ಪತಿಯನ್ನು ಕಳೆದುಕೊಂಡು ದುಃಖದಲ್ಲಿರುವ ನಟಿ ಮೀನಾ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಮನವಿ ಮಡಿದ್ದಾರೆ. ದಯವಿಟ್ಟು ತನ್ನ ಪತಿಯ ಸಾವಿನ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಇಂತ ಕಷ್ಟದ ಸಮಯದಲ್ಲಿ ತಮ್ಮ ಖಾಸಗಿ ಜೀವನಕ್ಕೆ ಗೌರವ ನೀಡಿ ಎಂದು ಮನವಿ ಮಾಡಿದ್ದಾರೆ.
ದಕ್ಷಿಣ ಭಾರತದ ಖ್ಯಾತ ನಟಿ ಮೀನಾ (Meena) ಪತಿ ವಿದ್ಯಾಸಾಗರ್ (Vidyasagar) ಅನಾರೋಗ್ಯದಿಂದ ನಿಧನ (Death) ಹೊಂದಿರು. ಶ್ವಾಸಕೋಶ ಸೋಂಕಿನಿಂದ ಬಳಲುತ್ತಿದ್ದ ನಟಿ ಮಿನಾ ಪತಿ ವಿದ್ಯಾಸಾಗರ್ ಜೂನ್ 28ರಂದು ಚೆನ್ನೈನ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಸಾವಿಗೂ ಎರಡು ದಿನಗಳ ಮುಂಚಯೇ ಆಸ್ಪತ್ರೆಗೆ ದಾಖಲಾಗಿದ್ದು ವಿದ್ಯಾಸಾಗರ್ ಚಿಕಿತ್ಸೆ ಫಲಕಾರಿಯಾಗದೇ ಇಹಲೋಕ ತ್ಯಜಿಸಿದರು. 48 ವರ್ಷದ ವಿದ್ಯಾಸಾಗರ್ ಈ ಮೊದಲು ಕೊರೊನಾ ಸೋಂಕಿಗೆ ಒಳಗಾಗಿದ್ದರು. ಬಳಿಕ ರೋಗದಿಂದ ಚೇತರಿಸಿಕೊಂಡಿದ್ದರು. ಆದರೆ ಮಾರ್ಚ್ 2022ರ ಅಂತ್ಯದ ವೇಳೆಗೆ ಶ್ವಾಸಕೋಶದ ಸೋಂಕಿಗೆ ತುತ್ತಾಗಿದ್ದರು.
ವಿದ್ಯಾಸಾಗರ್ ನಿಧನಕ್ಕೆ ದಕ್ಷಿಣ ಭಾತದ ಖ್ಯಾತ ಸಿನಿ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. ಇದೀಗ ಸ್ವತಃ ಮೀನಾ ಪ್ರತಿಕ್ರಿಯೆ ನೀಡಿದ್ದಾರೆ. ಪತಿಯನ್ನು ಕಳೆದುಕೊಂಡು ದುಃಖದಲ್ಲಿರುವ ಮೀನಾ ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಮನವಿ ಮಡಿದ್ದಾರೆ. ದಯವಿಟ್ಟು ತನ್ನ ಪತಿಯ ಸಾವಿನ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಕೇಳಿಕೊಂಡಿದ್ದಾರೆ. ಇಂತ ಕಷ್ಟದ ಸಮಯದಲ್ಲಿ ತಮ್ಮ ಖಾಸಗಿ ಜೀವನಕ್ಕೆ ಗೌರವ ನೀಡಿ ಎಂದು ಮನವಿ ಮಾಡಿದ್ದಾರೆ.
ಮೀನಾ ಪತಿ ವಿದ್ಯಾಸಾಗರ್ ಸಾವಿಗೆ ಕಾರಣವಾಯ್ತು ಪಾರಿವಾಳದ ಹಿಕ್ಕೆ?
