Asianet Suvarna News Asianet Suvarna News

ಮುಂಬಯಿ ಡೈರೀಸ್ 26/11 ಟ್ರೈಲರ್ ಬಿಡುಗಡೆ

  • ಮುಂಚೂಣಿ ಯೋಧರಿಗೆ ಗೌರವ ನೀಡುವ ಸಿರೀಸ್
  • ಮುಂಬಯಿ ಡೈರೀಸ್ 26/11 ಟ್ರೈಲರ್ ಬಿಡುಗಡೆ
Mumbai diaries 26 11 trailer launched dpl
Author
Bangalore, First Published Aug 26, 2021, 5:29 PM IST

ಮಹಾರಾಷ್ಟ್ರದ ಪರಿಸರ ಮತ್ತು ಹವಾಮಾನ ಬದಲಾವಣೆ, ಪ್ರವಾಸೋದ್ಯಮ ಮತ್ತು ಪ್ರೋಟೋಕಾಲ್ ಸಚಿವರಾದ ಮಾನ್ಯ ಶ್ರೀ ಆದಿತ್ಯ ಠಾಕ್ರೆ ಇವರ ಉಪಸ್ಥಿತಿಯಲ್ಲಿ ನಮ್ಮ ಮುಂಚೂಣಿ ಕಾರ್ಯಕರ್ತರು ಮತ್ತು ವೀರರಿಗೆ ಗೌರವ ಸಲ್ಲಿಸುವ ಮೂಲಕ ದಿ ಗೇಟ್‍ವೇ ಆಫ್ ಇಂಡಿಯಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಟ್ರೈಲರ್ ಅನ್ನು ಬಿಡುಗಡೆ ಮಾಡಲಾಯಿತು. ನಿಖಿಲ್ ಅಡ್ವಾಣಿ ರಚಿಸಿ ಎಮ್ಮಯ್ ಎಂಟರ್‍ಟೈನ್‍ಮೆಂಟ್ ನಿರ್ಮಿಸಿದ ಮುಂಬೈ ಡೈರೀಸ್ 26/11 ಒಂದು ಕಾಲ್ಪನಿಕ ಚಿತ್ರವಾಗಿದ್ದು, 26/11 ಭಯೋತ್ಪಾದಕ ದಾಳಿಯ ಹಿನ್ನೆಲೆಯ ಮುಂಚೂಣಿ ಯೋಧರಿಗೆ ಗೌರವವನ್ನು ನೀಡುತ್ತದೆ.

ಕೊಂಕಣ ಸೇನ್ ಶರ್ಮಾ, ಮೋಹಿತ್ ರೈನಾ, ಟೀನಾ ದೇಸಾಯಿ, ಶ್ರೇಯಾ ಧನ್ವಂತರಿ, ಸತ್ಯಜೀತ್ ದುಬೆ, ನತಾಶಾ ಭಾರದ್ವಾಜ್,
ಮೃಣ್ಮಯಿ ದೇಶಪಾಂಡೆ ಮತ್ತು ಪ್ರಕಾಶ್ ಬೆಳವಾಡಿ ತಾರಾಗಣದಲ್ಲಿರುವ ಈ ಚಿತ್ರವು ಸೆಪ್ಟೆಂಬರ್ 9, 2021 ರಂದು 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಬಿಡುಗಡೆಯಾಗಲಿದೆ.

