Asianet Suvarna News Asianet Suvarna News

Mouni Roy: ಪಾಸ್​ಪೋರ್ಟ್​ ಮರೆತು ಏರ್​ಪೋರ್ಟ್​ಗೆ ಹೋದ KGF ನಟಿ: ಮುಂದೇನಾಯ್ತು?

ಪಾಸ್​ಪೋರ್ಟ್​ ಮರೆತು ಏರ್​ಪೋರ್ಟ್​ಗೆ ಹೋದ ಕೆಜಿಎಫ್ ನಟಿ ಮೌನಿ ರಾಯ್​ ಅವರನ್ನು ಏರ್​ಪೋರ್ಟ್​ ಸಿಬ್ಬಂದಿ ವಾಪಸ್​ ಕಳುಹಿಸಿದ ಘಟನೆ ನಡೆದಿದೆ. 
 

Mouni Roy forgets passport as she reaches airport sent back suc
Author
First Published Jul 12, 2023, 5:16 PM IST

ಮೌನಿ ರಾಯ್ ರಾಯ್​ (Mouni Roy) ಖ್ಯಾತ  ಕಿರುತೆರೆ ನಟಿ ಹಾಗೂ ಬಾಲಿವುಡ್​ ತಾರೆ ಕೂಡ.  ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮೌನಿ ಹೆಚ್ಚಾಗಿ ಫೇಮಸ್​ ಆಗಿರುವುದು ಹಿಂದಿ  ಧಾರಾವಾಹಿಗಳ ಮೂಲಕ.  ಪಶ್ಚಿಮ ಬಂಗಾಳದ ಮೂಲದ ಮೌನಿ 2007 ರ ಹಿಂದಿ ಸೀರಿಯಲ್ `ಕ್ಯೂಂಕಿ ಸಾಸ್ ಭಿ ಕಬಿ ಬಹು ಥಿ' ಮೂಲಕ ನಟನೆ ಆರಂಭಿಸಿದವರು. ಆದರೆ ಇವರಿಗೆ ಮೊದಲ ಖ್ಯಾತಿ ಕೊಟ್ಟಿದ್ದು ದೇವೋಂಕೆ ದೇವ ಮಹಾದೇವ ಸೀರಿಯಲ್​ನ ಪೌರಾಣಿಕ ಪಾತ್ರದಲ್ಲಿ. ಇದರಲ್ಲಿ ಈಕೆ  ಸತಿ ಪಾತ್ರ ವಹಿಸಿದ್ದರು. ನಂತರ ನಾಗಿಣಿ ಧಾರಾವಾಹಿ ಮೂಲಕ ಮತ್ತಷ್ಟು ಖ್ಯಾತಿ ಪಡೆದರು. 2018 ರಲ್ಲಿ ತೆರೆಕಂಡ ಅಕ್ಷಯ ಕುಮಾರ್ ಅಭಿನಯದ `ಗೋಲ್ಡ್' ಚಿತ್ರದ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದರು ಮೌನಿ.  ನಂತರ ಕನ್ನಡದ ಕೆಜಿಎಫ್ ಚಿತ್ರದಲ್ಲಿ ಯಶ್ ಜೊತೆ ಒಂದು ಗೀತೆಯಲ್ಲಿ ಕಾಣಿಸಿಕೊಂಡರು. 2019 ರಲ್ಲಿ ತೆರೆಕಂಡ ಜಾನ್ ಅಬ್ರಾಹಂ ನಟನೆಯ `ರಾ' ಚಿತ್ರದಲ್ಲೂ ಕೂಡ ಕಾಣಿಸಿಕೊಂಡಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾದ ‘ಗಲಿ ಗಲಿ ಮೇ..’ ಹಾಡಿನಲ್ಲಿ ಯಶ್​ ಜೊತೆ ಸಕತ್​ ಸ್ಟೆಪ್​ ಹಾಕಿದ್ದಾರೆ. ನಂತರ ಕಳೆದ ಸೆಪ್ಟೆಂಬರ್​ನಲ್ಲಿ ಬಿಡುಗಡೆಗೊಂಡ  'ಬ್ರಹ್ಮಾಸ್ತ್ರ' ಚಿತ್ರದ ಜುನೂನ್ ಪಾತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರದಲ್ಲಿ ಮೌನಿ ಚಿತ್ರದ ಮುಖ್ಯ ಕಲಾವಿದರಾದ ರಣಬೀರ್ ಕಪೂರ್ ಹಾಗೂ ಅಲಿಯಾ ಭಟ್ ಗಿಂತ ಉತ್ತಮ ಪಾತ್ರ ನಿರ್ವಹಿಸಿದ್ದಾರೆ ಎಂಬ ಮಾತುಗಳು ಕೂಡ ಕೇಳಿಬಂದವು. 

