ಮತ್ತೊಮ್ಮೆ ಚಿಂದಿ ಉಡಾಯಿಸಿದ ಸೌತ್ ಸಿನಿಮಾ: 5 ದಿನಗಳಲ್ಲೇ ಚಿತ್ರದ ಬಜೆಟ್ ವಾಪಸ್!
‘ಮೇಮ್ ಫೇಮಸ್’ ಚಲನಚಿತ್ರ ಬಿಡುಗಡೆಯಾದ ಐದೆ ದಿನಗಳಲ್ಲಿ 3.1 ಕೋಟಿ ರೂಪಾಯಿ ಗಳಿಸುವ ಮೂಲಕ ಚಿತ್ರದ ಸಂಪೂರ್ಣ ಬಜೆಟ್ ವಾಪಸ್ ಪಡೆದಿದೆ.
ದಕ್ಷಿಣ ಚಿತ್ರಗಳು ಸಿನಿ ಇಂಡಸ್ಟ್ರಿಯಲ್ಲಿ ಇತ್ತೀಚಿನ ದಿನಗಳಲ್ಲಿ ಭಾರಿ ಹವಾ ಸೃಷ್ಟಿಸುತ್ತಿದೆ. ಬಾಲಿವುಡ್ ಅನ್ನು ಮೀರಿಸಿ ಹೆಸರು, ಕೀರ್ತಿ ಜೊತೆಗೆ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಅದರ ಸಾಲಿಗೆ ಈಗ ಮತ್ತೊಂದು ಚಿತ್ರ ಸೇರ್ಪಡೆಯಾಗಿದೆ ಅದೇ ‘ಮೇಮ್ ಫೇಮಸ್’ (Mem Famous). ಕನ್ನಡದ ಹೆಸರಾಂತ ಲಹರಿ ಸಂಸ್ಥೆಯ ಲಹರಿ ಫಿಲ್ಮ್ಸ್ ಹಾಗೂ ಚಾಯ್ ಬಿಸ್ಕೆಟ್ ಫಿಲ್ಮ್ಸ್ ಜಂಟಿಯಾಗಿ ನಿರ್ಮಾಣ ಮಾಡಿರುವ ತೆಲುಗಿನ (Telugu) ‘ಮೇಮ್ ಫೇಮಸ್’ ಸಿನಿಮಾ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಾಸ್ಯಮಯ ಚಿತ್ರವು ಹಿರಿತೆರೆಯಲ್ಲಿ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಿದೆ. ಅಷ್ಟೇ ಅಲ್ಲ 'ಮೇಮ್ ಫೇಮಸ್' ಚಿತ್ರ ಕೇವಲ 5 ದಿನಗಳಲ್ಲಿ ಬಜೆಟ್‌ನಷ್ಟು ಗಳಿಕೆ ಮಾಡಿದೆ. ಯೂಟ್ಯೂಬ್ ಮೂಲಕ ಮನೆಮಾತಾಗಿರೋ ಸುಮತ್ ಪ್ರಭಾಸ್ ನಟನೆಯ ಸಿನಿಮಾ ‘ಮೇಮ್ ಫೇಮಸ್’. ಲಹರಿ ಫಿಲ್ಮಸ್ ನಿಂದ ಮೂಡಿ ಬರುತ್ತಿರುವ ತೆಲುಗಿನ ಎರಡನೇ ಸಿನಿಮಾ ಇದಾಗಿದೆ.
