ಈ ವಯಸ್ಸಲ್ಲಿ ಒಂಟಿಯಾಗಿ ಬಿಟ್ಟರಾ ಹೇಮಾ ಮಾಲಿನಿ? ಧರ್ಮೇಂದ್ರ ಜೊತೆ ಮುನಿಸಿಗೆ ಕಾರಣವೇನು?
ಹೇಮಮಾಲಿನಿ ಧರ್ಮೇಂದ್ರ ಜೋಡಿ ಬಗ್ಗೆ ಬಾಲಿವುಡ್ ದಿನಕ್ಕೊಂದು ಕಥೆ ಹೇಳುತ್ತೆ. ಆದರೆ ರಿಯಲ್‌ನಲ್ಲಿ ಬೇರೆಯದೇ ಕಥೆ ಇದೆ. ಈ ಜೋಡಿ ಜೊತೆಯಾಗಿ ಬದುಕುತ್ತಿಲ್ಲ. ಹೇಮ ಮಾಲಿನಿ ಈ ವಯಸ್ಸಲ್ಲಿ ಒಂಟಿಯಾಗಿದ್ದಾರೆ.
'ಯಾರಿಗೂ ಈ ರೀತಿ ಅಂದರೆ ಒಂಟಿಯಾಗಿ ಸಂಗಾತಿಯಿಂದ ಬೇರ್ಪಟ್ಟು ಇರಬೇಕು ಅಂತ ಇಷ್ಟ ಇರೋದಿಲ್ಲ. ಆದರೆ ಏನ್ಮಾಡೋದು, ಯಾವುದೂ ನಮ್ಮ ಕೈಯಲ್ಲಿಲ್ಲವಲ್ಲ. ಹೀಗೆ ಆಗತ್ತೆ. ಹೀಗೆ ಆದಾಗ ನೀವು ಒಪ್ಪಿಕೊಳ್ಳಬೇಕಾಗುತ್ತದೆ. ಯಾರೂ ಕೂಡ ಈ ರೀತಿ ಬದುಕಬೇಕು ಅಂತ ಅಂದುಕೊಳ್ಳಲ್ಲ. ಪ್ರತಿ ಹೆಣ್ಣಿಗೂ ಕೂಡ ಗಂಡ, ಮಕ್ಕಳು, ತನ್ನ ಸಂಸಾರದಲ್ಲಿ ಚೆನ್ನಾಗಿರಬೇಕು ಅಂತಿರುತ್ತದೆ. ಏನ್ಮಾಡೋದು ನಮ್ ಹಣೇಬರ..'
ಹೀಗಂದಿದ್ದು ಬೇರ್ಯಾರೂ ಅಲ್ಲ. ಅಪೂರ್ವ ಸುಂದರಿ ಅಂತಲೇ ಫೇಮಸ್ ಆಗಿದ್ದ ಹೇಮಾ ಮಾಲಿನಿ. ಧರ್ಮೇಂದ್ರ ಮತ್ತು ಹೇಮಮಾಲಿನಿ ರಿಲೇಶನ್ ಶಿಪ್ ಬಗ್ಗೆ ಬಾಲಿವುಡ್‌ನಲ್ಲಿ ಇರೋ ಕಥೆಗಳು ಒಂದೆರಡಲ್ಲ. ಹಾಗೆ ನೋಡಿದರೆ ಹೇಮಾ ಮಾಲಿನಿ ಹಾಗೂ ಧರ್ಮೇಂದ್ರ ಪ್ರೀತಿ, ಮದುವೆಯಾಗಿದ್ದೆಲ್ಲ ಸಹಜವಾಗಿರಲಿಲ್ಲ. ಹೇಮಾ ಮಾಲಿನಿ ಅವರನ್ನು ಮದುವೆಯಾಗುವ ಮುನ್ನವೇ ಧರ್ಮೇಂದ್ರ ಅವರು ಪ್ರಕಾಶ್ ಕೌರ್ ಜೊತೆ ಮದುವೆಯಾಗಿ ನಾಲ್ಕು ಮಕ್ಕಳನ್ನು ಹೊಂದಿದ್ದರು. ಆಮೇಲೆ ಹೇಮಾ ಮಾಲಿನಿಯನ್ನು ಧರ್ಮೇಂದ್ರ ವಿವಾಹ ಆಗ್ತೀನಿ ಅಂದಾಗ ಹೇಮಮಾಲಿನಿ ತಾಯಿ ತೀವ್ರವಾಗಿ ವಿರೋಧಿಸಿದ್ದರು. ತಾಯಿಯ ವಿರೋಧದ ನಡುವೆಯೂ ಹೇಮಾ ಮಾಲಿನಿ ಅವರು ಧರ್ಮೇಂದ್ರರನ್ನು ಮದುವೆಯಾಗಿದ್ದರು. ಈಗ ತನ್ನ ಅಂದಿನ ಆ ನಿರ್ಧಾರ ಹೇಮಮಾಲಿನಿಯನ್ನು ಚಿಂತಿಸುವ ಹಾಗೆ ಮಾಡುತ್ತಿದೆ. ಈ ಇಳಿ ವಯಸ್ಸಲ್ಲಿ ಪತಿ ಜೊತೆ ಹೇಮಾ ಮಾಲಿನಿ ವಾಸ ಮಾಡುತ್ತಿಲ್ಲ. ಈಗ ಈ ಬಗ್ಗೆ ಹೇಮಮಾಲಿನಿ ಅವರು ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದಾರೆ.
60 ವರ್ಷದ ಆಶಿಷ್ ವಿದ್ಯಾರ್ಥಿ ಹನಿಮೂನ್ ಫೋಟೋ ವೈರಲ್: ಫ್ಯಾನ್ಸ್ ಏನ್ ಹೇಳಿದ್ರು?
ಅದಾಗಲೇ ಮದುವೆಯಾಗಿ 4 ಮಕ್ಕಳನ್ನು ಪಡೆದಿದ್ದ ಧರ್ಮೇಂದ್ರ ಜೊತೆ ಹೇಮಾ ಮಾಲಿನಿ 1980ರಲ್ಲಿ ಮದುವೆಯಾಗಿದ್ದರು. ಮೊದಲ ಪತ್ನಿಗೆ ವಿಚ್ಛೇದನ ಕೊಡದೆ ಧರ್ಮೇಂದ್ರ ಅವರು ಹೇಮಾ ಮಾಲಿನಿ ಕೈಹಿಡಿದಿದ್ದರು. ನಾಲ್ಕು ಮಕ್ಕಳನ್ನು ಹೊಂದಿರುವ ಧರ್ಮೇಂದ್ರನಿಗೆ ಮಗಳನ್ನು ಮದುವೆ ಮಾಡೋದು ಹೇಮಾ ಮಾಲಿನಿ ತಾಯಿಗೆ ಬಿಲ್‌ಕುಲ್ ಇಷ್ಟ ಇರಲಿಲ್ಲ. ಆದರೆ ಮದುವೆ ನಡೆದಿತ್ತು. ಒಂದಿಷ್ಟು ಸಮಯ ಲೈಫು ಚೆನ್ನಾಗೇ ನಡೀತು. ಆದರೆ ಧರ್ಮೇಂದ್ರ ಸಂಕುಚಿತ ಮನಸ್ಥಿತಿ ಬಗ್ಗೆ ಹೇಮ ಮಾಲಿನಿಗೆ ಒಳಗಿಂದೊಳಗೇ ಅಸಹನೆ ಇದ್ದಿರಬೇಕು. ಕೆಲವು ದಿನಗಳ ಕೆಳಗೆ ತಾನು ಮೊದಲ ಮಗುವಿನ ತಾಯಿಯಾದಾಗ ಆ ವಿಚಾರವನ್ನು ಬಚ್ಚಿಡಲು ಧರ್ಮೇಂದ್ರ ಹೇಳಿದ್ದರು ಎಂಬ ಮಾತನ್ನು ಹೇಮಮಾಲಿನಿ ಬಹಿರಂಗ ಪಡಿಸಿದ್ದರು.