'ನನ್ನ ಪ್ರೀತಿಯ ಪತಿ ವಿದ್ಯಾ ಸಾಗರ್ ಅಗಲಿಕೆಯಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಇಂತ ಪರಿಸ್ಥಿತಿಯಲ್ಲಿ ನಮ್ಮ ಖಾಸಗಿತನವನ್ನು ಗೌರವಿಸಿ ಮತ್ತು ಸಹಾನುಭೂತಿ ತೋರಿ ಎಂದು ನಾನು ಎಲ್ಲಾ ಮಾಧ್ಯಮಗಳನ್ನು ಪ್ರಾಮಾಣಿಕವಾಗಿ ವಿನಂತಿಸುತ್ತೇನೆ. ದಯವಿಟ್ಟು ಈ ವಿಷಯದ ಕುರಿತು ಯಾವುದೇ ಸುಳ್ಳು ಮಾಹಿತಿಯನ್ನು ಬಿತ್ತರಿಸಬೇಡಿ. ಈ ಕಷ್ಟದ ಸಮಯದಲ್ಲಿ, ನಮ್ಮ ಕುಟುಂಬಕ್ಕೆ ಸಹಾಯ ಮಾಡಿದ ಮತ್ತು ನಮ್ಮ ಪರ ನಿಂತ ಎಲ್ಲಾ ಸಹೃದಯಿಗಳಿಗೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ತಮ್ಮ ಕೈಲಾದ ಪ್ರಯತ್ನ ಮಾಡಿದ ಎಲ್ಲಾ ವೈದ್ಯಕೀಯ ತಂಡ, ನಮ್ಮ ಮುಖ್ಯಮಂತ್ರಿ, ಆರೋಗ್ಯ ಸಚಿವರು, ರಾಧಾಕೃಷ್ಣನ್ ಐಎಎಸ್, ಸಹೋದ್ಯೋಗಿಗಳು, ಸ್ನೇಹಿತರು, ಕುಟುಂಬ, ಮಾಧ್ಯಮಗಳು ಹಾಗೂ ತಮ್ಮ ಪ್ರೀತಿ ಮತ್ತು ಪ್ರಾರ್ಥನೆಗಳನ್ನು ಕಳುಹಿಸಿದ್ದಕ್ಕಾಗಿ ನನ್ನ ಪ್ರೀತಿಯ ಅಭಿಮಾನಿಗಳಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ' ಎಂದು ಹೇಳಿದ್ದಾರೆ. ಮೀನಾ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡಿ ಧೈರ್ಯ ತುಂಬುತ್ತಿದ್ದಾರೆ. ಸ್ಟ್ರಾಂಗ್ ಆಗಿ ಇರಿ ಎಂದು ಹೇಳುತ್ತಿದ್ದಾರೆ.
ಬಾಲನಟಿಯಾಗಿ ಚಿತ್ರರಂಗ ಪ್ರವೇಶಿಸಿದ 'ಸ್ವಾತಿಮುತ್ತು' ನಟಿ ಮೀನಾರ ರೋಚಕ ಸಿನಿ ಪಯಣ
ನಟಿ ಮೀನಾ ದಕ್ಷಿಣ ಭಾರತದ ಖ್ಯಾತ ನಟಿ. ತಮಿಳು, ತೆಲುಗು, ಕನ್ನಡ, ಮಲಯಾಳಂ ಭಾಷೆಗಳಲ್ಲಿ ನಟಿಸಿರುವ ಮೀನಾ 90 ದಶಕದ ಬಹುಬೇಡಿಯ ನಟಿ. ಬಾಲನಟಿಯಾಗಿ ಸಿನಿಮಾರಂಗ ಪ್ರವೇಶ ಮಾಡಿದ ನಟಿ ಮೀನಾ ಬಳಿಕ ಸ್ಟಾರ್ ಆಗಿ ಮೆರೆದರು. ದಕ್ಷಿಣ ಭಾರತದ ಅನೇಕ ಸ್ಟಾರ್ ನಟರ ಜೊತೆ ಮೀನಾ ತೆರೆ ಹಂಚಿಕೊಂಡಿದ್ದಾರೆ. 2009ರಲ್ಲಿ ಮೀನಾ ಬೆಂಗಳೂರು ಮೂಲದ ಉದ್ಯಮಿ ವಿದ್ಯಾಸಾಗರ್ ಅವರ ಜೊತೆ ಹಸಮಣೆ ಏರಿದರು. ವಿದ್ಯಾಸಾಗರ್ ಮತ್ತು ಮೀನಾ ದಾಂಪತ್ಯಕ್ಕೆ ನೈನಿಕಾ ಎನ್ನುವ ಮುದ್ದಾದ ಮಗಳಿದ್ದಾಳೆ.
