Asianet Suvarna News Asianet Suvarna News

ಬಿಗ್‌ಬಾಸ್ ಮನೆಯ ಬಾತ್‌ರೂಮ್‌ ಒಳಗೂ ಮೈಕ್ ಇರುತ್ತೆ; ಅಚ್ಚರಿಯ ವಿಚಾರ ಬಹಿರಂಗಪಡಿಸಿದ ಸ್ಪರ್ಧಿ

ಬಿಗ್‌ಬಾಸ್ ರಿಯಾಲಿಶ್ ಶೋ ಬಗ್ಗೆ ಸಾಕಷ್ಟು ಸುದ್ದಿಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮೊಬೈಲ್ ಯೂಸ್ ಮಾಡಲ್ಲ ಅನ್ನೋದು ಸುಳ್ಳು. ಮೊಬೈಲ್‌ ಉಪಯೋಗಿಸಲು, ಸ್ಮೋಕ್ ಮಾಡಲು ಅವಕಾಶವಿದೆ ಎಂದು ಹೇಳಲಾಗ್ತಿತ್ತು. ಈಗ ಬಿಗ್‌ಬಾಸ್ ಮನೆಯ ಬಗ್ಗೆ ಇನ್ನೊಂದು ಅಚ್ಚರಿಯ ವಿಚಾರ ಹೊರಬಿದ್ದಿದೆ.

Mic installed inside bathroom, Isha Malviya makes shocking revelation about Bigg Boss house Vin
Author
First Published Jan 31, 2024, 11:47 AM IST

ಭಾರತದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್‌ಬಾಸ್‌ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಹಿಂದಿ, ಕನ್ನಡ, ತೆಲುಗು ಮೊದಲಾದ ಭಾಷೆಗಳಲ್ಲಿ ಪ್ರಸಾರವಾಗೋ ಬಿಗ್‌ಬಾಸ್‌ ರಿಯಾಲಿಟಿ ಶೋವನ್ನು ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ಕನ್ನಡ ಬಿಗ್‌ಬಾಸ್ ವಿಜೇತರನ್ನು ಸಹ ಆಯ್ಕೆ ಮಾಡಲಾಗಿದೆ. ಬಿಗ್‌ಬಾಸ್‌ ವಿನ್ನರ್ ಆಗಿ ಕಾರ್ತಿಕ್ ಮಹೇಶ್, ರನ್ನರ್ ಅಪ್ ಆಗಿ ಡ್ರೋನ್ ಪ್ರತಾಪ್‌ ಹೊರಹೊಮ್ಮಿದ್ದಾರೆ. ಇನ್ನು ಹಿಂದಿಯಲ್ಲಿ ಬಿಗ್ ಬಾಸ್ 17 ಸೀಸನ್‌ನಲ್ಲಿಮುನಾವರ್ ಫರುಕಿ ವಿಜೇತರಾಗಿ ಹೊರಹೊಮ್ಮಿದರು.

ಬಿಗ್‌ಬಾಸ್ ರಿಯಾಲಿಶ್ ಶೋ ಬಗ್ಗೆ ಸಾಕಷ್ಟು ಸುದ್ದಿಗಳು ಆಗಾಗ ಹರಿದಾಡುತ್ತಲೇ ಇರುತ್ತವೆ. ಈ ಹಿಂದೆ ಬಿಗ್‌ಬಾಸ್ ಮನೆಯಲ್ಲಿ ಸ್ಪರ್ಧಿಗಳು ಮೊಬೈಲ್ ಯೂಸ್ ಮಾಡಲ್ಲ ಅನ್ನೋದು ಸುಳ್ಳು. ಮೊಬೈಲ್‌ ಉಪಯೋಗಿಸಲು, ಸ್ಮೋಕ್ ಮಾಡಲು ಅವಕಾಶವಿದೆ ಎಂದು ಹೇಳಲಾಗ್ತಿತ್ತು. ಈಗ ಬಿಗ್‌ಬಾಸ್ ಮನೆಯ ಬಗ್ಗೆ ಇನ್ನೊಂದು ಅಚ್ಚರಿಯ ವಿಚಾರ ಹೊರಬಿದ್ದಿದೆ. ಬಿಗ್‌ಬಾಸ್ ಮನೆಯ ಬಾತ್‌ರೂಮ್‌ನಲ್ಲಿ ಮೈಕ್ ಇದೆ ಎಂಬ ವಿಚಾರವನ್ನು ಬಿಗ್‌ಬಾಸ್ ಸ್ಪರ್ಧಿಯೊಬ್ಬರು ಬಹಿರಂಗಪಡಿಸಿದ್ದಾರೆ.

ಡ್ರೋನ್‌ ಪ್ರತಾಪ್‌ ರನ್ನರ್‌ ಅಪ್‌ಗೆ ಅರ್ಹರಿದ್ದರೆ ಎಂಬ ಫ್ಯಾನ್‌ ಪ್ರಶ್ನೆಗೆ ಸುದೀಪ್‌ ಹೀಗೊಂದು ಜಾಣ ಉತ್ತರ!

