ಮೋಹನ್ ಲಾಲ್ ಮಲೆಯಾಳ ಚಿತ್ರರಂಗದ ಲೆಜೆಂಡ್ ಆಕ್ಟರ್. ಮೇ 21 ಕ್ಕೆ ಅವರಿಗೆ 60 ತುಂಬಿತು. ಇವರ ಸಿನಿಮಾ ಜರ್ನಿಗೆ ನಲವತ್ತರ ಹರೆಯ. ಮಲೆಯಾಳ ಚಿತ್ರರಂಗದ ಎರಡು ಕಣ್ಣುಗಳಂತಿರುವವರು ಒಬ್ಬರು ಮೋಹನ್ ಲಾಲ್ ಆದರೆ ಇನ್ನೊಬ್ಬರು ಮಮ್ಮುಟ್ಟಿ. ಮೋಹನ್ ಲಾಲ್ ‌ ಅಭಿನಯಿಸಿದ ನೂರು ಕೋಟಿ ಬಜೆಟ್ ಸಿನಿಮಾ ' ಮರಕ್ಕಾರ್ ಅರಬಿ‌ ಕಡಲಿಂಟೆ ಸಿಂಹಮ್' ಇತ್ತೀಚೆಗೆ ಜಗತ್ತಿನಾದ್ಯಂತ ಪ್ರೇಕ್ಷಕರ ಮೆಚ್ಚುಗೆಗೆ  ಪಾತ್ರವಾಗಿದೆ. ಮರಕ್ಕಾರ್ ಎಂಬ ಪೋರ್ಚುಗೀಸರ ವಿರುದ್ಧ ಹೋರಾಡಿದ ವೀರನ ‌ಕತೆಯಿದು. ಇದರಲ್ಲಿ ತಮ್ಮ ವಯಸ್ಸನ್ನೂ ಮರೆತು ಲಾಲ್ ಯೇಟ್ಟ ಮಿಂಚಿನ ಅಭಿನಯ ಮೆರೆದರು. 1978ರಿಂದ ಈಚೆಗಿನ‌ ಅವರ ಸಿನಿ ಜರ್ನಿಯಲ್ಲಿ ಮುನ್ನೂರಕ್ಕೂ ಹೆಚ್ಚು ಚಿತ್ರಗಳಿವೆ.‌ ಹರೆಯದ ಹುಡುಗನಾಗಿ, ಪ್ರೇಮಿಯಾಗಿ, ವಿರಹಿಯಾಗಿ, ಅನುಭಾವಿಯಾಗಿ, ಅಂಧನಾಗಿ, ಸಾಧಕನಾಗಿ ಅವರು ಮಾಲಿವುಡ್ ಮಾತ್ರವಲ್ಲ ಎಲ್ಲಾ ಭಾಷೆಯ ಸಿನಿಪ್ರಿಯರ ಭರಪೂರ ಅಭಿಮಾನ ಗಳಿಸಿಕೊಂಡಿದ್ದಾರೆ. 

