Asianet Suvarna News Asianet Suvarna News

ನನ್ನ ಬಾಡಿಯಲ್ಲಿ ಬೇರೆ ಯಾವ ಪಾರ್ಟ್‌ ಕೂಡ ಇಲ್ವಾ? ಬರೀ ಸೊಂಟಾನೇ ತೋರಿಸ್ತೀರಲ್ಲ: ಸಿಟ್ಟಾಗಿದ್ರಂತೆ ಇಲಿಯಾನ!

Ileana on Her waist ನಟಿ ಇಲಿಯಾನ ಅವರ ಹಳೆಯ ವಿಡಿಯೋ ವೈರಲ್‌ ಆಗಿದೆ. ಅದರಲ್ಲಿ ಇಲಿಯಾನ, ಸಿನಿಮಾಗಳಲ್ಲಿ ತಮ್ಮ ಸೊಂಟವನ್ನೇ ಹೆಚ್ಚಾಗಿ ತೋರಿಸೋದಕ್ಕೆ ತಗಾದೆ ಎತ್ತಿರುವುದು ಕಂಡಿದೆ.

Ileana warning directors no other part of my body Why only showing waist san
Author
First Published Jun 21, 2024, 7:07 PM IST


ನಟಿ ಇಲಿಯಾನ ಡಿಕ್ರೂಜ್‌ ಅವರ ಹಳೆಯ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. ನಟಿ ಇಲಿಯಾನಾ ತಮ್ಮ ಸಿನಿಮಾ ಜೀವನದ ಉದ್ದಕ್ಕೂ ತಮ್ಮ ಸೊಂಟದಿಂದಲೇ ಪ್ರಖ್ಯಾತರಾಗಿದ್ದರು. ಅವರ ತೆಳ್ಳಗಿನ ಸೊಂಟದ ಬಗ್ಗೆ ಈಗಾಗಲೇ ವಿಶೇಷವಾಗಿ ಹೇಳಬೇಕಾಗಿರೋದೇನೂ ಇಲ್ಲ. ಆಕೆಯ ಸೊಂಟ ಅದೆಷ್ಟು ಪಡ್ಡೆ ಹುಡುಗರ ನಿದ್ದೆ ಹಾಳು ಮಾಡಿದೆ ಅನ್ನೋದನ್ನ ಲೆಕ್ಕವಿಟ್ಟವರಿಲ್ಲ. ಇವರ ಸೊಂಟದ ಬಗ್ಗೆ ಸ್ವತಃ ಇಲಿಯಾನ ಕೂಡ ಒಮ್ಮೆ ಸಿಟ್ಟಾಗಿದ್ದರು. ಗೋವಾ ಬ್ಯೂಟಿ ಇಲಿಯಾನಾ ತೆಲುಗು ಚಿತ್ರರಂಗವನ್ನು ಅತ್ಯಂತ ಹಾಟ್ ನಟಿ. ಹದಿನೈದು ವರ್ಷಗಳಿಗಳೂ ಹೆಚ್ಚು ಕಾಲ ತೆಲುಗು ಚಿತ್ರರಂಗದಲ್ಲಿ ನಾಯಕಿಯಾಗಿ ಮೆರೆದ ನಟಿ. ಕೆಲ ವರ್ಷಗಳಿಂದ ಇಲಿಯಾನಾ ಸಿನಿಮಾದಿಂದ ದೂರ ಉಳಿದಿದ್ದಾರೆ. ಎರಡು ಬಾರಿ ಪ್ರೀತಿಯಲ್ಲಿ ವಿಫಲವಾಗಿದ್ದ ಇಲಿಯಾನಾ ಇತ್ತೀಚೆಗೆ ತಾಯಿಯಾಗಿದ್ದಾರೆ. ಆ ಬಳಿಕ ತಂದೆಯನ್ನು ಎಲ್ಲರಿಗೂ ಪರಿಚಯಿಸಿದ್ದ ನಟಿ ಇಲಿಯಾನ ಈಗ ಮತ್ತೆ ಒಟ್ಟಿಯಾಗಿದ್ದಾರೆ. ತಾವೀಗ ಸಿಂಗಲ್‌ ಪೇರೆಂಟ್‌ ಎಂದು ಇಲಿಯಾನಾ ಬಹಿರಂಗಪಡಿಸಿದ್ದಾರೆ.

