ಬಟ್ಟೆ ಬಿಚ್ಚಲು ಬೆದರಿಸಿದ: ಉಲ್ಲು ಆ್ಯಪ್ CEO ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ

  • ರಾಜ್‌ಕುಂದ್ರಾ ಆ್ಯಪ್ ಪ್ರಕರಣದ ನಂತ್ರ ಉಲ್ಲು ಆ್ಯಪ್ ಸಿಇಒಗೆ ಸಂಕಷ್ಟ
  • ಉಲ್ಲು ಆ್ಯಪ್ CEO ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ, ಕಂಪನಿ ಕೊಟ್ಟ ಸ್ಪಷ್ಟನೆ ಏನು ? ಕಾನೂನು ಸಲಹೆಗಾರಳಾಗಿದ್ದು ಅದೇ ಕಂಪನಿಗೆ ವಂಚಿಸಿದ ಮಹಿಳೆಯಿಂದ ಸುಳ್ಳು ಆರೋಪ ?
  • ಉಲ್ಲು ಕಂಪನಿಯ ಸ್ಪಷ್ಟೀಕರಣ
Mumbai Ullu app CEO Vibhu Agarwal booked for sexual harassment dpl

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್ ಕುಂದ್ರಾ ಅವರ ಹಾಟ್‌ಶಾಟ್ಸ್‌ ಪೋರ್ನ್ ವಿಡಿಯೋ ಹಗರಣ ಬಯಲಿಗೆ ಬರುತ್ತಿದ್ದಂತೆ ಇಂತಹದೇ ಇನ್ನೊಂದು ಘಟನೆ ಮುಂಬೈನಲ್ಲಿ ಬೆಳಕಿಗೆ ಬಂದಿದೆ. ಉಲ್ಲು ಆ್ಯಪ್‌ಗೆ ಈ ಹಿನ್ನೆಲೆಯಲ್ಲಿ ಈಗ ಸಮಸ್ಯೆ ಎದುರಾಗಿದ್ದು ಮಹಿಳೆಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. 

28 ವರ್ಷದ ಮಹಿಳೆ CEO ವಿಭು ಅಗರ್ವಾಲ್ ಮತ್ತು ಚಲನಚಿತ್ರ ನಿರ್ಮಾಣ ಕಂಪನಿಯ  ಮುಖ್ಯಸ್ಥ ಅಂಜಲಿ ರೈನಾ, ಉಲ್ಲು ಡಿಜಿಟಲ್ ಪ್ರೈವೇಟ್ ಲಿಮಿಟೆಡ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ. ಬುಧವಾರ ಅಂಬೋಲಿ ಪೊಲೀಸ್ ಠಾಣೆಯಲ್ಲಿ ಮಹಿಳೆಯ ದೂರಿನ ಮೇರೆಗೆ ಇಬ್ಬರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಪೊಲೀಸರು ಇನ್ನೂ ಪ್ರಕರಣಕ್ಕೆ ಸಂಬಂಧಿಸಿ ಯಾರನ್ನೂ ಬಂಧಿಸಿಲ್ಲ.

ಶಿಲ್ಪಾ ಜೊತೆ ಸಂಬಂಧ ಚೆನ್ನಾಗಿರ್ಲಿಲ್ಲ..! ಮನೆಲಿದ್ದಾಗೆಲ್ಲಾ ಸ್ಟ್ರೆಸ್ ಆಗಿದ್ದ ರಾಜ್ ಕುಂದ್ರಾ

ಅಂಬೋಲಿ ಪೊಲೀಸ್ ಮೂಲಗಳ ಪ್ರಕಾರ, ಅಂಧೇರಿ (ಡಬ್ಲ್ಯೂ) ಯ ಲೋಟಸ್ ಬಿಸಿನೆಸ್ ಪಾರ್ಕ್‌ನಲ್ಲಿರುವ ಉಲ್ಲು ಪ್ರೈವೇಟ್ ಲಿಮಿಟೆಡ್ ಕಚೇರಿಯ ಸ್ಟೋರ್ ರೂಂನಲ್ಲಿ ಜೂನ್‌ 18 ರಂದು ರಾತ್ರಿ 8.15 ರ ಸುಮಾರಿಗೆ ಮಹಿಳೆಯನ್ನು ತನ್ನ ಬಟ್ಟೆಗಳನ್ನು ಕಳಚುವಂತೆ ಹೇಳಲಾಗಿದೆ. ಆರೋಪಿ ಮಹಿಳೆ ಬಟ್ಟೆ ತೆಗೆಯದಿದ್ದಲ್ಲಿ ಆಕೆಯ ಕುಟುಂಬದ ಇಮೇಜ್ ಅನ್ನು ಹಾಳು ಮಾಡುವುದಾಗಿ ಹೆದರಿಸಿದ್ದರು.