ಮೋಹನ್ ಲಾಲ್ ಅವರ ವೆಬ್ ಸೈಟ್ ಹೆಸರು 'ಕಂಪ್ಲೀಟ್ ಆಕ್ಟರ್' ಅಂತ. ಮಲೆಯಾಳ ಚಿತ್ರರಂಗದಲ್ಲಿ ಅವರ ಐಡೆಂಟಿಟಿ ಇರುವುದೇ ಕಂಪ್ಲೀಟ್ ಆಕ್ಟರ್ ಅಂತ. ಹದಿಹರೆಯದಲ್ಲೇ ಮಲೆಯಾಳ ಚಿತ್ರರಂಗ ಪ್ರವೇಶಿಸಿದವರು. ಆದರೆ ಇವರ ಮೊದಲ ಸಿನಿಮಾ ರಿಲೀಸ್ ಆಗಿದ್ದು ತಯಾರಾದ 25 ವರ್ಷಗಳ ನಂತರ.‌ ಕಾರಣ ಸೆನ್ಸಾರ್ ಸಮಸ್ಯೆ. ತುಸು ಹಳಬರಿಗೆ ಇವರು ವಿಲನ್ ಆಗಿ ಪರಿಚಿತರು. ಮೋಹನ್ ಲಾಲ್ ಆರಂಭದ ದಿನಗಳಲ್ಲಿ ವಿಲನ್ ಆಗಿ ಗಿರಿಜಾ ‌ಮೀಸೆ ತಿರುವಿದವರು. ಅದಕ್ಕೂ ಮೊದಲು ಕುಸ್ತಿ ಪಟುವಾಗಿದ್ದರು ಅನ್ನೋದು ಹೆಚ್ಚಿನವರಿಗೆ ತಿಳಿದಿಲ್ಲದ ವಿಚಾರ. ಅವರು ರಾಜ್ಯಮಟ್ಟದ ಚಾಂಪಿಯನ್ ಆಗಿ ಹೊಮ್ಮಿದ್ದರು. ಆದರೆ ರಾಷ್ಟ್ರಮಟ್ಟದಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ. ಕಾರಣ ಆ ಹೊತ್ತಿಗಾಗಲೇ ಅವರನ್ನು ಸಿನಿಮಾ ಇಂಡಸ್ಟ್ರಿ ಕೈ ಬೀಸಿ ಕರೆದಿತ್ತು. ಮೋಹನ್ ಲಾಲ್ ಟೆಕ್ವಾಂಡೊ ಪಟುವೂ ಹೌದು. ಟೆಕ್ವಾಂಡೋದಲ್ಲಿ ಬ್ಲ್ಯಾಕ್ ಬೆಲ್ಟ್ ಪಡೆದದ್ದು ಮಾತ್ರವಲ್ಲ. ಟೆಕ್ವಾಂಡೊ ಕಲೆಯ ಕೇಂದ್ರ ದಕ್ಷಿಣ ಕೊರಿಯಾದಲ್ಲಿ ಅವರನ್ನು ವಿಶೇಷವಾಗಿ ಸನ್ಮಾನಿಸಿ ಗೌರವಿಸಲಾಗಿತ್ತು. ಇಂಥಾ ಗೌರವಕ್ಕೆ ಪಾತ್ರವಾದ ಮೂರನೇ ಭಾರತೀಯ ಎಂಬ ಗೌರವವೂ ಮೋಹನ್ ಲಾಲ್ ಅವರದು. ಇವರದೊಂದು ಮ್ಯೂಸಿಕ್ ಬ್ಯಾಂಡ್ ಸಹ ಇತ್ತು. ಭಾರತೀಯ ನ್ಯಾಶನಲ್ ಗೇಮ್ ಸಂದರ್ಭದಲ್ಲಿ ಈ ಬ್ಯಾಂಡ್ ಪ್ರದರ್ಶನ ನೀಡಿತ್ತು. ನಾಲ್ಕು ನ್ಯಾಶನಲ್ ಅವಾರ್ಡ್ ನ ಜೊತೆಗೆ ಪದ್ಮಭೂಷಣ, ಪದ್ಮಶ್ರೀ ಗೌರವಗಳು ಸಂದಿವೆ.

ಮಗಳಿಗೆ ಸೈಕಲ್‌ ಕಲಿಸಿದೆ, ಮಗನ ಜತೆ ಫುಟ್‌ಬಾಲ್‌ ಆಡಿದೆ: ಶ್ರೀಮುರಳಿ 

ಮಲೆಯಾಳ ಚಿತ್ರರಂಗದಲ್ಲಿ ನಾಯಕನಾಗಿ ಅಭಿನಯಿಸಲು ಶುರು ಮಾಡಿದ ಮೇಲೆ ನೇಟಿವಿಟಿಯ ಸಂಪೂರ್ಣ ಅನುಭವ ಕೊಡುವ ಸಿನಿಮಾಗಳಲ್ಲಿ ಹೀರೋ ಆಗಿ ಮೆರೆದವರು. ಇಷ್ಟು ದಶಕದ ಅವರ ಸಿನಿಮಾ ಜರ್ನಿಯ ನಂತರ ಅವರು ಅಭಿಮಾನಿಗಳ ಕಣ್ಣಿಲ್ಲಿರೋದು ಶುಭ್ರ ಬಿಳಿ ಪಂಚೆ, ಬಿಳಿ ಅಂಗಿ ತೊಟ್ಟ ಮಂದಸ್ಮಿತ ಲಾಲ್ ಯೇಟ್ಟನಾಗಿ. ಕೇರಳಿಗರು ಜಗತ್ತಿನ ಯಾವ ಮೂಲೆಯಲ್ಲಿ ನೆಲೆಸಿದರೂ ಲಾಲ್ ಯೇಟ್ಟನನ್ನು ಮರೆತವರಲ್ಲ. ಅವರ ಬದುಕಿನ ಭಾಗದ ಹಾಗೇ ಇದ್ದವರು ಈ ಯೇಟ್ಟ. ಮೋಹನ್ ಲಾಲ್ ವಿಶ್ವನಾಥನ್ ನಾಯರ್ ಅನ್ನೋ ಇವರ ಒರಿಜಿನಲ್ ಹೆಸರು ಹೊತ್ತಿದ್ದವರು ಕಡಿಮೆ. ಇವರು ಎಲ್ಲರ ಬಾಯಲ್ಲೂ ಲಾಲೇಟ್ಟನಾಗಿಯೇ ಗುರುತಿಸಿಕೊಂಡವರು. ಮೋಹನ್ ಲಾಲ್ ಅವರು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದಿತ್ಯ- ರಕ್ಷಿತಾ ಅಭಿನಯದ ಲವ್, ಪುನೀತ್ ರಾಜ್ ಕುಮಾರ್ ನಾಯಕನಾಗಿರುವ 'ಮೈತ್ರಿ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಹಿಂದಿ,ತೆಲುಗು, ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ.