ಸದ್ಯಕ್ಕೀಗ ಹೇಮ ಮಾಲಿನಿ ಒಂಟಿ. ಮಕ್ಕಳು ಅವರ ಸಂಸಾರದ ಜೊತೆಗೆ ಬ್ಯುಸಿ ಆಗಿದ್ದಾರೆ. ಹೇಮ ಮಾಲಿನಿ ಬ್ಯುಸಿ ಆಗಿದ್ದರೂ ಈ ವಯಸ್ಸಲ್ಲಿ ಮಕ್ಕಳು, ಮೊಮ್ಮಕ್ಕಳ ಜೊತೆ ಹಾಯಾಗಿರಬೇಕು ಅನ್ನೋದನ್ನು ಹಂಬಲಿಸುತ್ತಿದ್ದಾರೆ.
ಇಂಗ್ಲಿಷ್ ಬಗ್ಗೆ ಕಾಮೆಂಟ್ ಮಾಡಿದ್ದ ಸೋನಮ್ ಕಪೂರ್ ವಿರುದ್ಧ ಕಂಗನಾ ಕಿಡಿ
' ನನ್ನ ಕೆಲಸಗಳಲ್ಲಿ ಕಳೆದುಹೋಗಿ ನಾನು ಖುಷಿಯಾಗಿದ್ದೇನೆ. ನನಗೆ ಇಬ್ಬರು ಮಕ್ಕಳಿವೆ, ಅವರನ್ನು ಚೆನ್ನಾಗಿ ಬೆಳೆಸಿದ್ದೇನೆ. ಆ ಸಮಯದಲ್ಲಿ ಧರ್ಮೇಂದ್ರ ಜೊತೆಗೆ ಇದ್ದರು. ಸರಿಯಾದ ಸಮಯಕ್ಕೆ ಮಕ್ಕಳಿಗೆ ಮದುವೆ ಮಾಡಬೇಕು ಅಂತ ಅವರು ಹೇಳುತ್ತಿದ್ದರು. ಆಗ ನಾನು ಆಗತ್ತೆ ಎನ್ನುತ್ತಿದ್ದೆ. ಮಕ್ಕಳ ಮದುವೆ ಆಯ್ತು. ಅವರೂ ಖುಷಿ ಪಟ್ಟರು. ಈಗ ಅವರು ಜೊತೆಗಿಲ್ಲ ಅನ್ನೋ ಕೊರತೆ ಹೊರತಾಗಿ ನಾನು ಚೆನ್ನಾಗಿಯೇ ಇದ್ದೇನೆ' ಅನ್ನೋ ಹೇಮಮಾಲಿನಿ ಮಾತು ಅವರ ಹಾರ್ಟಿಂದಲೇ ಬಂದಿದ್ದಾ ಅಂತ ಅಭಿಮಾನಿಗಳು ಕೇಳ್ತಿದ್ದಾರೆ. ಧರ್ಮೇಂದ್ರ ಈಗ ಮೊದಲ ಹೆಂಡತಿ ಹಾಗೂ ಮಕ್ಕಳ ಜೊತೆಗಿದ್ದಾರೆ. ವಯಸ್ಸು 74 ಆದರೂ ಸೌಂದರ್ಯ ಕಾಯ್ದುಕೊಂಡಿರುವ ಹೇಮಮಾಲಿನಿ ಆತ್ಮವಿಶ್ವಾಸ ಕಳೆದುಕೊಳ್ಳದೇ ಸ್ವಾಭಿಮಾನದಿಂದ ಬದುಕುತ್ತಿದ್ದಾರೆ ಅನ್ನೋದೇ ಖುಷಿ.