Asianet Suvarna News Asianet Suvarna News

ಐಶ್ವರ್ಯ ರೈ ಬೇರೆ ವಾಸವಿದ್ರೂ ಅಭಿಷೇಕ್ ಡೀವೋರ್ಸ್ ಕೊಡುತ್ತಿಲ್ಲ; ಸೀಕ್ರೆಟ್‌ ಬಿಚ್ಚಿಟ್ಟ ನೆಟ್ಟಿಗರು!

ಹಾಗಿದ್ದರೆ ಮುಂದೇನು ಕಥೆ? ಸದ್ಯಕ್ಕೆ ಸ್ಟಾರ್ ದಂಪತಿಗಳ ಬಾಳಿನಲ್ಲಿ ಏನಾಗಲಿದೆ ಎಂಬುದನ್ನು ಊಹಿಸುವುದು ಕಷ್ಟ. ಏಕೆಂದರೆ, ನಟಿ ಐಶ್ವರ್ಯ ರೈ ತುಂಬಾ ಬುದ್ಧಿವಂತೆ, ಜೊತೆಗೆ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ.

Money matter is in between Abhishek Bachchan and Aishwarya Rai Bachchan divorce case srb
Author
First Published Dec 27, 2023, 7:10 PM IST

ಸದ್ಯಕ್ಕೆ ಬಾಲಿವುಡ್ ಜೋಡಿ ಐಶ್ವರ್ಯ ರೈ ಬಚ್ಚನ್ ಹಾಗೂ ಅಭಿಷೇಕ್ ಬಚ್ಚನ್ ಡಿವೋರ್ಸ್ ಸುದ್ದಿಯೇ ಹೈಲೈಟ್ ಆಗುತ್ತಿದೆ. ಸುಮಾರು ಒಂದು ತಿಂಗಳಿನಿಂದ ಈ ಜೋಡಿ ಒಟ್ಟಾಗಿ ವಾಸಿಸುತ್ತಿಲ್ಲ ಎನ್ನಲಾಗಿದೆ. ಐಶ್ವರ್ಯ ರೈ ತಮ್ಮ ತಾಯಿಯ ಮನೆಯಲ್ಲಿದ್ದರೆ ಅಭಿಷೇಕ್ ಮೊದಲಿನಂತೆ ತಂದೆ-ತಾಯಿಯ ಜತೆ ವಾಸವಿದ್ದಾರೆ. ಬೇರೆ ಬೇರೆ ಇದ್ದರೂ, ಮನಸ್ತಾಪ ತಾರಕಕ್ಕೇರಿದ್ದರೂ ಅಭಿಷೇಕ್ ಹೆಂಡತಿಗೆ ಡಿವೋರ್ಸ್‌ ನೀಡುತ್ತಿಲ್ಲ. ಕಾರಣವೇನು?

ಅಭಿಷೇಕ್‌ ಬಚ್ಚನ್ (Abhishek Bachchan)ನಿಂದ ದೂರ ಸರಿಯುವ ನಿರ್ಧಾರ ಮಾಡಿಯೇ ನಟಿ ಐಶ್ವರ್ಯ ರೈ ಬಚ್ಚನ್ (Aishwarya Rai Bachchan)ಬೇರೆ ಇದ್ದಾರೆ ಎನ್ನಲಾಗುತ್ತಿದೆ. ಆದರೆ, ಅಭಿಷೇಕ್ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಒಂದು, ಐಶೂ ಕಾಲಾನಂತರದಲ್ಲಿ ಮನಸ್ಸು ಬದಲಾಯಿಸಿ ಮತ್ತೆ ಬಂದು ತನ್ನನ್ನು, ತನ್ನ ಮನೆಯನಮ್ನು ಸೇರಿಕೊಳ್ಳಬಹುದು ಎಂಬುದು ಒಂದು ಆಸೆಯಾದರೆ, ಇನ್ನೊಂದು-ಆಕೆಗೆ ಡಿವೋರ್ಸ್ ನೀಡಿದರೆ ಭಾರೀ ಹಣ, ಆಸ್ತಿ ಕೊಡಬೇಕಾಗುತ್ತದೆ ಎಂಬುದು. ಏಕೆಂದರೆ, ತಂದೆ ಅಮಿತಾಬ್ ಬಚ್ಚನ್ (Amitabh Bachchan)ಆಸ್ತಿಗೆ ಅಭಿಷೇಕ್ ವಾರಸುದಾರ. ಗಂಡನ ಆಸ್ತಿಯಲ್ಲಿ ಹೆಂಡತಿಗೆ ಸಹಜವಾಗಿಯೇ ಪಾಲು ಕೊಡಲೇಬೇಕಲ್ಲ!

ಬ್ರಿಟಿಷ್ ಮೂಲವನ್ನು ಒಪ್ಪಿಕೊಂಡ್ರಾ ಆಲಿಯಾ ಭಟ್; ಮಹೇಶ್ ಭಟ್ ಮಗಳ ಕಥೆ ವಿಚಿತ್ರವಾಗಿದೆ ಅಂದ್ಕೊಂಡ್ರಲ್ವಾ!

