ಕರೀನಾ ಕಪೂರ್ ಖಾನ್ ತನ್ನ ಎರಡನೇ ಮಗುವಿನ  ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಹಳೆಯ ಫೋಟೋ ಒಂದನ್ನು ಶೇರ್ ಮಾಡಿಕೊಂಡು  13 ವರ್ಷ ಹಿಂದಿನ ಫೋಟೋ ಶೇರ್ ಮಾಡಿಕೊಂಡಿದ್ದಾರೆ.

ಕರೀನಾ ಕಪೂರ್ ಖಾನ್ ಇಂದು ಹಳೆಯ ದಿನಗಳನ್ನೊಮ್ಮೆ ಮೆಲುಕು ಹಾಕಿ ಸೈಫ್ ಅಲಿ ಖಾನ್ ಅವರೊಂದಿಗೆ 13 ವರ್ಷದ ಥ್ರೋಬ್ಯಾಕ್ ಫೋಟೋ ಹಂಚಿಕೊಂಡಿದ್ದಾರೆ. ಸೈಫೀನಾ ಜೋಡಿಗೆ ಭಾರೀ ಫ್ಯಾನ್ಸ್ ಇದ್ದಾರೆ. ಕರೀನಾ ಕಪೂರ್ ಖಾನ್ ತನ್ನ ಮ್ಯಾಟರ್ನಿಟಿ ಸ್ಟೈಲ್‌ನಲ್ಲಿ ಮಿಂಚುತ್ತಿದ್ದಾರೆ. ಜಬ್ ವಿ ಮೆಟ್ ನಟಿ 2007ರ ಹಳೆಯ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಮಗಳು ಬಂದ ಖುಷಿಗೆ ಮಾಧ್ಯಮಕ್ಕೆ ಗಿಫ್ಟ್ ಕೊಟ್ಟ ವಿರುಷ್ಕಾ: ಜೊತೆಗಿತ್ತೊಂದು ರಿಕ್ವೆಸ್ಟ್

ಕರೀನಾ ಫೋಟೋ ಶೇರ್ ಮಾಡಿ ಸಿರ್ಕಾ '07, ಜೈಸಲ್ಮೇರ್..ಒಹೂ ಆ ಸಣ್ಣ ನಡು... ನಾನು ಹೇಳ್ತಿರೋದು ನನ್ನ ಬಗ್ಗೆ, ಸೈಫ್ ಬಗ್ಗೆ ಅಲ್ಲ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ನಟಿ ತಮ್ಮ ಹಳೆಯ ದಿನಗಳನ್ನು ಮಿಸ್ ಮಾಡಿಕೊಳ್ಳುತ್ತಿರುವಂತೆ ಕಾಣಿಸುತ್ತದೆ.

ಸೈಫ್ ಅಲಿ ಖಾನ್ ಭೂಟ್ ಪೊಲೀಸ್ ಕೊನೆ ಹಂತದ ಚಿತ್ರೀಕರಣಕ್ಕಾಗಿ ಜೈಸಲ್ಮೇರ್‌ನಲ್ಲಿದ್ದಾರೆ. ಅರ್ಜುನ್ ಕಪೂರ್ ಕೂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ವಿಮಾನದ ಒಳಗಿನ ಚಿತ್ರವನ್ನು ಹಂಚಿಕೊಂಡಿದ್ದಾರೆ. 2020 ರಲ್ಲಿ ತಂಡವು ಶೂಟಿಂಗ್‌ಗಾಗಿ ಧರ್ಮಶಾಲಾದಲ್ಲಿತ್ತು. ಕರೀನಾ ಮತ್ತು ಸೈಫ್ ಕೂಡ ತಮ್ಮ ಹೊಸ ಮನೆಗೆ ತೆರಳಲು ಸಜ್ಜಾಗಿದ್ದಾರೆ. ಇತ್ತೀಚೆಗೆ, ಅವರು ತಮ್ಮ ಮನೆಯಲ್ಲಿ ಪಾರ್ಟಿಯನ್ನು ಸಹ ಆಯೋಜಿಸಿದ್ದರು.