Asianet Suvarna News Asianet Suvarna News

ಹಾಸಿಗೆಗೆ ಬಾ ಎಂದ ನಿರ್ದೇಶಕನ ಮೇಲೆ ಬೇಸತ್ತು ಸಾಯಲು ಹೊರಟಿದ್ರಂತೆ ಈ ನಟಿ!

ನನ್ನ ಸೊಂಟ ಬಿಟ್ರೆ ಬೇರೇನೂ ತೋರಿಸಲ್ವಲ್ಲಾ ಏಕೆಂದು ಸಿಟ್ಟಾಗಿದ್ದ ಇಲಿಯಾನಾ ಡಿ ಕ್ರೂಸ್ ಬಾಲಿವುಡ್‌‍‌ನಲ್ಲಿ ಯಶಸ್ಸು ಕಂಡಿದ್ದು ಅಷ್ಟಕ್ಕಷ್ಟೇ. ಆದರೆ, ತೆಲುಗಿನಲ್ಲಿ ಹೆಚ್ಚು ಸಂಭಾವನೆ ಪಡೆಯೋ ನಟಿಯರಲ್ಲಿ ಪ್ರಮುಖರು. ಇವರು ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದಿದ್ದಾರೆ. 

Multilingual Indian star Ileana D'Cruz opens up about casting couch in the movie industry
Author
First Published Aug 22, 2024, 1:25 PM IST | Last Updated Aug 22, 2024, 1:25 PM IST

ನಿಜ ಹೇಳುಬೇಕು ಅಂದ್ರೆ ತಮ್ಮ ಮೈ ಮಾಟ, ಅದರಲ್ಲಿಯೂ ಸೊಂಟದಿಂದಲೇ ಸುದ್ದಿಯಲ್ಲಿರೋ ಇಲಿಯಾನಾ ಡೀ ಕ್ರೂಸ್, ಬಾಲಿವುಡ್‌ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಲು ಹೋಗಿ ಫೇಲ್ ಆದವರು. ಆದರೆ, ತೆಲುಗಿನಲ್ಲಿ ಸಿಕ್ಕಾಪಟ್ಟೆ ಡಿಮ್ಯಾಂಡ್‌ನಲ್ಲಿರುವ ಹಾಟ್ ನಟಿಯರಲ್ಲಿ ಪ್ರಮುಖರು. ಇವರು ಕೇಳಿದಷ್ಟು ಸಂಭಾವನೆ ಕೊಡೋ ನಿರ್ದೇಶಕರು, ಇವರ ಮೈ ಮಾಟ ತೋರಿಸಿಯೇ ದುಡ್ಡು ಮಾಡಿಕೊಳ್ಳುತ್ತಾರೆ. 

ಇತ್ತೀಚೆಗೆ ನನ್ನ ಬಾಡಿಯಲ್ಲಿ ಬೇರೆ ಯಾವ ಪಾರ್ಟ್‌ ಕೂಡ ಇಲ್ವಾ? ಬರೀ ಸೊಂಟಾನೇ ತೋರಿಸ್ತೀರಲ್ಲ? ಎಂದು ಇಲಿಯಾನ ಪ್ರಶ್ನಿಸಿದ ಹಳೇ ವೀಡಿಯೊವೊಂದು ಸದ್ದು ಮಾಡಿತ್ತು. ತಮ್ಮ ಮೈಮಾಟ ತೋರಿಸಿಯೇ ದುಡ್ಡು ಮಾಡುವವರ ವಿರುದ್ಧ ನಟಿ ಆಕ್ಷೇಪ ವ್ಯಕ್ತಪಡಿಸಿದ್ದರು. ಆದರೀಗ ಮತ್ತೊಂದು ಸುದ್ದಿಯೂ ಸದ್ದು ಮಾಡುತ್ತಿದ್ದು, ಕಾಸ್ಟಿಂಗ್ ಕೌಚ್ ವಿರುದ್ಧವೂ ಧ್ವನಿ ಎತ್ತಿದ್ದಾರೆ. ಆದರೆ,  ಚಿತ್ರರಂಗದಲ್ಲಿ ಮುಂದುವರಿಯಬೇಕೆಂದರೆ ಹೇಗೆ ಮೆಂಟಲಿ ಸ್ಟ್ರಾಂಗ್ ಇರಬೇಕೆಂದು ಹೇಳುವ ಮೂಲಕ, ತಾವು ಆ ಕೆಟ್ಟ ಘಳಿಗೆಯನ್ನು ಹೇಗೆ ಓವರ್‌ಕಮ್ ಮಾಡಿದ್ದೇನೆ ಎನ್ನುವುದನ್ನು ಮನಮುಟ್ಟುವಂತೆ ಹೇಳಿ ಕೊಂಡಿದ್ದಾರೆ. 

