ತಾಯಿಯೇ ತುನಿಷಾ ಹತ್ಯೆಗೆ ಯತ್ನಿಸಿದ್ದಳು: ಶೀಜಾನ್ ಕುಟುಂಬ ಆರೋಪ

ನಟಿ ತುನಿಷಾ ಸಾವಿನ ಪ್ರಕರಣದಲ್ಲಿ ಶೀಜಾನ್‌ ಖಾನ್‌ನನ್ನು ತಪ್ಪಾಗಿ ಸಿಲುಕಿಸಲಾಗುತ್ತಿದೆ ಎಂದು ಶೀಜಾನ್‌ ಕುಟುಂಬ ಸೋಮವಾರ ಆರೋಪಿಸಿದೆ.

Mother tried to kill Actress Tunisha: Sheejan family alleges akb

ಮುಂಬೈ: ನಟಿ ತುನಿಷಾ ಸಾವಿನ ಪ್ರಕರಣದಲ್ಲಿ ಶೀಜಾನ್‌ ಖಾನ್‌ನನ್ನು ತಪ್ಪಾಗಿ ಸಿಲುಕಿಸಲಾಗುತ್ತಿದೆ ಎಂದು ಶೀಜಾನ್‌ ಕುಟುಂಬ ಸೋಮವಾರ ಆರೋಪಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಶೀಜಾನ್‌ ತಾಯಿ ಹಾಗೂ ಇಬ್ಬರು ಸಹೋದರಿಯರು ತುನಿಷಾ ನಮ್ಮ ಕುಟುಂಬದ ಸದಸ್ಯೆ ಇದ್ದಂತೆ. ಆಕೆ ತನ್ನ ಜೀವನವನ್ನು ಆನಂದಿಸಲು ಬಯಸುತ್ತಿದ್ದಳು. ಆದರೆ ಆಕೆಯ ತಾಯಿ ಅವಳಿಗೆ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ತುನಿಷಾ ತಾಯಿ ವನಿತಾ ವಿರುದ್ಧ ಆರೋಪಿಸಿದ್ದಾರೆ.

ಅಲ್ಲದೇ ನಾವು ಯಾರನ್ನೂ ಒತ್ತಾಯಿಸಿಲ್ಲ. ತುನಿಷಾ (Tunisha) ಹಾಗೂ ತಾಯಿ ಅಗಾಗ ನಮ್ಮ ಮನೆಗೆ ಬರುತ್ತಿದ್ದರು. ಜ.4ರಂದು ತುನಿಷಾ ಹುಟ್ಟುಹಬ್ಬಕ್ಕೆ (Birthday) ನಾವೂ ಸರ್‌ಪ್ರೈಸ್‌ ತಯಾರು ಮಾಡುತ್ತಿದ್ದೆವು ಎಂಬುದೂ ತುನಿಷಾ ತಾಯಿಗೂ ಗೊತ್ತಿದೆ ಎಂದು ಸಹೋದರಿ ನಾಜ್‌ ಹೇಳಿದ್ದಾರೆ. ಆದರೆ ಕಳೆದ ವಾರ ನನ್ನ ಮಗಳ ಸಾವು ಕೊಲೆಯಾಗಿರಬಹುದು. ಶೀಜಾನ್‌ ಹಾಗೂ ಆತನ ಕುಟುಂಬ ನನ್ನ ಮಗಳನ್ನು ಇಸ್ಲಾಂಗೆ ಮತಾಂತರವಾಗುವಂತೆ (convert to Islam) ಒತ್ತಾಯಿಸುತ್ತಿದ್ದರು ಎಂದು ತುನಿಷಾ ತಾಯಿ ಹೇಳಿದ್ದರು. ತುನೀಷಾಳನ್ನು ಚಿಕ್ಕ ಪ್ರಾಯದಿಂದಲೂ ಆಕೆಯ ತಾಯಿ ಹಾಗೂ ಚಿಕ್ಕಪ್ಪ ಸಂಜೀವ್ ಕೌಶಲ್ (Sanjeev Kaushal) ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದರು. ಒಮ್ಮೆ ಜಗಳ ತಾರಕಕ್ಕೇರಿ ತುನಿಷಾಳನ್ನು ಲ್ಯಾಂಡ್‌ ಫೋನ್‌ ವೈರ್ ಕಿತ್ತುಕೊಂಡು ಕೊರಳಿಗೆ ಬಿಗಿಯಲು ತಾಯಿ ಯತ್ನಿಸಿದ್ದಳು ಎಂದು ಶೀಜಾನ್ ಕುಟುಂಬದವರು ಆರೋಪಿಸಿದರು. ಅಲ್ಲದೇ ಶೀಜಾನ್‌ಗೆ ಬೇರೆ ಪ್ರೇಯಸಿ ಇರಲಿಲ್ಲ. ತುನಿಷಾ ತಾಯಿ ಹೇಳಿದ್ದೆಲ್ಲಾ ಸುಳ್ಳು ಎಂದು ಶೀಜಾನ್ ಸಹೋದರಿ ಆರೋಪಿಸಿದ್ದಾರೆ.

ಡಿ.24 ರಂದು ಶೂಟಿಂಗ್‌ ಸೆಟ್‌ನಲ್ಲೇ ನೇಣು ಬಿಗಿದುಕೊಂಡು ನಟಿ ತುನಿಷಾ (20)  ಆತ್ಮಹತ್ಯೆ ಮಾಡಿಕೊಂಡಿದ್ದಳು ಬಳಿಕ ಆಕೆಯ ಪ್ರಿಯಕರ ಹಾಗೂ ಸಹನಟ ಶೀಜಾನ್‌ ಖಾನ್‌ನನ್ನು ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೊಪದ ಮೇಲೆ ಪೊಲೀಸರು ಬಂಧಿಸಿದ್ದರು. ಶೀಜಾನ್‌ ಫೋನ್‌ ರಿಟ್ರೈವ್‌ ಮಾಡಿದಾಗ ಆತ ಇನ್ನೋರ್ವ ಪ್ರೇಯಸಿಯನ್ನು ಹೊಂದಿದ್ದು ಬೆಳಕಿಗೆ ಬಂದಿತ್ತು.

ನಟಿ ತುನೀಶಾ ಶರ್ಮಾಗೆ ಹಿಜಾಬ್ ಧರಿಸುವಂತೆ ಒತ್ತಾಯ..? ಶೀಜಾನ್ ಕುಟುಂಬ ಹೇಳಿದ್ದೀಗೆ..

ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ ತುನಿಷಾ ಶರ್ಮಾ ಜೀವನದ 7 ಅಚ್ಚರಿ ವಿಚಾರಗಳು...

Latest Videos
Follow Us:
Download App:
  • android
  • ios