ನ್ಯೂ ಇಯರ್ ಪಾರ್ಟಿ ಮುಗಿಸಿ ಹೊರಬರುತ್ತಿದ್ದಂತೆ ಜಾರಿಬಿದ್ದ ನಾಗಿಣಿ ನಟಿ

ಮೌನಿ ರಾಯ್ ಕೂಡ ಹೊಸವರ್ಷದ ಭಾಗವಾಗಿ ನ್ಯೂ ಇಯರ್ ಪಾರ್ಟಿಗೆ ತೆರಳಿ ಎಂಜಾಯ್ ಮಾಡಿದ್ದು, ಪಾರ್ಟಿಯಿಂದ ವಾಪಸ್ ಮರಳುವ ವೇಳೆ ಹಠಾತ್ ಆಗಿ ಬಿದ್ದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

Mouni Roys New Year party video raises eyebrows on social media

2024ಕ್ಕೆ ವಿದಾಯ ಹೇಳಿ  2025ನ್ನು  ಅನೇಕರು ಬಹಳ ಅದ್ಧೂರಿಯಾಗಿ ಬರ ಮಾಡಿಕೊಂಡಿದ್ದಾರೆ. ಪಾರ್ಟಿ ಮಾಡಿ ಕುಡಿದು ತಿಂದು ಎಂಜಾಯ ಮಾಡುವ ಮೂಲಕ ಅನೇಕರು ಹೊಸವರ್ಷವನ್ನು ಆಹ್ವಾನಿಸಿದ್ದಾರೆ. ಜನ ಸಾಮಾನ್ಯರಂತೆ ಸೆಲೆಬ್ರಿಟಿಗಳು ಕೂಡ ಪಬ್ ಪಾರ್ಟಿಗಳಿಗೆ ತೆರಳಿ ಬಿಂದಾಸ್ ಪಾರ್ಟಿ ಮಾಡುವ ಮೂಲಕ ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಅದೇ ರೀತಿ ಬಾಲಿವುಡ್ ನಟಿ ಕೆಜಿಎಫ್ ಬೆಡಗಿ ಮೌನಿ ರಾಯ್ ಕೂಡ ಹೊಸವರ್ಷದ ಭಾಗವಾಗಿ ನ್ಯೂ ಇಯರ್ ಪಾರ್ಟಿಗೆ ತೆರಳಿ ಎಂಜಾಯ್ ಮಾಡಿದ್ದು, ಪಾರ್ಟಿಯಿಂದ ವಾಪಸ್ ಮರಳುವ ವೇಳೆ ಹಠಾತ್ ಆಗಿ ಬಿದ್ದಿದ್ದು, ಅದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಹೌದು ನ್ಯೂ ಇಯರ್ ಪಾರ್ಟಿ ಈ ನಾಗಿಣಿ ಖ್ಯಾತಿಯ ನಟಿಗೆ ಎಂದಿನಂತಿರಲಿಲ್ಲ. ತನ್ನ ಪತಿ ಸೂರಜ್ ನಂಬಿಯಾರ್ ಹಾಗೂ ಬೆಸ್ಟ್‌ ಫ್ರೆಂಡ್‌ ದಿಶಾ ಪಟಾನಿ ಜೊತೆ ಮುಂಬೈನಲ್ಲಿ ಪಾರ್ಟಿಗೆ ಹೋಗಿದ್ದ ಮೌನಿ ವಾಪಸ್ ಬರುವ ವೇಳೆ ಹಠಾತ್ ಆಗಿ ಕೆಳಗೆ ಬಿದ್ದಿದ್ದಾಳೆ.  ವೈರಲ್ ಆದ ವೀಡಿಯೋದಲ್ಲಿ ಮೌನಿರಾಯ್ ಸಡನ್ ಆಗಿ ಕೆಳಗೆ ಬಿದ್ದ ದೃಶ್ಯ ಸೆರೆಯಾಗಿದೆ. ಕೂಡಲೇ ಜೊತೆಗಿದ್ದ ಭದ್ರತಾ ಸಿಬ್ಬಂದಿ ಹಾಗೂ ಇತರರು ಮೌನಿ ನೆರವಿಗೆ ಬಂದಿದ್ದಾರೆ.  ಮೌನಿ ಪತಿ ಸೂರಜ್ ನಂಬಿಯಾರ್ ಪಾರ್ಟಿಯಿಂದ ಮೊದಲು ಹೊರಗೆ ಬಂದಿದ್ದು, ಅಲ್ಲಿ ಸೇರಿದ್ದ ಜನರ ನಡುವೆ ಮುಂದೆ ಹೋಗಲು ದಾರಿ ಮಾಡುತ್ತಿದ್ದಾಗೆ ಹಿಂದಿದ್ದ ಮೌನಿ ಹಠಾತ್ ಕೆಳಗೆ ಬಿದ್ದಿದ್ದಾರೆ. ಕೂಡಲೇ ಪತ್ನಿ ನೆರವಿಗೆ ಬಂದ ಸೂರಜ್ ಆಕೆಯ ಕೈ ಹಿಡಿದು ಕರೆದುಕೊಂಡು ಬಂದು ಕಾರಿಗೆ ಹತ್ತಿಸಿದ್ದಾರೆ. 