ನನ್ನ ಬಾಡಿಯಲ್ಲಿ ಬೇರೆ ಯಾವ ಪಾರ್ಟ್‌ ಕೂಡ ಇಲ್ವಾ? ಬರೀ ಸೊಂಟಾನೇ ತೋರಿಸ್ತೀರಲ್ಲ: ಸಿಟ್ಟಾಗಿದ್ರಂತೆ ಇಲಿಯಾನ!

ಮತ್ತದೇ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಮತ್ತೊಂದು ವೀಡಿಯೋದಲ್ಲಿ ಅಮ್ಮಡು ನಟಿ, ನಿರ್ದೇಶಕರೊಬ್ಬರ ತಮಗೆ ಸಹಕರಿಸು ಎಂದು ಕೇಳಿಕೊಂಡಿದ್ದರಂತೆ. ಅದಕ್ಕೆ ಹೇಗೆ ರಿಯಾಕ್ಟ್ ಮಾಡಿಕೊಳ್ಳೋದು ಅಂತಾನೇ ಗೊತ್ತಾಗದೇ ಮನಗೆ ಬಂದು ನೇಣಿಗೆ ಕೊರಳೊಡ್ಡಲು ಸಿದ್ಧರಾಗಿದ್ದರಂತೆ. ಆದರೆ, ಆ ಕ್ಷಣ ಬಂದೊಂದು ಯೋಚನೆ ಇವರನ್ನು ಪಾಸಿಟಿವ್ ಆಗಿ ಯೋಚಿಸುವಂತೆ ಮಾಡಿತ್ತಂತೆ. ಇವನು ಯಾರೋ ಒಬ್ಬ ನಿರ್ದೇಶಕ ಬೇಡದ್ದು ಕೇಳ್ತಾನೆಂದು ನಾನ್ಯಾಕೆ ನನ್ನನ್ನು ಪ್ರೀತಿಸುವ ಕುಟುಂಬವನ್ನು ತೊರೆಯಲಿ ಎಂಬ ಯೋಚನೆಯಿಂದಾನೇ ತಮ್ಮ ದುಡುಕು ನಿರ್ಧಾರದಿಂದ ದೂರ ಸರಿದರಂತೆ. ಇದೇ ಯೋಚನೆ ಅವರನ್ನು ಮುಂದೆಯೂ ಚಿತ್ರರಂಗದಲ್ಲಿ ತುಂಬಾ ಗಟ್ಟಿಯಾಗಿ ಬೇರೂರಲು ಹಾಗೂ ಕೆಟ್ಟ ಸಂದರ್ಭಗಳನ್ನು ಎದುರಿಸಲು ಮನೋಸ್ಥೈರ್ಯ ನೀಡಿದ್ದು, ಎನ್ನುತ್ತಾರೆ ಈ ನಟಿ. 

ಸಿಗದ ಅವಕಾಶ:
ಇಲಿಯಾನಾ ತೆಲುಗಿನಲ್ಲಿಯೂ ಇತ್ತೀಚೆಗೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆ. 2018ರ ಅಮರ್ ಅಕ್ಬರ್ ಆಂಟೋನಿ ಚಿತ್ರದಲ್ಲಿ ಅವರು ರವಿತೇಜ ಜೊತೆ ತೆರೆ ಹಂಚಿಕೊಂಡಿದ್ದರು. ಇದು ಯಶಸ್ವಿಯಾಗಿದ್ದು ಬಿಟ್ಟರೆ, ಮತ್ಯಾವ ಹಿಟ್ ಚಿತ್ರಗಳನ್ನು ನೀಡುವಲ್ಲಿಯೂ ಯಶಸ್ವಿಯಾಗಲಿಲ್ಲ. ಕಿಕ್ 2 ಕೂಡ ನಿರೀಕ್ಷಿಸಿದಷ್ಟು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುವಲ್ಲಿ ವಿಫಲವಾಗಿದ್ದು, ಸದ್ಯಕ್ಕೆ ಇಲಿಯಾನಾ ಕೈಯಲ್ಲಿ ಯಾವ ಚಿತ್ರಗಳೂ ಇಲ್ಲ. 

