Asianet Suvarna News Asianet Suvarna News

ಸುಳ್ಳು ಹೇಳಿ ವ್ಯಾಕ್ಸಿನ್‌ ಪಡೆದ ಕನ್ನಡದ ನಟಿ ಮೀರಾ ಚೋಪ್ರಾ?

ಫ್ರಂಟ್‌ಲೈನ್ ವರ್ಕರ್ ಎಂದು ಸುಳ್ಳು ಹೇಳಿ ಲಸಿಕೆ ಪಡೆದಿರುವುದಾಗಿ ನಟಿ ಮೀರಾ ಚೋಪ್ರಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪವಾದ ಹರಿದಾಡುತ್ತಿದೆ. ಈ ವಿಚಾರದ ಬಗ್ಗೆ ಸ್ವತಃ ಮೀರಾ ಸ್ಪಷ್ಟನೆ ನೀಡಿದ್ದಾರೆ.

Meera Chopra denies gets vaccinated denies id card allegation vcs
Author
Bangalore, First Published May 31, 2021, 5:27 PM IST

'ಅರ್ಜುನ್' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ನಟಿ ಮೀರಾ ಚೋಪ್ರಾ ಇದೀಗ ವಿವಾದ ಒಂದರಲ್ಲಿ ಸಿಲುಕಿಕೊಂಡಿದ್ದಾರೆ. ಇಡೀ ಭಾರತವೇ ಕೊರೋನಾ ಅಟ್ಟಹಾಸದಲ್ಲಿ ಸಿಲುಕಿಕೊಂಡು ವ್ಯಾಕ್ಸಿನ್ ಪಡೆಯಲು ಪೇಚಾಡುವ ಪರಿಸ್ಥಿತಿ ಎದುರಾಗಿದೆ. ಆದರೆ ಮೀರಾ ಮಾತ್ರ ಸುಳ್ಳು ಹೇಳಿ ವ್ಯಾಕ್ಸಿನ್ ಪಡೆದಿದ್ದಾರೆ, ಎಂದು ಎಲ್ಲೆಡೆ ಹರಿದಾಡುತ್ತಿದೆ. ಇದು ನಿಜನಾ? 

ಮೀರಾ ಚೋಪ್ರಾ ಮತ್ಯಾರೂ ಅಲ್ಲ ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಸಹೋದರಿ. 18 ವರ್ಷ ಮೇಲ್ಪಟ್ಟವರೂ ನೋಂದಣೆ ಮಾಡಿಸಿ ಲಸಿಕೆ ಪಡೆಯಬೇಕಾಗಿದೆ. ಆದರೆ ಮೀರಾ ಫ್ರಂಟ್‌ಲೈನ್ ವರ್ಕರ್ ಎಂದು ಹೇಳಿ, ಲಸಿಕೆ ಪಡೆದಿರುವ ಪೋಟೋ ಹರಿದಾಡುತ್ತಿದೆ. ಸುಳ್ಳು ಸುದ್ದಿ ಬಗ್ಗೆ ಮೀರಾ ಚೋಪ್ರಾ ಕೊಟ್ಟ ಸ್ಪಷ್ಟನೆ:

ಪ್ರಿಯಾಂಕಳಿಂದಾಗಿ ನಂಗೆ ಕೆಲಸ ಸಿಗಲಿಲ್ಲ: ಪಿಗ್ಗಿ ಕಸಿನ್ ಹೇಳಿದ್ದಿಷ್ಟು 

'ನಾವೆಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಬಯಸುತ್ತೇವೆ. ನಾನು 1 ತಿಂಗಳು ಪ್ರಯತ್ನದ ನಂತರ ನೋಂದಾಯಿಸಿ ಆಧಾರ್ ಕಾರ್ಡ್ ನೀಡಿ ಲಸಿಕೆ ಪಡೆದಿದ್ದೀನಿ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಐಡಿ ಕಾರ್ಡ್ ನನ್ನದಲ್ಲ. ನೋಂದಣಿಯಾದ ಆಧಾರ್ ಸಂಖ್ಯೆಯನ್ನೇ ನಾನು ಲಸಿಕೆ ಪಡೆಯಲು ನೀಡಿದ್ದೇನೆ. ಹರಿದಾಡುತ್ತಿರುವ ಐಡಿ ಯಾರದ್ದು ಎಂದು ನನಗೆ ಗೊತ್ತಿಲ್ಲ. ನಾನು ಮೊದಲು ಈ ಸುದ್ದಿ ನೋಡಿದ್ದು ಟ್ಟಿಟ್ಟರ್‌ನಲ್ಲಿ,' ಎಂದು ಬರೆದುಕೊಂಡಿದ್ದಾರೆ. 

ಈ ಸಾಂಕ್ರಾಮಿಕ ರೋಗದಿಂದ ಮೀರಾ ಇಬ್ಬರು ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಇಬ್ಬರ ವಯಸ್ಸು 40 ಆಗಿದ್ದು ಜೀವನ ನೋಡಲು ತುಂಬಾ ಇತ್ತು ಎಂದು ದುಃಖ ಪಟ್ಟಿದ್ದಾರೆ.

Follow Us:
Download App:
  • android
  • ios