ಬೆಂಗಳೂರು, ಭಾರತ, 26 ಆಗಸ್ಟ್ 2021 - ಅಮೆಜಾನ್ ಪ್ರೈಮ್ ವಿಡಿಯೋ, 26/11 ದಾಳಿಯ ಹಿನ್ನೆಲೆ ಹೊಂದಿದ ಮುಂಬರುವ ಕಾಲ್ಪನಿಕ ವೈದ್ಯಕೀಯ ನಾಟಕ - ಅಮೆಜಾನ್ ಒರಿಜಿನಲ್ ಸರಣಿ ಮುಂಬೈ ಡೈರೀಸ್ 26/11 ದ ಟ್ರೈಲರ್ ಅನ್ನು ಇಂದು ಬಿಡುಗಡೆ ಮಾಡಿದೆ. ಐಕಾನಿಕ್ ಗೇಟ್‍ವೇ ಆಫ್ ಇಂಡಿಯಾದಲ್ಲಿ ನಡೆದ ಟ್ರೈಲರ್ ಬಿಡುಗಡೆ ಸಮಾರಂಭವು ವೈದ್ಯರು ಮತ್ತು ಪೊಲೀಸ್ ಪಡೆಗಳಂತಹ ಮುಂಬೈನ ಮುಂಚೂಣಿ ಯೋಧರ ಧೈರ್ಯ, ಬದ್ಧತೆ ಮತ್ತು ನಿಸ್ವಾರ್ಥ ತ್ಯಾಗಕ್ಕೆ ಗೌರವ ಸಲ್ಲಿಸಿತು. ಸಾಹಸ್ ಕೋ ಸಲಾಂ ಎಂಬ ಶೀರ್ಷಿಕೆಯಲ್ಲಿ ಈ ಕಾರ್ಯಕ್ರಮವು ಮುಂಬೈನ ಮುಂಚೂಣಿ ವೀರರ ಅಮೂಲ್ಯ ತ್ಯಾಗವನ್ನು ಮಹಾರಾಷ್ಟ್ರದ ಪರಿಸರ ಮತ್ತು ಹವಾಮಾನ ಬದಲಾವಣೆ, ಪ್ರವಾಸೋದ್ಯಮ ಮತ್ತು ಪ್ರೋಟೋಕಾಲ್ ಸಚಿವರಾದ ಮಾನ್ಯ ಶ್ರೀ ಆದಿತ್ಯ ಠಾಕ್ರೆ, ಅಪರ್ಣ ಪುರೋಹಿತ್, ಇಂಡಿಯಾ ಒರಿಜಿನಲ್ಸ್ ಹೆಡ್, ಅಮೆಜಾನ್ ಪ್ರೈಮ್ ವಿಡಿಯೋ, ಇಂಡಿಯಾ, ನಿರ್ದೇಶಕ ಮತ್ತು ಸೃಷ್ಟಿಕರ್ತ ನಿಖಿಲ್ ಅಡ್ವಾಣಿ ಜೊತೆಗೆ ಸರಣಿಯ ನಿರ್ಮಾಪಕರು ಮತ್ತು ಪಾತ್ರವರ್ಗದ ಸಮ್ಮುಖದಲ್ಲಿ ಆಚರಿಸಿತು.