ಮಹಿಳೆ ನಂತರ ತನ್ನ ಕುಟುಂಬದಲ್ಲಿ ಈ ಘಟನೆ ಬಗ್ಗೆ ಹೇಳಿದ್ದಾರೆ. ನಂತರ ಅಂಬೋಲಿ ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅಲ್ಲಿ ಅವರು ದೂರು ಸಲ್ಲಿಸಿದ್ದಾರೆ. ದೂರಿನ ಮೇರೆಗೆ ನಾವು ಈ ವಿಷಯದಲ್ಲಿ ಎಫ್ಐಆರ್ ದಾಖಲಿಸಿದ್ದೇವೆ. ಅದನ್ನು ಕೂಲಂಕಷವಾಗಿ ತನಿಖೆ ಮಾಡುತ್ತಿದ್ದೇವೆ. ನಾವು ಹೇಳಿಕೆಗಳನ್ನು ದಾಖಲಿಸುತ್ತೇವೆ. ಮೊಬೈಲ್ ಎಪ್ಲಿಕೇಷನ್ ರೈಟ್ಸ್ ಪರಿಶೀಲಿಸುತ್ತೇವೆ. ಅದರ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇನ್ನೂ ಯಾವುದೇ ಬಂಧನವಾಗಿಲ್ಲ ಎಂದು0 ಅಂಬೋಲಿ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ಸೋಮೇಶ್ವರ ಕಮಠೆ ಹೇಳಿದ್ದಾರೆ.

ಅಮಿತಾಭ್ ಮನೆಮುಂದೆ ಬಂಗಲೆ ಕೊಳ್ಳೋ ತನಕ ರಾಜ್‌ನ ಮದ್ವೆಯಾಗೋಕೆ ಒಪ್ಪಿರಲಿಲ್ಲ ಶಿಲ್ಪಾ

ಆರೋಪಿ ದಂಪತಿಗಳು- ಅಗರ್‌ವಾಲ್ ಮತ್ತು ರೈನಾ ಅವರ ಮೇಲೆ ಭಾರತೀಯ ದಂಡ ಸಂಹಿತೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಮಹಿಳೆಯ ಮೇಲೆ ಹಲ್ಲೆ ಕೇಸು ದಾಖಲಿಸಲಾಗಿದೆ. ಉಲ್ಲು ಆ್ಯಪ್‌ ಭಾರತೀಯ ಬೇಡಿಕೆಯ ಮೇಲೆ ಸ್ಟ್ರೀಮಿಂಗ್ ಆಗುವ ಪ್ಲಾಟ್‌ಫಾರ್ಮ್ ಆಗಿದ್ದು ಇದು ವಿಭು ಅಗರ್‌ವಾಲ್ ಒಡೆತನದಲ್ಲಿದೆ . ವಿಡಿಯೋ ಆನ್ ಡಿಮ್ಯಾಂಡ್ ಪ್ಲಾಟ್‌ಫಾರ್ಮ್ ಪ್ರಸ್ತುತ ಆಂಡ್ರಾಯ್ಡ್, ಐಒಎಸ್‌ಗೆ ಲಭ್ಯವಿದೆ. ಇದು ಡಿಸೆಂಬರ್ 25, 2018ರಲ್ಲಿ ಲಾಂಚ್ ಆಗಿತ್ತು.

ತಮ್ಮ ವಿರುದ್ಧ ದಾಖಲಾದ ಕೇಸ್ ಕುರಿತು ಕಂಪನಿ ಪ್ರತಿಕ್ರಿಯಿಸಿದೆ. ದೂರು ಕೊಟ್ಟ ಮಹಿಳೆ ಕಾನೂನು ಸಲಹೆಗಾರ್ತಿಯಾಗಿ ಕಂಪನಿಯಲ್ಲಿ ಎರಡು ವರ್ಷಕ್ಕಿಂತ ಕಡಿಮೆ ಅವಧಿಯಷ್ಟೇ ಕೆಲಸ ಮಾಡಿದ್ದರು. ಈ ಕಾಲಾವಧಿಯಲ್ಲಿ ಅವರು ಉಲ್ಲು ಕಂಟೆಂಟ್ ಕುರಿತು ಕಂಪನಿಗೆ ಬಂದ ಬಹಳಷ್ಟು ನೋಟಿಸ್ ಕೇಸ್‌ಗಳನ್ನು ಅವರು ನಿರ್ವಹಿಸಿದ್ದಾರೆ. ಅವರು ಈ ದೂರುಗಳು, ನೋಟಿಸ್‌ಗಳನ್ನು ಪರಿಶೀಲಿಸುತ್ತಿದ್ದರು. ನಮ್ಮ ಸಿಇಒ ವಿಭು ಅಗರವಾಲ್ ಅವರಿಗೆ ಸೂಕ್ತ ಕಾನೂನು ಪ್ರತಿಕ್ರಿಯೆಯ ಬಗ್ಗೆ ಸಲಹೆ ನೀಡುತ್ತಿದ್ದರು. ಫೆಬ್ರವರಿ 2020 ರಲ್ಲಿ, ಕೋಲ್ಕತ್ತಾದ ಬ್ರಿಜೇಶ್ ಪೌಲ್ ಎಂಬ ವ್ಯಕ್ತಿಯಿಂದ ನಮಗೆ ದೂರು ಬಂದಿತ್ತು. ಅವರು ನಮ್ಮ ವೆಬ್ ಸರಣಿಯ ಒಂದು ಸಂಚಿಕೆಯಲ್ಲಿ ಕೆಲವು ದೃಶ್ಯಗಳು ಕೆಲವು ಧರ್ಮ ಮತ್ತು ಸಮಾಜದ ವರ್ಗವನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದರು.