ಹಣ ಇಲ್ಲದೆ ಪರದಾಟ; ಕಮಲ್ ಹಾಸನ್‌ ಪುತ್ರಿಗೆ ಆರ್ಥಿಕ ಸಂಕಷ್ಟ!

ಮೋಹನ್ ಲಾಲ್ ಅವರ ಅರವತ್ತನೇ ಹುಟ್ಟುಹಬ್ಬದ ಸಂದರ್ಭ ಇನ್ನೊಬ್ಬ ದೈತ್ಯ ‌ಕಲಾವಿದ ಚಿರಂಜೀವಿ ಇವರಿಗೆ ಜನ್ಮದಿನದ ಶುಭಾಶಯ ‌ಕೋರಿದ್ದು ಬಹಳ ಆಪ್ತವಾಗಿತ್ತು. ಮಲೆಯಾಳ ಚಿತ್ರರಂಗದ ದಂತಕತೆ, ಸೂಪರ್ ಸ್ಟಾರ್ ಲಾಲೇಟ್ಟನ್‌ ಹ್ಯಾಪಿ ಬರ್ತ್ ಡೇ. ನಿಮ್ಮಂಥ ಅದ್ಭುತ ನಟನ ‌ಜೊತೆಗೆ ತೆರೆ ಹಂಚಿಕೊಂಡಿದ್ದಕ್ಕೆ ಹೆಮ್ಮೆ ‌ಇದೆ ಅಂತ ಚಿರಂಜೀವಿ ಶುಭ ಕೋರಿದ್ದಾರೆ. ಮೋಹನ್ ಲಾಲ್ ಗೆ ಮಲೆಯಾಳಂ‌ ಸಿನಿಮಾಗಳಲ್ಲಿ ನೆಕ್ ಟು ನೆಕ್ ಫೈಟ್ ಕೊಡುತ್ತಿದ್ದವರು ಮಮ್ಮುಟ್ಟಿ. ಹಾಗಂತ ಇವರಿಬ್ಬರ ನಡುವೆ ವೈಷಮ್ಯವಿಲ್ಲ. ಮಮ್ಮುಟ್ಟಿ ಮಗ, ಮಲೆಯಾಳಂ ಚಿತ್ರರಂಗದಲ್ಲಿ ಈಗ ಸೂಪರ್ ಸ್ಟಾರ್ ಆಗಿ‌ ಮಿಂಚುತ್ತಿರುವ ದುಲ್ಖರ್ ಸಲ್ಮಾನ್ ಮೊದಲಿನಿಂದಲೂ ಮೋಹನ್ ಲಾಲ್ ಫ್ಯಾನ್. ಮೋಹನ್ ಲಾಲ್ ಅವರ ಸಿನಿಮಾದ ಫೇವರೆಟ್ ಡೈಲಾಗ್ ಅನ್ನು‌ ಉಲ್ಲೇಖಿಸಿ ದುಲ್ಖರ್ ಲಾಲೇಟ್ಟನಿಗೆ ಬರ್ತ್ ಡೇ ವಿಶ್ ಮಾಡಿದ್ದಾರೆ. 

ಹೆಸರು ಬದಲಾಯಿಸಿಕೊಂಡ ರಶ್ಮಿಕಾ ಮಂದಣ್ಣ; ಅಭಿಮಾನಿಗಳು ಕೊಟ್ಟ ಅಡ್ವೈಸ್‌ ನೋಡಿ! ...

ಹೀಗೆ ಅದ್ಭುತ ನಟನಾಗಿ, ನಟನೆಯಾಚೆಗೂ ಕೆಲಸ ಮಾಡಿ, ದೇವರ ರಾಜ್ಯ ಕೇರಳದ ಹೆಮ್ಮೆಯ ಮಗ ಲಾಲೇಟ್ಟ ಇನ್ನಷ್ಟು ಅದ್ಭುತ ಸಿನಿಮಾಗಳನ್ನು ನೀಡಲಿ ಅಂತ ಅಭಿಮಾನಿಗಳು ಶುಭ ಕೋರಿದ್ದಾರೆ.