ಆಸ್ಕರ್ ವಿಜೇತ 'ದಿ ಎಲಿಫೆಂಟ್ ವಿಸ್ಪರರ್ಸ್' ಬೊಮ್ಮನ್ ಮತ್ತು ಬೆಳ್ಳಿ ದಂಪತಿಯನ್ನು ಎಂ ಎಸ್ ಧೋನಿ ಭೇಟಿಯಾಗಿದ್ದಾರೆ. 

ಖ್ಯಾತ ಕ್ರಿಕೆಟರ್ ಎಂ.ಎಸ್ ಧೋನಿ ಸದ್ಯ ಐಪಿಎಲ್‌ನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಧೋನಿ ಪ್ರತಿಷ್ಠಿತ ಆಸ್ಕರ್ ವಿಜೇತ 'ದಿ ಎಲಿಫೆಂಟ್ ವಿಸ್ಪರರ್ಸ್' ಸಾಕ್ಷ್ಯಚಿತ್ರದ ನಿರ್ದೇಶಕಿ ಕಾರ್ತಿಕಿ ಹಾಗೂ ಬೊಮ್ಮನ್-ಬೆಳ್ಳಿ ದಂಪತಿಯನ್ನು ಚೆನ್ನೈನ ಚೆಪಾಕ್ ಕ್ರೀಡಾಂಗಣ ಭೇಟಿಯಾದರು. ಎಂ ಧೋನಿ ಪ್ರಸಿದ್ಧ ಬೊಮ್ಮನ್ ಮತ್ತು ಬೆಳ್ಳಿ ದಂಪತಿಯನ್ನು ಭೇಟಿಯಾಗಿ ಮಾತುಕತೆ ನಡೆಸಿದ ವಿಡಿಯೋವನ್ನು ಚೆನ್ನೈ ಸೂಪರ್ ಕಿಂಗ್ಸ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಶೇರ್ ಮಾಡಿದೆ. ಈ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆಯ ಸುರಿಮಳೆ ಬರುತ್ತಿದೆ. ಧೋನಿ ಅವರನ್ನು ಹಾಡಿ ಹೊಗಳುತ್ತಿದ್ದಾರೆ. 

ಪ್ರತಿಷ್ಠಿತ ಆಸ್ಕರ್ ಪ್ರಶಸ್ತಿ ಮುಡಿಗೇರಿಸಿಕೊಂಡ ನಿರ್ದೇಶಕ ಕಾರ್ತಿಕಿ, ಎಲಿಫೆಂಟ್ ವಿಸ್ಪರರ್ಸ್‌ನ ದಂಪತಿ ಬೊಮ್ಮನ್ ಮತ್ತು ಬೆಳ್ಳಿಯನ್ನು ಸ್ಟೇಡಿಯಮ್‌ಗೆ ಕರೆದುಕೊಂಡು ಬಂದರು. ಜೊತೆಗೆ ಆಸ್ಕರ್ ಪ್ರಶಸ್ತಿಯನ್ನು ಕೈಯಲ್ಲಿ ಹಿಡಿದ್ದರು. ಸ್ಟೇಡಿಯಮ್‌ಗೆ ಬರುತ್ತಿದ್ದಂತೆ ಎಂ ಎಸ್ ಧೋನಿ ಹಾಗೂ ಮಗಳು ಜೀವಾ ಪ್ರೀತಿಯಿಂದ ಮಾತನಾಡಿಸಿದರು. ಬಳಿಕ ಎಲ್ಲರೂ ಕ್ಯಾಮರಾಗೆ ಪೋಸ್ ನೀಡಿದರು. ಬಳಿಕ ಸಿಎಸ್‌ಕೆ ಜೆರ್ಸಿಯನ್ನು ನೀಡಿದರು. ಜೆರ್ಸಿಯ ಹಿಂಬಾಗದಲ್ಲಿ ಬೊಮ್ಮನ್, ಬೆಳ್ಳಿ ಎಂದು ಬರೆಯಲಾಗಿದೆ.

