ಗೋವಾದಲ್ಲಿ ಶಾರುಖ್ ಪುತ್ರನ ಜೊತೆ ಮಾಡ್ತಿದ್ದೇನು? ಪಾಕ್ ನಟಿ ಬಿಚ್ಚಿಟ್ಟ ಸತ್ಯ...
ಗೋವಾದಲ್ಲಿ ನಡೆದ ಹೊಸ ವರ್ಷದ ಪಾರ್ಟಿಯಲ್ಲಿ ಆರ್ಯನ್ ಖಾನ್ ಹಾಗೂ ಪಾಕಿಸ್ತಾನದ ನಟಿ ಸಾದಿಯಾ ಖಾನ್ ಒಟ್ಟಿಗೇ ಇದ್ದದ್ದೇಕೆ? ನಟಿ ಹೇಳಿದ ಸತ್ಯ...

ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಪಾಕಿಸ್ತಾನಿ ನಟಿ ಸಾದಿಯಾ ಖಾನ್ ಅವರೊಂದಿಗೆ ಇದ್ದ ಫೋಟೋಗಳು ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. 25 ವರ್ಷದ ಆರ್ಯನ್ ಖಾನ್ಗೆ 35 ವರ್ಷದ ಸಾದಿಯಾ ಬೇಕಿತ್ತಾ ಎಂದು ಕೆಲ ದಿನಗಳಿಂದ ಕಮೆಂಟ್ಗಳ ಸುರಿಮಳೆಯಾಗುತ್ತಿದೆ. ಆರ್ಯನ್ ಖಾನ್ ತಮಗಿಂತ ಐದು ವರ್ಷ ಹಿರಿಯರಾಗಿರುವ ನಟಿ ನೋರಾ ಫತೇಹಿ (Nora Fatehi ) ಜೊತೆಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿ ಭಾರಿ ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಸಾದಿಯಾ ಜೊತೆಗಿನ ಫೋಟೋ ಸದ್ದು ಮಾಡುತ್ತಿದೆ. ಗೋವಾದಲ್ಲಿ ಹೊಸ ವರ್ಷದ ಪಾರ್ಟಿ (Party) ಮಾಡುತ್ತಿದ್ದ ಆರ್ಯನ್ ಖಾನ್ ಇವರಿಬ್ಬರ ಜೊತೆ ಫೋಟೋ ತೆಗೆಸಿಕೊಂಡು ಅದನ್ನು ಶೇರ್ ಮಾಡಿದ್ದೇ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ.
ಅಷ್ಟಕ್ಕೂ ಈ ಫೋಟೋ ಶೇರ್ ಮಾಡಿಕೊಂಡಿರುವುದು ಖುದ್ದು ಸಾದಿಯಾ ಖಾನ್ ಅವರು ಇನ್ಸ್ಟಾಗ್ರಾಮ್ನಲ್ಲಿ (Instagram) ಆರ್ಯನ್ ಜೊತೆ ತಾವು ಇರುವ ಫೋಟೋ ಶೇರ್ ಮಾಡಿಕೊಂಡಿದ್ದರು. ಈ ಫೋಟೋಗೆ ‘ನ್ಯೂ ಇಯರ್‌ನಲ್ಲಿ ತೆಗೆದ ಫೋಟೋ’ ಎಂದು ಕ್ಯಾಪ್ಷನ್ ನೀಡಿದ್ದರು. ಸಾದಿಯಾ ಕಪ್ಪು ಬಣ್ಣದ ಬಟ್ಟೆಯಲ್ಲಿದ್ದರೆ, ಆರ್ಯನ್ ಬಿಳಿ ಬಣ್ಣದ ಕೋಟ್ ಧರಿಸಿದ್ದಾರೆ. ಆದರೆ ಅಚ್ಚರಿಯ ಸಂಗತಿ ಎಂದರೆ ಪೋಸ್ಟ್ ಮಾಡಿದ 24 ಗಂಟೆಯ ಒಳಗೇ ಅದನ್ನು ಸಾದಿಯಾ ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದು ಹಾಕಿದ್ದರು.