ತಲೈವಾ ರಜನಿಕಾಂತ್ ಬಾಲ್ಯದ ಗೆಳೆಯ 'ಕಡ್ಡಿ' ರಾಮಚಂದ್ರ ರಾವ್ ಇನ್ನಿಲ್ಲ

ಮುಂಬೈ ಡೈರೀಸ್ 26/11 ಎಂಬುದು, ಒಂದು ಕಡೆ ನಗರವನ್ನು ಹಾಳುಮಾಡಿದ, ಆದರೆ ಮತ್ತೊಂದೆಡೆ ತನ್ನ ಜನರನ್ನು ಒಂದುಗೂಡಿಸಿದ ಮತ್ತು ಯಾವುದೇ ಸಂಕಷ್ಟದ ವಿರುದ್ಧ ದೃಢವಾಗಿ ನಿಲ್ಲುವ ಅವರ ನಿರ್ಧಾರವನ್ನು ಬಲಪಡಿಸಿದ ಭಯಾನಕ, ಮರೆಯಲಾಗದ ರಾತ್ರಿಯ ಕುರಿತಾದ ಒಂದು ಕುತೂಹಲಕಾರಿ ಕಾಲ್ಪನಿಕ ವೈದ್ಯಕೀಯ ನಾಟಕವಾಗಿದೆ. ಈ ಸರಣಿಯು ಸ್ಮಾರಕ ಬಿಕ್ಕಟ್ಟನ್ನು ಎದುರಿಸುವುದರೊಂದಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ತೆರೆದುಕೊಳ್ಳುವ ಘಟನೆಗಳನ್ನು ಹಾಗೂ ಆಸ್ಪತ್ರೆಯಲ್ಲಿ ವೈದ್ಯಕೀಯ ಸಿಬ್ಬಂದಿ ಅಲ್ಲದೆ ಮುಂಬೈ ನಗರದಾದ್ಯಂತ ಪ್ರಥಮ ಪ್ರತಿಕ್ರಿಯೆ ನೀಡಿದ ಇತರರು ಎದುರಿಸಿದ ಸವಾಲುಗಳನ್ನು ವಿವರಿಸುತ್ತದೆ. ಮುಂಬೈ ಡೈರೀಸ್ 26/11 ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ ಸೆಪ್ಟೆಂಬರ್ 9, 2021 ರಂದು 240 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ ಬಿಡುಗಡೆಯಾಗಲಿದೆ.

ನಿಕ್ಕಿಲ್ ಅಡ್ವಾಣಿ ರಚಿಸಿ, ಎಮ್ಮಯ್ ಎಂಟರ್‍ಟೈನ್‍ಮೆಂಟ್‍ನ ಮೋನಿಷಾ ಅಡ್ವಾಣಿ ಮತ್ತು ಮಧು ಭೋಜ್ವಾನಿ ನಿರ್ಮಿಸಿ ಮತ್ತು ನಿಖಿಲ್ ಗೊನ್ಸಾಲ್ವಿಸ್ ಹಾಗೂ ನಿಖಿಲ್ ಅಡ್ವಾಣಿ ಜಂಟಿಯಾಗಿ ನಿರ್ದೇಶಿಸಿರುವ ಮುಂಬೈ ಡೈರೀಸ್ 26/11, ನವೆಂಬರ್ 26, 2008 ರಂದು ನಗರವನ್ನು ಧ್ವಂಸಗೊಳಿಸಿದ ಭಯೋತ್ಪಾದಕ ದಾಳಿಯ ಸಮಯದಲ್ಲಿ ಜೀವಗಳನ್ನು ಉಳಿಸಲು ದಣಿವರಿಯದೆ ಕೆಲಸ ಮಾಡಿದ ವೈದ್ಯರು, ದಾದಿಯರು, ಅರೆವೈದ್ಯರು ಮತ್ತು ಆಸ್ಪತ್ರೆ ಸಿಬ್ಬಂದಿಯ ಗೊತ್ತಿಲ್ಲದ ಕಥೆಯನ್ನು ಚಿತ್ರಿಸುತ್ತದೆ. ಈ ಸರಣಿಯು ಕೊಂಕಣ ಸೇನ್ ಶರ್ಮಾ, ಮೋಹಿತ್ ರೈನಾ, ಟೀನಾ ದೇಸಾಯಿ, ಶ್ರೇಯಾ ಧನ್ವಂತರಿ, ಸತ್ಯಜೀತ್ ದುಬೆ, ನತಾಶಾ ಭಾರದ್ವಾಜ್, ಮೃಣ್ಮಯಿ ದೇಶಪಾಂಡೆ ಮತ್ತು ಪ್ರಕಾಶ್ ಬೆಳವಾಡಿ ಸೇರಿದಂತೆ ಅನೇಕ ಪ್ರತಿಭಾವಂತ ಕಲಾವಿದರನ್ನು ಒಳಗೊಂಡಿದೆ.