ಈ ಹಾಸ್ಯಮಯ ಚಿತ್ರವು ಹಿರಿತೆರೆಯಲ್ಲಿ ಪ್ರೇಕ್ಷಕರಿಂದ ಸಾಕಷ್ಟು ಪ್ರೀತಿಯನ್ನು ಪಡೆಯುತ್ತಿದೆ. ಇದೀಗ ಭಾರಿ ಸುದ್ದಿಯಾಗಿರುವುದು ಇದರ ಗಳಿಕೆಯಲ್ಲಿ. ಅತ್ಯಂತ ಕಡಿಮೆ ಬಜೆಟ್ನಲ್ಲಿ ತಯಾರಾಗುವ ಚಿತ್ರವೊಂದು ಎಷ್ಟರಮಟ್ಟಿಗೆ ಪರಿಣಾಮ ಬೀರಬಲ್ಲುದು ಎನ್ನುವುದಕ್ಕೆ 'ಮೇಮ್ ಫೇಮಸ್' ಸಾಕ್ಷಿಯಾಗಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ಹಲವು ಬಾಲಿವುಡ್ ಸಿನಿಮಾಗಳನ್ನು ಮಾಡಿ ಕೈಸುಟ್ಟುಕೊಂಡಿರುವ ಉದಾಹರಣೆಗಳಿವೆ. ಇದಕ್ಕೆ ವ್ಯತಿರಿಕ್ತವಾಗಿ ಇದಾಗಲೇ ಅತ್ಯಂತ ಕಡಿಮೆ ಬಜೆಟ್ನಲ್ಲಿ ತಯಾರಾದ ಕನ್ನಡದ ಕಾಂತಾರಾ ಚಿತ್ರದಿಂದ ಇಡೀ ಸಿನಿ ಇಂಡಸ್ಟ್ರಿ ದಕ್ಷಿಣ ಸಿನಿಮಾದತ್ತ ದೃಷ್ಟಿ ಹಾಯಿಸುವಂತಾಗಿತ್ತು. ಇದರ ಭರ್ಜರಿ ಯಶಸ್ಸು ಹಲವರ ಕಣ್ಣುಕುಕ್ಕಿಸಿದ್ದೂ ಇದೆ. ಇದೀಗ ಅದೇ ರೀತಿ ಅದರೆ ಹಾಸ್ಯಮಯ ಕಥೆಯುಳ್ಳ ಅತ್ಯಂತ ಕಡಿಮೆ ಬಜೆಟ್ನ ಚಿತ್ರ 'ಮೆಮ್ ಫೇಮಸ್' ಬಿಡುಗಡೆಗೊಂಡ ಐದೇ ದಿನಗಳಲ್ಲಿ ಒಟ್ಟೂ ಬಜೆಟ್ ಮರಳಿ ಪಡೆದಿದೆ.
RRR ಚಿತ್ರದ ನಟ ಇನ್ನಿಲ್ಲ; ರೇ ನೆನೆದು ಭಾವುಕರಾದ ರಾಜಮೌಳಿ
ಹೌದು. ಚಿತ್ರ ಕೇವಲ 5 ದಿನಗಳಲ್ಲಿ ಬಜೆಟ್‌ನಷ್ಟು ಗಳಿಕೆ ಮಾಡಿದೆ. ಈ ಚಿತ್ರದ ಒಟ್ಟು ಬಜೆಟ್ 3 ಕೋಟಿ ರೂಪಾಯಿಗಳಾಗಿದ್ದು, ಚಿತ್ರ ಬಿಡುಗಡೆಯಾದ ಐದೇ ದಿನಗಳಲ್ಲಿ ಈ ಹಣ ವಾಪಸ್ ಬಂದಿದೆ. ಸದ್ಯ ಚಿತ್ರ 5 ದಿನಗಳಲ್ಲಿ ಬಾಕ್ಸ್ ಆಫೀಸ್‌ನಲ್ಲಿ 3.01 ಕೋಟಿ ರೂಪಾಯಿ ಗಳಿಸಿದೆ. ಮೊದಲ ದಿನವೇ ಚಿತ್ರ 74 ಲಕ್ಷ ಗಳಿಸಿದೆ. ಎರಡನೇ ದಿನ 73, ಮೂರನೇ ದಿನ 72 ಲಕ್ಷ. ನಾಲ್ಕನೇ ದಿನ 'ಮೆಮ್ ಫೇಮಸ್' ಒಟ್ಟು ಗಳಿಕೆ 38 ಲಕ್ಷ ಮತ್ತು ಐದನೇ ದಿನ ಈ ಚಿತ್ರ 35 ಲಕ್ಷ ಗಳಿಸಿದೆ. ಮುಂದಿನ ದಿನಗಳಲ್ಲಿ 'ಮೆಮ್ ಫೇಮಸ್' ಚಿತ್ರ ಇನ್ನಷ್ಟು ಗಳಿಕೆ ಮಾಡಬಹುದು ಎಂಬುದು ಟ್ರೇಡ್ ವಿಶ್ಲೇಷಕರ ಅಭಿಪ್ರಾಯವಾಗಿದೆ.