ದೂರು ಕೊಟ್ಟ ಮಹಿಳೆ ಕಾನೂನು ಸಲಹೆಗಾರ್ತಿಯಾಗಿ ಕಂಪನಿಯಲ್ಲಿ ಎರಡು ವರ್ಷಕ್ಕಿಂತ ಕಡಿಮೆ ಅವಧಿಯಷ್ಟೇ ಕೆಲಸ ಮಾಡಿದ್ದರು. ಈ ಕಾಲಾವಧಿಯಲ್ಲಿ ಅವರು ಉಲ್ಲು ಕಂಟೆಂಟ್ ಕುರಿತು ಕಂಪನಿಗೆ ಬಂದ ಬಹಳಷ್ಟು ನೋಟಿಸ್ ಕೇಸ್‌ಗಳನ್ನು ಅವರು ನಿರ್ವಹಿಸಿದ್ದಾರೆ. ಅವರು ಈ ದೂರುಗಳು ಮತ್ತು ಸೂಚನೆಗಳನ್ನು ಪರಿಶೀಲಿಸುತ್ತಿದ್ದರು ಮತ್ತು ನಮ್ಮ ಸಿಇಒ ವಿಭು ಅಗರವಾಲ್ ಅವರಿಗೆ ಸೂಕ್ತ ಕಾನೂನು ಪ್ರತಿಕ್ರಿಯೆಯ ಬಗ್ಗೆ ಸಲಹೆ ನೀಡುತ್ತಿದ್ದರು. ಫೆಬ್ರವರಿ 2020 ರಲ್ಲಿ, ಕೋಲ್ಕತ್ತಾದ ಬ್ರಿಜೇಶ್ ಪೌಲ್ ಎಂಬ ವ್ಯಕ್ತಿಯಿಂದ ನಮಗೆ ದೂರು ಬಂದಿತು, ಅವರು ನಮ್ಮ ವೆಬ್ ಸರಣಿಯ ಒಂದು ಸಂಚಿಕೆಯಲ್ಲಿ ಕೆಲವು ದೃಶ್ಯಗಳು ಕೆಲವು ಧರ್ಮಗಳನ್ನು ಮತ್ತು ಸಮಾಜದ ವರ್ಗಗಳನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ದೂರು ಹಿಂಪಡೆಯಲು 15 ಲಕ್ಷ ನೀಡಬೇಕೆಂದು ಬೇಡಿಕೆ ಇಡಲಾಗಿತ್ತು. ಕಾನೂನು ಸಲಹೆ ಪಡೆದು ಕೋರ್ಟ್, ಕಚೇರಿ ಎಂದು ಇನ್ನಷ್ಟು ಹೆಚ್ಚು ಖರ್ಚಾಗುತ್ತದೆ ಎಂದು ಹಣ ಕೊಡಲಾಯಿತು. ನಂತರ ಮತ್ತೊಮ್ಮೆ ಇದೇ ಬೇಡಿಕೆ ಬಂತು. ಈ ಬಾರಿ 40 ಲಕ್ಷ ಬೇಡಿಕೆ ಇಟ್ಟಿದ್ದರು. ಆದರೆ ಈಮೇಲ್ ವ್ಯಕ್ತಿಯ ಐಡಿಯಿಂದ ಬರದೆ, ಕಾನೂನು ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದ ಮಹಿಳೆ ಐಡಿಯಿಂದ ಬಂದಿತ್ತು. ಈ ಮೂಲಕ ಅವರ ವಂಚನೆ ಆಟ ಬಯಲಾಯಿತು. ನಂತರ 2021 ಜೂ 18,19,20,21ರಂದು ತನಿಖೆ ನಡೆದು ಪೊಲೀಸರು ಕಚೇರಿಯಲ್ಲಿದ್ದರು. ದೂರು ನೀಡಿದ ಮಹಿಳೆ ಪ್ರಕಾರ ಪೊಲೀಸರಿದ್ದಾಗಲೇ 18ರಂದು ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಲಾಗಿದೆ. ಆಕೆಯ ದೂರು ಅಸಂಬದ್ಧ ಎಂದು ಕಂಪನಿ ವಕ್ತಾರರು ಸ್ಪಷ್ಟಪಡಿಸಿದ್ದಾರೆ.

Latest Videos
Follow Us:
Download App:
  • android
  • ios