ಸದ್ಗುರುಗಳನ್ನು ಭೇಟಿಯಾದ ಕೆಜಿಎಫ್ ನಟಿ ಮೌನಿ ರಾಯ್ | ಸದ್ಗುರು ಜೊತೆ ಫೋಟೋ ಶೇರ್ ಮಾಡಿ ನಟಿ ಹೇಳಿದ್ದಿಷ್ಟು

ಬಾಲಿವುಡ್ ನಟಿ ಮೌನಿ ರಾಯ್ ತಮ್ಮ ಬ್ಯುಸಿ ಶೆಡ್ಯೂಲ್‌ನಿಂದ ಸಮಯ ಮಾಡಿಕೊಂಡಿದ್ದಾರೆ. ಸದ್ಗುರು ಅವರ ಇಶಾ ಯೋಗ ಕೇಂದ್ರಕ್ಕೆ ಭೇಟಿ ಕೊಟ್ಟಿದ್ದಾರೆ. ಕೊಯಮತ್ತೂರು ಮೂಲದ ಆಧ್ಯಾತ್ಮಿಕ ಸ್ವಾಸ್ಥ್ಯ ಕೇಂದ್ರದಲ್ಲಿ ನಟಿ ತನ್ನ ಭೇಟಿಯ ಪ್ರತಿ ಕ್ಷಣವನ್ನು ಆನಂದಿಸುತ್ತಿದ್ದಾರೆಂದು ತೋರುತ್ತದೆ. ಇನ್ಸ್ಟಾಗ್ರಾಮ್ನಲ್ಲಿ ಫೋಟೋಗಳನ್ನು ಶೆರ್ ಮಾಡಿದ್ದಾರೆ.

ಭಾನುವಾರ ಮಾರ್ಚ್ 28ರಂದು ನಟಿ ಶ್ರೀ ಸದ್ಗುರು ಜೊತೆಗಿರೋ ಫೋಟೋ ಶೇರ್ ಮಾಡಿದ್ದಾರೆ. ನನಗೆ ಸಾಮಾನ್ಯವಾಗಿ ಎಲ್ಲ ಸಮಯದಲ್ಲೂ ಮಾತನಾಡಲು ಬಹಳಷ್ಟು ಸಂಗತಿಗಳಿರುತ್ತವೆ. ಆದರೆ ನಿನ್ನೆಯಿಂದ ನಾನು ಸದ್ಗುರುಗಳನ್ನು ಭೇಟಿಯಾದಾಗಿನಿಂದ, ನಾನು ಶಾಂತವಾಗಿದ್ದೇನೆ ಎಂದಿದ್ದಾರೆ.

ಅಪ್ಪನ ಶರ್ಟ್‌ ಧರಿಸಿ 6 ವರ್ಷದ ಬಾಲೆಯ ಸೂಪರ್ ಡ್ಯಾನ್ಸ್: ದೃಷ್ಟಿ ಬೊಟ್ಟಿಟ್ಟ ಶಿಲ್ಪಾ ಶೆಟ್ಟಿ

ಹೆಚ್ಚು ಮಾತನಾಡಬಾರದು ಎಂದೆನಿಸುತ್ತಿದೆ. ನಾನು ಏನು ಬರೆಯಬೇಕು ಅಥವಾ ಹೇಳಬೇಕು ಎಂದು ತಿಳಿಯುತ್ತಿಲ್ಲ. ಅವರ ಉಪಸ್ಥಿತಿಯಲ್ಲಿ ಉಸಿರಾಡುವುವುದೇ ವಿಶೇಷ. ನಾನು ನಿಮ್ಮನ್ನು ಪ್ರೀತಿಸುತ್ತೇನೆ ಸದ್ಗುರು. ನೀವು ಭೂಮಿಯಲ್ಲಿ ನಡೆಯುವ ಸಮಯದಲ್ಲಿ ಈ ಜಗತ್ತಿನಲ್ಲಿ ವಾಸಿಸಲು ನಾವೆಲ್ಲರೂ ಅದೃಷ್ಟವಂತರು ಕ್ಯಾಪ್ಶನ್ ಕೊಟ್ಟಿದ್ದಾರೆ.

View post on Instagram