ನಟಿ ತುನೀಶಾ ಶರ್ಮಾಗೆ ಹಿಜಾಬ್ ಧರಿಸುವಂತೆ ಒತ್ತಾಯ..? ಶೀಜಾನ್ ಕುಟುಂಬ ಹೇಳಿದ್ದೀಗೆ..
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶೀಜಾನ್ ಖಾನ್ ಅವರ ತಾಯಿ ಮತ್ತು ಇಬ್ಬರು ಸಹೋದರಿಯರು, ತುನಿಶಾ ಶರ್ಮಾ ತಮ್ಮ ಕುಟುಂಬದ ಸದಸ್ಯರಂತೆ ಇದ್ದರು ಎಂದು ಹೇಳಿಕೊಂಡಿದ್ದಾರೆ.
ಮುಂಬೈನ (Mumbai) ನಟಿ ತುನೀಶಾ ಶರ್ಮಾ (Tunisha Sharma) ಸಾವಿನ ಪ್ರಕರಣ (Death Case) ದಿನೇ ದಿನೇ ಅನೇಕ ಟ್ವಿಸ್ಟ್ ಪಡೆದುಕೊಳ್ತಿದೆ. ನಟಿಯ ಸಾವಿನ ಪ್ರಕರಣದ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಶೀಜಾನ್ ಖಾನ್ (Sheezan Khan) ಕುಟುಂಬ ಸದಸ್ಯರು ನಟನ ಮೇಲಿನ ಆರೋಪಗಳು ಸುಳ್ಳು ಎಂದಿದ್ದಾರೆ. ಹಾಗೂ, ತುನೀಶಾ ಶರ್ಮಾ ಅವರ ತಾಯಿ ಶೀಜಾನ್ ಖಾನ್ ಅವರನ್ನು ಸುಖಾಸುಮ್ಮನೆ ಕೇಸ್‌ನಲ್ಲಿ ಸಿಲುಕಿಸುತ್ತಿದ್ದಾರೆ ಎಂದು ಸೋಮವಾರ ಹೇಳಿಕೊಂಡಿದ್ದಾರೆ. ಈ ಸಂಬಂಧ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ (Press Meet) ಮಾತನಾಡಿದ ಶೀಜಾನ್ ಖಾನ್ ಅವರ ತಾಯಿ ಮತ್ತು ಇಬ್ಬರು ಸಹೋದರಿಯರು, ತುನಿಶಾ ಶರ್ಮಾ ತಮ್ಮ ಕುಟುಂಬದ ಸದಸ್ಯರಂತೆ ಇದ್ದರು ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ತುನಿಶಾ ಶರ್ಮಾ ಲೈಫ್ ಅನ್ನು ಎಂಜಾಯ್ ಮಾಡಲು ಬಯಸಿದ್ದರು. ಆದರೆ, ತಾಯಿ ಆಕೆಗೆ ಕೆಲಸ ಮಾಡುವಂತೆ ಒತ್ತಾಯಿಸುತ್ತಿದ್ದರು ಎಂದು ಆರೋಪಿಸಿದ್ದಾರೆ.
'ಅಲಿ ಬಾಬಾ: ದಾಸ್ತಾನ್-ಇ-ಕಾಬೂಲ್' ಕಾರ್ಯಕ್ರಮದಲ್ಲಿ ನಟಿಸಿದ್ದ 21 ವರ್ಷದ ತುನಿಶಾ ಶರ್ಮಾ, ಡಿಸೆಂಬರ್ 24 ರಂದು ಮಹಾರಾಷ್ಟ್ರದ (Maharashtra) ಪಾಲ್ಘರ್‌ನ (Palghar) ವಸಾಯ್ (Vasai) ಬಳಿ ಧಾರಾವಾಹಿಯ ಸೆಟ್‌ನಲ್ಲಿ ವಾಶ್‌ರೂಮ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ, ಈ ಕೇಸ್‌ಗೆ ಸಂಬಂಧಪಟ್ಟಂತೆ ಸಹನಟ ಶೀಜಾನ್ ಖಾನ್ ಅವರನ್ನು ಡಿಸೆಂಬರ್ 25 ರಂದು ಬಂಧಿಸಲಾಯಿತು. ಆತ್ಮಹತ್ಯೆಗೆ ಪ್ರಚೋದನೆಯ ಆರೋಪದ ಮೇಲೆ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಇದನ್ನು ಓದಿ: ತುನಿಶಾ ಶರ್ಮಾ ಜತೆ ಬ್ರೇಕಪ್ ಆಗಲು ಶ್ರದ್ಧಾ ವಾಕರ್ ಹತ್ಯೆ ಕಾರಣ..!
ಇನ್ನು, ತುನಿಶಾ ಶರ್ಮಾ ಅವರ ತಾಯಿ ವನಿತಾ ಶರ್ಮಾ ಅವರು ಕಳೆದ ವಾರ ತಮ್ಮ ಮಗಳ ಸಾವು ಕೊಲೆಯ ಪ್ರಕರಣವಾಗಿರಬಹುದು ಎಂದು ಹೇಳಿದ್ದರು. ಹಾಗೂ, ಶೀಜಾನ್ ಖಾನ್ ಹಾಗೂ ಅವರ ಕುಟುಂಬವು ತನ್ನ ಮಗಳನ್ನು ಮತಾಂತರಿಸಲು ಒತ್ತಾಯಿಸುತ್ತಿದ್ದರು ಎಂದೂ ಆರೋಪಿಸಿದ್ದರು.