ಇದಾಗಲೇ ಈ ಚಿತ್ರವನ್ನು ಹಲವರು ಸಿನಿ ದಿಗ್ಗಜರು ಹಾಡಿ ಕೊಂಡಾಡಿದ್ದಾರೆ. ಬಾಹುಬಲಿ ಖ್ಯಾತಿಯ ರಾಜಮೌಳಿ (Rajamouli), ಖ್ಯಾತನಟ ಮಹೇಶ್ ಬಾಬು, ರಾಜಮೌಳಿ ಪುತ್ರ ಎಸ್.ಎಸ್ ಕಾರ್ತೀಕೇಯ ಮಾತನಾಡಿದ್ದದಾರೆ. ತುಂಬಾ ದಿನಗಳ ನಂತರ ಥಿಯೇಟರ್ ಹೋಗಿ ಸಿನಿಮಾವೊಂದನ್ನು ಎಂಜಾಯ್ ಮಾಡಿದೆ. ಪ್ರತಿಭಾವಂತ ಟೀಮ್ ಸೇರಿಕೊಂಡು ಮಾಡಿರುವ ಸಿನಿಮಾ ಮೇಮ್ ಫೇಮಸ್. ಸಹಜ ಅಭಿನಯ, ಹೊಸದಾದ ನಿರೂಪಣೆ. ಸಖತ್ ಮನರಂಜನೆಯನ್ನು ಈ ಸಿನಿಮಾ ನೀಡಿದೆ. ಈ ಸಿನಿಮಾದ ನಟ ಹಾಗೂ ನಿರ್ದೇಶಕರಿಗೆ ಉತ್ತಮ ಭವಿಷ್ಯವಿದೆ. ಅದರಲ್ಲೂ ಅಂಜಿ ಮಾಮಾ ತುಂಬಾ ಕಾಡುತ್ತಾನೆ ಎಂದು ರಾಜಮೌಳಿ ಟ್ವೀಟ್ ಮಾಡಿದ್ದರೆ, ನಟ ಮಹೇಶ್ ಬಾಬು (Mahesh Babu) ಕೂಡ ಸಿನಿಮಾ ಮೆಚ್ಚಿಕೊಂಡಿದ್ದಾರೆ. ಬಗ್ಗೆ ‘ಈಗ ತಾನೆ ಮೇಮ್ ಫೇಮಸ್ ಸಿನಿಮಾ ನೋಡಿದೆ. ಪ್ರತಿಭಾವಂತ ಪಡೆಯೇ ಸಿನಿಮಾದಲ್ಲಿದೆ. ಬರಹಗಾರರು, ನಿರ್ದೇಶಕ, ನಟ ಎಲ್ಲರೂ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ಹಿನ್ನೆಲೆ ಸಂಗೀತ, ದೃಶ್ಯ ಎಲ್ಲವೂ ಸಿನಿಮಾಗೆ ಮತ್ತಷ್ಟು ಶಕ್ತಿ ತುಂಬಿವೆ. ಪ್ರತಿಭಾವಂತರೇ ಈ ಸಿನಿಮಾಗಾಗಿ ಒಂದಾಗಿದ್ದಾರೆ’ ಎಂದು ಮಹೇಶ್ ಬಾಬು ಹೇಳಿದ್ದಾರೆ.
2023ರ ವಿಶ್ವದ 100 ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಶಾರುಖ್ ಖಾನ್ ಮತ್ತು ಎಸ್ ಎಸ್ ರಾಜಮೌಳಿ!