Asianet Suvarna News Asianet Suvarna News

ರಾಣಾ ದಗ್ಗುಬಾಟಿ ದಾಂಪತ್ಯದಲ್ಲಿ ಬಿರುಕು? ವದಂತಿಗೆ ಪತ್ನಿ ಮಿಹಿಕಾ ಸ್ಪಷ್ಟನೆ

ತೆಲುಗು ಸ್ಟಾರ್, ಬಲ್ಲಾಳದೇವ ರಾಣಾದಗ್ಗುಬಾಟಿ ದಾಂಪತ್ಯದಲ್ಲಿ ಏನು ಸರಿಯಿಲ್ಲ ಎನ್ನುವ ಗುಸುಗುಸು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಅಂದಹಾಗೆ ರಾಣಾ ದಗ್ಗುಬಾಟಿ ಪ್ರೇಯಸಿ ಮಿಹಿಕಾ ಬಜಾಜ್ ಜೊತೆ ಹಸೆಮಣೆ ಏರಿ ಭರ್ತಿ ಎರಡು ವರ್ಷ ತುಂಬಿದೆ. ಈ ನಡುವೆ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಎಲ್ಲಿಯೂ ರಾಣಾ ಅಥವಾ ಅವರ ಪತ್ನಿ ಪ್ರತಿಕ್ರಿಯೆ ನೀಡಿರಲಿಲ್ಲ. ಅಂದಹಾಗೆ ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಲು ಕಾರಣವಾಗಿದ್ದು ಸಾಮಾಜಿಕ ಜಾಲತಾಣದಿಂದ ಮಾಯವಾಗಿರುವ ಪೋಸ್ಟರ್ ಗಳು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಶೇರ್ ಮಾಡುವುದನ್ನೆ ಬಿಟ್ಟಿದ್ದರು. ಅಲ್ಲದೇ ರಾಣಾ ಇನ್ಸ್ಟಾಗ್ರಾಮ್ ನಲ್ಲಿ ಎಲ್ಲಾ ಪೋಸ್ಟ್ ಗಳನ್ನು  ಡಿಲೀಟ್ ಮಾಡಿದ್ದಾರೆ.

miheeka bajaj shares photos with husband rana daggubati sgk
Author
Bengaluru, First Published Aug 8, 2022, 6:59 PM IST

