ರಜನಿಕಾಂತ್ ಆಪ್ತ ಸ್ನೇಹಿತರಾದ ರಾಮಚಂದ್ರ ರಾವ್ ವಯೋ ಸಹಜ ಕಾಯಿಲೆಯಿಂದ ಕೊನೆ ಉಸಿರೆಳೆದಿದ್ದಾರೆ.
ಬಹುಭಾಷಾ ನಟ, ತಲೈವಾ ಸೂಪರ್ ಸ್ಟಾರ್ ರಜನಿಕಾಂತ್ ಆಪ್ತ ಸ್ನೇಹಿತ, ಕುಚಿಕು ಗೆಳೆಯ ರಾಮಚಂದ್ರ ರಾವ್ ಅವರು ವಯೋ ಸಹಜ ಕಾಯಿಲೆಯಿಂದ ಬುಧವಾರ ನಿಧನರಾಗಿದ್ದಾರೆ. 73 ವರ್ಷದ ರಾಮಚಂದ್ರ ರಾವ್ ಪತ್ನಿ, ಪುತ್ರರು ಹಾಗೂ ಓರ್ವ ಮಗನ ಜೊತೆ ಬೆಂಗಳೂರಿನಲ್ಲಿ ನೆಲೆಸಿದ್ದರು.
39 ವರ್ಷಗಳ ಕಾಲ ಕನ್ನಡದ ಖ್ಯಾತ ಸುದ್ದಿ ಪ್ರತಿಕೆಯಲ್ಲಿ ಪ್ರೂಫ್ ರೀಡರ್ ಆಗಿ ಕೆಲಸ ಮಾಡಿ 2007ರಲ್ಲಿ ನಿವೃತ್ತಿ ಪಡೆದಿದ್ದಾರೆ. 1996ರಲ್ಲಿ ರಜನಿಕಾಂತ್ ಹಾಗೂ ರಾಮಚಂದ್ರ ರಾವ್ ಅವರು ಬೆಂಗಳೂರಿನ ಹನುಮಂತನಗರದಲ್ಲಿ ಒಂದೇ ರೂಮಿನಲ್ಲಿ ಇದ್ದವರು. ಅವರನ್ನು ತಲೈವಾ ಪ್ರೀತಿಯಿಂದ 'ಕಡ್ಡಿ' ಎಂದು ಕರೆಯುತ್ತಿದ್ದರು. ರಾಮಚಂದ್ರ ಅವರು ಸಂಯುಕ್ತ ಕರ್ನಾಟಕದಲ್ಲಿ ಸುದೀರ್ಘ ಮೂರು ದಶಕಕ್ಕೂ ಮೀರಿ ಕೆಲಸ ಮಾಡಿದ್ದರು.
ಹೃದಯಾಘಾತದಿಂದ ಹಿರಿಯ ನಟಿ ಚಿತ್ರಾ ನಿಧನ
ಬೆಂಗಳೂರಿಗೆ ಬಂದಾಗಲೆಲ್ಲಾ ರಜನಿಕಾಂತ್, ರಾಮಚಂದ್ರ ಅವರು ಕೆಲಸ ಮಾಡುವ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿಸುತ್ತಿದ್ದರು. ಅವರಿಬ್ಬರ ಸ್ನೇಹದ ಬಗ್ಗೆ ಇಡೀ ಪತ್ರಿಕೆ, ಮಾಧ್ಯಮ ಸ್ನೇಹಿತರಿಗೆ ತಿಳಿದಿತ್ತು. ಚೆನ್ನೈಗೆ ಹೋದಾಗ ರಾಮಚಂದ್ರ ಅವರು ಸುಲಭವಾಗಿ ರಜನಿಕಾಂತ್ ಮನೆಗೂ ತಪ್ಪದೇ ಭೇಟಿ ನೀಡುತ್ತಿದ್ದರು. ರಾಮಚಂದ್ರ ಅವರು ಇನ್ನಿಲ್ಲ ಎಂಬ ವಿಚಾರ ತಿಳಿಯುತ್ತಿದ್ದಂತೆ ಚಿತ್ರರಂಗದ ಆಪ್ತರು, ಕುಟುಂಬಸ್ಥರು ಹಾಗೂ ಮಾಧ್ಯಮ ಮಿತ್ರರು ಸಂತಾಪ ಸೂಚಿಸಿದ್ದಾರೆ.
