ಮಿಸ್ ನೇಪಾಳ್ ಮಾಲಿನಾ ಜೋಶಿ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ. ಆದರೆ ಗೋಲ್ಡನ್ ಸೀರೆಯಲ್ಲಿ ಮೈಮಾಟ ಪ್ರದರ್ಶಿಸಿದ್ದಕ್ಕೆ ಟೀಕೆ, ಪ್ರಶಂಸೆ ವ್ಯಕ್ತವಾಗಿದೆ. ಸಾಂಪ್ರದಾಯಿಕ ಉಡುಗೆ ತೊಟ್ಟು ಭಕ್ತಿಯಿಂದ ಸ್ನಾನ ಮಾಡಿದ್ದಕ್ಕೆ ಬೆಂಬಲವೂ ವ್ಯಕ್ತವಾಗಿದೆ. ವಿಡಿಯೋ ಹಾಘೂ ಕಮೆಂಟ್‌ಗಳನ್ನು ಇಲ್ಲಿ ನೋಡಿ. 

ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭ ಮೇಳದಲ್ಲಿ ಅನೇಕಾನೇಕ ವಿಐಪಿಗಳು ಭಾಗವಹಿಸ್ತಾ ಇದಾರೆ. ಹಾಗೇ ನೇಪಾಳಿ ಬೆಡಗಿ, ಮಿಸ್‌ ನೇಪಾಳ್‌ ಟೈಟಲ್‌ ಪಡೆದ ಬ್ಯೂಟಿ ಮಾಲಿನಾ ಜೋಶಿ ಕೂಡ ಮಿಂದೆದ್ದಿದ್ದಾರೆ. ತಾವು ಪವಿತ್ರ ಸ್ನಾನ ಮಾಡಿ ಗಂಗೆಯಲ್ಲಿ ಮುಳುಗಿ ಎದ್ದ ಪಿಕ್ಚರ್‌ಗಳನ್ನು ಹಾಗೂ ವಿಡಿಯೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಆದ್ರೆ ಈ ವಿಡಿಯೋಗಳನ್ನ ನೋಡಿ ಜನ ಬೇರೆಯೇ ಥರ ಕಾಮೆಂಟ್‌ ಮಾಡ್ತಿದಾರೆ.

ಮಾಲಿನಾ ಜೋಶಿ ಕಡಿಮೆ ಸೆಲೆಬ್ರೆಟಿಯೇನಲ್ಲ. ನೇಪಾಳಿ ಸುಂದರಿ, ಮಾಡೆಲ್‌ ಮತ್ತು ನಟಿ. ಮಿಸ್‌ ನೇಪಾಳ ಸೌಂದರ್ಯ ಸ್ಪರ್ಧೆಯ ರಾಣಿ. ಬಳಿಕ ಕೆಲವು ಸಿನಿಮಾಗಳಲ್ಲಿ, ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿದ್ದಾಳೆ. ಇನ್‌ಸ್ಟಗ್ರಾಂನಲ್ಲಿ 5 ಲಕ್ಷ ಫಾಲೋವರ್ಸ್‌ ಈಕೆಗೆ ಇದ್ದಾರೆ. ಈಕೆ ಸ್ವಲ್ಪ ಧಾರ್ಮಿಕ ಸ್ವಭಾವದವಳು ಎಂಬುದು ಈಕೆಯ ಪೋಸ್ಟ್‌ಗಳನ್ನು ನೋಡಿದರೆ ಗೊತ್ತಾಗುತ್ತದೆ. ತಾನು ಹೋದಲ್ಲಿ ಧಾರ್ಮಿಕ ಕ್ಷೇತ್ರಗಳಿದ್ದರೆ ತಪ್ಪದೆ ಭೇಟಿ ನೀಡುತ್ತಾಳೆ, ಪೂಜೆ ಸಲ್ಲಿಸುತ್ತಾಳೆ. ಹಾಗೇ ಕುಂಭಕ್ಕೂ ಬಂದಿದ್ದಾಳೆ. ಅಲ್ಲಿ ಗಂಗೆಯಲ್ಲಿ ಪವಿತ್ರ ಸ್ನಾನ ಮಾಡಿದ್ದಾಳೆ.