ಬಾತ್‌ರೂಮ್‌ನಲ್ಲೂ ಮೈಕ್ರೋಫೋನ್ ಇರುತ್ತೆ ಎಂದ ಸ್ಪರ್ಧಿ
ಹಿಂದಿ ಬಿಗ್‌ಬಾಸ್‌ ಸ್ಪರ್ಧಿ ಇಶಾ ಮಾಳವಿಯಾ, ಇತ್ತೀಚಿನ ಸಂದರ್ಶನವೊಂದರಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಮೈಕ್ ಇದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಹಿಂದಿ ನಿರೂಪಕಿ ಭಾರ್ತಿ ಸಿಂಗ್ ಮತ್ತು ಹರ್ಷ್ ಲಿಂಬಾಚಿಯಾ ಅವರೊಂದಿಗಿನ ಇತ್ತೀಚಿನ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ, ಇಶಾ ಬಿಗ್ ಬಾಸ್ ಮನೆಯಲ್ಲಿ ತನ್ನ ಸಮಯದ ಬಗ್ಗೆ ಕೆಲವು ರಹಸ್ಯಗಳನ್ನು ಹಂಚಿಕೊಂಡರು. ಮನೆಯಲ್ಲಿ ಸ್ನಾನಗೃಹಗಳಲ್ಲಿ ಮೈಕ್ರೊಫೋನ್ ಅಳವಡಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಬಾತ್‌ರೂಮ್ ಬಳಸುವಾಗ ಸ್ಪರ್ಧಿ ಮೈಕ್ ಧರಿಸದಿದ್ದರೂ ಸಹ, ಅಳವಡಿಸಲಾಗಿರುವ ಮೈಕ್ರೊಫೋನ್‌ಗಳಲ್ಲಿ ಆಡಿಯೋ ರೆಕಾರ್ಡ್ ಆಗುತ್ತದೆ ಎಂದು ಇಶಾ ತಿಳಿಸಿದ್ದಾರೆ.

ವೀಕೆಂಡ್ ಕಾ ವಾರ್ ಸಂಚಿಕೆಯಲ್ಲಿ ದೊಡ್ಡ ತಾರೆಯೊಬ್ಬರು ಇಶಾ ಅವರನ್ನು ನಿಂದಿಸಿದ ಸಮಯದ ಬಗ್ಗೆ ಭಾರ್ತಿ ಮತ್ತು ಹರ್ಷ್ ಪ್ರಶ್ನಿಸಿದ್ದಾರೆ. ಆರಂಭದಲ್ಲಿ ಸಲ್ಮಾನ್ ಖಾನ್ ತನ್ನನ್ನು ಗದರಿಸಿದಾಗ ನನಗೆ ನೋವಾಯಿತು ಎಂದು ಇಶಾ ಬಹಿರಂಗಪಡಿಸಿದ್ದಾರೆ. ನಾನು ಕಾರ್ಯಕ್ರಮದಿಂದ ಹೊರ ಬರುವ ಬಗ್ಗೆಯೂ ಯೋಚಿಸುತ್ತಿದ್ದೆ ಎಂದಿದ್ದಾರೆ. ಕರಣ್ ಜೋಹರ್ ಅವರ ಟೀಕೆ ತನ್ನ ಮೇಲೂ ಪರಿಣಾಮ ಬೀರಿದೆ ಎಂದು ಇಶಾ ಹೇಳಿದ್ದಾರೆ. ಆದರೆ, ಅದನ್ನು ಧನಾತ್ಮಕವಾಗಿ ತೆಗೆದುಕೊಂಡು ಮುನ್ನಡೆಯಲು ನಿರ್ಧರಿಸಿದೆ ಎಂದರು.

ಈ ಬಾರಿಯ ಕುತೂಹಲ: ಒಬ್ಬರಿಗಲ್ಲ, ಇಬ್ಬರಿಗೆ ಸಿಗಲಿದೆ ಬಿಗ್​ಬಾಸ್​ ಟ್ರೋಫಿ! ಏನಿದು ವಿಷ್ಯ?

ಹರ್ಷ್ ಲಿಂಬಾಚಿಯಾ ಅವರು ಇಶಾ ಮಾಳವಿಯಾ ಅವರ ಬಲವಾದ ವ್ಯಕ್ತಿತ್ವ ಮತ್ತು ನಿರಾತಂಕದ ಸ್ವಭಾವಕ್ಕಾಗಿ ಹೊಗಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆಯಾಗಿ ಇಶಾ, ಜನರು ತಮ್ಮಲ್ಲಿರುವ ಆ ಗುಣಗಳನ್ನು ಮೆಚ್ಚಿದರೂ, ಶೋನಲ್ಲಿ ಅಳದೇ ತಾನು ತಪ್ಪು ಮಾಡಿದ್ದೇನೆ ಎಂದು ಒಪ್ಪಿಕೊಂಡರು. 'ನಾನು ತಪ್ಪು ಮಾಡಿದೆ, ಅಂದರೆ, ನಾನು ಸ್ವಲ್ಪ ಅಳಬೇಕಾಗಿತ್ತು, ನಾನು ಸ್ವಲ್ಪ ಕಣ್ಣೀರು ಹಾಕಬೇಕಾಗಿತ್ತು; ಬಹುಶಃ ನಾನು ಟಾಪ್ 5 ರಲ್ಲಿ ಇರುತ್ತಿದ್ದೆ" ಎಂದು ಇಶಾ ಮಾಳವಿಯಾ ಹೇಳಿದರು.

Follow Us:
Download App:
  • android
  • ios