ಅಲ್ಲದೆ, ಮತ್ತೊಬ್ಬಳು ಮಹಿಳೆ ಜತೆ ಶೀಜಾನ್ ಖಾನ್ ಸಂಬಂಧ ಹೊಂದಿದ್ದ ಬಗ್ಗೆ ಇತ್ತೀಚೆಗಷ್ಟೇ ನಟಿ ತುನಿಶಾ ಶರ್ಮಾ ಪತ್ತೆ ಹಚ್ಚಿದ್ದಳು. ಹಾಗೂ, ಇತರ ಮಹಿಳೆಯೊಂದಿಗೆ ಅವರ ವಾಟ್ಸಾಪ್ ಚಾಟ್‌ಗಳನ್ನು ಕಂಡುಕೊಂಡಿದ್ದಳು ಎಂದೂ ತುನಿಶಾ ಶರ್ಮಾ ತಾಯಿ ಆರೋಪಿಸಿದ್ದಾರೆ. ಹಾಗೂ, ಈ ಬಗ್ಗೆ ಶೀಜಾನ್ ಖಾನ್‌ನನ್ನು ಪ್ರಶ್ನೆ ಮಾಡಿದ್ದಕ್ಕೆ, ಆತ ಕಪಾಳಕ್ಕೆ ಹೊಡೆದಿದ್ದ ಎಂದೂ ನಟಿಯ ತಾಯಿ ಆರೋಪಿಸಿದ್ದರು.
ಇದನ್ನೂ ಓದಿ: Tunisha Sharma Death Case; ಇದು ಲವ್ ಜಿಹಾದ್ ವಿಷಯ: BJP ನಾಯಕರ ಗಂಭೀರ ಆರೋಪ
ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ಶೀಜಾನ್ ಖಾನ್ ಅವರ ಸಹೋದರಿ ಹಾಗೂ ನಟಿಯೂ ಆಗಿರುವ ಫಾಲಾಕ್ ನಾಜ್, ತುನಿಶಾ ಶರ್ಮಾ ತಮ್ಮ ಕುಟುಂಬದ ಸದಸ್ಯರಂತೆ ಎಂದು ಹೇಳಿದರು. ತುನಿಶಾ ಶರ್ಮಾ ಮತ್ತು ಅವರ ತಾಯಿ ಅನೇಕ ಸಂದರ್ಭಗಳಲ್ಲಿ ತಮ್ಮ ಮನೆಗೆ ಬರುತ್ತಿದ್ದರು. ನಾವು ಯಾರನ್ನೂ ಏನನ್ನೂ ಮಾಡಲು ಒತ್ತಾಯಿಸಲಿಲ್ಲ ಎಂದು ಅವರು ಹೇಳಿದರು. ಹಾಗೂ, ತುನಿಶಾ ಶರ್ಮಾ ಅವರ ತಾಯಿ, ಶೀಜಾನ್ ಖಾನ್ ಹಾಗೂ ಕುಟುಂಬದ ವಿರುದ್ಧ ಮಾಡುತ್ತಿರುವ ಆರೋಪಗಳಿಗೆ ಪುರಾವೆಗಳನ್ನು ಒದಗಿಸಬೇಕು ಎಂದೂ ಹೇಳಿದರು.
ಚಿತ್ರೀಕರಣದ ವೇಳೆ ಶೀಜಾನ್ ಖಾನ್ ಒಮ್ಮೆ ತುನಿಶಾ ಶರ್ಮಾಗೆ ಕಪಾಳಮೋಕ್ಷ ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಆರೋಪಿ ನಟನ ತಾಯಿ, "ವನಿತಾ ಶರ್ಮಾ ನಮಗೆ ಏಕೆ ದೂರು ನೀಡಲಿಲ್ಲ ಅಥವಾ ಶೀಜಾನ್‌ಗೆ ಏಕೆ ಕಪಾಳಮೋಕ್ಷ ಮಾಡಲಿಲ್ಲ?" ಎಂದು ಪ್ರಶ್ನೆ ಮಾಡಿದ್ದಾರೆ. ನಮಗೂ ತುನಿಶಾ ಶರ್ಮಾ ಸಾವಿಗೆ ನ್ಯಾಯ ಬೇಕು, ಆದರೆ ಆಕೆಯ ತಾಯಿ ಶೀಜಾನ್ ಖಾನ್‌ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲು ಪ್ರಯತ್ನಿಸುತ್ತಿದ್ದಾರೆ, ಅದು ಸರಿಯಲ್ಲ ಎಂದು ಹೇಳಿದರು.
ಇದನ್ನೂ ಓದಿ: ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣ: ಸಹನಟ ಶೀಜಾನ್ ಮೊಹಮ್ಮದ್ ಖಾನ್ ಬಂಧನ
ಇನ್ನು, ತುನಿಶಾ ಶರ್ಮಾಗೆ ಹಿಜಾಬ್ ಧರಿಸಿ ದರ್ಗಾಕ್ಕೆ ಭೇಟಿ ನೀಡುವಂತೆ ಒತ್ತಾಯಿಸಲಾಗಿದೆ ಎಂಬ ಆರೋಪದ ಮೇಲೆ, "ನಾವು ಆಕೆಯನ್ನು ಏನನ್ನೂ ಮಾಡುವಂತೆ ಕೇಳಲಿಲ್ಲ" ಎಂದು ಸಮರ್ಥಿಸಿಕೊಂಡಿದ್ದಾರೆ.