ಅಮಿತಾಭ್ ಮನೆಮುಂದೆ ಬಂಗಲೆ ಕೊಳ್ಳೋ ತನಕ ರಾಜ್‌ನ ಮದ್ವೆಯಾಗೋಕೆ ಒಪ್ಪಿರಲಿಲ್ಲ ಶಿಲ್ಪಾ
- ರಾಜ್ ಕುಂದ್ರಾ ಕೇಸ್‌ನಲ್ಲಿ ದಿನಕ್ಕೊಂದು ಟ್ವಿಸ್ಟ್
- ರಾಜ್‌ನ ಮದ್ವೆಯಾಗೋಕೆ ಕಂಡೀಷನ್ ಹಾಕಿದ್ರಾ ಶಿಲ್ಪಾ ?
- ಬಾಲಿವುಡ್ ನಟಿಯ ಪ್ರೇಮ ಕಥೆಯಲ್ಲಿ ಬಂಗಲೆ ವ್ಯಾಮೋಹ ಎಲ್ಲಿಂದ ಬಂತು ?
ಬಾಲಿವುಡ್‌ನ ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ಪೋರ್ನ್ ವಿಡಿಯೋ ದಂಧೆ ಪ್ರಕರಣ ಹೊಸ ಟ್ವಿಸ್ಟ್‌ಗಳನ್ನು ಪಡೆಯುತ್ತಿದೆ. ಪ್ರಕರಣ ಹೈಲೈಟ್ ಆಗುತ್ತಿದ್ದಂತೆ ಶಿಲ್ಪಾ ಹಾಗೂ ರಾಜ್ ಹಳೆಯ ಹಲವು ಸಂದರ್ಶನದ ವಿಡಿಯೋ ತುಣುಕುಗಳೂ ವೈರಲ್ ಆಗುತ್ತಿವೆ.
ಇತ್ತೀಚೆಗೆ ಕುಂದ್ರಾಗೆ ಬಡತನದ ಬದುಕು ಇಷ್ಟವಿರಲಿಲ್ಲ, ಶ್ರೀಮಂತನಾಗಬೇಕಿತ್ತು ಎಂಬ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈಗ ಈ ಜೋಡಿಯ ಪ್ರೇಮ ಕಥೆಯ ತುಣುಕೊಂದು ವೈರಲ್ ಆಗಿದೆ.
ರಾಜ್ ಕುಂದ್ರಾ-ಶಿಲ್ಪಾ ಶೆಟ್ಟಿ ಲವ್ ಸ್ಟೋರಿ:
ಅಶ್ಲೀಲ ಚಿತ್ರ ಪ್ರಕರಣದಲ್ಲಿ ದಿನಗಳು ಉರುಳಿದಂತೆ ರಾಜ್ ಕುಂದ್ರಾ ಅವರ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇಂದು ಪೊಲೀಸ್ ಕಸ್ಟಡಿ ಕೊನೆಗೊಳ್ಳಬೇಕಿದ್ದ ಉದ್ಯಮಿ ರಾಜ್ ಆಗಸ್ಟ್ 10ರ ಜೈಲಿನಲ್ಲಿರಲಿದ್ದಾರೆ. 14 ದಿನಗಳವರೆಗೆ ಕಸ್ಟಡಿ ವಿಸ್ತರಿಸಲಾಗಿದೆ. ಈ ಎಲ್ಲದರ ಮಧ್ಯೆ, ರಾಜ್ ಕುಂದ್ರಾ ಅವರ ಹಳೆಯ ಸಂದರ್ಶನ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಉದ್ಯಮಿ ತನ್ನ ಪತ್ನಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರೊಂದಿಗಿನ ತನ್ನ ಪ್ರೀತಿಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ.
ಈ ಸಂದರ್ಶನದಲ್ಲಿ ರಾಜ್ ಅವರು ಶಿಲ್ಪಾ ಅವರ ಮೊದಲ ಭೇಟಿ ತಮ್ಮ ವ್ಯವಸ್ಥಾಪಕರ ಮೂಲಕ ನಡೆಯಿತು ಎಂದು ಬಹಿರಂಗಪಡಿಸಿದ್ದಾರೆ. ಶಿಲ್ಪಾ ಯುಕೆ ರಿಯಾಲಿಟಿ ಶೋ ಬಿಗ್ ಬ್ರದರ್ ನಲ್ಲಿ ಗೆದ್ದು ಆ ಸಮಯದಲ್ಲಿ ಅವರ ಜನಪ್ರಿಯತೆ ತುಂಬಾ ಹೆಚ್ಚಿತ್ತು. ರಾಜ್ ಸುಗಂಧ ದ್ರವ್ಯವನ್ನು ತಯಾರಿಸುವ ಯೋಜನೆ ಜೊತೆ ನಟಿಯನ್ನು ಭೇಟಿಯಾಗಿದ್ದರು. ಮೊದಲ ಭೇಟಿಯಲ್ಲಿ ರಾಜ್ ತನ್ನ ತಾಯಿಯ ಪಾದಗಳನ್ನು ಮುಟ್ಟಿದಾಗ ಶಿಲ್ಪಾ ಇಂಪ್ರೆಸ್ ಆಗಿದ್ದರು.