ಪವಿತ್ರ ಸ್ನಾನವೇನೋ ಮಾಡಿದ್ದಾಳೆ, ಪಾಪ. ಆದರೆ ಆ ಸಂದರ್ಭದಲ್ಲಿ ಆಕೆ ಧರಿಸಿದ್ದು ಗೋಲ್ಡನ್‌ ಕಲರ್‌ ಸೀರೆಯನ್ನು. ಅದು ಆಕೆಯ ಮೈಮಾಟವನ್ನು ಸೊಗಸಾಗಿ ಎತ್ತಿ ತೋರಿಸುವಂತಿತ್ತು. ಪೂರ್ತಿಯಾಗಿ ನೆನೆದ ಸೀರೆ ತೋಯ್ದ ಮೈಯಲ್ಲಿ ಆಕೆ ಧರೆಗಿಳಿದ ಅಪ್ಸರೆಯಂತೆ ಕಾಣಿಸಿದ್ದೇನೋ ನಿಜ. ಇದನ್ನಾಕೆ ಇನ್‌ಸ್ಟಾದಲ್ಲಿ ಹಾಕಿಕೊಂಡಳು. ಆದರೆ ಈ ಅಪ್ಸರಾ ನೋಟ ಬೇರೆ ಕಡೆಗಾದರೆ ಸೈ, ಅದು ಕುಂಭ ಮೇಳಕ್ಕಲ್ಲ ಎಂದು ಆಕೆಯ ಫಾಲೋವರ್ಸ್‌ಗಳಲ್ಲಿ ಸುಮಾರು ಮಂದಿ ಕಾಮೆಂಟ್‌ ಮಾಡಿದ್ದಾರೆ. 

ಸಿನಿಮಾ ನಟಿಯರು ಯಾವ ಬಗೆಯ ಬಟ್ಟೆ ಧರಿಸಿದರೂ ಟೀಕೆಗೆ ಒಳಗಾಗುತ್ತಾರೆ; ಧರಿಸದೇ ಇದ್ದರೂ ಟೀಕೆಗೆ ಒಳಗಾಗುತ್ತಾರೆ ಎಂಬುದೇನೋ ನಿಜವೇ. ಈ ಸಂದರ್ಭದಲ್ಲಿ ಮಾಲಿನಾ ಜೋಶಿಯ ಉಡುಗೆಯೂ ಸಭ್ಯವಾಗಿಯೇ ಇದೆ. ಆದರೆ ಚಂದದ ಸೀರೆನೇ ಧರಿಸಿ ಆಕೆ ನೀರಿಗಿಳಿದಿದ್ದಾಳೆ. ಆದರೆ ನೋಡುಗರಿಗೆ ಇದನ್ನು ಅರಗಿಸಿಕೊಳ್ಳಲು ಯಾಕೆ ಕಷ್ಟವಾಯಿತೋ ಗೊತ್ತಿಲ್ಲ. "ನೀವು ಸುಂದರಿಯಾಗಿಯೇ ಇದೀರಿ. ಅದನ್ನು ಕುಂಭಮೇಳದಲ್ಲಿ ತೋರಿಸಬೇಕಾಗಿಲ್ಲ" "ಕುಂಭಮೇಳ ಇರೋದು ಧಾರ್ಮಿಕ ಸ್ವಭಾವದ ಅಭಿವ್ಯಕ್ತಿಗೆ. ಮೈಮಾಟ ತೋರಿಸೋದಕ್ಕಲ್ಲ" ಎಂದು ಕೆಲವರು ಖಾರವಾಗಿ ಕಾಮೆಂಟ್‌ ಮಾಡಿದ್ದಾರೆ. 

ಇನ್ನು ಹಲವರು ಆಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಸೀರೆ ನಮ್ಮ ದೇಶದ ಸಾಂಪ್ರದಾಯಿಕ ಉಡುಗೆ. ಹಳ್ಳಿಯ ಹೆಂಗಸರು ಕೂಡ ಸೀರೆ ಧರಿಸಿಯೇ ಗಂಗೆಯಲ್ಲಿ ಮುಳುಗು ಹಾಕುತ್ತಾರೆ. ಅವರಲ್ಲಿ ಕಾಣದ ಹಾಟ್‌ ಗ್ಲಾಮರ್‌ ಅಂಶವನ್ನು ಮಾಲಿನಾ ಜೋಶಿಯಲ್ಲಿ ಯಾಕೆ ಕಾಣುತ್ತೀರಿ? ಆಕೆ ಸುಂದರವಾಗಿರೋದೇ ಅವರ ತಪ್ಪಾ? ಭಕ್ತಿ ಭಾವಗಳಿಂದ ಗಂಗೆಯಲ್ಲಿ ಆಕೆ ಮುಳುಗು ಹಾಕಿದ್ದಾಳೆ. ನೋಡಿ ಟೀಕಿಸುವ ನಿಮ್ಮ ಕಣ್ಣೇ ಕೆಟ್ಟದಾಗಿದ್ದರೆ ಯಾರೇನು ಮಾಡಲು ಸಾಧ್ಯ ಎಂದು ಹಲವರು ಆಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