ಭಾರತದ ಅತಿಹೆಚ್ಚು ಅಂಕುಡೊಂಕಾದ ಮೈಮಾಟವುಳ್ಳ ಟಾಪ್-10 ನಟಿಯರು; ಸ್ಯಾಂಡಲ್‌ವುಡ್‌ ಸ್ಟಾರ್ಸ್ ಯಾರಿದ್ದಾರೆ?

ತೆಲುಗು ನಟಿಯರು ಅನೇಕರು ಈ ಹಿಂದೆಯೇ ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದಿದ್ದು ಇದೆ. ಆದರೆ, ಪ್ರತಿಯೊಂದೂ ಭಾಷೆಯ ಸಿನಿಮಾ ಇಂಡಸ್ಟ್ರಿಯಲ್ಲಿ ಇಂಥ ಪ್ರಕರಣಗಳು ನಡೆಯುವ ಬಗ್ಗೆ ಓಪನ್ ಆಗಿಯೇ ಮಾತನಾಡುತ್ತಾರೆ. ಆದರೆ, ಯಾರೂ ಈ ಬಗ್ಗೆ ಯಾವುದೇ ದೂರು ಸಲ್ಲಿಸಲು ಧೈರ್ಯವಾಗಿ ಮುಂದೆ ಬರುವುದಿಲ್ಲ. ಅಕಸ್ಮಾತ್ ಅಪ್ಪಿತಪ್ಪಿ ಈ ಸಂಬಂಧ ಮೌನ ಮುರಿದರೂ, ಅವರಿಗೆ ಚಿತ್ರರಂಗ ದೂರ ತಳ್ಳುವ ಹುನ್ನಾರ ನಡೆಯುತ್ತದೆ ಎನ್ನುವುದೂ ಸತ್ಯ. ಇತ್ತೀಚೆಗೆ ಮಲಯಾಳಂ ಚಿತ್ರರಂಗದಲ್ಲಿ ಹೇಮಾ ಕಮಿಟಿ ಈ ಸಂಬಂಧ ವರದಿಯೊಂದನ್ನು ಸರಕಾರಕ್ಕೆ ಸಲ್ಲಿಸಿದ್ದು, ನಟಿಯೊಬ್ಬಳು ಚಿತ್ರರಂಗದಲ್ಲಿ ಮುಂದುವರೆಯಲು ನಿರ್ದೇಶಕ ಹಾಗೂ ನಟನೊಂದಿಗೆ ಹಾಸಿಗೆ ಹಂಚಿ ಕೊಳ್ಳೋದು ಅನಿವಾರ್ಯ ಎಂಬ ವರದಿ ನೀಡಿದೆ. ಆ ಮೂಲಕ ಇದೇ ಮೊದಲ ಬಾರಿಗೆ ಸರಕಾರದಿಂದಲೇ ರಚನೆಯಾದ ಸಮಿತಿಯೊಂದು ಚಿತ್ರರಂಗದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದು, ಇದುವರೆಗೆ ಈ ಬಗ್ಗೆ ಮಾತನಾಡಲು ಹೆದರುತ್ತಿದ್ದ ನಟಿಯರು ಇನ್ನಾದರೂ ತಾವು ಅನುಭವಿಸೋ ನೋವಿನ ಬಗ್ಗೆ ಧೈರ್ಯವಾಗಿ ಮನ ಬಿಚ್ಚಿ ಮಾತನಾಡುತ್ತಾರಾ ಕಾದು ನೋಡಬೇಕು. 

ಕೆಲವು ವರ್ಷಗಳ ಹಿಂದೆ ಕಾಸ್ಟಿಂಗ್ ಕೌಚ್‌ಗೆ ಸಂಬಂಧಸಿದಂತೆ #MeToo ಎಂಬ ಅಭಿಯಾನವೂ ಸಕಾಷ್ಟು ಚರ್ಚೆಗೆ ಎಡೆ ಮಾಡಿಕೊಟ್ಟಿದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. 

Latest Videos
Follow Us:
Download App:
  • android
  • ios