ಇದೀಗ ನಟಿ ಮೌನಿ, ಸಿನಿಮಾ ವಿಷಯಕ್ಕೆ ಹೊರತಾಗಿ ಸಕತ್​ ಸುದ್ದಿಯಾಗುತ್ತಿದ್ದಾರೆ. ಅದೇನಪ್ಪಾ ಸುದ್ದಿ ಎಂದರೆ, ಈಕೆ ವಿಮಾನದಲ್ಲಿ ಪ್ರಯಾಣಿಸಲು ಏರ್​ಪೋರ್ಟ್​ಗೆ ಹೋಗಿದ್ದಾಗ ಪಾಸ್​ಪೋರ್ಟ್​ ಅನ್ನೇ ಮರೆತು ಹೋಗಿದ್ದಾರೆ! ಹೌದು. ಆಗಾಗ್ಗೆ ವಿದೇಶಗಳಿಗೆ ಹೋಗುತ್ತಿರುವ ನಟಿ ಮೌನಿ ರಾಯ್​  ಮುಂಬೈ ವಿಮಾನ ನಿಲ್ದಾಣದಲ್ಲಿ (Mumbai Airport) ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದಾರೆ. ಆದರೆ ಈ ಸಮಯದಲ್ಲಿಯೇ ಅವರು ಪಾಸ್​ಪೋರ್ಟ್​ ತರಲು ಮರೆತಿರುವ ವಿಷಯ ತಿಳಿದಿದೆ! ರೂಲ್ಸ್​ ಎಲ್ಲರಿಗೂ ಒಂದೇ. ಅವರು ನಟಿಯಾದರೇನು, ಯಾರಾದರೇನು? ಮೌನಿ ರಾಯ್​ ಅವರಿಗೆ  ಅಲ್ಲಿದ್ದ ಏರ್​ಪೋರ್ಟ್​ ಸಿಬ್ಬಂದಿ ಒಳಗೆ ಹೋಗಲು ಅವಕಾಶ ನೀಡಲಿಲ್ಲ. ಇದರ ವಿಡಿಯೋ ಸಕತ್​ ವೈರಲ್​ ಆಗುತ್ತಿದೆ. ವಿಡಿಯೋದಲ್ಲಿ ಒಳಗೆ ಹೋಗುವ ಸಮಯದಲ್ಲಿ ಮೌನಿ ರಾಯ್​ ಹಾಗೂ ಅವರ ಸಹೋದ್ಯೋಗಿ ಪಾಸ್​ಪೋರ್ಟ್​ ಅನ್ನು ಬ್ಯಾಗ್​ನಲ್ಲಿ ತಡಕಾಡುವುದನ್ನು ನೋಡಬಹುದು. ನಂತರ ಎಷ್ಟು ಹುಡುಕಾಡಿದರೂ ಪಾಸ್​ಪೋರ್ಟ್​ ಸಿಗಲಿಲ್ಲ. ಅಷ್ಟೊತ್ತಿಗಾಗಲೇ ಕ್ಯಾಮೆರಾ ಕಣ್ಣು ಅವರ ಮೇಲೆ ಇತ್ತು. ಹಿಂದೆ ತಿರುಗಿದ ನಟಿ ಮೌನಿ, ಆಯ್ತು ಬಿಡಿ ಎಂದರು. ಕೊನೆಗೆ ಪಾಸ್​ಪೋರ್ಟ್​ ಮರೆತು ಬಂದೆ ಎಂದರು.

60 ವರ್ಷದ ಆಶಿಷ್​ ವಿದ್ಯಾರ್ಥಿ ಹನಿಮೂನ್​ ಫೋಟೋ ವೈರಲ್​: ಫ್ಯಾನ್ಸ್​ ಏನ್​ ಹೇಳಿದ್ರು?

