ಮಗಳಿಗೆ ಸೈಕಲ್ ಕಲಿಸಿದೆ, ಮಗನ ಜತೆ ಫುಟ್‌ಬಾಲ್ ಆಡಿದೆ: ಶ್ರೀಮುರಳಿ
ಸ್ಟಾರ್‌ಗಳು ಮನೆಯಲ್ಲೇ ಇದ್ದಾರೆ. ಅವರ ಸಿನಿಮಾಗಳು ಎಲ್ಲಿದ್ದವೋ ಅಲ್ಲಿಯೇ ಇವೆ ಎಂದುಕೊಂಡರೆ ಅದು ತಪ್ಪು. ಅದಕ್ಕೆ ಬದಲಾಗಿ ಸ್ಕಿ್ರಪ್ಟ್ ಹಂತದಲ್ಲಿಯೇ ಅವು ಇನ್ನಷ್ಟುಗಟ್ಟಿಯಾಗುತ್ತಿವೆ. ಜೊತೆಗೆ ಸದಾ ಶೂಟಿಂಗ್, ಸ್ಕ್ರೀನಿಂಗ್, ಡಬ್ಬಿಂಗ್ ಎಂದು ಬ್ಯುಸಿಯಾಗಿದ್ದ ದೊಡ್ಡ ದೊಡ್ಡ ಸ್ಟಾರ್ ಗಳು ಈಗ ಮನೆಯಲ್ಲಿ ಸಾಕಷ್ಟುಕ್ವಾಲಿಟಿ ಟೈಮ್ ಸ್ಪೆಂಡ್ ಮಾಡುತ್ತಿದ್ದಾರೆ. ಇದೆಲ್ಲದರ ಬಗ್ಗೆ ತಮ್ಮ ಅಭಿಪ್ರಾಯವನ್ನು, ಜೀವನ ವಿಧಾನವನ್ನು ರೋರಿಂಗ್ ಸ್ಟಾರ್ ಶ್ರೀಮುರುಳಿ ಹಂಚಿಕೊಂಡಿದ್ದಾರೆ
ಕೆಂಡಪ್ರದಿ
ಹೇಗಿದ್ದೀರಿ ಸರ್?
ಆರಾಮಾಗಿದ್ದೇನೆ. ಮನೆಯಲ್ಲಿಯೇ ಹೆಚ್ಚಿನ ಸಮಯ ಕಳೆಯುತ್ತಿರುವುದರಿಂದ ಫ್ಯಾಮಿಲಿಯೊಂದಿಗೆ ಹೆಚ್ಚಿನ ಸಮಯ ಕಳೆಯುವುದಕ್ಕೆ ಸಾಧ್ಯವಾಗುತ್ತಿದೆ. ನಾನು ಹಿಂದೆ ಏನೆಲ್ಲಾ ಮಿಸ್ ಮಾಡಿಕೊಂಡಿದ್ದೆ ಎನ್ನುವುದು ಈಗ ಗೊತ್ತಾಗುತ್ತಿದೆ. ನನ್ನ ಮಗಳಿಗೆ ಸೈಕಲ್ ಹೊಡೆಯುವುದು ಹೇಳಿಕೊಟ್ಟೆ, ಮಗನೊಂದಿಗೆ ಫುಟ್ಬಾಲ್ ಆಡುತ್ತಿದ್ದೇನೆ. ನನ್ನ ಕುಟುಂಬದೊಂದಿಗೆ ಸೇರಿ ಬ್ಯಾಡ್ಮಿಂಟನ್ ಆಡುತ್ತಿದ್ದೇನೆ. ಅಕ್ಕ ಪಕ್ಕದ ಮನೆಯವರೊಂದಿಗೆ ಬೆರೆಯುತ್ತಿದ್ದೇನೆ. ಬಹುಶಃ ಇವೆಲ್ಲಾ ನಮಗೆ ಮನುಷ್ಯತ್ವದ ಬೆಲೆಯನ್ನು ತಿಳಿಸುತ್ತಿವೆ. ಅಲ್ಲದೇ ದೇವರಿಗಿಂತ ದೊಡ್ಡದು ಬೇರೇನೂ ಇಲ್ಲ. ಮನುಷ್ಯ ಕೇವಲದವನು ಎನ್ನುವುದು ಗೊತ್ತಾಗಿದೆ. ಈಗ ದೇವರು ಕಲಿಸಿಕೊಟ್ಟಪಾಠವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಮುಂದೆ ಸಾಗಬೇಕಾಗಿದೆ.