ಮಹಾರಾಷ್ಟ್ರದ ಪರಿಸರ ಮತ್ತು ಹವಾಮಾನ ಬದಲಾವಣೆ, ಪ್ರವಾಸೋದ್ಯಮ ಮತ್ತು ಪ್ರೋಟೋಕಾಲ್ ಸಚಿವರಾದ ಮಾನ್ಯ ಶ್ರೀ ಆದಿತ್ಯ ಠಾಕ್ರೆ ಹೇಳಿದರು "“ಮುಂಬೈನ ಆತ್ಮವು ನಿರ್ವಿವಾದವಾಗಿ ಪುಟಿದೇಳಬಲ್ಲದ್ದಾಗಿದೆ, ಆದರೆ ಆ ಎಲ್ಲ ಸ್ಥಿತಿಸ್ಥಾಪಕತ್ವದ ಹಿಂದೆ ಬಿಕ್ಕಟ್ಟಿನ ಸಮಯದಲ್ಲಿ ನಗರವನ್ನು ನಡೆಸುತ್ತಿರುವ ನಿಜವಾದ ನಾಯಕರು - ನಮ್ಮ ಮುಂಚೂಣಿ ಕಾರ್ಯಕರ್ತರಾದ ವೈದ್ಯರು, ದಾದಿಯರು, ವಾರ್ಡ್‍ಬಾಯ್‍ಗಳು, ಪೋಲಿಸ್, ಬಿಎಂಸಿ ಕೆಲಸಗಾರರು - ಇವರೆಲ್ಲರ ಧೈರ್ಯ ಮತ್ತು ತ್ಯಾಗದ ಅನೇಕ ಕಥೆಗಳಿವೆ. ಇಂದು, ನಾನು - ನಮ್ಮ ಮುಂಚೂಣಿ ಕೆಲಸಗಾರರ ಶೌರ್ಯವನ್ನು ಗೌರವಿಸುವ ಕಾರ್ಯಕ್ರಮವಾದ ಸಾಹಸ್ ಕೋ ಸಲಾಂ ಮತ್ತು ಈ ಕೆಲಸಗಾರರಿಗೆ ಗೌರವ ಸಲ್ಲಿಸುವ ಸರಣಿಯಾದ ಮುಂಬೈ ಡೈರೀಸ್ 26/11 ನ ಟ್ರೈಲರ್‍ನ ವೀಕ್ಷಣೆಯ ಭಾಗವಾಗಿರುವುದಕ್ಕೆ ಸಂತೋಷಿಸುತ್ತೇನೆ. ಅಂತಹ ವಿಷಯವನ್ನು ತಂದಿರುವುದನ್ನು ನೋಡುವುದು ಹರ್ಷದಾಯಕವಾಗಿದೆ ಮತ್ತು ಆ ಶೌರ್ಯದ ಕಥೆಗಳನ್ನು ಜೀವಂತಗೊಳಿಸಿದ್ದಕ್ಕಾಗಿ ಸರಣಿಯ ತಯಾರಕರು ಮತ್ತು ಪಾತ್ರವರ್ಗ ಮತ್ತು ಅಮೆಜಾನ್ ಪ್ರೈಮ್ ವಿಡಿಯೋವನ್ನು ಅಭಿನಂದಿಸುತ್ತೇನೆ.”

