ಇವರನ್ನು ಒಮ್ಮೆ ನೋಡಿದರೆ ಎಲ್ಲೋ ನೋಡಿದಂತೆ ಭಾಸವಾಗುತ್ತದೆ, ಇವರ ನಟನೆಗೆ ಫಿದಾ ಆದವರು ಒಬ್ರಾ ಇಬ್ರಾ? 

ಹೌದು ಅವರೇ 'ಬಾನಲ್ಲೂ ನೀನೇ ಭುವಿಯಲ್ಲೂ ನೀನೇ' ಚಿತ್ರದಲ್ಲಿ ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಹಲವು ವರ್ಷಗಳ ಕಾಲ ಮಿಂಚಿದ ನಟಿ ದಿವ್ಯಾ ಉನ್ನಿ. ಮುಸಾಫರ್, ಮರ್ಕ್‌ ಆಂಟೋನಿ ಹಾಗೂ ಆಯುಷ್ಮಾನ್ ಭವ ಸೇರಿದಂತೆ 50ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ದಿವ್ಯಾ ಮೂಲತಃ ನೃತ್ಯಗಾರತಿ. 

ತಪ್ಪು ಸಲಹೆಗಳಿಗೆ ಕಿವಿ ಕೊಡಬೇಡಿ; ಗರ್ಭಿಣಿ ಹೀಗಿದ್ರೆ ಚಂದ!

2002ರಲ್ಲಿ ಸುಧೀರ್ ಶೇಖರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿವ್ಯಾರಿಗೆ ಇಬ್ಬರು ಮಕ್ಕಳಿದ್ದಾರೆ ಕಾರಣಾಂತರಗಳಿಂದ 2016ರಲ್ಲಿ ವಿಚ್ಛೇದನ ಪಡೆದುಕೊಂಡು 2018ರಲ್ಲಿ ವಿದೇಶಕ್ಕೆ ತೆರಳಿ ಉದ್ಯಮಿ ಅರುಣ ಕುಮಾರ್‌ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.  ಕೆಲ ದಿನಗಳ ಹಿಂದೆ ದಿವ್ಯಾ ಉನ್ನಿ ಗರ್ಭಿಣಿಯಾಗಿರುವ ವಿಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.

ಅಮ್ಮನ ಪಾಸಿಟಿವ್ ಯೋಚನೆಯಿಂದ ಮಗುವಿನ ಹೃದಯ ಸಮಸ್ಯೆ ದೂರವಾಯ್ತು!

ಖ್ಯಾತ ಬರಹಗಾರತಿ ಹೆಲೆನ್ ಕೆಲ್ಲರ್ ಸಾಲು ' ವಿಶ್ವದ ಬೆಸ್ಟ್‌ ಮತ್ತು ಸುಂದರವಾದದ್ದನ್ನು ನೋಡಲು ಅಥವಾ ಮುಟ್ಟಲು ಸಾಧ್ಯವಿಲ್ಲ - ಅವುಗಳನ್ನು ಹೃದಯದಿಂದ ಅನುಭವಿಸಬೇಕು' ಎಂದು ಸೀಮಂತದ ಫೋಟೋ ರಿವೀಲ್ ಮಾಡಿದ್ದಾರೆ.