ಫನ್ನಿ ಕ್ಯಾಪ್ಶನ್‌ ಜೊತೆ ಸೆಲ್ಫಿ ಶೇರ್ ಮಾಡಿಕೊಂಡ ನಟ ಮಮ್ಮುಟಿ. ವರ್ಕೌಟ್‌ ಲುಕ್‌ನಲ್ಲಿ ಹೇಗೆ ಕಾಣಿಸುತ್ತಾರೆ ನೋಡಿ....!

ಮಾಲಿವುಡ್‌ ಸೂಪರ್‌ ಸ್ಟಾರ್ ಮಮ್ಮುಟ್ಟಿ 'Age is just a number' ಎಂದು ಈ ಸೆಲ್ಫಿ ಫೋಟೋ ಮೂಲಕ ಪ್ರೂವ್ ಮಾಡುತ್ತಿದ್ದಾರೆ. 68 ವರ್ಷದ ಮಮ್ಮುಟ್ಟಿ ಅವರನ್ನು ತೆರೆ ಮೇಲೆ ಕಂಡರೆ ಈಗಲೂ ವೀಕ್ಷಕರು ಥ್ರಿಲ್ ಆಗುತ್ತಾರೆ. ಅಂಥದ್ರಲ್ಲಿ ಇಂಥ ಹಾಟ್‌ ಫೋಟೋ ಶೇರ್ ಮಾಡಿದರೆ ರಿಯಾಕ್ಟ್ ಮಾಡದೆ ಸುಮ್ಮನಿರುತ್ತಾರಾ?

ಮಲೆಯಾಳಂ ಸೂಪರ್‌ಸ್ಟಾರ್‌ ಮಮ್ಮುಟ್ಟಿ ಮಗನ ಇಂಟರೆಸ್ಟಿಂಗ್‌ ಫ್ಯಾಕ್ಟ್ಸ್‌

ಹೌದು! ಸುಮಾರು 150 ದಿನಗಳಿಂದ ಮನೆಯಲ್ಲಿಯೇ ಸೆಲ್ಫ್‌ ಲಾಕ್‌ ಆಗಿರುವ ನಟ ಮಮ್ಮುಟ್ಟಿ ವರ್ಕೌಟ್‌ ಮಾಡಲು ಪ್ರಾರಂಭಿಸಿದ್ದಾರೆ. ಇದಕ್ಕೆ ಸಾಕ್ಷಿ ಅವರು ಶೇರ್ ಮಾಡಿದ ಸೆಲ್ಫೀ. 'ಮನೆಯಿಂದ ಕೆಲಸ! ಮನೆಯಿಂದ ಕೆಲಸ! ಮನೆ ಕೆಲಸ! ಬೇರೆನೂ ವರ್ಕ್‌ ಇಲ್ಲದೆ ವರ್ಕೌಟ್‌ ಮಾಡುತ್ತಿರುವೆ' ಎಂದು ಬರೆದುಕೊಂಡಿದ್ದಾರೆ.

View post on Instagram

ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಆ್ಯಕ್ಟೀವ್ ಆದ ಮಮ್ಮುಟ್ಟಿ ಶೇರ್ ಮಾಡುವ ಪ್ರತಿಯೊಂದೂ ಪೋಟೋ ಅತಿ ಹೆಚ್ಚು ಲೈಕ್ಸ್, ಕಾಮೆಂಟ್‌ ಹಾಗೂ ಶೇರ್ ಪಡೆಯುತ್ತಿವೆ. ಅಭಿಮಾನಿಗಳು ಮಾತ್ರವಲ್ಲದೇ ಸೆಲೆಬ್ರಿಟಿಗಳೂ ಕಾಮೆಂಟ್ ಮಾಡುತ್ತಿದ್ದಾರೆ. ನಟ ನಿವಿನ್ 'ಮಮ್ಮುಕಾ' ಎಂದರೆ, ರಜೀಶ್ ವಿಜಯ್ 'ವಾವ್‌ ಹ್ಯಾಂಡ್‌ಸಂ' ಎಂದು ಹೇಳಿದ್ದಾರೆ.

ಮಾಲಿವುಡ್‌ ಸ್ಟಾರ್‌ ದುಲ್ಕರ್ ಸಲ್ಮಾನ್ ಬೇಗ ಮದ್ವೆಯಾಗಿದ್ದು ಏಕಂತೆ ಗೊತ್ತಾ?

ಮಲಯಾಳಂ ಚಿತ್ರರಂಗದ ಮಾತ್ರವಲ್ಲದೆ ಮಮ್ಮುಟ್ಟಿಗೆ ಕನ್ನಡ, ತಮಿಳು, ತೆಲುಗು ಹಾಗೂ ಹಿಂದೆ ಚಿತ್ರರಂಗದಲ್ಲಿ ಸುಪ್ರಸಿದ್ಧ. ಅಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ರಾಜಕಿರಣ್ ಹಾಗೂ ಮೀನಾ ಜೊತೆ 'ಶೈಲಾಕ್‌' ಚಿತ್ರದ ಕಾಣಿಸಿಕೊಂಡ ನಂತರ ಮಮ್ಮುಟ್ಟಿ ಯಾವ ಸಿನಿಮಾಗೂ ಸಹಿ ಮಾಡಿಲ್ವಂತೆ. ಇನ್ನು ಪುತ್ರ ದುಲ್ಮರ್‌ ಸಲ್ಮಾನ್‌ ಬ್ಯಾಕ್‌ ಟು ಬ್ಯಾಕ್ ಹಿಟ್‌ ಚಿತ್ರಗಳನ್ನು ನೀಡುತ್ತಾ ಫುಲ್‌ ಬ್ಯುಸಿಯಾಗಿದ್ದಾರೆ.