“ಅಮೆಜಾನ್ ಪ್ರೈಮ್ ವೀಡಿಯೋದಲ್ಲಿ, ನಮ್ಮ ಜೀವಿತಾವದಿಯ ಅಧಿಕೃತ, ಬೇರೂರಿರುವ ಮತ್ತು ಪ್ರತಿಬಿಂಬಕ ಕಥನಗಳನ್ನು ತರುವ ಮೂಲಕ ಕಥೆಯ ನಿರೂಪಣೆಯಲ್ಲಿನ ಮಿತಿಯನ್ನು ವಿಸ್ತರಿಸಲು ನಾವು ಸತತವಾಗಿ ಶ್ರಮಿಸುತ್ತೇವೆ." ಎಂದು ಅಮೆಜಾನ್ ಪ್ರೈಮ್ ವಿಡಿಯೋದ ಇಂಡಿಯಾ ಒರಿಜಿನಲ್ಸ್‍ನ ಮುಖ್ಯಸ್ಥೆ ಅಪರ್ಣಾ ಪುರೋಹಿತ್ ಹೇಳಿದರು. "ನಾವು ನಮ್ಮ ಮೂಲ ಫಲಕವನ್ನು ಅದರ ಮುಂಬೈನ ಜನರ ಮನಸ್ಸಿನಲ್ಲಿ ಸದಾ ಉಳಿಯುವ ದುರಂತವಾದ ನವೆಂಬರ್ 26, 2008 ರ ಘಟನೆಗಳಿಗೆ ವಿಶಿಷ್ಟ ದೃಷ್ಟಿಕೋನವನ್ನು ನೀಡುವ ಮುಂಬೈ ಡೈರೀಸ್ 26/11 ರಂತಹ ವಿಶೇಷ, ಭಾವನಾತ್ಮಕ ಮತ್ತು ಮನಮೋಹಕ ವೈದ್ಯಕೀಯ ನಾಟಕದೊಂದಿದೆ ನಮ್ಮ ಒರಿಜಿನಲ್ಸ್‍ನ ಚಿತ್ರಗಳನ್ನು ಮಾಡಲು ನಾವು ರೋಮಾಂಚಿತರಾಗಿದ್ದೇವೆ. ಆದರೆ ನಾವು ಆಗ ನಮಗೆ ಕಂಡಾದ್ದು ನೋಡಿದ್ದು ಮುಂಬೈನ ನಿರಂತರ ಪುಟಿದೇಳುವ ಸಾಮಥ್ರ್ಯ ಮತ್ತು ಸಹಜತೆಯನ್ನು ಮರಳಿ ತರಲು ನಿಸ್ವಾರ್ಥ ಯೋಧರ ಅದ್ಭುತ ಧೈರ್ಯ. ಇದೇ ಮುಂಬೈಯನ್ನು ವಿವರಿಸುವ ಮನೋಭಾವವಾಗಿದೆ, ಮತ್ತು ಎಲ್ಲಾ ಪ್ರತಿಕೂಲಗಳ ನಡುವೆ ನಮ್ಮನ್ನು ಸುರಕ್ಷಿತವಾಗಿರಿಸುವ ಅವರ ಪಟ್ಟುಬಿಡದ ಸೇವೆಗಳಿಗಾಗಿ ಈ ಕೆಲವು ವಿಶೇಷ ವ್ಯಕ್ತಿಗಳಿಗೆ ಮಾತುಗಳನ್ನು ಮೀರಿ ಗೌರವವನ್ನು ಅರ್ಪಿಸಲು ನಾವು ಹೆಮ್ಮೆಪಡುತ್ತೇವೆ. ನಮ್ಮ ಅಪ್ರತಿಮ ವೀರರಿಗೆ, ಮುಂಚೂಣಿಯ ಕೆಲಸಗಾರರಿಗೆ ಮತ್ತು ಪ್ರಥಮ ಪ್ರತಿಕ್ರಿಯೆ ನೀಡಿದವವರಿಗೆ ನಾವು ಗೌರವ ಸಲ್ಲಿಸುತ್ತಿರುವಾಗ, ಈ ಹೋರಾಟ, ಶೌರ್ಯ ಮತ್ತು ಧೈರ್ಯದ ಕಥೆಯು ಪ್ರಪಂಚದಾದ್ಯಂತ ಪ್ರೇಕ್ಷಕರಲ್ಲಿ ಅನುರಣಿಸಲಿ ಎಂದು ನಾವು ಆಶಿಸುತ್ತೇವೆ. ”
 