ಊಟ ಬೇಕು ಅಂದ್ರೆ ಶ್ರೀಮುರಳಿ ಪಾತ್ರೆ ತೊಳೀಲೇ ಬೇಕು!
ಮದಗಜ ಸಿನಿಮಾ ಎಲ್ಲಿಗೆ ಬಂತು?
ಈಗಲೂ ಮದಗಜ ಸಿನಿಮಾ ಕೆಲಸಗಳು ಆಗುತ್ತಿವೆ. ಸ್ಕಿ್ರಪ್ಟ್ ಅನ್ನು ಇನ್ನೂ ಬಲಪಡಿಸುತ್ತಿದ್ದೇವೆ. ಡೈಲಾಗ್‌ಗಳು ಸ್ಟ್ರಾಂಗ್ ಆಗುತ್ತಿವೆ. ಜೊತೆಗೆ ಮುಂದೆ ಏನೇನು ಮಾಡಬೇಕು, ಶೂಟಿಂಗ್ ಹೇಗೆ ಮಾಡಬೇಕು, ಏನೇನು ಬದಲಾವಣೆ ಬೇಕು ಎನ್ನುವುದರ ಚರ್ಚೆ ನಡೆಯುತ್ತಿದೆ. ನಿರ್ಮಾಪಕರು, ನಿರ್ದೇಶಕರು ಸಿಕ್ಕಿರುವ ಸಮಯವನ್ನು ಸಿನಿಮಾಗಾಗಿಯೇ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ನಾನೂ ಕೂಡ ಸಿನಿಮಾಗೆ ಪೂರಕವಾಗಿ ಏನೇನು ಮಾಡಬೇಕೋ ಅದನ್ನು ಮಾಡುತ್ತಿದ್ದೇನೆ.
ಮುಂದಿನ ಬದಲಾವಣೆಗಳು ಹೇಗಿರಬಹುದು?
ಮೊದಲು ನಾವೆಲ್ಲಾ ಆರೋಗ್ಯವಾಗಿ ಇರಬೇಕು. ಅದೇ ಮುಖ್ಯ. ನಾವು ಚೆನ್ನಾಗಿ ಇದ್ದರೆ ಮಾತ್ರ ಸಿನಿಮಾ ಮಾಡಲು ಸಾಧ್ಯ. ನಮ್ಮ ತಂಡದ ನಿಲುವು ಇದೇ ಆಗಿರುವುದರಿಂದ ಸಾಕಷ್ಟುಪೂರ್ವ ತಯಾರಿಗಳನ್ನು ಮಾಡಿಕೊಂಡು ಸರಕಾರದಿಂದ ಅನುಮತಿ ಸಿಕ್ಕಿದ ಬಳಿಕ ಶೂಟಿಂಗ್‌ಗೆ ತೆರಳುತ್ತೇವೆ. ಸಿನಿಮಾ ಎನ್ನುವುದು ಎಲ್ಲರೂ ಸೇರಿ ಮಾಡುವ ಕಾರ್ಯ ಹಾಗಾಗಿ ಎಲ್ಲರ ಆರೋಗ್ಯವನ್ನೂ ದೃಷ್ಟಿಯಲ್ಲಿ ಇಟ್ಟುಕೊಂಡು ನಾವು ಕೆಲಸ ಮಾಡಬೇಕಿದೆ.
ಮಗುವಿನ ರೀತಿಯಲ್ಲಿ ಶಿವಣ್ಣನಿಗೆ ಕೈ ತುತ್ತು ಕೊಟ್ಟ ಶ್ರೀಮುರಳಿ!
ನಮ್ಮ ಚಿತ್ರರಂಗ ಮುಂದೆ ಏನಾಗಬಹುದು?
