ಮುಂಬೈ/ಬೆಂಗಳೂರು (ಏ. 22)  ಬಾಲಿವುಡ್ ಹಿರಿಯ ನಟ ಮಿಥುನ್ ಚಕ್ರವರ್ತಿ ತಂದೆ ಬಸಂತ್ ಕುಮಾರ್ ಚಕ್ರವರ್ತಿ(95ವರ್ಷ) ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದಾರೆ. ತಂದೆ ನಿಧನರಾದರೆ ಇತ್ತ ಬೆಂಗಳೂರಿನಲ್ಲಿ ಹಿರಿಯ ನಟ ಇದ್ದಾರೆ.

ಲಾಕ್ ಡೌನ್ ಪರಿಣಾಮ ಚಕ್ರವರ್ತಿ ಬೆಂಗಳೂರಿನಲ್ಲಿಯೇ ಇದ್ದಾರೆ ಎಂದು ತಿಳಿದು ಬಂದಿದೆ. ಸಿನಿಮಾ ಶೂಟಿಂಗ್ ಇದ್ದ ಕಾರಣ ಮಿಥುನ್ ಚಕ್ರವರ್ತಿ ಬೆಂಗಳೂರಿನಲ್ಲಿ ಉಳಿದುಕೊಂಡಿದ್ದರು. ಈ ಸಂದರ್ಭದಲ್ಲಿ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಿಸಿದ್ದರಿಂದ ಮಿಥುನ್ ಚಕ್ರವರ್ತಿ ಬೆಂಗಳೂರಿನಲ್ಲಿಯೇ ಉಳಿಯುವಂತಾಗಿತ್ತು. ಇದೀಗ ಮುಂಬೈ ಗೆ ತೆರಳಲು ಚಕ್ರವರ್ತಿ ಅನಿವಾರ್ಯವಾಗಿ ಯತ್ನ ಮಾಡಲೇಬೇಕಿದೆ.

ಗುದ್ದಲಿ ಹಿಡಿದ ನಾದಬ್ರಹ್ಮ ರಸ್ತೆ ಗುಂಡಿ ಮುಚ್ಚಿದರು

ಬೆಂಗಾಲಿ ನಟಿ ರಿತುಪರ್ಣಾ ಸೇನ್ ಗುಪ್ತಾ ಅವರು ಮಿಥುನ್ ಚಕ್ರವರ್ತಿ ತಂದೆಯ ನಿಧನ ವಾರ್ತೆಯನ್ನು ಟ್ವೀಟರ್ ನಲ್ಲಿ ಶೇರ್ ಮಾಡಿದ್ದು, ಸಂತಾಪ ವ್ಯಕ್ತಪಡಿಸಿದ್ದಾರೆ. ಬಸಂತ್ ಕುಮಾರ್ ಅವರು ಪತ್ನಿ ಸಾಂಟಿಮೋಯೀ ಹಾಗೂ ಹಿರಿಯ ಪುತ್ರ ಮಿಥುನ್ ಚಕ್ರವರ್ತಿ ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ. ಮಿಥುನ್ ಚಕ್ರವರ್ತಿ ಹಿರಿಯ ಪುತ್ರ ಮಿಮೋಹ್ ಚಕ್ರವರ್ತಿ ಮುಂಬೈನಲ್ಲಿಯೇ ಇದ್ದಾರೆ ಎನ್ನಲಾಗಿದೆ.

ಮೊದಲೆ ಹೇಳಿದಂತೆ ಕೊರೋನಾ ಮತ್ತು ಲಾಕ್ ಡೌನ್ ಯಾರನ್ನು ಬಿಟ್ಟಿಲ್ಲ. ಆತ ಸಿನಿಮಾ ನಟನಾಗಲಿ ಸಾಮಾನ್ಯ ಪ್ರಜೆಯಾಗಲಿ. ಆದರೆ ಇಂಥ ಸಂದರ್ಭಗಳಿಉ ಎದುರಾದಾಗ ಡಬಲ್ ಸಂಕಷ್ಟ ಮನುಷ್ಯನನ್ನು ಕಾಡುತ್ತದೆ.

 

ಇಂಗ್ಲಿಷ್ ನಲ್ಲಿಯೂ ಓದಿ