"ಮುಂಬೈ ಡೈರೀಸ್ 26/11, ಇಲ್ಲಿಯವರೆಗೆ ತೆರೆಯ ಮೇಲೆ ತರಲಾಗಿಲ್ಲದ ನವೆಂಬರ್ 26ರ ಭಯಾನಕ ರಾತ್ರಿಯ ವಿಭಿನ್ನ ದೃಷ್ಟಿಕೋನವನ್ನು ನೀಡುತ್ತದೆ" ಎಂದು ನಿರ್ದೇಶಕರಾದ ನಿಖಿಲ್ ಅಡ್ವಾಣಿ ಹಂಚಿಕೊಂಡಿದ್ದಾರೆ. "ಮುಂಚೂಣಿಯ ಕಾರ್ಯಕರ್ತರು ಮತ್ತು ಅಪ್ರತಿಮ ವೀರರ ಶೌರ್ಯಕ್ಕೆ ಗೌರವ ಸೂಚಿಸುವ ಈ ಕಥೆಗೆ ಜೀವ ತುಂಬಲು ತಮ್ಮ ಹೃದಯ ಮತ್ತು ಆತ್ಮವನ್ನು ಸಮರ್ಪಿಸಿದ ನಟರ ಸರ್ವತೋಮುಖ ಸಾಮಥ್ರ್ಯದ ಮೂಲಕ ಈ ಸರಣಿಯು ಭಾವನೆಗಳು ಮತ್ತು ನಾಟಕದ ಪರಿಪೂರ್ಣ ಮಿಶ್ರಣವನ್ನು ನೀಡುತ್ತದೆ. ಪ್ರಥಮ ಪ್ರತಿಕ್ರಿಯೆ ನೀಡಿದ ವೈದ್ಯರು, ದಾದಿಯರು, ಇಂಟರ್ನ್‍ಗಳು ಮತ್ತು ವಾರ್ಡ್ ಬಾಯ್‍ಗಳ ದೃಷ್ಟಿಯಿಂದ ನಿರೂಪಿಸಲಾಗಿರುವ ಈ ಕಾರ್ಯಕ್ರಮವು ವೀಕ್ಷಕರನ್ನು ಬಾಂಬೆ ಜನರಲ್ ಆಸ್ಪತ್ರೆಯ ಕಾರಿಡಾರ್‍ಗಳಿಗೆ ಕರೆದೊಯ್ಯುತ್ತದೆ, ಆ ಭೀಕರ ರಾತ್ರಿಯಲ್ಲಿ ಏನಾಯಿತು ಎಂಬುದನ್ನು ತೆರೆದಿಡುತ್ತದೆ.  ಇದು ನಮಗೆ ಅತ್ಯಂತ ಹೆಮ್ಮೆಯ ಸರಣಿಯಾಗಿದೆ.

ಮಹಾರಾಷ್ಟ್ರದ ಪರಿಸರ ಮತ್ತು ಹವಾಮಾನ ಬದಲಾವಣೆ, ಪ್ರವಾಸೋದ್ಯಮ ಮತ್ತು ಪ್ರೋಟೋಕಾಲ್ ಸಚಿವರಾದ ಮಾನ್ಯ ಶ್ರೀ ಆದಿತ್ಯ ಠಾಕ್ರೆ ರವರು ಪ್ರದರ್ಶನದ ಟ್ರೈಲರ್ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಾಗಿರುವುದು ನಮಗೆ ಬಹಳ ಸಂತೋಷವಾಗಿದೆ. ಅಮೆಜಾನ್ ಪ್ರೈಮ್ ವಿಡಿಯೋದೊಂದಿಗೆ ಮುಂಚೂಣಿಯ ಕಾರ್ಯಕರ್ತರನ್ನು ಅವರ ಪ್ರಯತ್ನಗಳಿಗಾಗಿ ಪ್ರಶಂಸಿಸಬೇಕಾದ ಸಮಯದಲ್ಲಿ ನಾವು ಈ ಕಥೆಯನ್ನು ಪ್ರಪಂಚದಾದ್ಯಂತ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತದೆ. ಸರಣಿಗಾಗಿ ಇದಕ್ಕಿಂತ ಉತ್ತಮ ನೆಲೆ ಅಥವಾ ಸಮಯ ಗಳು ನಮಗೆ ದೊರೆಯಲು ಸಾಧ್ಯವಿಲ್ಲ ಎಂದಿದ್ದಾರೆ.

Follow Us:
Download App:
  • android
  • ios