ಅನಂತ್ ಅಂಬಾನಿ ಮದ್ವೆಯಲ್ಲಿ ಕೈ ತುಂಬಾ ಸಂಪಾದನೆ, ಆದ್ರೂ ಈ ವಿಷ್ಯಕ್ಕೆ ಮಿಕಾ ಸಿಂಗ್ ಅತೃಪ್ತಿ
ಅನಂತ್ ಅಂಬಾನಿ ಮದುವೆಯಲ್ಲಿ ಗಾಯಕ ಮಿಕಾ ಸಿಂಗ್ ಗೆ ದೊಡ್ಡ ಮೊತ್ತ ಸಂಭಾವನೆ ರೂಪದಲ್ಲಿ ಸಿಕ್ಕಿದೆ. ಆದ್ರೂ ಮಿಕಾ ಸಿಂಗ್ ಅಸಮಾಧಾನಗೊಂಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದು ಇಲ್ಲಿದೆ.
ಸದಾ ಒಂದಿಲ್ಲೊಂದು ವಿಷ್ಯದಲ್ಲಿ ಸುದ್ದಿ ಮಾಡುವ ಸಿಂಗರ್ಗಳಲ್ಲಿ ಮಿಕಾ ಸಿಂಗ್ (Mika Singh) ಮೊದಲಿದ್ದಾರೆ. ಮಿಕಾ ಸಿಂಗ್ ವಿವಾದವಾಗುವ ಯಾವುದೇ ಅವಕಾಶವನ್ನು ಬಿಡೋದಿಲ್ಲ. ಒಂದಲ್ಲ ಒಂದು ವಿಷ್ಯದ ಬಗ್ಗೆ ಕಾಂಟ್ರವರ್ಸಿ ಮಾತನಾಡಿ, ಪ್ರಕರಣ ಮೈಮೇಲೆ ಎಳೆದುಕೊಳ್ಳೋದ್ರಲ್ಲಿ ಮಿಕಾ ಸಿಂಗ್ ಮುಂದಿದ್ದಾರೆ. ಈಗ ದಿ ಲಲ್ಲಾಂಟಾಪ್ (The Lallantop) ಗೆ ನೀಡಿದ ಸಂದರ್ಶನದಲ್ಲಿ ಮಿಕಾ ಸಿಂಗ್, ಅನಂತ್ ಅಂಬಾನಿ ಮದುವೆಯಲ್ಲಿ ಸಿಕ್ಕ ಸಂಭಾವನೆ, ನಿರಾಸೆಯಾದ ವಿಷ್ಯ ಸೇರಿದಂತೆ ಬ್ರೇಕ್ ಅಪ್, ಮದುವೆ ಬಗ್ಗೆ ಮಾತನಾಡಿದ್ದಾರೆ.