ತೆಲುಗು ಸ್ಟಾರ್, ಬಲ್ಲಾಳದೇವ ರಾಣಾದಗ್ಗುಬಾಟಿ ದಾಂಪತ್ಯದಲ್ಲಿ ಏನು ಸರಿಯಿಲ್ಲ ಎನ್ನುವ ಗುಸುಗುಸು ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದೆ. ಅಂದಹಾಗೆ ರಾಣಾ ದಗ್ಗುಬಾಟಿ ಪ್ರೇಯಸಿ ಮಿಹಿಕಾ ಬಜಾಜ್ ಜೊತೆ ಹಸೆಮಣೆ ಏರಿ ಭರ್ತಿ ಎರಡು ವರ್ಷ ತುಂಬಿದೆ. ಈ ನಡುವೆ ಇಬ್ಬರ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ಮಾತುಗಳು ಹರಿದಾಡುತ್ತಿವೆ. ಆದರೆ ಈ ಬಗ್ಗೆ ಎಲ್ಲಿಯೂ ರಾಣಾ ಅಥವಾ ಅವರ ಪತ್ನಿ ಪ್ರತಿಕ್ರಿಯೆ ನೀಡಿರಲಿಲ್ಲ. ಅಂದಹಾಗೆ ಈ ವದಂತಿಗೆ ಮತ್ತಷ್ಟು ಪುಷ್ಠಿ ನೀಡಲು ಕಾರಣವಾಗಿದ್ದು ಸಾಮಾಜಿಕ ಜಾಲತಾಣದಿಂದ ಮಾಯವಾಗಿರುವ ಪೋಸ್ಟರ್ ಗಳು. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಶೇರ್ ಮಾಡುವುದನ್ನೆ ಬಿಟ್ಟಿದ್ದರು. ಅಲ್ಲದೇ ರಾಣಾ ಇನ್ಸ್ಟಾಗ್ರಾಮ್ ನಲ್ಲಿ ಎಲ್ಲಾ ಪೋಸ್ಟ್ ಗಳನ್ನು  ಡಿಲೀಟ್ ಮಾಡಿದ್ದಾರೆ. ಹಾಗಾಗಿ ಇಬ್ಬರ ನಡುವೆ ಯಾವುದು ಸರಿಯಿಲ್ಲ ಎನ್ನುವ ಸುದ್ದಿ ಮತ್ತಷ್ಟು ಜೋರಾಯಿತು. ಇತ್ತೀಚಿಗಷ್ಟೆ ಟಾಲಿವುಡ್ ನಲ್ಲಿ ಸ್ಟಾರ್ ಜೋಡಿಯ ಬ್ರೇಕಪ್ ಸುದ್ದಿಯೇ ಇನ್ನು ಆರಸಿಗಿಸಿಕೊಳ್ಳಲು ಅಭಿಮಾನಿಗಳಿಗೆ ಸಾಧ್ಯವಾಗುತ್ತಿಲ್ಲ. ಸಮಂತಾ ಮತ್ತು ನಾಗಚೈತನ್ಯ ದಾಂಪತ್ಯದಲ್ಲಿ ಯಾವುದು ಸರಿ ಇಲ್ಲ ಎನ್ನುವುದು ಸಾಮಾಜಿಕ ಜಾಲತಾಣದ ಮೂಲಕವೇ ಬಹಿರಂಗವಾಗಿದ್ದು. ಹಾಗಾಗಿ ರಾಣಾ ವಿಚಾರದಲ್ಲಿಯೂ ಬ್ರೇಕಪ್ ಸುದ್ದಿ ಬಲವಾಗಲು ಕಾರಣವಾಗಿದ್ದು ಇದೇ ಸಾಮಾಜಿಕ ಮಾಧ್ಯಮ. 

ಆದರೀಗ ರಾಣಾ ಪತ್ನಿ ಮಿಹಿಕಾ ಸಾಮಾಜಿಕ ಜಾಲತಾಣದಲ್ಲಿ ಪತಿ ಜೊತೆಗಿರುವ ರೊಮ್ಯಾಂಟಿಕ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ. ಅಂದಹಾಗೆ ಇಂದು ರಾಣಾ ದಗ್ಗುಬಾಟಿ ಮತ್ತು ಮಿಹಿಕಾ ಬಜಾಜ್ ಅವರ ಎರಡನೇ ವರ್ಷದ ಮದುವೆವಾರ್ಷಿಕೋತ್ಸವ.  ರಾಣಾ ಮತ್ತು ಮಹಿಕಾ ಮದುವೆಯಾಗಿ ಎರಡು ವರ್ಷವಾಗಿದೆ. ಆಗಸ್ಟ್ 8, 2020ರಲ್ಲಿ ರಾಣಾ ಮಹಿಕಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಆದರೆ ಮದುವೆಯಾಗಿ ಕೆಲವೇ ತಿಂಗಳಗೆ ಇಬ್ಬರ ನಡುವೆ ಯಾವುದು ಸರಿಯಿಲ್ಲ ಎನ್ನುವ ಸುದ್ದಿ ಹರಿದಾಡಲು ಪ್ರಾರಂಭವಾಗಿತ್ತು. ಆದರೆ ಇದುವರೆಗೂ ಇಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇಂದು ಮಹಿಕಾ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ವದಂತಿಗೆ ಬ್ರೇಕ್ ಹಾಕಿದ್ದಾರೆ. 

