವನೆ ನೀಡದೆ ಸತಾಯಿಸಿದ್ದಾರೆ ಎಂದು ಸುನಂದ ಶರ್ಮಾ ಆರೋಪಿಸಿದ್ದಾರೆ. ಇದೀಗ ಪೊಲೀಸರು ಪಿಂಕಿ ಧಲಿವಾಲ್ ಬಂಧಿಸಿ ವಿಚಾರಣೆ ಆರಂಭಿಸಿದ್ದಾರೆ. ಮೇಲ್ನೋಟಕ್ಕೆ ಪಾವತಿ ಹಾಗೂ ಒಪ್ಪಂದ ವಿಚಾರದಲ್ಲಿ ಸಮಸ್ಯೆಯಾಗಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. 

ಶ್ರೇಯಾ ಘೋಷಾಲ್ ಮೊಟ್ಟಮೊದಲು ಹಾಡಿದ್ದು ಹೇಗೆ? ಅಲ್ಲಿ ಈ ಗಾಯಕಿ ಬಗ್ಗೆ ಏನಂತ ಹೇಳಿದ್ರು?