ಅತ್ಯಂತ ಕನಿಷ್ಠ ಬಟ್ಟೆಯಿಂದ ದಿನವೂ ಟ್ರೋಲ್​ ಆಗುತ್ತಿರುವ ಉರ್ಫಿ ಜಾವೇದ್​ ಸಹೋದರಿಯರು ಯಾರು? ಅವರು ಅಕ್ಕನ ಹಾಕಿದ ದಾರಿಯಲ್ಲಿಯೇ ನಡೆಯುತ್ತಾರೋ ಅಥವಾ ವಿಭಿನ್ನ ಕೆಲಸಗಳಿಂದ ಹೆಸರು ಮಾಡುತ್ತಾರೋ? 

ಉರ್ಫಿ ಜಾವೇದ್​ ಎಂದಾಕ್ಷಣ ಎಲ್ಲರ ಬಾಯಿಂದಲೂ ಮೊದಲು ಹೊರಡುವ ಶಬ್ದ ಉಫ್​ ಎಂದೇ. ಅತ್ಯಂತ ಕನಿಷ್ಠ ಉಡುಗೆ ತೊಟ್ಟರೆ ಅದುವೇ ಪುಣ್ಯ ಎನ್ನುವಷ್ಟರ ಮಟ್ಟಿಗೆ ಉಡುಗೆಯಿಂದ ಟ್ರೋಲ್​ ಆಗುತ್ತಿರುವ ಉರ್ಫಿ ಇತ್ತೀಚೆಗೆ ತನಗೆ ಬಟ್ಟೆ ಹಾಕಿದರೆ ಅಲರ್ಜಿ ಎಂದು ಹೇಳುವ ಮೂಲಕವೂ ಸಾಕಷ್ಟು ಸುದ್ದಿ ಮಾಡಿದವರು. ಯಾವಾಗಲೂ ಏನಾದರೂ ವಿಭಿನ್ನ ಹಾಗೂ ವಿಚಿತ್ರವಾಗಿ ಬಟ್ಟೆ ಹಾಕುವ ಮೂಲಕ ಸುದ್ದಿಯಲ್ಲಿರುವ ಈ ನಟಿಯ ಡ್ರೆಸ್ಸಿಂಗ್​ ಸೆನ್ಸ್​ ಹೊಗಳುವವರಿಗೂ ಕಮ್ಮಿಯೇನಿಲ್ಲ. ಈಕೆ ಫ್ಯಾಷನ್​ಗೆ ಹೊಸ ಅರ್ಥವನ್ನು ನೀಡುತ್ತಿದ್ದಾರೆ ಎಂದು ಅವರೆಲ್ಲಾ ಹೇಳುತ್ತಿದ್ದಾರೆ.

ಇದು ಉರ್ಫಿಯ (Urfi Javed) ಮಾತಾದರೆ, ಈಗ ಇವರ ಮೂವರು ಸಹೋದರಿಯರ ಬಗ್ಗೆ ಸಕತ್​ ಸುದ್ದಿಯಾಗುತ್ತಿದೆ. ಉರ್ಫಿಗೆ ಮೂವರು ಸ್ವಂತ ಸಹೋದರಿಯರಿದ್ದು, ಅಕ್ಕನಷ್ಟು ಟ್ರೋಲ್​ ಆಗದಿದ್ದರೂ, ಅಕ್ಕನ ಹಾದಿಯಲ್ಲಿಯೇ ಬರುತ್ತಿದ್ದಾರೆ. ಡ್ರೆಸ್ಸಿಂಗ್​ ಸೆನ್ಸ್​ ಚೆನ್ನಾಗಿದೆ ಈ ಸಹೋದರಿಯರದ್ದು ಎಂದು ಹೇಳುತ್ತಿದ್ದವರೂ ಈಗ ಅವರ ಡ್ರೆಸ್​ ಬಗ್ಗೆಯೂ ಮಾತನಾಡುವಂತಾಗಿದೆ. ಉರ್ಫಿ ಜಾವೇದ್​ ಅವರಿಗೆ ಮೂವರು ಸಹೋದರಿಯರಷ್ಟೇ ಅಲ್ಲದೇ ಒಬ್ಬ ಸಹೋದರ ಕೂಡ ಇದ್ದಾನೆ. ಸಹೋದರಿಯರಾದ ಅಸ್ಫಿ ಜಾವೇದ್​, ಡಾಲಿ ಜಾವೇದ್ ಮತ್ತು ಉರುಸಾ ಜಾವೇದ್ (Urusa Javed) ಕೂಡ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದು, ಅಪಾರ ಅಭಿಮಾನಿಗಳನ್ನೂ ಹೊಂದಿದ್ದಾರೆ. ಇನ್​ಸ್ಟಾಗ್ರಾಮ್​ನಲ್ಲಿ (Instagram) ಸಕತ್​ ಆ್ಯಕ್ಟೀವ್​ ಆಗಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. 