ಈ ನಡುವೆ ಇಲಿಯಾನ ನಾಯಕಿಯಾಗಿದ್ದ ದಿನಗಳಲ್ಲಿ ಸಿನಿಮಾ ನಿರ್ದೇಶಕರು ಆಕೆಯ ಮುಖಕ್ಕಿಂತ ಹೆಚ್ಚಾಗಿ ಸೊಂಟವನ್ನು ತೆರೆಯ ಮೇಲೆ ತೋರಿಸುವುದರಲ್ಲಿಯೇ ಇಂಟ್ರಸ್ಟ್‌ ತೋರಿಸಿದ್ದರು. ಅವರ ಮೊದಲ ಸಿನಿಮಾ ದೇವದಾಸು, ಪೋಕಿರಿಯಿಂದ ಹಿಡಿದು ಹೆಚ್ಚಿನ ಸಿನಿಮಾಗಳಲ್ಲಿ ಇಲಿಯಾನ ನಟನೆ ಹೇಗಿದೆ ಅನ್ನೋದಕ್ಕಿಂತ ಆಕೆಯ ಸೊಂಟ ಹೇಗೆದೆ ಅನ್ನೋದನ್ನ ನೋಡಿದವರೇ ಜಾಸ್ತಿ. ಆಕೆಯ ಸೊಂಟ ತೆರೆಯ ಮೇಲೆ ಕಾಣದ ಸಿನಿಮಾಗಳೇ ಇಲ್ಲ ಎನ್ನಬಹುದು. ಅಷ್ಟರ ಮಟ್ಟಿಗೆ ಇಲಿಯಾನಾ ತಮ್ಮ ಸೊಂಟ ಪ್ರದರ್ಶನವನ್ನು ಬೆಳ್ಳಿ ತೆರೆಯಲ್ಲಿ ಮಾಡಿದ್ದರು. ಮೇಲಾಗಿ ಆಗ ಇಲಿಯಾನಾ ಸೊಂಟದ ಬಗ್ಗೆ ದೊಡ್ಡ ಚರ್ಚೆಯೇ ನಡೆದಿತ್ತು. ಅವಳ ತೆಳ್ಳಗಿನ ಸೊಂಟವನ್ನು ವಿವರಿಸುವ ಹಾಡುಗಳು ಬಂದಿದ್ದವು.

ಆದರೆ, ಪ್ರತಿ ಸಿನಿಮಾದಲ್ಲೂ ತನ್ನ ಸೊಂಟವನ್ನು ತೋರಿಸುವುದಕ್ಕೆ ಇಲಿಯಾನಾ ಆಕ್ಷೇಪ ವ್ಯಕ್ತಪಡಿಸಿದ್ದರು. ಇದರಿಂದ ನನಗೆ ಬಹಳ ಬೇಸರವಾಗುತ್ತಿತತು. ನನ್ನ ದೇಹದಲ್ಲಿ ಬೇರೆ ಏನೂ ಪಾರ್ಟ್‌ ಇಲ್ಲ ಎನ್ನುವಂತೆ ಎಲ್ಲಾ ನಿರ್ದೇಶಕರು ಕೂಡ ನನ್ನ ಸೊಂಟವನ್ನು ಚಿತ್ರೀಕರಣ ಮಾಡಲು ಹೆಚ್ಚಿನ ಆಸಕ್ತಿ ತೋರಿಸುತ್ತಿದ್ದರು. ಇದು ನನಗೆ ನೋವುಂಟು ಮಾಡುತ್ತಿತ್ತು. ಕೆಲವೊಮ್ಮೆ ಈ ಸೀನ್‌ಗಳನ್ನು ತೆರೆಯ ಮೇಲೆ ನೋಡುವಾಗ ನನಗೆ ಮುಜುಗರವಾಗುತ್ತಿತ್ತು ಎಂದು ಇಲಿಯಾನಾ ಹೇಳಿದ್ದಾರೆ.