  ಪಾಪರಾಜಿಗಳ ಕಡೆಗೆ ಕೈ ಬೀಸಿ, ನಂತರ ಅವರು ವಿಮಾನ ನಿಲ್ದಾಣ ಪ್ರವೇಶಿಸಲು ಮುಂದಾದ ಸಮಯದಲ್ಲಿಯೇ ಈ ದುರಂತ ನಡೆದಿದೆ. ಗೇಟ್​ನಲ್ಲಿ  ಅಲ್ಲಿದ್ದ ವಿಮಾನ ನಿಲ್ದಾಣ ಸಿಬ್ಬಂದಿ  ಪಾಸ್​ಪೋರ್ಟ್​ ತೋರಿಸುವಂತೆ ಹೇಳಿದ್ದಾರೆ.  ಪಾಸ್​ಪೋರ್ಟ್​ (Passport) ತಂದಿರುವ ಸಂಪೂರ್ಣ ಕಾನ್​ಫಿಡೆನ್ಸ್​ನಿಂದ ನಟಿ ಮತ್ತು ಆಕೆಯ ಸಹೊದ್ಯೋಗಿ ಬ್ಯಾಗ್​ ಪೂರ್ತಿ ಹುಡುಕಾಡಿದ್ದಾರೆ. ಆದರೆ ಅವರಿಗೆ ಅದು ಸಿಗಲಿಲ್ಲ. ವಿಡಿಯೋದಲ್ಲಿ ಇಷ್ಟು ತೋರಿಸಲಾಗಿದೆ. ಆದರೆ ಕೊನೆಗೆ ಅವರಿಗೆ  ವಿಮಾನ ನಿಲ್ದಾಣದಲ್ಲಿ ಪ್ರವೇಶ ನಿರ್ಬಂಧಿಸಲಾಗಿದ್ದು,  ಮೌನಿ ರಾಯ್​ ವಾಪಸ್​ ಮನೆಗೆ ಹೋಗಿರುವುದಾಗಿ ವರದಿಯಾಗಿದೆ. ಸೆಲೆಬ್ರಿಟಿಗಳು ಎಲ್ಲಿಯೇ ಹೋದರೂ ಅವರ ಹಿಂದೆ ಪಾಪರಾಜಿಗಳು ಕ್ಯಾಮೆರಾ ಹಿಡಿದು ಸಿದ್ಧರಾಗಿದ್ದರೂ, ಪಾಪ ಇಲ್ಲಿ ಮೌನಿ ರಾಯ್​ ಅವರೇ ಕ್ಯಾಮೆರಾಗಳನ್ನು ಕರೆದುಕೊಂಡು ಹೋಗಿ  ಸಿಕ್ಕಿಹಾಕಿಕೊಂಡರು ಎಂದು ಟ್ರೋಲ್​  ಮಾಡುತ್ತಿದ್ದಾರೆ. 

 ಇನ್ನು ಕೆಲವರು ವಿಮಾನ ನಿಲ್ದಾಣಕ್ಕೆ ಹೋಗುವಾಗ ಪಾಸ್​ಪೋರ್ಟ್​ ಮರೆತರೆ ವ್ಹಾರೆವ್ಹಾ ಎಂದಿದ್ದರೆ, ಮೇಕಪ್​ ಮಾತ್ರ ಮರೆಯಲ್ಲ ಅಲ್ವಾ? ಎಂದು ಕೆಲವರು ಕಾಲೆಳೆದಿದ್ದಾರೆ. ಮೌನಿ ರಾಯ್​ ಗೌನ್​ ಧರಿಸಿ ಬಂದಿದ್ದಕ್ಕೆ ಟ್ರೋಲ್​ಮಾಡಿರುವ ನೆಟ್ಟಿಗನೊಬ್ಬ ಪಾಪ ಗಡಿಬಿಡಿಯಲ್ಲಿ ನೈಟ್​ಸೂಟ್​ (Night suit) ಹಾಕಿ ಬಂದಿದ್ದಾರೆ, ಪಾಸ್​ಪೋರ್ಟ್​ ತರಲು ಮರೆತಿರಬೇಕು ಎಂದಿದ್ದಾರೆ. ಈಕೆಯ ಕೆಲ ಫ್ಯಾನ್ಸ್​ ಮಾತ್ರ ಡಿಜಿಟಲ್​ ಯುಗವಿದು. ಪಾಸ್​ಪೋರ್ಟ್​ ಮೊಬೈಲ್​ನಲ್ಲಿ ಇದ್ದರೆ ತೋರಿಸಬಹುದಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ. 

ಈ ವಯಸ್ಸಲ್ಲಿ ಒಂಟಿಯಾಗಿ ಬಿಟ್ಟರಾ ಹೇಮಾ ಮಾಲಿನಿ? ಧರ್ಮೇಂದ್ರ ಜೊತೆ ಮುನಿಸಿಗೆ ಕಾರಣವೇನು?

Follow Us:
Download App:
  • android
  • ios