Asianet Suvarna News Asianet Suvarna News

ಬಾಲಿವುಡ್ ಡ್ರಗ್ಸ್ ಪಾರ್ಟಿ; ಶೂಟಿಂಗ್ ಕ್ಯಾನ್ಸಲ್ ಮಾಡಿ ಪುತ್ರನ ಬಿಡುಗಡೆಗೆ ಶಾರುಖ್ ಹರಸಾಹಸ!

  • ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನ
  • ಬೆಳಗ್ಗೆ ವಶಕ್ಕೆ ಪಡೆದಿದ್ದ NCB ಪೊಲೀಸ್, ಸಂಜೆ ಬಂಧನ
  • ಬಾಲಿವುಡ್ ಡ್ರಗ್ಸ್ ಪಾರ್ಟಿ ಮೇಲೆ ದಾಳಿ NCB ಅಧಿಕಾರಿಗಳಿಂದ ದಾಳಿ
  • ಮುಂಬೈನಲ್ಲಿ ಅತೀ ದೊಡ್ಡ ಡ್ರಗ್ಸ್ ಪಾರ್ಟಿ ಜಾಲ ಭೇದಿಸಿದ NCB
Mumbai cruise drugs case Bollywood star Shah Rukh Khan son Aryan Khan arrested by NCB ckm
Author
Bengaluru, First Published Oct 3, 2021, 5:47 PM IST
  • Facebook
  • Twitter
  • Whatsapp

ಮುಂಬೈ(ಅ.03): ಕೊರೋನಾ ಇಳಿಕೆಯಾಗುತ್ತಿದೆ ಅನ್ನೋ ಸಮಾಧಾನಕರ ಸುದ್ದಿ ಭಾರತೀಯರ ಆತಂಕ ದೂರ ಮಾಡಿ ನೆಮ್ಮದಿ ತಂದಿತ್ತು. ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ಎಲ್ಲವು ಶಾಂತವಾಗಿರುವಾಗಲೇ ಬಾಲಿವುಡ್ ಲೋಕದಿಂದ ಬೆಚ್ಚಿ ಬೀಳಿಸುವ ಸುದ್ಧಿ ಹೊರಬಿದ್ದಿತ್ತು. ಮುಂಬೈನ ಕರಾವಳಿಯಲ್ಲಿ ಕ್ರೂಸ್ ಹಡಗಿನಲ್ಲಿ(Mumbai cruise drugs case) ನಡೆಯುತ್ತಿದ್ದ ರೇವ್ ಪಾರ್ಟಿ(Rave Party) ಮೇಲೆ NCB ಅಧಿಕಾರಿಗಳು ದಾಳಿ ಮಾಡಿ ಬಾಲಿವುಡ್(Bollywood) ಸ್ಟಾರ್ ನಟರ ಪುತ್ರರು, ಹಲವು ಸೆಲೆಬ್ರೆಟಿಗಳನ್ನು ವಶಕ್ಕೆ ಪಡೆದಿದ್ದರು. ಬಳಿಕ ವಿಚಾರಣೆ ನಡೆಸಿದ NCB ಅಧಿಕಾರಿಗಳು ಇದೀಗ ಡ್ರಗ್ಸ್ ಪಾರ್ಟಿ ಆರೋಪದಡಿ ನಟ ಶಾರುಖ್ ಖಾನ್(Shah Rukh Khan) ಪುತ್ರ ಆರ್ಯನ್ ಖಾನ್(Aryan Khan) ಸೇರಿ ಇಬ್ಬರನ್ನು ಬಂಧಿಸಲಾಗಿದೆ.

ಬಾಲಿವುಡ್‌ ಡ್ರಗ್ಸ್ ಪಾರ್ಟಿ: ಕ್ರೂಸ್‌ಗೆ ಎಂಟ್ರಿಯಾದವರಿಗೆ 14 ಪುಟಗಳ 'ಕ್ರಯಾಕ್ ಬೈಬಲ್

ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿ ಅತೀ ದೊಡ್ಡ ಡ್ರಗ್ಸ್ ಜಾಲ(Drugs network) ಕಾರ್ಯನಿರ್ವಹಿಸುತ್ತಿದೆ ಅನ್ನೋ ಮಾಹಿತಿ ಪಡೆದ NCB ಅಧಿಕಾರಿಗಳು ಮುಫ್ತಿಯಲ್ಲಿ ಇದೇ ಹಡಗಿನಲ್ಲಿ ಸೇರಿಕೊಂಡಿದ್ದರು. ರೇವ್ ಪಾರ್ಟಿ ನಡೆಯುತ್ತಿದ್ದ ವೇಳೆ ದಾಳಿ ಮಾಡಿದ ಅಧಿಕಾರಿಗಳು ರೆಡ್ ಹ್ಯಾಂಡ್ ಆಗಿ ಸೆಲೆಬ್ರೆಟಿಗಳ ಮಕ್ಕಳು, ಸ್ಟಾರ್ ನಟ-ನಟಿಯರು ಹಾಗೂ ಮಾಡೆಲ್‌ಗಳನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಕೊಕೈನ್ ಸೇರಿದಂತೆ ಹಲವು ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. 