ಆದರೆ ಇಲ್ಲೊಂದು ಟ್ವಿಸ್ಟ್ ಇದೆ. ಐಶ್ವರ್ಯ ರೈ ಆಸ್ತಿ ಸುಮಾರು 700 ಕೋಟಿ ರೂಪಾಯಿಗಳು ಎನ್ನಲಾಗುತ್ತದೆ. ಆದರೆ ಅಭಿಷೇಕ್ ಅಸ್ತಿ ಸುಮಾರು 200 ಕೋಟಿ ರೂಪಾಯಿಗಳು. ಆದರೆ, ಅಭಿಷೇಕ್ ಏನಾದ್ರೂ ಐಶ್ವರ್ಯ ರೈ ಬಚ್ಚನ್‌ಗೆ ಡಿವೋರ್ಸ್ ನೀಡಿದರೆ ಸಹಜವಾಗಿಯೇ ತಮ್ಮ ಸಂಭಾವನೆಯ 25% ಹಣವನ್ನು ಹೆಂಡತಿಗೆ ನೀಡಬೇಕಾಗುತ್ತದೆ. ಜತೆಗೆ, ಕೋರ್ಟ್ ಅದೇಶಿಸಿದಷ್ಟು ಅಸ್ತಿಯನ್ನೂ ಕೊಡಬೇಕಾಗುತ್ತದೆ. ಆಗ ಸಹಜವಾಗಿಯೇ ಹೆಂಡತಿ ಐಶ್ವರ್ಯ ರೈ ಇನ್ನೂ ಶ್ರೀಮಂತೆ ಆಗುತ್ತಾರೆ, ಗಂಡ ಅಭಿಷೇಕ್ ಇನ್ನೂ ಕಳೆದುಕೊಳ್ಳುತ್ತಾರೆ. ಈ ಕಾರಣಕ್ಕೆ ಅಭಿಷೇಕ್ ಸೈಲೆಂಟ್ ಆಗಿಬಿಟ್ಟಿದ್ದಾರೆ. 

ಕತ್ರಿನಾ ಜತೆ ಲಂಡನ್‌ನಲ್ಲಿ ಸುಮಧುರ ಕ್ಷಣಗಳನ್ನು ಕಳೆದಿದ್ದೇನೆ, ಆಕೆ ವಿಶಾಲ ಹೃದಯಿ; ನಟ ಶಾರುಖ್ ಖಾನ್

ಹಾಗಿದ್ದರೆ ಮುಂದೇನು ಕಥೆ? ಸದ್ಯಕ್ಕೆ ಸ್ಟಾರ್ ದಂಪತಿಗಳ ಬಾಳಿನಲ್ಲಿ ಏನಾಗಲಿದೆ ಎಂಬುದನ್ನು ಊಹಿಸುವುದು ಕಷ್ಟ. ಏಕೆಂದರೆ, ನಟಿ ಐಶ್ವರ್ಯ ರೈ ತುಂಬಾ ಬುದ್ಧಿವಂತೆ, ಜೊತೆಗೆ ತಾಳ್ಮೆಯನ್ನು ಕಳೆದುಕೊಳ್ಳುವುದಿಲ್ಲ. ಆಕೆಗೆ ಸಮಸ್ಯೆ ಆಗಿರುವುದು ಅತ್ತೆ ಜಯಾ ಬಚ್ಚನ್ (Jaya Bachchan)ಯೇ ಹೊರತೂ ಗಂಡನಲ್ಲ ಎಂಬ ಮಾಹಿತಿಯಿದೆ. ಹೀಗಾಗಿ ಹೇಗಾದರೂ ಮಾಡಿ ಅತ್ತೆಯನ್ನು ಬಿಟ್ಟು ಗಂಡನನ್ನು ತನ್ನ ಕಡೆ ಸೆಳೆದುಕೊಂಡು ತನ್ನ ಸಂಸಾರದೊಟ್ಟಿಗೆ ಆಕೆ ಬೇರೆ ಮನೆ ಮಾಡಲಿದ್ದಾಳೆ, ಬೇಕಾದರೆ ಕಾದು ನೋಡಿ ಎನ್ನುತ್ತಿವೆ ಬಲ್ಲ ಮೂಲಗಳು. ಯಾವುದಕ್ಕೂ ಕಾದು ನೋಡುವುದೇ ಒಳಿತು, ಏನಂತೀರಾ?!

ಸಲಾರ್ ಸಿನಿಮಾದಲ್ಲಿ 'ಅದೊಂದು' ಮಿಸ್ ಆಗ್ಬಿಟ್ಟಿದೆ; 'ಶೌರ್ಯಂಗ ಪರ್ವಂ'ನಲ್ಲಿ ಇರುತ್ತಾ?!

Follow Us:
Download App:
  • android
  • ios