ಶಿಲ್ಪಾಗೆ ಲವ್‌ನಲ್ಲಿ ಆಸಕ್ತಿ ಇರಲಿಲ್ಲ.ಅವಳು ಕೈಯಲ್ಲಿ ದೀಪದೊಂದಿಗೆ ನನ್ನ ಹಿಂದೆ ಓಡಿಹೋದಳು ಎಂದರೆ ಸುಳ್ಳಾಗುತ್ತದೆ. ನಾನು ಅವಳ ಹಿಂದೆ ಬಿದ್ದೆ. ಆಕೆಗೆ ನನ್ನ ಸ್ನೇಹದ ಬಗ್ಗೆ ಆಸಕ್ತಿ ಇದೆ ಎಂದು ತಿಳಿದಾಗ ಒಮ್ಮೆ ಟ್ರೈ ಮಾಡೋಣ ಎಂದುಕೊಂಡಿದ್ದರು ರಾಜ್.
ಆದರೆ ಅವಳು ರಾಜ್ ಇದು ಸರಿಯಾಗಲ್ಲ ಎಂದು ಹೇಳಿದ್ದಳು. ಅವಳು ತುಂಬಾ ನಿರ್ದಯಳಾಗಿದ್ದಳು, ಅವಳನ್ನು ಮೆಚ್ಚಿಸಲು ನನಗೆ ಅವಕಾಶ ನೀಡಲಿಲ್ಲ. ನಾನು ಯಾಕೆ ಲವ್ ವರ್ಕೌಟ್ ಆಗಲ್ಲ ಎಂದು ಕೇಳಿದೆ. ಅದಕ್ಕೆ ನಾನು ಭಾರತವನ್ನು ಅಥವಾ ಮುಂಬೈಯನ್ನು ಬಿಡಲು ಸಾಧ್ಯವಿಲ್ಲ, ಮತ್ತು ನೀವು ಲಂಡನ್‌ನಲ್ಲಿ ವಾಸಿಸುತ್ತೀರಿ ಎಂದಿದ್ದಳು ಎಂದಿದ್ದಾರೆ ರಾಜ್.
ರಾಜ್ ಕುಂದ್ರಾ ಅವರು ಮರುದಿನವೇ ನಿರ್ಮಾಪಕ ವಶು ಭಗ್ನಾನಿಯನ್ನು ಕರೆದು ಮುಂಬೈಯಲ್ಲಿ ಮನೆ ಖರೀದಿಸಲು ಬಯಸಿದ್ದರು ಎಂದು ಹೇಳಿದ್ದಾರೆ. ರಾಜ್ ಖರೀದಿಸಬಹುದಾದ ಆಸ್ತಿ ಜುಹುವಿನಲ್ಲಿ ಇದೆ ಎಂದು ಹೇಳಿದಾಗ ವಶು ನಂತರ ಸಹಾಯ ಮಾಡಿದರು. ನಂತರ ಶಿಲ್ಪಾಳ ಪತಿ ಆಸ್ತಿಯನ್ನು ನೋಡದೆ ಆ ಮನೆಯನ್ನು ಖರೀದಿಸಿ 10 ನಿಮಿಷಗಳ ನಂತರ ಶಿಲ್ಪಾರನ್ನು ಕರೆದೊಯ್ದಿದ್ದರು.
ನೀವು ಮುಂಬೈನಲ್ಲಿ ಮಾತ್ರ ವಾಸಿಸಲು ಬಯಸಿದ್ದೀರಿ ಎಂದು ನೀವು ಹೇಳುತ್ತಿದ್ದೀರಿ. ಅಮಿತಾಬ್ ಬಚ್ಚನ್ ಎಲ್ಲಿ ವಾಸಿಸುತ್ತಿದ್ದಾರೆಂದು ನಿಮಗೆ ತಿಳಿದಿದೆಯೇ? ಅವರ ಪಕ್ಕದಲ್ಲಿ ಒಂದು ಮನೆಯನ್ನು ಖರೀದಿಸಿ, ಈಗ ಮಾತನಾಡೋಣ ಎಂದು ಸರ್ಪೈಸ್ ಕೊಟ್ಟಿದ್ದರು ರಾಜ್.
ಶಿಲ್ಪಾ ಶೆಟ್ಟಿ ಈ ರೋಮ್ಯಾಂಟಿಕ್ ಮೊಮೆಂಟ್‌ಗೆ ನೋ ಎನ್ನಲು ಸಾಧ್ಯವಾಗಲಿಲ್ಲ.ಇಬ್ಬರು 2009 ರಲ್ಲಿ ವಿವಾಹವಾದರು. ದಂಪತಿಗಳು ಈಗ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ - ವಯಾನ್ ರಾಜ್ ಕುಂದ್ರಾ ಮತ್ತು ಸಮಿಶಾ ಶೆಟ್ಟಿ ಕುಂದ್ರಾ.