ಉರ್ಫಿ ಅರೆಬೆತ್ತಲಾಗಿ ಕಾಣಿಸಿಕೊಳ್ಳುವುದರ ಹಿಂದಿದೆಯಂತೆ ದೊಡ್ಡ ಕಾರಣ; ಏನದು ನೋಡಿ

ಸಹೋದರಿಯರು ತಮ್ಮ ಡ್ರೆಸ್ಸಿಂಗ್​ ಮಾತ್ರವಲ್ಲದೇ ಒಬ್ಬಾಕೆ ಡೇಟಿಂಗ್​ನಿಂದಲೂ ಸುದ್ದಿಯಲ್ಲಿದ್ದಾರೆ. ಓರ್ವ ಸಹೋದರಿ ಡಾಲಿ ಜಾವೇದ್ ಒಬ್ಬ ಬ್ಲಾಗರ್. ಈಕೆ ಯುವರಾಜ್ ಆರ್ಯನ್ ಎಂಬ ಹುಡುಗನೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಇದ್ದು, ಅವರ ಫೋಟೋ ಹಾಗೂ ವಿಡಿಯೋಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿರುತ್ತವೆ. ಇನ್ನೊಬ್ಬ ತಂಗಿ ಆಸ್ಫಿ ಜಾವೇದ್ ಇನ್‌ಸ್ಟಾಗ್ರಾಮ್‌ನಲ್ಲಿ 1.61 ಲಕ್ಷ ಫಾಲೋವಸ್​ರ್ಗಳನ್ನು (Followers) ಹೊಂದಿದ್ದು, ವಿಭಿನ್ನ, ವಿಚಿತ್ರ ಡ್ರೆಸ್​ಗಳಿಂದ ಗಮನ ಸೆಳೆಯುತ್ತಿರುತ್ತಾರೆ. ಆದರೆ ಈಕೆ ಉರ್ಫಿಯಂತೆ ಡ್ರೆಸ್ಸಿಂಗ್​ನಲ್ಲಿ ಬೋಲ್ಡ್ ಇಲ್ಲ. 

ಇವರಿಬ್ಬರು ಉರ್ಫಿಯಷ್ಟು ತುಂಡುಡುಗೆ ಧರಿಸಿ ಟ್ರೋಲ್​ ಆಗದೇ ಇದ್ದರೂ, ಇನ್ನೋರ್ವ ಸಹೋದರಿ ಉರುಸಾ ಮಾತ್ರ ಅಕ್ಕನಿಗೆ ಪೈಪೋಟಿ ನೀಡುತ್ತಿದ್ದಾರೆ. ಅವರು ತೊಡುವ ಡ್ರೆಸ್​ಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ವೈರಲ್​ ಆಗುತ್ತಲೇ ಇರುತ್ತವೆ. ಟಾಪ್​ಲೆಸ್​, (Toplesff) ಬ್ಯಾಕ್​ಲೆಸ್​ ಸೇರಿದಂತೆ ಎಲ್ಲಾ ಲೆಸ್​ ಮಾಡಿಕೊಂಡು ಉರ್ಫಿ ಜಾವೇದ್​ ನೀಡುವ ಹಾಗೆ ಉರುಸಾ ಇನ್ನೂ ಆ ಹಂತಕ್ಕೆ ಹೋಗದಿದ್ದರೂ ತಮ್ಮ ಅಂಗಾಂಗ ಪ್ರದರ್ಶನದಿಂದ ಪಡ್ಡೆ ಹುಡುಗರ ನಿದ್ದೆ ಗೆಡಿಸುತ್ತಿರುವುದಂತೂ ನಿಜ. 

