ಬಾಲಿವುಡ್ ನಟ ಸೈಫ್ ಅಲಿ ಖಾನ್ ಕೊರೋನಾ ಲಸಿಕೆ ತೆಗೆದುಕೊಂಡು ಟ್ರೋಲ್ ಆಗಿದ್ದಾರೆ. ನಟ ಲಸಿಕೆ ಹಾಕ್ಕೊಳೋ ವಿಡಿಯೋ ನೋಡಿ ಜನ ಟ್ರೋಲ್ ಮಾಡಿದ್ದಾರೆ.

ಖಾಕಿ ಪ್ಯಾಂಟ್ ಮತ್ತು ಶಾರ್ಟ್ ಬ್ಲೂ ಕುರ್ತಾ ಧರಿಸಿದ್ದ ನಟ ಮುಂಬೈನ ಕೊರೋನಾ ಲಸಿಕಾ ಕೇಂದ್ರಕ್ಕೆ ಬಂದಿದ್ದಾರೆ. ನಟನ ಪೋಟೋ, ವಿಡಿಯೋ ವೈರಲ್ ಆಗುತ್ತಿದ್ದಂತೆ, ನಟನಿಗೆ ಮಾತ್ರ ಇಷ್ಟು ಬೇಗ ಲಸಿಕೆ ಸಿಕ್ಕಿದ್ದು ಹೇಗೆ ಎಂದು ಆಶ್ಚರ್ಯಪಟ್ಟಿದ್ದಾರೆ ನೆಟ್ಟಿಗರು.

ಸಲ್ಮಾನ್‌ಖಾನ್‌ ಶರ್ಟ್‌ಲೆಸ್ ಫೋಟೋ ಶೇರ್ ಮಾಡಿದ ತಂಗಿ

ನಟನಿಗೆ 60 ವರ್ಷ ಕಳೆದಿಲ್ಲ. ಹಿರಿಯರೂ ಇನ್ನೂ ಸರತಿಯಲ್ಲಿರುವಾಗ ಸೈಫ್ಗೆ ಹೇಗೆ ಲಸಿಕೆ ಸಿಕ್ಕಿತು ? ಅವರಿಗೆ 60 ವರ್ಷ ಆಯ್ತಾ ಎಂದು ಪ್ರಶ್ನಸಿದ್ದಾರೆ ನೆಟ್ಟಿಗರು.

ಈಗ ಅವನು ಸೇಫ್, ಸೈಫ್ ಅಲ್ಲ ಎಂದೂ ಕೆಲವರು ಕಮೆಂಟ್ ಮಾಡಿದ್ದಾರೆ. ಭೂತ್ ಪೊಲೀಸ್ ಶೂಟಿಂಗ್ ನಂತರ ನಟ ಈಗ ತನ್ನ ಎರಡನೇ ಮಗುವಿನ ಜೊತೆ ಸಮಯ ಕಳೆಯುತ್ತಿದ್ದಾರೆ.