ವೀಡಿಯೋ ನೋಡಿದ ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ. ಕೆಲವರು ಕುಡಿದಿದ್ದು ಜಾಸ್ತಿಯಾಗಿದೆ ಎಂದರೆ ಮತ್ತೆ ಕೆಲವರು ನಿಲ್ಲಲಾಗದಷ್ಟು ಏಕೆ ಕುಡಿಯಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ಇಷ್ಟೊಂದು ಕುಡಿಬೇಕಾ ಎಂದು ಕಾಮೆಂಟ್ ಮಡಿದ್ದಾರೆ. ಮತ್ತೆ ಕೆಲವರು ಆಕೆ ಹುಷಾರಾಗಿದ್ದಾಳೆ ತಾನೇ ಎಂದು ಕ್ಷೇಮ ವಿಚಾರಿಸಿದ್ದಾರೆ. ಬಹುಶಃ ನಿನ್ನೆ ರಾತ್ರಿ ಈಕೆ ತುಸು ಹೆಚ್ಚೆ ಕುಡಿದಿರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ನ್ಯೂ ಇಯರ್‌ ರಾತ್ರಿಯ ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಮೌನಿ ರಾಯ್ ಕೆಲಸದ ಬಗ್ಗೆ ಹೇಳುವುದಾದರೆ ಆಕೆ ಕೊನೆಯದಾಗಿ ಸುಲ್ತಾನ್ ಆಫ್ ದೆಹಲಿ ವೆಬ್ ಸಿರೀಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಇದರ ಜೊತೆಗೆ ಅವರು ಕರನ್ ಕುಂದ್ರಾ ಅವರೊಂದಿಗೆ ಇಂಡಿಯನ್ ಅಡಪ್ಟೇಷನ್ ಆಫ್ ಟೆಂಮ್ಟೇಷನ್‌ ಐಲ್ಯಾಂಡ್ ಎಂಬ ಕಾರ್ಯಕ್ರಮವನ್ನು ಹೋಸ್ಟ್ ಮಾಡ್ತಿದ್ದಾರೆ.  ಕಳೆದ ವರ್ಷ  ಮೌನಿ ರಾಯಿ ತಮ್ಮ ಲೇಡಿಸ್ ಫ್ರೆಂಡ್ಸ್‌ಗಳಾದ, ದಿಶಾ ಪಟಾಣಿ, ಕೃಷ್ಣ ಶ್ರಾಫ್ ಜೊತೆ ಥೈಲ್ಯಾಂಡ್ ಪ್ರವಾಸ ಹೋಗಿದ್ದರು. 

 

Latest Videos
Follow Us:
Download App:
  • android
  • ios