ಮೊದಲನೇ ಮಗುವಿಗೆ ತೈಮೂರ್ ಎಂದು ಹೆಸರಿಟ್ಟು ವಿವಾದಕ್ಕೆಡೆಯಾಗಿದ್ದ ಬಾಲಿವುಡ್ ಜೋಡಿ ಇದೀಗ ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ.

ಕರೀನಾ ಮಗುವಿನ ಬಗ್ಗೆ ಬಹಳಷ್ಟು ನಿರೀಕ್ಷೆಗಳಿತ್ತು. ಇನ್ನು ತೈಮೂರ್ ಅಣ್ಣನಾಗಲಿದ್ದಾನೆ ಎಂಬುದು ಇನ್ನೊಂದು ಎಕ್ಸೈಟಿಂಗ್ ವಿಚಾರವಾಗಿತ್ತು.

ತಂದೆ ರಣಧೀರ್‌ ಕಪೂರ್‌ ಬರ್ತ್‌ಡೇ ಪಾರ್ಟಿಯಲ್ಲಿ ಕಂಡ ಕರೀನಾ ಕಪೂರ್‌!

ಎರಡನೇ ಮಗುವಿಗೆ ಏನಂತ ಹೆಸರಿಡಬಹುದು ಎಂದು ಎಲ್ಲರೂ ಯೋಚಿಸುವಾಗ ಮೊದಲ ಮಗುವಿನ ನಾಮಕರಣದಲ್ಲಾದ ಗೊಂದಲಗಳು ನಿಮಗೆ ನೆನಪಿದೆಯಾ..?

ಸೈಫ್ ಅಲಿ ಖಾನ್ ಕರೀನಾ ಜೊತೆ ತನ್ನ ಮೊದಲ ಮಗುವಿಗೆ ಹೆಸರು ಆರಿಸಿದ್ದರು. ಫೈಝ್ ಎಂದು ಹೆಸರಿಡುವುದಾಗಿ ಆಲೋಚಿಸಿದ್ದರು. ಆದರೆ ಕರೀನಾಳ ಯೋಚನೆ ಬೇರೆಯಾಗಿತ್ತು.

ಕರಣ್‌ ಜೋಹರ್‌ ಮಕ್ಕಳ ಬರ್ತ್‌ಡೇ ಪಾರ್ಟಿಯಲ್ಲಿ ಮಕ್ಕಳೊಂದಿಗೆ ಕಂಡ ಸೆಲೆಬ್ರೆಟಿಗಳು!...

ಹೆಚ್ಚು ರೊಮ್ಯಾಂಟಿಕ್ ಮತ್ತು ಕವಿ ಮನಸಿನ ಸೈಫ್ ಮಗನಿಗೆ ಫೈಝ್ ಎಂಬ ಹೆಸರು ಸೂಚಿಸಿದ್ದರು. ಆದರೆ ಕರೀನಾ ಮಾತ್ರ ತೈಮೂರ್ ಎಂಬ ಹೆಸರೇ ಆಗಬೇಕೆಂದು ದೃಢ ನಿಶ್ಚಯಕ್ಕೆ ಬಂದಿದ್ದರು.

ಕರೀನಾಗೆ ತನ್ನ ಮಗ ಫೈಟರ್ ಆಗಬೇಕೆಂದಿತ್ತು. ತೈಮೂರ್ ಎಂದರೆ ಕಬ್ಬಿಣ ಎಂದೂ ಅರ್ಥವಿದೆ. ಹಾಗಾಗಿ ಈ ಹೆಸರು ಆರಿಸಿದ್ದರು ಬೇಬೋ.