12 ಕೋಟಿ ಸಿನಿಮಾ ಗಳಿಸಿದ್ದು, ಜಸ್ಟ್ 70 ಸಾವಿರ; ಸೋಲಿಗೆ ಕಾರಣವಾಯ್ತು ಹೀರೋ ನಟನೆ, ನಿರ್ಮಾಪಕರು ಬೀದಿಗೆ!

1989ರಲ್ಲಿ ನೇಪಾಳದಲ್ಲಿ ಜನಿಸಿದ ಈಕೆ 2011ರಲ್ಲಿ ಮಿಸ್‌ ನೇಪಾಳ್‌ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಮಕುಟ ಧರಿಸಿದಳು. ನಂತರ 2011ರ ನವೆಂಬರ್‌ನಲ್ಲಿ ಲಂಡನ್‌ನಲ್ಲಿ ನಡೆದ ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಈಕೆ ಭಾಗವಹಿಸಿ ಅಂತಿಮ ಸುತ್ತಿಗೆ ಹೋದಳು. ಅಲ್ಲಿ ಈಕೆಗೆ ನೇಪಾಳೀಸ್‌ ಜಾನಪದ ನೃತ್ಯ ಮಾಡಲು ಹೇಳಲಾಯಿತು. ಚೆನ್ನಾಗಿಯೇ ಮಾಡಿದಳು. ಆ ಸ್ಪರ್ಧೆಯಲ್ಲಿ ಆಯ್ಕೆಯಾದ ʼಬ್ಯೂಟಿ ವಿತ್‌ ಎ ಪರ್ಪಸ್‌ʼ ಟೈಟಲ್‌ನ ಸುಂದರಿಯರಲ್ಲಿ ಈಕೆ ಒಬ್ಬಳೆನಿಸಿದಳು. ಮಿಸ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಅದೊಂದು ಮೇಜರ್‌ ಪುರಸ್ಕಾರ. 

ಮದುವೆಯಾಗಿದ್ರು 40ರ ಹೀರೋಯಿನ್ ಜೊತೆ ಟಾಪ್ ಹೀರೋ ಲವ್!

ನೇಪಾಳದ ಧಾರಣ್‌ನಲ್ಲಿ ಈಕೆ ಎಂಬಿಎ ಮಾಡಿದಳು. ಏಸ್‌ ಇನ್‌ಸ್ಟಿಟ್ಯೂಟ್‌ ಆಫ್‌ ಮ್ಯಾನೇಜ್‌ಮೆಂಟ್‌ನ್ಲಿ ಮಾರ್ಕೆಟಿಂಗ್‌ನಲ್ಲಿ ಸ್ಪೆಶಲೈಸೇಷನ್‌ ಮಾಡಿದಳು. ಮಿಸ್‌ ಏಂಜೆಲ್‌ 2010 ಸ್ಪರ್ಧೆಯಲ್ಲಿ ಈಕೆ ಟಾಪ್‌ ಐದು ಫೈನಲಿಸ್ಟ್‌ಗಳಲ್ಲಿ ಒಬ್ಬಳಾದಳು. ಅಲ್ಲಿ ಮಿಸ್‌ ಇಂಟೆಲೆಕ್ಟ್‌ ಪುರಸ್ಕಾರ ಗೆದ್ದಳು. 2013ರಲ್ಲಿ ಕೊರಿಯಾದ ಸಿಯೋಲ್‌ನಲ್ಲಿ ಮಿಸ್‌ ಏಷ್ಯಾ ಪೆಸಿಫಿಕ್‌ ವರ್ಲ್ಡ್‌ ಸ್ಪರ್ಧೆಯಲ್ಲಿ ಸೆಮಿ ಫೈನಲಿಸ್ಟ್‌ಗಳಲ್ಲಿ ಒಬ್ಬಳಾದಳು. 

View post on Instagram