Scroll to load tweet…

ಆಸ್ಕರ್‌ ಹಿಡಿದು ಪೋಸ್‌ ಕೊಟ್ಟ The Elephant Whisperers ಬೊಮ್ಮನ್‌, ಬೆಳ್ಳಿ: ಕಾರ್ತಿಕಿಗೆ ಭೇಷ್‌ ಎಂದ ನೆಟ್ಟಿಗರು

ದಿ ಎಲೆಫೆಂಟ್ ವಿಸ್ಪರ್ಸ್ ಬಗ್ಗೆ 

ಮುದುಮಲೈ ಹುಲಿ ಸಂರಕ್ಷಿತ ಪ್ರದೇಶದ ಆನೆ ಸಾಕಾಣಿಕೆ ಶಿಬಿರದಲ್ಲಿ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಕೆಲಸ ಮಾಡುತ್ತಿದ್ದಾರೆ. 2017ರಲ್ಲಿ ತೆಂಕಣಿಕೊಟ್ಟೈ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಗಂಡು ಆನೆ ಮರಿಯನ್ನು ಕರೆತಂದು ಸಾಕಿದರು. ಬಳಿಕ 2018ರಲ್ಲಿ ಸತ್ಯಮಂಗಲಂ ಪ್ರದೇಶದಲ್ಲಿ ತಾಯಿಯಿಂದ ಬೇರ್ಪಟ್ಟ ಮತ್ತೊಂದು ಆನೆ ಮರಿಯನ್ನು ಮುದುಮಲೈ ಶಿಬಿರಕ್ಕೆ ಕರೆತಂದು ಸಾಕಿದರು. ಮುದ್ದಾದ ಮರಿಗಳಿಗೆ ರಘು ಮತ್ತು ಬೊಮ್ಮಿ ಎಂದು ಹೆಸರಿಟ್ಟರು. ಎರಡು ಪುಟ್ಟ ಮರಿಗಳನ್ನು ಬೊಮ್ಮನ್ ಮತ್ತು ಬೆಳ್ಳಿ ದಂಪತಿ ತಮ್ಮ ಮಕ್ಕಳಂತೆ ಮುದ್ದಾಗಿ ಬೆಳೆಸಿದರು. ಇವರ ಸ್ಫೂರ್ತಿದಾಯಕ ಜೀವನವನ್ನು ಸೆರೆ ಹಿಡಿದು ಆಸ್ಕರ್ ಅಂಗಳಕ್ಕೆ ಕೊಂಡೊಯ್ದಿದ್ದು ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್. 

'ಎಲಿಫೆಂಟ್ ವಿಸ್ಪರರ್ಸ್' ಬೊಮ್ಮನ್-ಬೆಳ್ಳಿ ದಂಪತಿಗೆ ವಿಮಾನದಲ್ಲಿ ವಿಶೇಷ ಗೌರವ; ವಿಡಿಯೋ ವೈರಲ್

ಆಸ್ಕರ್ ಮುಡಿಗೇರಿಸಿಕೊಂಡ ಬಳಿಕ ನಿರ್ದೇಶಕಿ ಕಾರ್ತಿಕಿ ಗೊನ್ಸಾಲ್ವಿಸ್ ಮತ್ತು ನಿರ್ಮಾಪಕಿ ಗುನೀತ್ ಮೊಂಗಾ ಎಲಿಫೆಂಟ್ ವಿಸ್ಪರರ್ಸ್ ನ ರಿಯಲ್ ಹೀರೋಗಳಾದ ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಕೈಗೆ ಪ್ರಶಸ್ತಿ ಇಟ್ಟು ಸಂಭ್ರಮಿಸಿದ್ರು. ಪ್ರತಿಷ್ಠಿತ ಪ್ರಶಸ್ತಿಯನ್ನು ಹಿಡಿದು ಬೊಮ್ಮನ್ ಮತ್ತು ಬೆಳ್ಳಿ ದಂಪತಿ ಸಂತೋಷ ವ್ಯಕ್ತಪಡಿಸಿದ್ದರು.