ಐಷರಾಮಿ ಹಡಗಿನಲ್ಲಿ ಡ್ರಗ್ಸ್ ರೇವ್ ಪಾರ್ಟಿ: ಶಾರೂಖ್ ಮಗನ ವಿಚಾರಣೆ

ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡ ಪೊಲೀಸರ ವಶವಾಗಿದ್ದರು. ಇದು ಬಾಲಿವುಡ್‌ನಲ್ಲಿ ಸಂಚಲನ ಮೂಡಿಸಿತ್ತು. ಬೆಳಗ್ಗೆಯಿಂದ ವಿಚಾರಣೆ ನಡೆಸಿದ ಪೊಲೀಸರು ಆರ್ಯನ್ ಖಾನ್ ಸೇರಿ ಇಬ್ಬರನ್ನು ಬಂಧಿಸಲಾಗಿದೆ(Arrest). ವಿಚಾರಣೆ ಬಳಿಕ ವೈದ್ಯಕೀಯ ಪರೀಕ್ಷೆ ನಡೆಸಿದ NCB ಅಧಿಕಾರಿಗಳು ಆರ್ಯನ್ ಖಾನ್ ಜೊತೆಗೆ ಮುನ್‌ಮನ್ ದರ್ಮೇಚಾ ಹಾಗೂ ಅರ್ಬಾಜ್ ಮರ್ಚೆಂಟ್‌ನ್ನು ಬಂಧಿಸಿದ್ದಾರೆ.

 

ಆರ್ಯನ್ ಖಾನ್ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿದೆ. ಇದೇ ವೇಳೆ NCB ಅಧಿಕಾರಿಗಳು ಹಡಗಿನಲ್ಲಿ ರೇವ್ ಪಾರ್ಟಿ ಆಯೋಜಿಸಿದ್ದ ಎಫ್‌ಟಿವಿ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಖಾಸಿಫ್ ಖಾನ್‌ಗೆ ನೊಟೀಸ್ ನೀಡಲಾಗಿದೆ. ಇದರ ಜೊತೆಗೆ ಪಾರ್ಟಿ ಆಯೋಜನೆ ಹಾಗೂ ಉಸ್ತುವಾರಿ ವಹಿಸಿಕೊಂಡಿದ್ದ ಗೋಪಾಲ್ ಆನಂದ್ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ: ಶಾರುಖ್ ಪುತ್ರ ಆರ್ಯನ್ ಖಾನ್ NCB ವಶಕ್ಕೆ

15 ದಿನಗಳ ಹಿಂದೆ ಹಡಗಿನಲ್ಲಿ ರೇವ್ ಪಾರ್ಟಿ ಆಯೋಜಿಸಿರುವ ಕುರಿತು NCB ಅಧಿಕಾರಿಗಳು ಮಾಹಿತಿ ಕಲೆಹಾಕಿದ್ದಾರೆ. ಈ ಪಾರ್ಟಿಯಲ್ಲಿ ಬಾಲಿವುಡ್ ಸೆಲೆಬ್ರೆಟಿಗಳು ಸೇರಿದಂತೆ ಹಲವರು ಶ್ರೀಮಂತ ಉದ್ಯಮಿಗಳು ಪಾಲ್ಗೊಳ್ಳುತ್ತಿರುವುದು ಖಚಿತಗೊಂಡಿದೆ. ಇದೇ ವೇಳೆ ಈ ಪಾರ್ಟಿಗೆ ಅಪಾರ ಪ್ರಮಾಣದಲ್ಲಿ ಡ್ರಗ್ಸ್ ಸರಬರಾಜು ಮಾಡಲಾಗುತ್ತಿದೆ ಅನ್ನೋ ಮಾಹಿತಿಯನ್ನು NCB ಅಧಿಕಾರಿಗಳು ಕಲೆ ಹಾಕಿದ್ದಾರೆ.

ಮುಂಬೈ ಕರಾವಳಿ ತೀರದಿಂದ ಹಡಗು ಸಮುದ್ರ ಮಧ್ಯ ತುಲುಪುತ್ತಿದ್ದಂತೆ ರೇವ್ ಪಾರ್ಟಿ ಆರಂಭಗೊಂಡಿದೆ. ಶನಿವಾರ ಮಧ್ಯರಾತ್ರಿ ಪಾರ್ಟಿ ನಡೆಯುತ್ತಿದ್ದ ಸಂದರ್ಭದಲ್ಲೇ ಪ್ರಯಾಣಿಕರ ಸೋಗಿನಲ್ಲಿ ಮುಫ್ತಿಯಲ್ಲಿದ್ದ NCB ಅಧಿಕಾರಿಗಳು ದಾಳಿ ಮಾಡಿದ್ದಾರೆ.  

ಆರ್ಯನ್ ಖಾನ್ ಬಂಧನ ಇದೀಗ ತಂದೆ, ಬಾಲಿವುಡ್ ನಟ ಶಾರುಖ್ ಖಾನ್‌ಗೆ ತೀವ್ರ ತಲೆನೋವಾಗಿದೆ. ಸ್ಪೇನ್‌ನಲ್ಲಿ ಚಿತ್ರೀಕರಣಕ್ಕೆ ತೆರಳಬೇಕಿದ್ದ ಶಾರುಕ್ ಖಾನ್ ಚಿತ್ರೀಕರಣ ಮೊಟಕುಗೊಳಿಸಿ ಪುತ್ರನನ್ನು ಬಂಧನದಿಂದ ತಪ್ಪಿಸಲು ಹರಸಾಹಸ ಪಟ್ಟಿದ್ದಾರೆ ಅನ್ನೋ ಮಾಹಿತಿಯೂ ಬಹಿರಂಗವಾಗಿದೆ. ಆದರೆ NCB ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಇದೀಗ ಆರ್ಯನ್ ಖಾನ್ ಬಂಧನದಿಂದ ಬಿಡುಗಡೆಗೊಳಿಸಲು ಶಾರುಖ್ ಖಾನ್ ಹರಸಾಹಸ ಪಟ್ಟಿದ್ದಾರೆ ಅನ್ನೋ ಮಾಹಿತಿಯೂ ಹೊರಬಿದ್ದಿದೆ.
 

Follow Us:
Download App:
  • android
  • ios