ಸಂದರ್ಶನದಲ್ಲಿ ಅನಂತ್ ಅಂಬಾನಿ (Anant Ambani) ಮದುವೆ ವಿಷ್ಯದ ಚರ್ಚೆ ನಡೆದಿದೆ. ಮದುವೆಯಲ್ಲಿ ಮಿಕಾ ಸಿಂಗ್ ಅವರಿಗೆ ಹಾಡುವ ಅವಕಾಶ ಸಿಕ್ಕಿತ್ತು. ಆದ್ರೆ ಅಲ್ಲಿ ನನಗೆ ನಿರಾಶೆಯಾಗಿದೆ. ಎಲ್ಲರಿಗೂ ಅಂಬಾನಿ ಕುಟುಂಬ ವಾಚ್ ನೀಡಿದೆ. ಆದ್ರೆ ನನಗೆ ನೀಡಲಿಲ್ಲ. ಇದು ನನಗೆ ಬೇಸರತರಿಸಿದೆ ಎಂದು ಮಿಕಾ ಸಿಂಗ್ ಹೇಳಿದ್ದಾರೆ. ಅನಂತ್ ಅಂಬಾನಿ ಮದುವೆಯಲ್ಲಿ ನನಗೆ ಎಷ್ಟು ಸಂಭಾವನೆ ನೀಡಿದ್ದಾರೆ ಎಂಬುದನ್ನು ಹೇಳಲು ಸಾಧ್ಯವಿಲ್ಲ. ಆದ್ರೆ ದೊಡ್ಡೆ ಮೊತ್ತ ಸಿಕ್ಕಿದೆ. ಐದು ವರ್ಷ ನಾನು ಆರಾಮವಾಗಿ ಜೀವನ ನಡೆಸುವಷ್ಟು ಹಣ ನನ್ನ ಖಾತೆ ಸೇರಿದೆ ಎಂದು ಮಿಕಾ ಸಿಂಗ್ ಹೇಳಿದ್ದಾರೆ. ನಾನು ಸರಳ ಜೀವನ ನಡೆಸುತ್ತೇನೆ. ಖರ್ಚು ಕಡಿಮೆ. ಅಂಬಾನಿ ಕುಟುಂಬ ನೀಡಿದ ಹಣವನ್ನು ನಾನು ಹೇಳಲಾರೆ ಆದ್ರೆ ಐದು ವರ್ಷಕ್ಕಾಗುವಷ್ಟು ಹಣ ನೀಡಿದ್ದಾರೆ ಎಂಬುದನ್ನು ಹೇಳಬಲ್ಲೆ ಎಂದಿದ್ದಾರೆ.
ಅಲ್ಲು ಅರ್ಜುನ್ಗೆ ಜ್ವರ, ಟಾಲಿವುಡ್ಗೆ ಬರೆ! ಪುಷ್ಪಾ 2 ಟೀಮ್‌ಗೆ ಸಕ್ಸಸ್ ಸಿಕ್ಕರೂ ಖುಷಿ ಇಲ್ವಾ?
ಸಂದರ್ಶನದ ಮಧ್ಯೆ ಕೈ ಮುಗಿದು ಅನಂತ್ ಅಂಬಾನಿಗೆ ಮನವಿ ಮಾಡಿದ ಮಿಕಾ ಸಿಂಗ್, ಅನಂತ್ ಬ್ರದರ್, ನಾನು ನಿಮ್ಮ ಸಹೋದರನಿದ್ದಂತೆ. ಎಲ್ಲರಿಗೂ ನೀವು ವಾಚ್ ನೀಡಿದ್ದೀರಿ. ನನಗೂ ಕಳುಹಿಸಿಕೊಡಿ ಎಂದಿದ್ದಾರೆ.
ಆಕಾಂಕ್ಷ (Akanksha)
ಮದುವೆ ಯಾಕಾಗಿಲ್ಲ ಮಿಕಾ ಸಿಂಗ್ ? : ಸ್ವಯಂವರದಲ್ಲಿ ಒಬ್ಬರನ್ನು ಆಯ್ಕೆ ಮಾಡ್ಬೇಕಿತ್ತು. ನನಗೆ ಮೂವರು ಇಷ್ಟವಾಗಿದ್ದರು. ಚಾನೆಲ್ ನವರು ಇದನ್ನು ನಿರಾಕರಿಸಿದ್ದರು. ಒಬ್ಬರ ಆಯ್ಕೆಗೆ ಮಾತ್ರ ಅವಕಾಶ ನೀಡಿದ್ದರು. ಹಾಗಾಗಿ ಆಕಾಂಕ್ಷ ಅವರನ್ನು ಆಯ್ಕೆ ಮಾಡ್ಕೊಂಡಿದ್ದೆ. ಆದ್ರೆ ಬಿಗ್ ಬಾಸ್ ಮನೆಯಲ್ಲಿ ಆಕಾಂಕ್ಷ ಬಣ್ಣ ಬಯಲಾಯ್ತು. ಪುಣ್ಯ, ಅವರನ್ನು ಮದುವೆ ಆಗಿರಲಿಲ್ಲ, ಮದುವೆ ಆಗಿದ್ರೆ ಏನಾಗ್ತಿತ್ತೋ ಗೊತ್ತಿಲ್ಲ ಎಂದು ಮಿಕಾ ಸಿಂಗ್ ಹೇಳಿದ್ದಾರೆ.
