ಮಲಯಾಳಂ ಚಿತ್ರರಂಗದ ಹ್ಯಾಟ್ರಿಕ್, ರೊಮ್ಯಾಂಟಿಕ್ ಹೀರೋ ದುಲ್ಕರ್ ಸಲ್ಮಾನ್‌ ವಿರುದ್ಧ ಕೊಲೆಯಾಗಿದ್ದ ಚಿತ್ರ ವಿತರಕ ಚಾಕೋ ಅವರ ಪತ್ನಿ ಶಾಂತಮ್ಮ ಹಾಗೂ ಮಗ ಲೀಗಲ್ ನೋಟಿಸ್‌ ಕಳುಹಿಸಿದ್ದಾರೆ. ಕುಖ್ಯಾತ ರೌಡಿ ಸುಕುಮಾರ್‌ ಕುರುಪ್ ಜೀವನಕಥೆ ಆಧಾರಿತ ಸಿನಿಮಾ ಮಾಡುತ್ತಿರುವ 'ಕುರುಪ್' ಚಿತ್ರತಂಡಕ್ಕೆ ಇದೊಂದು ಶಾಕಿಂಗ್ ಸುದ್ದಿ.

ಮಲೆಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ಮಗನ ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌

ದುಲ್ಕರ್ ಸಲ್ಮಾನ್‌ 'ಕುರುಪ್' ಚಿತ್ರಕತೆ ಒಪ್ಪಿಕೊಂಡ ದಿನದಿಂದಲೂ ಏನಾದರೂ ವಿಘ್ನಗಳು ಎದುರಾಗುತ್ತಲೇ ಇವೆ.  ಒಮ್ಮೆ ಕಥೆ ಬದಲಾಗುತ್ತದೆ. ಮತ್ತೊಮ್ಮೆ ಸೂಕ್ತ ಪಾತ್ರಧಾರಿಗಳು ಸಿಗದೇ, ಚಿತ್ರ ಆರಂಭಿಸುವುದು ಕಷ್ಟವಾಯಿತು. ಹೀಗೆ ಅಡತಡೆಗಳು ಮೆಟ್ಟಿನಿಂತು ಇನ್ನೇನು ಚಿತ್ರೀಕರಣ ಮುಗಿಸಿ, ರಿಲೀಸ್‌ಗೆ ಸಿದ್ಧತೆ ಮಾಡಿಕೊಳ್ಳುವ ಸಮಯದಲ್ಲಿ ಕೊರೋನಾ ಬಂದು, ಎಲ್ಲವನ್ನೂ ಬುಡಮೇಲು ಮಾಡಿತು. ಇದೀಗ ಎಲ್ಲವೂ ಸುಸೂತ್ರವಾಗಿ ನಡೆದಿದೆ ಎನ್ನುವಷ್ಟರಲ್ಲಿಯೇ  ಚಾಕೋ ಪತ್ನಿ ಶಾಂತಮ್ಮ ಲೀಗಲ್‌ ನೋಟಿಸ್‌ ಕಳುಹಿಸಿದ್ದಾರೆ.

ಬ್ಯಾಗ್ರೌಂಡ್ ಕಥೆ ಏನು?
ಈ ಕತೆಯ ಪ್ರಮುಖ ಪಾತ್ರವೇ ರೌಡಿಯೊಬ್ಬನದ್ದು. ಅವನ ಹೆಸರು ಸುಕುಮಾರ್ ಕುರುಪ್. ಅವನು ಕೇರಳದ ಪ್ರಖ್ಯಾತ ರೌಡಿ. ಯಾವಾಗ ಸಿನಿಮಾ ವಿತರಕ ಚಾಕೋ ಕೊಲೆ ಮಾಡಿದನೋ ಆಗ ಅವನ ಕುಕೃತ್ಯಗಳು ಬೆಳಕಿಗೆ ಬಂದವು. 'ಕುರುಪ್' ಚಿತ್ರದಲ್ಲಿ ಚಾಕೋ ಹಾಗೂ ಸುಕುಮಾರ್ ನಡುವೆ ಇದ್ದ ಸಂಬಂಧ ಹಾಗೂ ನಡೆದ ಕೊಲೆ ಬಗ್ಗೆ ತೋರಿಸಲಾಗಿದೆ. ಅಲ್ಲದೇ ಚಾಕೋ ಕೊಲೆಯಾದಾಗ, ಪತ್ನಿ ಶಾಂತಮ್ಮ ತುಂಬು ಗರ್ಭಿಣಿಯಾಗಿದ್ದರು.

ಚಾಕೋ ಪಾತ್ರವನ್ನು ಚಿತ್ರದಲ್ಲಿ ಹೇಗೆ ತೋರಿಸಲಾಗಿದೆ ಎಂದು ಆಗ್ರಹಿಸಿ ಚಾಕೋ ಪತ್ನಿ ಶಾಂತಮ್ಮ ಮತ್ತು ಪುತ್ರ ಲೀಗಲ್ ನೋಟಿಸ್ ಕಳುಹಿಸಿದ್ದು, ತಮಗೆ ಹಾಗೂ ತಮ್ಮ ಕುಟುಂಬದ ಕೆಲವು ಸದಸ್ಯರಿಗೆ ಚಿತ್ರ ಬಿಡುಗಡೆ ಆಗುವ ಮುನ್ನ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಬೇಕೆಂದು ಆಗ್ರಹಿಸಿದ್ದಾರೆ. ಚಾಕೋವನ್ನು ಚಿತ್ರದಲ್ಲಿ ಹೇಗೆ ತೋರಿಸಲಾಗಿದೆ ಎಂಬುವುದರ ಜೊತೆಗೆ , ರೌಡಿ ಕುರೂಪನನ್ನು ವೈಭವೀಕರಿಸಲಾಗಿದೆಯೇ ಎಂಬ ಬಗ್ಗೆಯೂ ಚಾಕೋ ಪತ್ನಿ ಸ್ಪಷ್ಟನೆ ಕೋರಿದ್ದಾರೆ. 

ಮಾಲಿವುಡ್‌ ಸ್ಟಾರ್‌ ದುಲ್ಕರ್ ಸಲ್ಮಾನ್ ಬೇಗ ಮದ್ವೆಯಾಗಿದ್ದು ಏಕಂತೆ ಗೊತ್ತಾ?

ಈ ವರ್ಷ  EIDನಲ್ಲಿ ತೆರೆ ಕಾಣಬೇಕಿದ್ದ ಸಿನಿಮಾ ಕೊರೋನಾದಿಂದ ಮುಂದೂಡಿದೆ. ಕುರುಪ್ ಪಾತ್ರವನ್ನು ದುಲ್ಕರ್ ಅಭಿನಯಿಸಿದ್ದು, ಚಾಕೋ ಪಾತ್ರದಲ್ಲಿ ಟೋವಿನ್‌ ತಾಮಸ್‌ ಕಾಣಿಸಿಕೊಳ್ಳಲಿದ್ದಾರೆ. ಕುರುಪ್ ಪಾತ್ರದಲ್ಲಿ ಅಭಿನಯಿಸಲು ದುಲ್ಕರ್ 35 ಕೋಟಿ ರೂ ಸಂಭಾವನೆ ಪಡೆದುಕೊಂಡಿದ್ದಾರೆ ಎನ್ನಲಾಗಿದೆ.