ಹೊಸ ಬ್ಯುಸಿನೆಸ್ ಆರಂಭಿಸಿದ ಆರ್ಯನ್ ಖಾನ್; ಐಷಾರಾಮಿ ವೋಡ್ಕಾ ಬ್ರಾಂಡ್ ಲಾಂಚ್ ಮಾಡಿದ ಶಾರುಖ್ ಪುತ್ರ
ಪಾಕ್ ನಟಿಯ ಜತೆ ಆರ್ಯನ್ ಖಾನ್ (Aryan Khan) ಸಂಬಂಧದಲ್ಲಿ ಇದ್ದಾರೆ ಎಂದು ಸ್ವಯಂ ಘೋಷಿತ ವಿಮರ್ಶಕ ಕಮಾಲ್ ಆರ್ ಖಾನ್ (KRK) ಕೂಡ ಹೇಳಿದ್ದರು. ಇದರಿಂದ ಸುದ್ದಿ ಮತ್ತಷ್ಟು ವೈರಲ್ ಆಯಿತು. ಏಕೆಂದರೆ ಕೆಆರ್ಕೆ ಅವರು ಇದಾಗಲೇ ಹಲವಾರು ವಿಷಯಗಳನ್ನು ಬೆಳಕಿಗೆ ತಂದಿದ್ದು, ಈ ವಿಷಯವನ್ನೂ ಅವರೇ ಬಹಿರಂಗಪಡಿಸಿದ್ದರು. ಈ ವಿಷಯ ತಿಳಿಸಿದ ಮೇಲೆ ಅವರು ಭಾರಿ ಟ್ರೋಲ್ಗೂ ಒಳಗಾದರು ಅನ್ನಿ. ವಿಷಯ ವೈರಲ್ ಆಗುತ್ತಲೇ ಪತ್ರಕರ್ತರು ಸಾದಿಯಾ ಖಾನ್ಗೆ ಈ ಪ್ರಶ್ನೆಯನ್ನು ಕೇಳಿಯೇ ಬಿಟ್ಟಿದ್ದಾರೆ. ಗಾಳಿ ಸುದ್ದಿಯ ಬಗ್ಗೆ ಖುದ್ದು ನಟಿಯ ಬಾಯಿಂದಲೇ ಕೇಳಿದರೆ ಒಳ್ಳೆಯದು ಎಂದು ಈ ಪ್ರಶ್ನೆ ಅವರ ಮುಂದೆ ಇಟ್ಟಿದ್ದಾರೆ. ಸಾದಿಯಾ ಜೊತೆಗೆ ನಡೆದ ಸಂದರ್ಶನವೊಂದರಲ್ಲಿ ಈ ಪ್ರಶ್ನೆ ಅವರ ಮುಂದೆ ಬಂದಿದ್ದು, ಅದಕ್ಕೆ ಅವರು ಉತ್ತರ ಕೊಟ್ಟಿದ್ದಾರೆ. ಉತ್ತರ ಕೊಟ್ಟಿದ್ದಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಟ್ರೋಲ್ (Troll) ಮಾಡಿದವರ ಮೇಲೆ ಕಿಡಿ ಕಾರಿದ್ದಾರೆ.
ಸಾದಿಯಾ ಖಾನ್ (Sadia Khan) ಅವರ ಬಾಯಲ್ಲಿಯೇ ಕೇಳುವುದಾದರೆ, 'ಜನರು ನನ್ನ ಮತ್ತು ಆರ್ಯನ್ ಬಗ್ಗೆ ಪೂರ್ಣ ಚಿತ್ರಣವನ್ನು ತಿಳಿಯದೆ ಹೇಗೆ ಕಥೆಗಳನ್ನು ರಚಿಸುತ್ತಿದ್ದಾರೆ ಎಂಬುದು ತುಂಬಾ ವಿಚಿತ್ರವಾಗಿದೆ. ಸುದ್ದಿ ಮಾಡಬೇಕು ನಿಜ. ಅದರೆ ಸುದ್ದಿಯ ಹೆಸರಿನಲ್ಲಿ ಎಲ್ಲದಕ್ಕೂ ಮಿತಿಯಿರಬೇಕು' ಎಂದು ಆಕ್ರೋಶ ಹೊರಹಾಕಿದ್ದಾರೆ.
ಇದೊಳ್ಳೆ ಕಥೆಯಾಯ್ತಲ್ಲ...! ಫುಲ್ ಡ್ರೆಸ್ ಹಾಕಿದ್ರೂ ಮಲೈಕಾಳನ್ನು ಬಿಡದ ನೆಟ್ಟಿಗರು!
'ವೈರಲ್ ಚಿತ್ರದ ಬಗ್ಗೆ ಮಾತನಾಡಲು ನಿಮಗೆ ಅದರಲ್ಲಿ ಏನು ಕಾಣಿಸುತ್ತದೆ? ನಾವಿಬ್ಬರೂ ಜೊತೆಯಲ್ಲಿ ನಿಂತು ಫೋಟೋ ತೆಗೆಸಿಕೊಂಡಿದ್ದೇವೆ ಅಷ್ಟೇ. ಗೋವಾದಲ್ಲಿ (Goa) ನಡೆದ ಹೊಸ ವರ್ಷದ ಪಾರ್ಟಿಯ ವೇಳೆ ಹಲವು ಸಿನಿ ತಾರೆಯರು ಬಂದಿದ್ದರು. ಆರ್ಯನ್ ಖಾನ್ ಕೂಡ ಬಂದಿದ್ದರು. ಅವರು ಆಕಸ್ಮಿಕವಾಗಿ ಭೇಟಿಯಾದರು, ಒಟ್ಟಿಗೇ ಫೋಟೋ (Photo) ಕ್ಲಿಕ್ಕಿಸಿ ಅದನ್ನು ನಾನು ಶೇರ್ ಮಾಡಿಕೊಂಡಿದ್ದೆ ಅಷ್ಟೆ. ಅದನ್ನೇ ಡೇಟಿಂಗ್ (Dating), ರಿಲೇಷನ್ (Relationship) ಎಂದೆಲ್ಲಾ ಕರೆದರೆ ಹೇಗೆ' ಎಂದು ಪ್ರಶ್ನಿಸಿರುವ ಸಾದಿಯಾ, ಆರ್ಯನ್ ಖಾನ್ ಸ್ವೀಟ್ ವ್ಯಕ್ತಿ. ಉತ್ತಮ ನಡತೆಯುಳ್ಳವ. ತಂದೆಯಂತೆ ಮಗ' ಎಂದಿದ್ದಾರೆ. ಸುಖಾಸುಮ್ಮನೆ ತಲೆಬುಡವಿಲ್ಲದ ಸುದ್ದಿ ಹರಡಬೇಡಿ ಎಂದೂ ಕ್ಲಾಸ್ ತೆಗೆದುಕೊಂಡಿದ್ದಾರೆ.