ಗೋವಾದಲ್ಲಿ ಶಾರುಖ್​ ಪುತ್ರನ ಜೊತೆ ಮಾಡ್ತಿದ್ದೇನು? ಪಾಕ್​ ನಟಿ ಬಿಚ್ಚಿಟ್ಟ ಸತ್ಯ...

ಯಾರೀ ಉರ್ಫಿ ಆ್ಯಂಡ್​ ಫ್ಯಾಮಿಲಿ?
ಇನ್ನು ಈ ಸಹೋದರಿಯರ ವಿಷಯಕ್ಕೆ ಬರುವುದಾದರೆ ಇವರು ಮೂಲತಃ ಉತ್ತರ ಪ್ರದೇಶದ ರಾಜಧಾನಿ ಲಖನೌದವರು. ಉರ್ಫಿ ಸೇರಿದಂತೆ ಎಲ್ಲರೂ ಇಲ್ಲಿಯೇ ಜನ್ಮ ತಳೆದಿದ್ದಾರೆ. ಈ ಸಹೋದರಿಯರು ಹಾಗೂ ತಮ್ಮ ಸಲೀಂ ಜಾವೇದ್ ಹಾಗೂ ತಾಯಿ ಜಾಕಿಯಾ ಸುಲ್ತಾನಾ ಅವರು ತಮ್ಮ ಕುಟುಂಬದಲ್ಲಿ ಇದ್ದಾರೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದ ಉರ್ಫಿ, ತಂದೆಯ ದೌರ್ಜನ್ಯದ ಬಗ್ಗೆ ಉಲ್ಲೇಖಿಸಿದ್ದರು. ತಂದೆ ನನಗೆ ಮತ್ತು ಸಹೋದರಿಯರಿಗೆ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಹಿಂಸಿಸುತ್ತಿದ್ದರು, (Torture) ಇದರಿಂದಾಗಿ ಸಹೋದರಿಯರ ಜೊತೆ ಸೇರಿಕೊಂಡು ದೆಹಲಿಗೆ ಓಡಿಹೋಗಿದ್ದೆ. ಮನೆಯ ಕಟ್ಟು ಸಂಪ್ರದಾಯವನ್ನು ಸಹಿಸದ ಎಲ್ಲಾ ಹೆಣ್ಣುಮಕ್ಕಳೂ ಮನೆಬಿಟ್ಟು ಓಡಿ ಹೋಗಿದ್ದೆವು ಎಂದು ಉರ್ಫಿಯೇ ಖುದ್ದು ಹೇಳಿಕೊಂಡಿದ್ದರು. 

ದೆಹಲಿಯಲ್ಲಿ ಉರ್ಫಿ ಫ್ಯಾಷನ್ ಡಿಸೈನರ್ (Fashion Designer) ಸ್ಟುಡಿಯೋದಲ್ಲಿ ಇಂಟರ್ನ್‌ಶಿಪ್ ಮಾಡಿದ ನಂತರ ಮನರಂಜನಾ ಉದ್ಯಮಕ್ಕೆ ಸೇರಿದರು. ಸಹೋದರಿಯರು ಕೂಡ ವಿಭಿನ್ನ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. 2015 ರಲ್ಲಿ ಟಿವಿ ಶೋ 'ತೇಧಿ ಮೇಧಿ ಫ್ಯಾಮಿಲಿ' ಮೂಲಕ ಮನರಂಜನಾ ಉದ್ಯಮಕ್ಕೆ ಅವರ ಪ್ರವೇಶವಾಗಿತ್ತು. ಇದರೊಂದಿಗೆ, ಅವರು 'ಚಂದ್ರನಂದಿನಿ', 'ಬೇಪ್ನಾಹ್' ಮತ್ತು 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ನಂತಹ ಟಿವಿ ಧಾರಾವಾಹಿಗಳಲ್ಲಿಯೂ ಕೆಲಸ ಮಾಡಿದ್ದಾರೆ. ಉರ್ಫಿ ತಮ್ಮ ಬಟ್ಟೆಗಳನ್ನು ಸ್ವತಃ ವಿನ್ಯಾಸಗೊಳಿಸುತ್ತಾರೆ. 

View post on Instagram