ಈ ಕುರಿತಂತೆ ನಾನು ಕೆಲವು ನಿರ್ದೇಶಕರಿಗೆ ಎಚ್ಚರಿಕೆಯನ್ನೂ ನೀಡಿದ್ದೆ. ಪ್ರತಿ ಬಾರಿಯೂ ನನ್ನ ಸೊಂಟವನ್ನು ಹಾಟ್‌ ಆಗಿ ತೋರಿಸುವ ಪ್ರಯತ್ನ ಮಾಡಬಾರದು ಎಂದಿದ್ದರು. ಇನ್ನೊಂದೆಡೆ, ತೆರೆಯ ಮೇಲೆ ತಮ್ಮ ಸೊಂಟವನ್ನು ವೀಕ್ಷಿಸೋದನ್ನು ನಾನೂ ಇಷ್ಟಪಡುತ್ತೇನೆ ಎಂದಿದ್ದಾರೆ. ಸೊಂಟ ತೆಳ್ಳಗಿರುವುದು ತುಂಬಾ ಚೆನ್ನಾಗಿದೆ ಎಂಬ ಭಾವನೆ ಬರುತ್ತೆ, ಆದರೆ ಅದನ್ನು ತಪ್ಪಾಗಿ ತೋರಿಸಿದಾಗ ಎಡವಟ್ಟಾಗುತ್ತದೆ ಎನ್ನುತ್ತಾರೆ ಇಲಿಯಾನಾ.

Ileana warning directors no other part of my body Why only showing waist san

ಭಾರತದ ಅತಿಹೆಚ್ಚು ಅಂಕುಡೊಂಕಾದ ಮೈಮಾಟವುಳ್ಳ ಟಾಪ್-10 ನಟಿಯರು; ಸ್ಯಾಂಡಲ್‌ವುಡ್‌ ಸ್ಟಾರ್ಸ್ ಯಾರಿದ್ದಾರೆ?

ಅದರೊಂದಿಗೆ ನಾನು ಮನೆಯಲ್ಲಿದ್ದರೆ, ಏನಾದರೂ ಮಾಡುತ್ತಿರುತ್ತೇನೆ ಎಂದು ಹೇಳಿದ್ದಾರೆ. ಮಾಡುವುದು, ಪಾತ್ರೆಗಳನ್ನು ಸ್ವಚ್ಛಗೊಳಿಸುವುದು, ಮನೆಗಳನ್ನು ಗುಡಿಸುವುದು. ಈ ದೇಹಕ್ಕೆ ಸಾಕಷ್ಟು ಕಸರತ್ತು ಬೇಕು, ಇದನ್ನು ಹಲವರು ಪಾಲಿಸಿದರೆ ಒಳ್ಳೆಯದಾಗುತ್ತದೆ ಹಾಗೂ ದೇಹ ತೆಳ್ಳಗಾಗುತ್ತದೆ ಎಂದು ಇಲಿಯಾನಾ ಹೇಳಿದ್ದಾರೆ. ಇಲಿಯಾನಾ ಸಾಕ್ಷಿ ಜೊತೆಗಿನ ತನ್ನ ಹಿಂದಿನ ಚಿಟ್ ಚಾಟ್‌ನಲ್ಲಿ ಇದನ್ನು ಬಹಿರಂಗಪಡಿಸಿದ್ದಾರೆ. ಈಗ ಅದು ವೈರಲ್ ಆಗಲಿದೆ.

ಇಲಿಯಾನಾ ಮಗನಿಗೆ ಕೋಯಾ ಫೀನಿಕ್ಸ್ ಎಂದು ಹೆಸರಿಟ್ಟಿದ್ದೇಕೆ?

Ileana warning directors no other part of my body Why only showing waist san

Latest Videos
Follow Us:
Download App:
  • android
  • ios