ರಾಕಿ ಸಾವಂತ್ ಮಗು ಎಂದ ಮಿಕಾ ಸಿಂಗ್ : ಒಳ್ಳೆಯದಿರಲಿ ಇಲ್ಲ ಕೆಟ್ಟದಿರಲಿ, ಸದಾ ಜನರು ತನ್ನ ಬಗ್ಗೆ ಮಾತನಾಡ್ಬೇಕು ಎಂಬ ಸ್ವಭಾವದವರು ಮಿಕಾ ಸಿಂಗ್. ಸಂದರ್ಶನದಲ್ಲಿ ರಾಖಿ ಸಾವಂತ್ ಮಗು ಎಂದು ಮಿಕಾ ಕರೆದಿದ್ದಾರೆ. ಹನಿ ಸಿಂಗ್ ಮತ್ತು ಬಾದ್‌ಶಾ ಅವರನ್ನು ಚುನ್ನು-ಮುನ್ನು ಎಂದು ಕರೆದಿದ್ದಾರೆ. ಅವರೆಲ್ಲರ ತಂದೆ ತಾನು ಎಂದಿದ್ದಾರೆ ಮಿಕಾ.
ಸತತ 38 ವರ್ಷ, ಶಿವಣ್ಣ ಬಣ್ಣ ಹಚ್ಚದ ದಿನವೇ ಇಲ್ಲ! ಸಿನಿಕಾರ್ಮಿಕರ ಅನ್ನದಾತ, ದೊರೆಗಾಗಿ ಕಾದಿದೆ
ಮಿಕಾ ಓದಿದ್ದೆಷ್ಟು? : ಮಿಕಾ ಸಿಂಗ್ ಬರೀ ಐದನೇ ತರಗತಿ ಫೇಲ್ ಆಗಿದ್ದಾರೆ. ಅವರ ಸಹೋದರ ಮತ್ತು ಮಾರ್ಗದರ್ಶಿ ದಲೇರ್ ಮೆಹಂಗಿ 6 ನೇ ತರಗತಿಯಲ್ಲಿ ಅನುತ್ತೀರ್ಣರಾಗಿದ್ದರಂತೆ. ಅಣ್ಣನಿಗಿಂತ ಹೆಚ್ಚು ಅಧ್ಯಯನ ಮಾಡುವ ಮನಸ್ಸು ಮಿಕಾ ಸಿಂಗ್ ಅವರಿಗೆ ಇರಲಿಲ್ಲವಂತೆ. ಹಾಗಾಗಿ ಅರ್ಧಕ್ಕೆ ವಿದ್ಯಾಭ್ಯಾಸ ನಿಲ್ಲಿಸಿದೆ ಎನ್ನುತ್ತಾರೆ.
ಮಿಕಾ ಸಿಂಗ್ ಮದುವೆ ಯಾವಾಗ? : ಮದುವೆ ಯಾವಾಗ ಹಾಗೆ ಯಾರ ಜೊತೆ ಎಂಬುದಕ್ಕೆ ಮಿಕಾ ಸಿಂಗ್ ಬಳಿ ಉತ್ತರವಿಲ್ಲ. ಮುಂದೊಂದು ದಿನ ಮದುವೆ ಆಗಿಯೇ ಆಗ್ತೇನೆ, ಮದುವೆ ಆದ್ಮೇಲೆ ಹೆಂಡತಿ ಮಾತನ್ನು ಪಾಲಿಸ್ತೇನೆ ಎಂದು ಮಿಕಾ ಸಿಂಗ್ ತಿಳಿಸಿದ್ದಾರೆ.