ಸಾಯಿ ಪಲ್ಲವಿಗೆ ಬಾಡಿಗಾರ್ಡ್ ಆದ ರಾಣಾ ದಗ್ಗುಬಾಟಿ

ಮಹಿಕಾ ಮತ್ತು ರಾಣಾ ಇಬ್ಬರ ರೊಮ್ಯಾಟಿಂಕ್ ಫೋಟೋಗಳು ಅಭಿಮಾನಗಳ ಗಮನಸೆಳೆಯುತ್ತಿವೆ. ಇಬ್ಬರ ಫೋಟೊಗೆ ಅಭಿಮಾನಿಗಳಿಂದ ಮತ್ತು ಸಿನಿ ಗಣ್ಯರಿಂದ ಮೆಚ್ಚುಗೆಯ ಮಹಾಪೂರ ಬರುತ್ತಿದೆ. ಅಭಿಮಾನಿಗಳು ಮದುವೆ ವಾರ್ಷಿಕೋತ್ಸವದ ವಿಶ್ ಮಾಡಿ ಹಾರ್ಟ್ ಇಮೋಜಿ ಇರಿಸುತ್ತಿದ್ದಾರೆ. ಮಹಿಕಾ ಮತ್ತು ರಾಣಾ ಇಬ್ಬರು ಜೊತೆಗಿರುವ ಫೋಟೋವನ್ನು ಶೇರ್ ಮಾಡಿದ್ದಾರೆ. ಆದರೆ ಈ ಬಗ್ಗೆ ಯಾವುದೇ ಕ್ಯಾಪ್ಷನ್ ನೀಡಿಲ್ಲ. ಇನ್ನು ದಂಪತಿಗೆ ಬಸ್ನೇಹಿತರು ಮತ್ತು ಆಪ್ತರು ವಿಶ್ ಮಾಡಿರುವ ಸ್ಕ್ರೀನ್ ಶಾಟ್  ಅನ್ನು ಶೇರ್ ಮಾಡಿದ್ದಾರೆ. ಆದರೆ ರಾಣಾ ದಗ್ಗುಬಾಟಿ ಯಾವುದೇ ಫೋಟೋವನ್ನು ಶೇರ್ ಮಾಡಿಲ್ಲ. ಅಲ್ಲದೇ ತನ್ನದ ಇನ್ಸ್ಟಾಗ್ರಾಮ್ ಖಾತೆಯಲ್ಲಿದ್ದ ಎಲ್ಲಾ ಪೋಸ್ಟ್ ಗಳನ್ನು ರಾಣಾ ಡಿಲೀಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

 
 
 
 
 
 
 
 
 
 
 
 
 
 
 

A post shared by Miheeka Daggubati (@miheeka)

ಒಂದೇ ಹುಡುಗಿನ ಲವ್‌ ಮಾಡಿದ ಇಬ್ಬರು ಸೂಪರ್‌ ಸ್ಟಾರ್‌ಗಳ ಲವ್‌ ಸೀಕ್ರೆಟ್‌ ಔಟ್

 

ರಾಣಾ ದಗ್ಗುಬಾಟಿ ಸಿನಿಮಾ ವಿಚಾರಕ್ಕೆ ಬರುವುದಾದರೆ ಕೊನೆಯದಾಗಿ ವಿರಾಟ ಪರ್ವಂ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. 2022ರಲ್ಲಿ ರಾಣಾ ಭೀಮಲ ನಾಯಕ್, 1945 ಸಿನಿಮಾಗಳು ರಿಲೀಸ್ ಆಗಿವೆ. ಈ ಸಿನಿಮಾಗಳ ಬಳಿಕ ರಾಣಾ ಯಾವುದೇ ಸಿನಿಮಾ ಘೋಷಣೆ ಮಾಡಿಲ್ಲ. ಹಾಗಾಗಿ ರಾಣಾ ಮುಂದಿನ ಸಿನಿಮಾ ಕುತೂಹಲ ಮೂಡಿಸಿದೆ.  

Follow Us:
Download App:
  • android
  • ios