ಇಂದು ಇಡೀ ಚಿತ್ರರಂಗವೇ ನಿಂತಿದೆ. ಎಲ್ಲರ ಪರಿಸ್ಥಿತಿಯೂ ಒಂದೇ ಆಗಿದೆ. ಹಿಂದೆ ಇದ್ದಂತೆ ಒಂದು ಸಿನಿಮಾ ಬಿಡುಗಡೆಗೆ ಕಾದಿದೆ, ಇನ್ನೊಂದು ಸೆಟ್ಟೇರಿದೆ ಎನ್ನುವುದೇನಿಲ್ಲ. ಎಲ್ಲೆಲ್ಲಿ ನಿಂತಿದ್ದೆವೋ ಅಲ್ಲಿಯೇ ನಿಂತಿದ್ದೇವೆ. ಆದರೆ ಒಂದು ಒಳ್ಳೆಯ ಅವಕಾಶ ನಮ್ಮ ಮುಂದೆ ಇದೆ. ಈಗ ಸಿಕ್ಕಿರುವ ಸಮಯವನ್ನು ಚೆನ್ನಾಗಿ ಬಳಕೆ ಮಾಡಿಕೊಂಡು ಕನ್ನಡ ಚಿತ್ರರಂಗವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ಯಬೇಕು. ನಮ್ಮ ಆಲೋಚನೆಗಳು ಆ ಮಟ್ಟಕ್ಕೆ ಏರಬೇಕು. ಎಲ್ಲರೂ ಸೇರಿ ಕ್ವಾಲಿಟಿ ಸಿನಿಮಾ ಮಾಡಲು ಮುಂದಾದಾಗ ನಿರ್ಮಾಪಕ ಬದುಕುತ್ತಾನೆ, ನಿರ್ದೇಶಕ ಹೆಸರು ಮಾಡುತ್ತಾನೆ. ಎಲ್ಲಾ ನಟರೂ ಗೆಲ್ಲುತ್ತಾರೆ. ಇದು ಎಲ್ಲರಿಗೂ ತೃಪ್ತಿ ನೀಡುತ್ತದೆ. ಈ ತೃಪ್ತಿಯೇ ಅಂತಿಮ. ಇದಕ್ಕಿಂತ ಹೆಚ್ಚಿನದು ಬೇಕಿಲ್ಲ. ನಾನು ನನ್ನೊಂದಿಗೆ ಕೆಲಸ ಮಾಡುವ ಎಲ್ಲರಿಗೂ ಹೇಳುವುದು ನಮ್ಮ ಗುರಿಗಳನ್ನು ದೊಡ್ಡದಾಗಿ ಇಟ್ಟುಕೊಂಡಿರಬೇಕು. ಸಾಧನೆಯ ಹಾದಿಯಲ್ಲಿ ಸದಾ ಸಾಗಬೇಕು. ಒಂದೇ ಕಡೆ ಯಾವತ್ತೂ ನಿಲ್ಲಬಾರದು ಎಂದು. ಹಾಗೆ ಹೇಳುವಾಗ ನನ್ನನ್ನೂ ನಾನು ಫುಶ್ ಮಾಡಿಕೊಳ್ಳುತ್ತೇನೆ. ನನ್ನೊಳಗೂ ಆಗ ಒಂದು ರೀತಿಯ ಸ್ಪಿರಿಟ್ ಹುಟ್ಟುತ್ತದೆ.
ಶ್ರೀ ಮುರಳಿ-ವಿದ್ಯಾ 20 ವರ್ಷದ ಲವ್ ಸ್ಟೋರಿಗೆ ಸಾಕ್ಷಿಯಾಯ್ತು ಈ ಫೋಟೋಸ್!
ಕೊರೋನಾ ಕಲಿಸಿದ ಪಾಠವೇನು?
ನಾವು ಶುಚಿಯಾಗಿ ಇರಬೇಕು ಎಂದು ನೂರಾರು ವರ್ಷದಿಂದ ಕೇವಲ ಪಬ್ಲಿಸಿಟಿ ಮಾಡಿಕೊಂಡು ಬಂದೆವು. ಆದರೆ ಈಗ ಕೊರೋನಾ ಬಂದು ಶುಚಿತ್ವದ ಬಗ್ಗೆ ಒಂದಷ್ಟುಅರಿವು ಮೂಡಿದೆ. ಎಲ್ಲರೂ ಶುಚಿತ್ವಕ್ಕೆ ಆದ್ಯತೆ ನೀಡುತ್ತಿದ್ದಾರೆ. ಇದನ್ನು ನಾವು ಮುಂದೆಯೂ ಅಳವಡಿಸಿಕೊಂಡು ಹೋಗಬೇಕು. ಎಲ್ಲವೂ ಸರಿಯಾಯಿತು ಎಂದುಕೊಂಡು ಮೊದಲಿನ ರೀತಿಯೇ ಆದರೆ ಅಪಾಯ ತಪ್ಪಿದ್ದಲ್ಲ. ನನ್ನ ಪ್ರಕಾರ ಇದೆಲ್ಲವೂ ದೇವರ ಆಟವೇ. ಈಗ ಕಲಿತ ಒಳ್ಳೆಯ ಪಾಠಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡು ಹೋಗಬೇಕು. ಈ ವೇಳೆ ಸಾಮಾಜಿಕ ಜೀವನದಲ್ಲಿ ಇರುವವರ ಜವಾಬ್ದಾರಿ ಹೆಚ್ಚಾಗಿದೆ.